ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್​ಗಳಿಗೆ ಅಡ್ಮಿಷನ್ ಆರಂಭ; ಕೊನೆಯ ದಿನಾಂಕ, ಶುಲ್ಕದ ವಿವರ ಇಲ್ಲಿದೆ-bengaluru north university has invited applications for pg courses or post graduate courses last date september 9th prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್​ಗಳಿಗೆ ಅಡ್ಮಿಷನ್ ಆರಂಭ; ಕೊನೆಯ ದಿನಾಂಕ, ಶುಲ್ಕದ ವಿವರ ಇಲ್ಲಿದೆ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್​ಗಳಿಗೆ ಅಡ್ಮಿಷನ್ ಆರಂಭ; ಕೊನೆಯ ದಿನಾಂಕ, ಶುಲ್ಕದ ವಿವರ ಇಲ್ಲಿದೆ

Bengaluru North University: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಇದರ ವ್ಯಾಪ್ತಿಗೆ ಸೇರುವ ಕಾಲೇಜುಗಳಲ್ಲಿ ಪಿಜಿ ಕೋರ್ಸ್​​ಗಳಿಗೆ ಆರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್​ಗಳಿಗೆ ಅಡ್ಮಿಷನ್ ಆರಂಭ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್​ಗಳಿಗೆ ಅಡ್ಮಿಷನ್ ಆರಂಭ

ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (Bengaluru North University) ಸ್ನಾತಕೋತ್ತರ ಕೇಂದ್ರ ಮತ್ತು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರುವ ಕಾಲೇಜುಗಳಲ್ಲಿ 2024-2025ರ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್​​ 9. ಆನ್​ಲೈನ್ ಮೂಲಕವೂ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಎಲ್ಲಿಲ್ಲಿ? ಯಾವ ಕೋರ್ಸ್​ಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ವಿವರ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಕೋರ್ಸ್​​ಗಳು

ಕಲಾ ವಿಭಾಗ - ಎಂಎ: ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂಎಸ್​ಡಬ್ಲ್ಯೂ.

ವಿಜ್ಞಾನ ವಿಭಾಗ - ಎಂಎಸ್ಸಿ: ಗಣಿತಶಾಸ್ತ್ರ, ಗಣಕ ವಿಜ್ಞಾನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ (MLYSc), ಸಸ್ಯಶಾಸ್ತ್ರ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ.

ವಾಣಿಜ್ಯ ವಿಭಾಗ: ಎಂ.ಕಾಂ.

ಬೆಂ.ಉ.ವಿವಿಗೆ ಒಳಪಡುವ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸುಗಳ ವಿವರ

ಕಲಾ ವಿಭಾಗ - ಎಂಎ: ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂಎಸ್​ಡಬ್ಲ್ಯೂ.

ವಿಜ್ಞಾನ ವಿಭಾಗ - ಎಂಎಸ್ಸಿ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪ್ರಾಣಿ ಶಾಸ್ತ್ರ, ಗಣಕ ವಿಜ್ಞಾನ, ಜೀವ ರಸರಾಯನಶಾಸ್ತ್ರ, ಜೀವತಂತ್ರಜ್ಞಾನ, ಸೂಕ್ಷ್ಮ ಜೀವಶಾಸ್ತ್ರ, ಆಡಿಯೋಲಜಿ, ಸ್ಫೀಚ್ ಲಾಂಗ್ವೇಜ್ ಪೆಥಾಲಜಿ, ಮನಃಶಾಸ್ತ್ರ, ಕೌನ್ಸೆಲಿಂಗ್ ಸೈಕಾಲಜಿ.

ವಾಣಿಜ್ಯ ವಿಭಾಗ: ಎಂ.ಕಾಂ

ಶಿಕ್ಷಣ ವಿಭಾಗ: ಎಂ.ಎಡಿ

ಅರ್ಜಿಯನ್ನು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು

1. ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಅರ್ಜಿಗಳನ್ನು ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು UUCMS ವೆಬ್​ಸೈಟ್​ (https://uucms.karnataka.gov.in/login/index) ಮೂಲಕವೇ ಸಲ್ಲಿಸಬೇಕು.

2. ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರ ಕೋರ್ಸ್​ಗಳಿಗೆ ಪ್ರವೇಶ ಬಯಸಿದ್ದಲ್ಲಿ, ಪ್ರತಿಯೊಂದು ಕೋರ್ಸಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಆಯಾ ಕೋರ್ಸಿನ ಅರ್ಜಿಗಳ ಜೊತೆ ಅರ್ಜಿ ಶುಲ್ಕವನ್ನೂ ಪ್ರತ್ಯೇಕವಾಗಿ ಪಾವತಿಸಬೇಕು.

3. ಅರ್ಜಿ ಶುಲ್ಕ 260 ರೂಪಾಯಿ ಆನ್​ಲೈನ್ ಮೂಲಕವೇ uucms Payment linkನಲ್ಲಿ ಪಾವತಿಸಬೇಕು. (ಪರಿಶಿಷ್ಟ ಜಾತಿ/ಪಂಗಡ ಹಾಗೂ ಪ್ರವರ್ಗ-1, ವಿಶೇಷ ಚೇತನ, ತೃತಿಯ ಲಿಂಗಿಗಳಿಗೆ ಶುಲ್ಕ 130 ರೂಪಾಯಿ)

4. ಪ್ರವೇಶಕ್ಕೆ ಸಂಬಂಧಿಸಿದ ಅರ್ಹತಾ ಮಾನದಂಡಗಳು, ನಿಯಮಗಳು, ಸೀಟ್ ಮ್ಯಾಟ್ರಿಕ್ಸ್, ಶುಲ್ಕದ ಮಾಹಿತಿ ಮತ್ತು ಇತರೆ ಮಾಹಿತಿಗಳನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವೆಬ್​ಸೈಟ್ www.bnu.karnataka.gov.in ನಲ್ಲಿ ನೋಡಬಹುದು.

5. 2024-25ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್​ಗಳಿಗೆ ಅರ್ಜಿ ಸಲ್ಲಿಕೆ ಈಗಾಗಲೇ (ಆಗಸ್ಟ್ 28ರಿಂದ​) ಆರಂಭವಾಗಿದ್ದು, ಯಾವುದೇ ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 9 ಕೊನೆಯ ದಿನಾಂಕವಾಗಿದೆ. 200 ರೂಪಾಯಿ ದಂಡದ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್​ 11ರವರೆಗೂ ಅವಕಾಶ ಇದೆ. ಹಾಗೂ ಮುದ್ರಿತ ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್​​ 12 ಕೊನೆಯ ದಿನಾಂಕ.

6. UUCMS ಆನ್​ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳನ್ನು ಮಾತ್ರ ಸೀಟುಗಳ ಆಯ್ಕೆಗಾಗಿ ಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364710762, 8553658762, 9071078023, 7892087298 (UUCMS).