ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಯ ಕಾಳಜಿಗೂ ಸೌತೆಕಾಯಿಯ ಪ್ರಯೋಜನ ಹಲವು: ಸೌಂದರ್ಯ ಹೆಚ್ಚಿಸಲು ಈ ರೀತಿ ಬಳಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಯ ಕಾಳಜಿಗೂ ಸೌತೆಕಾಯಿಯ ಪ್ರಯೋಜನ ಹಲವು: ಸೌಂದರ್ಯ ಹೆಚ್ಚಿಸಲು ಈ ರೀತಿ ಬಳಸಿ

ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಯ ಕಾಳಜಿಗೂ ಸೌತೆಕಾಯಿಯ ಪ್ರಯೋಜನ ಹಲವು: ಸೌಂದರ್ಯ ಹೆಚ್ಚಿಸಲು ಈ ರೀತಿ ಬಳಸಿ

ಸೌತೆಕಾಯಿಯಲ್ಲಿ ಸೌಂದರ್ಯದ ಪ್ರಯೋಜನಗಳು ಅಡಗಿವೆ. ಜೀವಸತ್ವಗಳು,ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸೌತೆಕಾಯಿ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಹೊಳೆಯುವ, ಆರೋಗ್ಯಕರ ತ್ವಚೆಗಾಗಿ ಸೌತೆಕಾಯಿಯ ಪ್ರಯೋಜನ ಹಲವು.

ಚರ್ಮವನ್ನು ಕಾಂತಿಯುತವಾಗಿಸುವುದಲ್ಲದೆ ಪುನರ್ಯೌವನಗೊಳಿಸಲು ಸೌತೆಕಾಯಿಯ ಪ್ರಯೋಜನ ಹಲವು.
ಚರ್ಮವನ್ನು ಕಾಂತಿಯುತವಾಗಿಸುವುದಲ್ಲದೆ ಪುನರ್ಯೌವನಗೊಳಿಸಲು ಸೌತೆಕಾಯಿಯ ಪ್ರಯೋಜನ ಹಲವು. (PC: Canva)

ಸೌತೆಕಾಯಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಇದರ ಪ್ರಯೋಜನ ಹಲವು. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸೌತೆಕಾಯಿ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದೆ. ಇದರಲ್ಲಿ ಶೇ. 96ರಷ್ಟು ನೀರಿದ್ದು, ತ್ವಚೆಯನ್ನು ತೇವಾಂಶಯುಕ್ತವಾಗಿರಿಸುತ್ತದೆ. ಸೌತೆಕಾಯಿಯು ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಸೌತೆಕಾಯಿಯು ಸಿಲಿಕಾದ ಅತ್ಯುತ್ತಮ ಮೂಲವಾಗಿದ್ದು, ತ್ವಚೆಯನ್ನು ಸುಧಾರಿಸುತ್ತದೆ. ಚರ್ಮವನ್ನು ಕಾಂತಿಯುತವಾಗಿಸುವುದಲ್ಲದೆ ಪುನರ್ಯೌವನಗೊಳಿಸುತ್ತದೆ.

ತ್ವಚೆಗಾಗಿ ಸೌತೆಕಾಯಿಯ 4 ಅದ್ಭುತ ಪ್ರಯೋಜನಗಳು

ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡುತ್ತದೆ: ದಿನದ ಒತ್ತಡವನ್ನು ತಗ್ಗಿಸಲು ಸೌತೆಕಾಯಿಯ ಚೂರುಗಳನ್ನು ಕಣ್ಣುಗಳ ಮೇಲೆ ಇಡುವುದರಿಂದ ತಂಪಾಗಿಸುತ್ತದೆ. ಒತ್ತಡ ಹಾಗೂ ಕಡಿಮೆ ನಿದ್ದೆಯಿಂದ ಕಣ್ಣಿನ ಕಳಗೆ ಡಾರ್ಕ್ ಸರ್ಕಲ್‍ಗಳು ಉಂಟಾಗುವುದು ಸಾಮಾನ್ಯ. ಇದನ್ನು ಕೂಡ ನಿವಾರಿಸುವಲ್ಲಿ ಸೌತೆಕಾಯಿ ಪರಿಹಾರ ನೀಡುತ್ತದೆ. ಹಾಗಂತ ಕಣ್ಣಿನ ಕ್ರೀಮ್ ಹಚ್ಚಲು ಮರೆಯದಿರಿ.

ಚರ್ಮದ ಹಾನಿಯನ್ನು ಕಡಿಮೆ ಮಾಡುತ್ತದೆ: ಸೌತೆಕಾಯಿಯು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಹಾನಿಯನ್ನು ಗುಣಪಡಿಸುತ್ತದೆ. ಅದರ ಸಂಕೋಚಕ ಗುಣಲಕ್ಷಣಗಳಿಂದಾಗಿ ಇದನ್ನು ನೈಸರ್ಗಿಕ ಟೋನರ್ ಆಗಿಯೂ ಬಳಸಬಹುದು. ಬಿಸಿಲು, ಕಂದುಬಣ್ಣ ಮತ್ತು ಚರ್ಮದ ಕಿರಿಕಿರಿಯನ್ನು ನಿವಾರಿಸಲು ಸೌತೆಕಾಯಿಯನ್ನು ಸಣ್ಣನೆ ಚೂರುಗಳನ್ನಾಗಿ ಮಾಡಿ ಮುಖದಲ್ಲಿ ಇಡಬಹುದು.

ಪುನರ್ಯೌವನಗೊಳಿಸಲು ಸಹಕಾರಿ: ಒತ್ತಡ ಮತ್ತು ಮಾಲಿನ್ಯದಿಂದಾಗಿ ಮುಖದ ನೈಸರ್ಗಿಕ ಹೊಳಪಿನ ಮೇಲೆ ಪರಿಣಾಮ ಬೀರುತ್ತದೆ. ಸೌತೆಕಾಯಿಯು ಮಂದ ಮತ್ತು ನಿರ್ಜೀವ ಚರ್ಮದಲ್ಲಿ ಜೀವವನ್ನು ತುಂಬುತ್ತದೆ. ಅದರ ಉರಿಯೂತದ ಮತ್ತು ಹೈಡ್ರೇಟಿಂಗ್ ಗುಣಲಕ್ಷಣಗಳಿಂದ ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ.

ಕಲೆಗಳನ್ನು ನಿವಾರಿಸಲು ಸಹಕಾರಿ: ಸೌತೆಕಾಯಿ ನೀರಿನಿಂದ ಪ್ರತಿದಿನ ಮುಖವನ್ನು ತೊಳೆಯುವುದರಿಂದ ಕಲೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದರ ಅತ್ಯುತ್ತಮ ಉರಿಯೂತದ ಗುಣಲಕ್ಷಣಗಳು ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಹೊಳೆಯುವ ಮತ್ತು ಕಲೆಗಳಿಲ್ಲದ ಚರ್ಮವನ್ನು ನೀಡುತ್ತದೆ.

ತ್ವಚೆಗಾಗಿ ಸೌತೆಕಾಯಿಯನ್ನು ಹೀಗೆ ಬಳಸಿ

ಸೌತೆಕಾಯಿ ರಸದ ಫೇಸ್ ಮಾಸ್ಕ್: ಚರ್ಮವನ್ನು ಆರೋಗ್ಯಕರವಾಗಿಡುವಲ್ಲಿ ತೇವಾಂಶವು ಒಂದು ಪ್ರಮುಖ ಭಾಗವಾಗಿದೆ. ಮುಖವನ್ನು ಉತ್ತಮವಾಗಿ ಕಾಣುವಂತೆ ಮಾಡಲು ಸೌತೆಕಾಯಿ ರಸವನ್ನು ಬಳಸಬಹುದು. ಸೌತೆಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇದರ ರಸವನ್ನು ತ್ವಚೆಗೆ ಹಚ್ಚಬಹುದು. ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆದು, ಸ್ವಚ್ಛವಾದ ಟವೆಲ್‍ನಿಂದ ಒಣಗಿಸಬಹುದು.

ಸೌತೆಕಾಯಿ ಮತ್ತು ಅಲೋವೆರಾ ಫೇಸ್ ಮಾಸ್ಕ್: ಸೌತೆಕಾಯಿಯನ್ನು ಕತ್ತರಿಸಿ ಗ್ರೈನ್ ಮಾಡಿ. ಇದಕ್ಕೆ ಎರಡು ಚಮಚ ಅಲೋವೆರಾ ಜೆಲ್ ಸೇರಿಸಿ, ನಯವಾಗುವ ತನಕ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಸಮವಾಗಿ ಮಸಾಜ್ ಮಾಡಿ. ನಂತರ ತಂಪಾದ ನೀರಿನಿಂದ ಮುಖವನ್ನು ತೊಳೆಯದು, ಮೃದುವಾದ ಬಟ್ಟೆಯಿಂದ ಚರ್ಮವನ್ನು ಒಣಗಿಸಿ.

ಸೌತೆಕಾಯಿ ಮತ್ತು ರೋಸ್ ವಾಟರ್ ಫೇಸ್ ಮಾಸ್ಕ್: ತ್ವಚೆಯ ಹೊಳಪನ್ನು ಪುನಃ ಪಡೆಯಲು ಯಾವ ಫೇಸ್ ಮಾಸ್ಕ್ ಬಳಸುವುದು ಎಂದು ಯೋಚಿಸುತ್ತಿದ್ದರೆ, ಸೌತೆಕಾಯಿ ಮತ್ತು ರೋಸ್ ವಾಟರ್ ಫೇಸ್ ಮಾಸ್ಕ್ ಬಳಕೆ ಬೆಸ್ಟ್. ಸೌತೆಕಾಯಿ ರಸಕ್ಕೆ ಎರಡು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ, ಈ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಿ. ನಂತರ ತಂಪಾದ ನೀರಿನಿಂದ ತೊಳೆಯಿರಿ.

ಒಟ್ಟಿನಲ್ಲಿ ತ್ವಚೆಯ ಕಾಳಜಿಗೆ ಸೌತೆಕಾಯಿಯ ಪ್ರಯೋಜನ ಹಲವು. ನೀವು ಕೂಡ ಇದನ್ನು ಪ್ರಯತ್ನಿಸಬಹುದು. ನಿಮಗೆ ಏನಾದರೂ ಅಲರ್ಜಿಗಳಿದ್ದಲ್ಲಿ, ಪ್ಯಾಚ್ ಟೆಸ್ಟ್ ನಡೆಸಿ ಬಳಿಕ ಇದನ್ನು ಮುಖಕ್ಕೆ ಹಚ್ಚುವುದು ಉತ್ತಮ.

Whats_app_banner