ಕನ್ನಡ ಸುದ್ದಿ  /  Lifestyle  /  Business News Beware Of Credit Card Traps You Have To Know These Things To Avoid Paying Extra Rmy

ಕ್ರೆಡಿಟ್ ಕಾರ್ಡ್ ಟ್ರ್ಯಾಪ್ ಬಗ್ಗೆ ಎಚ್ಚರಿಕೆವಹಿಸಿ; ಹೆಚ್ಚುವರಿ ಪಾವತಿಯನ್ನು ತಪ್ಪಿಸಲು ಈ 6 ವಿಷಯಗಳು ನಿಮಗೆ ತಿಳಿದಿರಲಿ

ಇಎಂಐ ಪಾವತಿಸದಿರುವುದರ ಮೇಲಿನ ಬಡ್ಡಿ ಸೇರಿ ಕ್ರೆಡಿಟ್ ಕಾರ್ಡ್‌ನ ಎಲ್ಲಾ ವಹಿವಾಟುಗಳಿಗೂ ಹೆಚ್ಚಿನ ಬಡ್ಡಿ ದರಗಳನ್ನು ನಿಗದಿ ಮಾಡಲಾಗಿದೆ. ನೀವು ಹೆಚ್ಚುವರಿಯಾಗಿ ಪಾವತಿಸುವುದನ್ನು ತಪ್ಪಿಸಲು ಹೀಗೆ ಮಾಡಿ.

ಕ್ರೆಡಿಟ್ ಕಾರ್ಡ್‌ ಬಳಸಿ ನಡೆಸುವ ಎಲ್ಲಾ ವಹಿವಾಟುಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ. ಇದರ ಮಾಹಿತಿಯನ್ನು ತಿಳಿಯಿರಿ. ಹೆಚ್ಚುವರಿ ಪಾವತಿ ತಪ್ಪಿಸಲು ಈ ಕೆಳಗಿನ ಅಂಶಗಳನ್ನು ತಿಳಿಯಿರಿ.
ಕ್ರೆಡಿಟ್ ಕಾರ್ಡ್‌ ಬಳಸಿ ನಡೆಸುವ ಎಲ್ಲಾ ವಹಿವಾಟುಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ. ಇದರ ಮಾಹಿತಿಯನ್ನು ತಿಳಿಯಿರಿ. ಹೆಚ್ಚುವರಿ ಪಾವತಿ ತಪ್ಪಿಸಲು ಈ ಕೆಳಗಿನ ಅಂಶಗಳನ್ನು ತಿಳಿಯಿರಿ.

ಕ್ರೆಡಿಟ್ ಕಾರ್ಡ್‌ (Credit Card) ಬಳಕೆದಾರರು ನೀವಾಗಿದ್ದರೆ ಈ ಮಾಹಿತಿಯನ್ನು ನೀವು ತಿಳಿಯಲೇಬೇಕು. ಇಲ್ಲದಿದ್ದರೆ ನೋಡ ನೋಡುತ್ತಿದ್ದಂತೆ ನಿಮ್ಮ ಜೇಬು ಖಾಲಿಯಾಗೋದು ಗ್ಯಾರಂಟಿ. ಕ್ರೆಡಿಟ್ ಕಾರ್ಡ್‌ಗಳನ್ನು ಆನ್‌ಲೈನ್, ಆಫ್‌ಲೈನ್‌ನಲ್ಲಿ ಶಾಪಿಂಗ್, ಹೋಟೆಲ್ ಊಟ, ಪ್ರವಾಸ ಹೀಗೆ ಬಹುತೇಕ ಕಡೆ ಬಳಸಬಹುದು. ಖರೀದಿಯ ದಿನಾಂಕದಿಂದ 20 ರಿಂದ 50 ದಿನಗಳವರೆಗೆ ಶಾಪಿಂಗ್ ಮಾಡಿದ ಮೊತ್ತಕ್ಕೆ ಬ್ಯಾಂಕ್‌ಗಳು ಯಾವುದೇ ರೀತಿಯ ಬಡ್ಡಿಯನ್ನು ವಿಧಿಸುವುದಿಲ್ಲ. ಕ್ರೆಡಿಟ್ ಕಾರ್ಡ್‌ದಾರರು ಬಾಕಿ ಮೊತ್ತವನ್ನು ನಿಗದಿತ ದಿನಾಂಕದೊಳಗೆ ಪಾವತಿಸಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ಬಾಕಿ ಮೊತ್ತ ಪಾವತಿಸದಿದ್ದರೆ ದಂಡ ಮತ್ತು ಬಡ್ಡಿಯನ್ನು ವಿಧಿಸಲಾಗುತ್ತದೆ. ಇದು ಯಾವ ಮಟ್ಟಕ್ಕೆ ಇರುತ್ತದೆ ಎಂದರೆ ಬಾಕಿಯಿರುವ ಸಂಪೂರ್ಣ ಮೊತ್ತವನ್ನು ಪಾವತಿಸುವವರೆಗೆ ಬಡ್ಡಿ ವಿಧಿಸುತ್ತಲೇ ಇರುತ್ತಾರೆ. ಕನಿಷ್ಠ ಬಾಕಿಗಿಂತ ಕಡಿಮೆ ಪಾವತಿಸಿದರೆ ಸಂಪೂರ್ಣ ಬಾಕಿ ಮೊತ್ತಕ್ಕೆ ಬಡ್ಡಿಯನ್ನು ವಸೂಲಿ ಮಾಡಲಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದಕ್ಕೆ ಹೆಚ್ಚು ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ವರದಿಯಾಗಿದೆ.

ನಿಗದಿತ ದಿನಾಂಕದೊಳಗೆ ಇಎಂಐ ಪಾವತಿ ಮಾಡದಿದ್ದರೆ ಭಾರಿ ಮೊತ್ತದ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಇಎಂಐ ಪಾವತಿಸದಿರುವುದು, ಒಂದೆರಡು ಇಎಂಐಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಈ ಮೊತ್ತಕ್ಕೆ ಬರೋಬ್ಬರಿ ಶೇಕಡಾ 42 ರವರೆಗೆ ಬಡ್ಡಿಯನ್ನು ವಿಧಿಸಲಾಗುತ್ತಿದೆ. ಗ್ರಾಹಕರೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ 1,51,460 ರೂಪಾಯಿ ಪಾವತಿಸಬೇಕಾಗಿತ್ತು. ಆದರೆ ಆತ 1,51,400 ರೂಪಾಯಿ ಪಾವತಿಸಿದ್ದಾನೆ. ಉಳಿದ 60 ರೂಪಾಯಿ ಪಾವತಿಸದಿದ್ದರೆ 6,356 ರೂಪಾಯಿ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗಿದೆ. ಅದು ಕೂಡ ಮುಂದಿನ ಬಿಲ್ ಪಾವತಿಗೆ ಮುನ್ನವೇ ಈ ಸೂಚನೆ ನೀಡಲಾಗಿದೆ. ಇದನ್ನು ನೋಡಿದ ಕ್ರೆಡಿಟ್ ಕಾರ್ಡ್ ಬಳಕೆದಾರ ಶಾಕ್ ಆಗಿದ್ದಾನೆ. ಕ್ರೆಡಿಟ್ ಕಾರ್ಡ್‌ನ ನಿರ್ದಿಷ್ಟ ಬಿಲ್ ಪಾವತಿಸುವ ಮೂಲಕ ಇಂತಹ ಹೆಚ್ಚುವರಿ ಪಾವತಿಗಳಿಂದ ದೂರವಿರಿ. ಇಲ್ಲದಿದ್ದರೆ ನಿಮ್ಮ ಜೇಬು ಖಾಲಿಯಾದು ಗ್ಯಾರಂಟಿ.

ಕನಿಷ್ಠ ಪಾವತಿಗೆ ಬಡ್ಡಿ ವಿಧಿಸಲಾಗುತ್ತದೆಯೇ

ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸಿದರೆ ಒಟ್ಟು ಬಾಕಿ ಮೊತ್ತದ ಮೇಲೆ ಶೇಕಡಾ 5 ರಷ್ಟು ಬಡ್ಡಿ ಇರುತ್ತದೆ. ಕನಿಷ್ಠ ಪಾವತಿಗೆ ಬಡ್ಡಿ ವಿಧಿಸಲಾಗುವುದಿಲ್ಲ. ಉಳಿದ ಮೊತ್ತಕ್ಕೆ ಹಾಗೂ ಖರೀದಿಸಿದ ಎಲ್ಲಾ ವಹಿವಾಟಿಗಳ ಮೇಲೆ ಬಡ್ಡಿಯನ್ನ ವಿಧಿಸಲಾಗುತ್ತದೆ.

ಸಿಸಿ ಗ್ರಾಹಕ ಗ್ರೇಸ್ ಅವಧಿಯನ್ನ ಯಾವಾಗ ಕಳೆದು ಕೊಳ್ಳುತ್ತಾರೆ

ಗ್ರಾಹಕರು ಕ್ರೆಡಿಟ್ ಕಾರ್ಡ್‌ನಲ್ಲಿ ಬಾಕಿ ಉಳಿದಿರುವ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸದಿದ್ದರೆ ಬಡ್ಡಿ ರಹಿತ ಕ್ರೆಡಿಟ್ ಲಾಭವನ್ನು ಕಳೆದುಕೊಳ್ಳುತ್ತಾನೆ. ಎಲ್ಲಾ ವಹಿವಾಟುಗಳಿಗೂ ಖರೀದಿಯ ದಿನಾಂಕದಿಂದಲೇ ಬಡ್ಡಿಯನ್ನ ಪಾವತಿಸುತ್ತಾನೆ

ಬಾಕಿ ಪಾವತಿಸದಿದ್ದರೆ ಕ್ರೆಡಿಟ್ ಸ್ಕೋರ್ ಏನಾಗಲಿದೆ

ತಿಂಗಳ ಬಿಲ್‌ನಲ್ಲಿನ ಕನಿಷ್ಠ ಮೊತ್ತವನ್ನು ಪಾವತಿಸದಿದ್ದರೆ ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಇದು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ

ಕ್ರೆಡಿಟ್ ಕಾರ್ಡ್ ಟ್ರ್ಯಾಪ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ

ಕ್ರೆಡಿಟ್ ಕಾರ್ಡ್ ನೀಡುವವರು ದಿನದ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕಾ ಹಾಕುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕನಿಷ್ಠ ಮೊತ್ತ ಬಾಕಿ ಪಾವತಿಯನ್ನು ಉಳಿಸಿಕೊಳ್ಳಬೇಡಿ. ನಿರ್ದಿಷ್ಟ ಇಎಂಐ ಮೊತ್ತವನ್ನ ಪಾವತಿ ಮಾಡಿ. ಇದರಿಂದ ನೀವು ಅನಗತ್ಯ ಶುಲ್ಕಗಳನ್ನು ತಪ್ಪಿಸಬಹುದು.

ವಿಭಾಗ