Baby Boy Names: ಮ ಅಕ್ಷರದಿಂದ ಮಗುವಿಗೆ ಇಡಬಹುದಾದ ಬೆಸ್ಟ್ ಹೆಸರುಗಳಿವು: ನಿಮ್ಮ ಕಂದಮ್ಮ ಶೋಭಿಸಲಿ-best baby boy names starting with the letter m trendy and parents like these names rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Baby Boy Names: ಮ ಅಕ್ಷರದಿಂದ ಮಗುವಿಗೆ ಇಡಬಹುದಾದ ಬೆಸ್ಟ್ ಹೆಸರುಗಳಿವು: ನಿಮ್ಮ ಕಂದಮ್ಮ ಶೋಭಿಸಲಿ

Baby Boy Names: ಮ ಅಕ್ಷರದಿಂದ ಮಗುವಿಗೆ ಇಡಬಹುದಾದ ಬೆಸ್ಟ್ ಹೆಸರುಗಳಿವು: ನಿಮ್ಮ ಕಂದಮ್ಮ ಶೋಭಿಸಲಿ

Baby Girl Names: ನಿಮ್ಮ ಮಗುವಿನ ಹೆಸರು ಎಂ ಅಕ್ಷರದಿಂದ ಬಂದಿದ್ದರೆ, ನೀವು ಪುಟ್ಟ ಕಂದಮ್ಮನಿಗೆ ಈ ಅರ್ಥಪೂರ್ಣ ಹಿಂದೂ ಹೆಸರನ್ನು ನೀಡಬಹುದು. ಈ ಎಲ್ಲಾ ಹೆಸರುಗಳು ತುಂಬಾ ಒಳ್ಳೆಯದು ಎಂದು ಹೇಳಲಾಗಿದೆ. ವಿಶೇಷ ಮತ್ತು ಸುಂದರವಾದ ಅರ್ಥವನ್ನು ಹೊಂದಿವೆ. ಎಂ ಅಕ್ಷರಿಂದ ಆರಂಭವಾಗುವ ಹೆಸರುಗಳ ಪಟ್ಟಿ ಇಲ್ಲಿದೆ.

Baby Boy Names: ಗಂಡು ಮಕ್ಕಳಿಗೆ ಮ ಅಕ್ಷರದಿಂದ ಇಡಬಹುದು ಸುಂದರ ಮತ್ತು ವಿಶೇಷ ಅರ್ಥ ಕೊಡುವ ಉತ್ತಮ ಹೆಸರುಗಳ ಪಟ್ಟಿ ಇಲ್ಲಿದೆ.
Baby Boy Names: ಗಂಡು ಮಕ್ಕಳಿಗೆ ಮ ಅಕ್ಷರದಿಂದ ಇಡಬಹುದು ಸುಂದರ ಮತ್ತು ವಿಶೇಷ ಅರ್ಥ ಕೊಡುವ ಉತ್ತಮ ಹೆಸರುಗಳ ಪಟ್ಟಿ ಇಲ್ಲಿದೆ. (shutterstock)

Baby Boy Names: ಪತ್ನಿ ಗರ್ಭಣಿ ಎಂದು ಖಚಿತವಾಗುತ್ತಿದ್ದಂತೆ ಪತಿ ಹಾಗೂ ಆತನ ಮನೆಯವರು ಹುಟ್ಟುವ ಮುದ್ದು ಮಗುವಿಗೆ ಯಾವ ಹೆಸರು ಇಡಬಹುದು ಎಂಬುದರ ಬಗ್ಗೆ ಚರ್ಚೆಯನ್ನು ಶುರು ಮಾಡುತ್ತಾರೆ. ಹೆಣ್ಣಾದರೆ ಯಾವ ರೀತಿಯ ಹೆಸರು, ಗಂಡು ಮಗುವಾದರೆ ಎಂಥ ಹೆಸರು ಇಡಬೇಕು ಎಂದು ಹುಡುಕಾಟ ಶುರು ಮಾಡುತ್ತಾರೆ. ಇನ್ನೂ ಕೆಲವರು ಜ್ಯೋತಿಷ್ಯ ಕೇಳಿ ಆ ಪ್ರಕಾರವೇ ಪುಟ್ಟ ಕಂದಮ್ಮಗಳಿಗೆ ಹೆಸರುಗಳನ್ನು ಇಡುತ್ತಾರೆ. ಕೆಲವರು ದೇವರು ಹೆಸರುಗಳು ಮತ್ತು ಅವುಗಳಿಗೆ ಇರುವ ಅರ್ಥವನ್ನು ತಿಳಿದುಕೊಂಡು ಮುದ್ದಾದ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಮಗುವಿನ ಜೀವನದಲ್ಲಿ ಪರಿಣಾಮ ಬೀರುವಂತ ಹೆಸರುಗಳಿಗೆ ಆದ್ಯತೆ ನೀಡಲು ಬಯಸುತ್ತಾರೆ. ಮಗುವಿನ ಹೆಸರು ಅವನ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಜನರು ತಮ್ಮ ಮಗುವಿನ ಹೆಸರನ್ನು ಬಹಳ ಚಿಂತನಶೀಲವಾಗಿ ಇಟ್ಟುಕೊಳ್ಳಲು ಇದು ಕೂಡ ಒಂದು ಕಾರಣವಾಗಿರುತ್ತೆ.

ನಿಮ್ಮ ಮಗುವಿನ ಹೆಸರು 'ಎಂ' ಅಕ್ಷರದಿಂದ ಬಂದಿದ್ದರೆ, ನೀವು ಮಗುವಿಗೆ ಈ ಅರ್ಥಪೂರ್ಣ ಹಿಂದೂ ಹೆಸರನ್ನು ನೀಡಬಹುದು. ಇಲ್ಲಿ ನೀಡಲಾಗಿರುವ ಎಲ್ಲಾ ಹೆಸರುಗಳು ಆಧುನಿಕ ಮತ್ತು ಅನನ್ಯ ಮಾತ್ರವಲ್ಲ, ಅವು ವಿಶೇಷ ಮತ್ತು ಸುಂದರವಾದ ಅರ್ಥವನ್ನು ಹೊಂದಿವೆ.

ಮಾಧವ

ಎಂಬುದು ಭಗವಾನ್ ಕೃಷ್ಣನ ಹೆಸರು. ಮಾಧವನ ಮತ್ತೊಂದು ಅರ್ಥವೂ ಜೇನುತುಪ್ಪದಂತೆ ಸಿಹಿಯಾಗಿರುವುದು.

ಮಾದೇಶ

ಮಾದೇಶ ಎಂಬುದು ಶಿವನ ಮತ್ತೊಂದು ಹೆಸರು.

ಮನನ್

ಮನನ್ ಎಂಬುದು ಹುಡುಗರಿಗೆ ಹಿಂದೂ ಟ್ರೆಂಡಿ ಹೆಸರು, ಇದರರ್ಥ ಪರಿಗಣನೆ ಹಾಗೂ ಸಂತೋಷ.

ಮಿಹಿರ್

ಇದು ಕೂಡ ಹಿಂದೂ ಹೆಸರಾಗಿದ್ದು. ಪುಟ್ಟ ಗಂಡು ಮಕ್ಕಳಿಗೆ ಇಡುವ ಈ ಹೆಸರಿನ ಅರ್ಥ ಅದ್ಭುತ ಮತ್ತು ಹಗುರ.

ಮಿಹಿತ್

ಮ ದಿಂದ ಆರಂಭವಾಗುವ ಮಿಹಿತ್ ಕೂಡ ಹಿಂದೂ ಹೆಸರು ಆಗದೆ. ಇದರರ್ಥ ಸಂತೋಷ ಮತ್ತು ಉತ್ಸಾಹ.

ಮಾಯನ್

ಮಾಯನ್ ಎಂಬುದು ಹುಡುಗರಿಗೆ ಇಡಬಹುದಾದ ಹೆಸರು. ಇದರ ಅರ್ಥ ಸಮೃದ್ಧಿ ಮತ್ತು ಪ್ರಶಾಂತತೆ.

ಮ ಅಕ್ಷರದಿಂದ ಹೆಣ್ಣು ಮಗುವಿಗೆ ಇಡಬಹುದಾದ ಹೆಸರುಗಳು

ಮನಸು

ಮನಸು ಎಂಬ ಹೆಸರಿನ ಅರ್ಥ ಬದಲಾವಣೆಯನ್ನು ಬಯಸುವವರು. ಈ ಹೆಸರನ್ನು ಹೆಣ್ಣು ಮಕ್ಕಳಿಗೆ ಇಡಬಹುದು.

ಮಾನುಷಿ

ಮಾನುಷಿ ಎಂಬುದು ಲಕ್ಷ್ಮಿ ದೇವಿಯ ಹೆಸರು. ಇದು ದಯಾಪರ ಎಂಬ ಅರ್ಥವನ್ನು ಕೊಡುತ್ತದೆ.

ಮಹಿರಾ

ಮಹಿರಾ ಎಂಬುದರ ಅರ್ಥವನ್ನು ನೋಡುವುದಾದರೆ ಹೆಚ್ಚು ನುರಿತ, ಪರಿಣತ, ಪ್ರತಿಭಾವಂತ ಹಾಗೂ ಶಕ್ತಿಶಾಲಿ ಎಂಬುದಾಗಿದೆ.

ಮೈರಾ

ಮೈರಾ ಹೆಸರಿನ ಅರ್ಥ ಸಿಹಿ, ಸ್ನೇಹಪರ, ಪ್ರಶಂಸನೀಯ ಹಾಗೂ ಸುಂದರ ಹುಡುಗಿ.

ಮಿಶ್ಯ

ನಿಮ್ಮ ಮಗಳಿಗೆ ಮಿಶ್ಯ ಎಂಬ ಹೆಸರನ್ನು ನೀಡಬಹುದು. ಈ ಹೆಸರಿನ ಅರ್ಥ ನಗು.

mysore-dasara_Entry_Point