Activa 6G vs TVS Jupiter: ಆಕ್ಟಿವಾ 6ಜಿ, ಟಿವಿಎಸ್‌ ಜುಪೀಟರ್‌ ನಡುವೆ ಯಾವುದು ಬೆಟರ್‌? ಉತ್ತಮರಲ್ಲಿ ಉತ್ತಮರಾರು
ಕನ್ನಡ ಸುದ್ದಿ  /  ಜೀವನಶೈಲಿ  /  Activa 6g Vs Tvs Jupiter: ಆಕ್ಟಿವಾ 6ಜಿ, ಟಿವಿಎಸ್‌ ಜುಪೀಟರ್‌ ನಡುವೆ ಯಾವುದು ಬೆಟರ್‌? ಉತ್ತಮರಲ್ಲಿ ಉತ್ತಮರಾರು

Activa 6G vs TVS Jupiter: ಆಕ್ಟಿವಾ 6ಜಿ, ಟಿವಿಎಸ್‌ ಜುಪೀಟರ್‌ ನಡುವೆ ಯಾವುದು ಬೆಟರ್‌? ಉತ್ತಮರಲ್ಲಿ ಉತ್ತಮರಾರು

Activa 6G vs TVS Jupiter: ಟಿವಿಎಸ್‌ ಜುಪೀಟರ್‌ ಮತ್ತು ಹೋಂಡಾ ಆಕ್ಟಿವಾದ ನಡುವೆ ಖರೀದಿಗೆ ಯಾವುದು ಉತ್ತಮ ಎಂದು ಯೋಚಿಸುವವರಿಗೆ ಸ್ಕೂಟರ್‌ ಕಂಪೇರಿಸನ್‌ ನೀಡಲಾಗಿದೆ.

Activa 6G vs TVS Jupiter: ಆಕ್ಟಿವಾ 6ಜಿ, ಟಿವಿಎಸ್‌ ಜುಪೀಟರ್‌ ನಡುವೆ ಯಾವುದು ಬೆಟರ್‌?
Activa 6G vs TVS Jupiter: ಆಕ್ಟಿವಾ 6ಜಿ, ಟಿವಿಎಸ್‌ ಜುಪೀಟರ್‌ ನಡುವೆ ಯಾವುದು ಬೆಟರ್‌?

ಟಿವಿಎಸ್‌ ಜುಪೀಟರ್‌ ಮತ್ತು ಹೋಂಡಾ ಆಕ್ಟಿವಾ ಸ್ಕೂಟರ್‌ಗಳು ಭಾರತದ ಎರಡು ಜನಪ್ರಿಯ ಸ್ಕೂಟರ್‌ಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವೆರಡು ಸ್ಕೂಟರ್‌ಗಳಲ್ಲಿ ಒಂದಕ್ಕೊಂದು ಸ್ಪರ್ಧೆ ನೀಡುವಂತಹ ಫೀಚರ್‌ಗಳು ಇವೆ. ಇವೆರಡು ಸ್ಕೂಟರ್‌ಗಳಲ್ಲಿ ಯಾವುದನ್ನು ಖರೀದಿಸಬೇಕೆಂದು ಸಾಕಷ್ಟು ಜನರುಗ ಗೊಂದಲ ಉಂಟಾಗಬಹುದು. ಇಲ್ಲಿ ನಾವು ನೀಡಿರುವ ಕಂಪೇರಿಸನ್‌ ರಿವ್ಯೂ ಓದಿದರೆ ನಿಮಗೆ ಈ ಸ್ಕೂಟರ್‌ಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಕಡಿಮೆಯಾಗಬಹುದು.

ಆಕ್ಟಿವಾಗಿಂತ ಜುಪೀಟರ್‌ ಹೇಗೆ ಬೆಟರ್‌?

  1. ಜುಪೀಟರ‌ ಸ್ಕೂಟರ್‌ ಆಕ್ಟಿವಾಕ್ಕಿಂತ ಹಗುರ.
  2. ಇವೆರಡೂ ಸ್ಕೂಟರ್‌ಗಳಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್‌ ಸಸ್ಪೆನ್ಷನ್‌ ಇದೆ. ಆದರೆ, ಸಡಿಲ ನೆಲದಲ್ಲಿ ತಿರುಗಿಸುವಾಗ ಆಕ್ಟಿವಾದ ಮುಂಭಾಗದ ಚಕ್ರ ಜಾರಿದಂತೆ ಅನಿಸಬಹುದು. ಆಕ್ಟಿವಾದ ಹಿಂಬದಿ ಹೆಚ್ಚು ತೂಕ ಇರುವುದು ಇದಕ್ಕೆ ಕಾರಣ. ಇದು ವೈಯಕ್ತಿಕ ಅಭಿಪ್ರಾಯ.
  3. ಜುಪೀಟರ್‌ನಲ್ಲಿ ಪೆಟ್ರೋಲ್‌ ರಿಫಿಲ್‌ ಲಿಡ್‌ ಒಂದು ಆಕ್ಷನ್‌ನಲ್ಲಿ ತೆರೆಯುವಂತಹದ್ದು. ಆದರೆ, ಆಕ್ಟಿವಾದಲ್ಲಿ ತ್ರಿ ವೇ ಬಟನ್‌ ಇದೆ.ಇದೇ ಕಾರಣಕ್ಕೆ ಆಕ್ಟಿವಾಕ್ಕೆ ಪೆಟ್ರೋಲ್‌ ತುಂಬಿಸಬೇಕಿದ್ದರೆ ಸವಾರ ಸ್ಕೂಟರ್‌ನಿಂದ ಇಳಿಯಬೇಕಾಗುತ್ತದೆ.
  4. ಆಕ್ಟಿವಾಕ್ಕೆ ಹೋಲಿಸಿದರೆ ಜುಪೀಟರ್‌ನ ಸೀಟ್‌ನಡಿಯಲ್ಲಿ ಹೆಚ್ಚಿನ ಸ್ಥಳಾವಕಾಶ ದೊರಕುತ್ತದೆ.
  5. ದರ ಹೋಲಿಕೆ ಮಾಡಿದರೆ ಆಕ್ಟಿವಾಕ್ಕಿಂತ ಒಂದೆರಡು ಸಾವಿರ ರೂಪಾಯಿ ಕಡಿಮೆ ದರದಲ್ಲಿ ಜುಪೀಟರ್‌ ದೊರಕಬಹುದು. ಹತ್ತಿರದ ಶೋರೂಂಗಳಿಗೆ ಹೋಗಿ ಈಗಿನ ದರ ಹೋಲಿಕೆ ಮಾಡಿ ನೋಡಿ.
  6. ಆಕ್ಟಿವಾದ ಬ್ರೇಕ್‌ಗಿಂತ ಜುಪೀಟರ್‌ ಬ್ರೇಕ್‌ ಉತ್ತಮವಾಗಿದೆ ಎಂದು ಕೆಲವರ ಅಭಿಪ್ರಾಯ. ನೀವೊಮ್ಮೆ ಇವೆರಡು ಬೈಕ್‌ಗಳನ್ನು ರೈಡ್‌ ಮಾಡಿ ನೋಡಿ.

ಜುಪೀಟರ್‌ಗಿಂತ ಆಕ್ಟಿವಾ ಹೇಗೆ ಬೆಟರ್‌?

  1. ದೂರ ಪ್ರಯಾಣದಲ್ಲಿ ಜುಪಿಟರ್‌ ಕೊಂಚ ವೈಬ್ರೆಷನ್‌ ನೀಡುವ ಫೀಲ್‌ ಆಗುತ್ತದೆ. ಆಕ್ಟೀವಾ ದೂರ ಪ್ರಯಾಣದಲ್ಲಿ ಸ್ಮೂತ್‌ ರೈಡಿಂಗ್‌ ಅನುಭವ ನೀಡುತ್ತದೆ ಎಂದು ಈಗಾಗಲೇ ಬಳಸಿದವರ ಅಭಿಪ್ರಾಯ.
  2. ಜುಪೀಟರ್‌ನ ಸೀಟ್‌ ವಿನ್ಯಾಸ ಕೊಂಚ ಓಡ್‌ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆಕ್ಟಿವಾಗೆ ಹೋಲಿಸಿದರೆ ಚಾಲಕ ಮತ್ತು ಹಿಂಬದಿ ಸವಾರರಿಗೆ ಜುಪೀಟರ್‌ ಅಷ್ಟೊಂದು ಕಂಫರ್ಟ್‌ ಅಲ್ಲ ಎಂದು ವಿವಿಧ ಆಟೋ ಫೋರಮ್‌ಗಳಲ್ಲಿ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
  3. ಆಕ್ಟಿವಾದಲ್ಲಿ ಎಂಆರ್‌ಎಫ್‌ ಟೈರ್‌ ಇದೆ. ಟಿವಿಎಸ್‌ ಜುಪೀಟರ್‌ನಲ್ಲಿ ಟಿವಿಎಸ್‌ ಟೈರ್‌ಗಳಿವೆ. ಎಂಆರ್‌ಎಫ್‌ಗೆ ಹೋಲಿಸಿದರೆ ಟಿವಿಎಸ್‌ ಟೈರ್‌ಗಳ ಗುಣಮಟ್ಟ ತುಸು ಕಡಿಮೆ.
  4. ಜುಪೀಟರ್‌ನ ಸ್ವಿಚ್‌ಗಳ ಗುಣಮಟ್ಟವೂ ಆಕ್ಟಿವಾದಷ್ಟಿಲ್ಲ.
  5. ಆಕ್ಟಿವಾ 6ಜಿಯಲ್ಲಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಆರಾಮವಾಗಿ ಹೋಗಬಹುದು ಆದರೆ, ಜುಪೀಟರ್‌ ಈ ಹಂತದಲ್ಲಿ ತುಸು ವೈಬ್ರೆಷನ್‌ ಆರಂಭಿಸುತ್ತದೆ.

ಹೀಗೆ ಇವರಡು ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ತಮ್ಮದೇ ಸ್ಪೆಷಾಲಿಟಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಇವೆರಡು ಸ್ಕೂಟರ್‌ಗಳನ್ನು ಟೆಸ್ಟ್‌ ರೈಡ್‌ ಮಾಡಿ ನೋಡಿ, ಟೆಸ್ಟ್‌ ರೈಡಿಂಗ್‌ ಸಮಯದಲ್ಲಿ ಮೇಲೆ ನಾವು ತಿಳಿಸಿದ ಅಂಶಗಳು ನೆನಪಿನಲ್ಲಿ ಇರಲಿ.

Whats_app_banner