ಮೊಡವೆ, ಕಲೆಗಳಿಂದ ಬೇಸತ್ತಿದ್ದೀರಾ: ಕಾಂತಿಯುತ ತ್ವಚೆ ಪಡೆಯಲು ಮುಖವನ್ನು ಸ್ವಚ್ಛಗೊಳಿಸುವಾಗ ಈ ಸಲಹೆ ಪಾಲಿಸಿ
ಮುಖದಲ್ಲಿ ಕಲೆಗಳು, ಮೊಡವೆಗಳಿವೆಯೇ?ಯಾವುದೇ ಉತ್ಪನ್ನ ಅಥವಾ ಮನೆಮದ್ದು ಬಳಸಿದ್ರೂ ಪ್ರಯೋಜನವಿಲ್ವಾ. ಮುಖವನ್ನು ಸ್ವಚ್ಛಗೊಳಿಸುವಾಗ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಿ. ಸ್ಪಷ್ಟ ಹಾಗೂ ಆರೋಗ್ಯಕರ ತ್ವಚೆಗಾಗಿ ಈ ಸಲಹೆ ಪಾಲಿಸಿ.
ಹೆಣ್ಮಕ್ಕಳು ತ್ವಚೆಯ ಆರೈಕೆಗೆ ಇನ್ನಿಲ್ಲದ ಕಾಳಜಿ ವಹಿಸುತ್ತಾರೆ. ಮುಖವನ್ನು ಧೂಳು, ಕೊಳಕು ಮತ್ತು ಅನೇಕ ರೀತಿಯ ಮಾಲಿನ್ಯಕಾರಕಗಳಿಂದ ರಕ್ಷಿಸುವಲ್ಲಿ ಫೇಸ್ ವಾಶ್ ಬಹಳ ಮುಖ್ಯವಾಗಿದೆ. ಇದು ಮುಖದ ಮೇಲೆ ಸಂಗ್ರಹವಾಗಿರುವ ಧೂಳು ಮತ್ತು ಎಣ್ಣೆಯುಕ್ತ ಅಂಶವನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ. ಮೇಕ್ಅಪ್ ಸಮಯದಲ್ಲಿ ಡಬಲ್ ಕ್ಲೆನ್ಸಿಂಗ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಚರ್ಮವನ್ನು ಆರೋಗ್ಯವಾಗಿಡಲು ಮತ್ತು ಅದರ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಫೇಸ್ ವಾಶ್ ಬಹಳ ಅಗತ್ಯ. ಸಾಮಾನ್ಯವಾಗಿ ಜನರು ಯೋಚಿಸದೆ ಸಾಬೂನು ಅಥವಾ ಯಾವುದೇ ಫೇಸ್ ಕ್ಲೆನ್ಸರ್ ಅನ್ನು ಬಳಸುತ್ತಾರೆ. ಇವು ಮುಖದ ಚರ್ಮವನ್ನು ಸುಧಾರಿಸುವ ಬದಲು ಮೊಡವೆ, ಕಿರಿಕಿರಿ ಮತ್ತು ಶುಷ್ಕತೆಯನ್ನು ಉಂಟು ಮಾಡುತ್ತದೆ. ಫೇಸ್ ಕ್ಲೆನ್ಸಿಂಗ್ ಬಗ್ಗೆ ನಿಮಗೂ ಗೊಂದಲವಿದ್ದರೆ ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ:
ತ್ವಚೆಯ ಕಾಳಜಿಗೆ ಈ ಸಲಹೆ ಪಾಲಿಸಿ
ಸಾಬೂನ್ ಬದಲಿಗೆ ಲಿಕ್ವಿಡ್ (ದ್ರವ) ಕ್ಲೆನ್ಸರ್ನ್ ಬಳಸಿ: ಶುಷ್ಕ ಮತ್ತು ಸೂಕ್ಷ್ಮ ಚರ್ಮವನ್ನು ಹೊಂದಿರುವ ಜನರು ಸಾಬೂನು ಬಳಸುವುದನ್ನು ನಿಲ್ಲಿಸಬೇಕು. ಇದರ ಬದಲು ಲಿಕ್ವಿಡ್ ಕ್ಲೆನ್ಸರ್ನ್‍ಗಳನ್ನು ಬಳಸಬೇಕು. ಅಲ್ಲದೆ, ಪಿಎಚ್ ಮಟ್ಟವು ಸೂಕ್ತವಾಗಿರಬೇಕು. ಇದು ಚರ್ಮದ ನೈಸರ್ಗಿಕ ಎಣ್ಣೆಯನ್ನು ಕಾಪಾಡುತ್ತದೆ ಮತ್ತು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಲಿಕ್ವಿಡ್ ಕ್ಲೆನ್ಸರ್ನ್‌ನಲ್ಲಿ ಕಂಡುಬರುವ ಗ್ಲೈಕೋಲಿಕ್ ಅಥವಾ ಸ್ಯಾಲಿಸಿಲಿಕ್ ಆಮ್ಲದ ಪ್ರಮಾಣವು ಚರ್ಮವನ್ನು ಶುದ್ಧ ಮತ್ತು ಮೃದುವಾಗಿಸುತ್ತದೆ ಮತ್ತು ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
ಚರ್ಮ ಸ್ನೇಹಿ ಫೇಸ್ ವಾಶ್ ಬಳಸಿ: ಫೇಸ್ ವಾಶ್‌ನ ಪಿಎಚ್ ಸ್ವಲ್ಪ ಆಮ್ಲೀಯದಿಂದ ಕೂಡಿರಬೇಕು. ಫೇಸ್ ವಾಶ್ ಚರ್ಮದ ಮೇಲೆ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಅಸಮತೋಲಿತ ಪಿಎಚ್ ಇದ್ದರೆ, ಇದು ತುರಿಕೆ, ತ್ವಚೆಯ ಕಿರಿಕಿರಿ ಇತ್ಯಾದಿಯನ್ನು ಎದುರಿಸಬೇಕಾದಿತು. ಹೆಚ್ಚಿನ ಪಿಹೆಚ್ ಮಟ್ಟವನ್ನು ಹೊಂದಿರುವ ಫೇಸ್ ಕ್ಲೆನ್ಸರ್‌ಗಳು ಮುಖದ ಮೇಲೆ ಮೊಡವೆ ಮತ್ತು ಕಲೆಗಳನ್ನು ಉಂಟುಮಾಡುತ್ತವೆ.
ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಕ್ಲೆನ್ಸರ್ ಅನ್ನು ಆಯ್ಕೆ ಮಾಡಿ: ಚರ್ಮವು ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ಕ್ರೀಮ್ ಫೇಸ್‌ವಾಶ್ ಅನ್ನು ಆಯ್ಕೆಮಾಡಿ. ಇದರಿಂದ ತ್ವಚೆಯ ಮೇಲಿನ ಸ್ಟ್ರೆಚ್ ಮಾರ್ಕ್ಸ್ ಮತ್ತು ಬಿಳಿ ತೇಪೆಗಳ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಲ್ಲದೆ, ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲಾಗುತ್ತದೆ. ತ್ವಚೆಯು ಎಣ್ಣೆಯುಕ್ತವಾಗಿರುವವರು ಜೆಲ್ ಆಧಾರಿತ ಮತ್ತು ಸಾಕಷ್ಟು ನೊರೆ ಬರುವ ಫೇಸ್ ವಾಶ್ ಅನ್ನು ಆರಿಸಿಕೊಳ್ಳಬಹುದು. ಇದು ಚರ್ಮವನ್ನು ಶುದ್ಧೀಕರಿಸಲು, ಮೃದುವಾಗಿಡಲು ಸಹಕಾರಿಯಾಗಿದೆ. ಅಲ್ಲದೆ, ಎಣ್ಣೆಯುಕ್ತ ತ್ವಚೆಯಾಗಿದ್ದರೆ ಇದನ್ನು ಪರಿಹರಿಸುತ್ತದೆ.
ಫೇಸ್ ವಾಶ್ ಬಳಸುವ ಮುನ್ನ ಈ ಅಂಶ ಗಮನದಲ್ಲಿರಲಿ: ಫೇಸ್ ವಾಶ್ ತೆಗೆದುಕೊಳ್ಳುವ ಮುನ್ನ ಅದರಲ್ಲಿ ಏನು ಬರೆದಿದ್ದಾರೆ ಎಂಬುದನ್ನು ಸರಿಯಾಗಿ ಓದಿ. ಎಣ್ಣೆಯುಕ್ತ ಚರ್ಮ ಹೊಂದಿರುವವರು ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸಲು ನಾನ್-ಕಾಮೆಡೋಜೆನಿಕ್ ಉತ್ಪನ್ನಗಳನ್ನು ಬಳಸಬೇಕು. ಇದಲ್ಲದೆ, ಚರ್ಮವನ್ನು ಆರೋಗ್ಯಕರವಾಗಿಡಲು ತೇವವಾಗಿರಿಸವ ಮತ್ತು ಸ್ವತಂತ್ರ ರಾಡಿಕಲ್‌ಗಳ ಪರಿಣಾಮಗಳಿಂದ ರಕ್ಷಿಸುವಂಥ ಫೇಸ್ ವಾಶ್‍ಗಳನ್ನು ಬಳಸುವುದು ಉತ್ತಮ.
ಅತಿಯಾದ ಈ ಫೇಸ್ ವಾಶ್ ಬಳಕೆ ಉತ್ತಮವಲ್ಲ: ಫೇಸ್ ವಾಶ್‌ಗಳಲ್ಲಿ ಕಂಡುಬರುವ ಸ್ಯಾಲಿಸಿಲಿಕ್ ಆಸಿಡ್ ಅಥವಾ ಗ್ಲೈಕೋಲಿಕ್ ಆಮ್ಲದಂತಹ ಮೊಡವೆ ವಿರೋಧಿ ಪದಾರ್ಥಗಳ ಅತಿಯಾದ ಬಳಕೆಯು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ. ಇದು ಚರ್ಮದ ಮೇಲೆ ಕಿರಿಕಿರಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಕರ್ಪೂರ ಮತ್ತು ಮೆಂತ್ಯೆಯಂತಹ ಮನೆಮದ್ದುಗಳನ್ನು ಪದೇ ಪದೇ ಚರ್ಮದ ಮೇಲೆ ಬಳಸುವುದರಿಂದ ಹಾನಿಕಾರಕವಾಗುತ್ತದೆ.
ಬಿಸಿ ನೀರಿನಿಂದ ಮುಖವನ್ನು ತೊಳೆಯದಿರಿ: ಎಣ್ಣೆಯುಕ್ತ ತ್ವಚೆಯಿಂದ ಪರಿಹಾರ ಪಡೆಯಲು ಹೆಚ್ಚಿನವರು ಬಿಸಿ ನೀರನ್ನು ಬಳಸುತ್ತಾರೆ. ಹಾಗೆಯೇ ಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸುವುದರಿಂದ ಮುಖಕ್ಕೂ ಇದನ್ನೇ ಬಳಸುತ್ತಾರೆ. ಇದರಿಂದ ತ್ವಚೆ ತೇವಾಂಶ ಕಳೆದುಕೊಳ್ಳುವುದು ಮಾತ್ರವಲ್ಲದೆ ಚರ್ಮದ ಕೋಶಗಳಿಗೂ ಹಾನಿಯಾಗುತ್ತದೆ. ಹೀಗಾಗಿ ಮುಖವನ್ನು ಬಿಸಿನೀರಿನ ಬದಲು ತಣ್ಣಗಿನ ನೀರಿನಿಂದ ತೊಳೆಯಿರಿ.
ಬೆರಳುಗಳ ಸಹಾಯದಿಂದ ಮುಖವನ್ನು ಸ್ವಚ್ಛಗೊಳಿಸಿ: ಮುಖವನ್ನು ಸ್ವಚ್ಛಗೊಳಿಸಲು ಸಂಪೂರ್ಣ ಕೈಯನ್ನು ಬಳಸುವ ಬದಲು ಬೆರಳುಗಳ ಸಹಾಯದಿಂದ ಮುಖವನ್ನು ಸ್ವಚ್ಛಗೊಳಿಸಿ. ಇದು ಮುಖದ ಮೇಲೆ ಸಂಗ್ರಹವಾಗಿರುವ ತೈಲ ಮತ್ತು ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಚರ್ಮದ ರಕ್ತ ಪರಿಚಲನೆಯು ಹೆಚ್ಚಾಗಲು ಸಹಕಾರಿಯಾಗಿದೆ. ಇದರಿಂದ ಚರ್ಮವು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿ ಕಾಣುತ್ತದೆ.
ವಿಭಾಗ