Chanakya Niti: ಜೀವನ ಸಂಗಾತಿಯ ಆಯ್ಕೆಗೂ ಮುನ್ನ ಈ 6 ವಿಚಾರ ಗಮನಿಸಿ; ಚಾಣಕ್ಯರು ಹೇಳಿದ ಬದುಕಿನ ಪಾಠವಿದು
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಜೀವನ ಸಂಗಾತಿಯ ಆಯ್ಕೆಗೂ ಮುನ್ನ ಈ 6 ವಿಚಾರ ಗಮನಿಸಿ; ಚಾಣಕ್ಯರು ಹೇಳಿದ ಬದುಕಿನ ಪಾಠವಿದು

Chanakya Niti: ಜೀವನ ಸಂಗಾತಿಯ ಆಯ್ಕೆಗೂ ಮುನ್ನ ಈ 6 ವಿಚಾರ ಗಮನಿಸಿ; ಚಾಣಕ್ಯರು ಹೇಳಿದ ಬದುಕಿನ ಪಾಠವಿದು

ಮದುವೆ ಎನ್ನುವುದು ಬದುಕಿನ ಮಹತ್ತರ ಘಟ್ಟ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಆಗ ಮಾತ್ರ ಜೀವನ ಸುಂದರವಾಗಿರುತ್ತದೆ. ಅಲ್ಲದೇ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನ ಕಳೆಯಲು ಸಾಧ್ಯವಾಗುತ್ತದೆ.

ಜೀವನ ಸಂಗಾತಿ ಆಯ್ಕೆಗೂ ಮುನ್ನ ಈ 5 ವಿಚಾರ ಗಮನಿಸಿ; ಚಾಣಕ್ಯರ ಹೇಳಿದ ಬದುಕಿನ ಪಾಠವಿದು
ಜೀವನ ಸಂಗಾತಿ ಆಯ್ಕೆಗೂ ಮುನ್ನ ಈ 5 ವಿಚಾರ ಗಮನಿಸಿ; ಚಾಣಕ್ಯರ ಹೇಳಿದ ಬದುಕಿನ ಪಾಠವಿದು

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ. ನಮ್ಮ ಬದುಕಿಗೆ ಸಂಗಾತಿಯನ್ನು ಆಯ್ಕೆ ಮಾಡುವುದು ವ್ಯಕ್ತಿಯ ಜೀವನದ ಅತ್ಯಂತ ದೊಡ್ಡ ನಿರ್ಧಾರಗಳಲ್ಲಿ ಒಂದು. ಮದುವೆಯನ್ನು ಏಳು ಜನ್ಮಗಳ ಅನುಬಂಧ ಎಂದು ಹೇಳಲಾಗುತ್ತದೆ, ಆದರೂ ಜೀವನ ಸಂಗಾತಿಯ ವಿಚಾರದಲ್ಲಿ ಎಡವಿದರೆ ಬದುಕು ನರಕವಾಗುವುದರಲ್ಲಿ ಎರಡು ಮಾತಿಲ್ಲ. ಜೀವನಕ್ಕೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ನಿಮ್ಮ ಹಾಗೂ ನಿಮ್ಮ ಕುಟುಂಬ ಇಬ್ಬರ ದೃಷ್ಟಿಯಿಂದಲೂ ಮುಖ್ಯ. ಮದುವೆ ಎನ್ನುವುದು ಮನೆ ಮನಸ್ಸುಗಳನ್ನು ಒಂದು ಮಾಡುವಂತಿರಬೇಕೇ ಹೊರತು ಮನಸ್ಸುಗಳನ್ನು ಒಡೆಯುವಂತಿರಬಾರದು.

ಚಾಣಕ್ಯ ನೀತಿಯಲ್ಲಿ, ಮದುವೆಗೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವ ಬಗ್ಗೆ ಚಾಣಕ್ಯರು ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ. ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಕೆಲವು ವಿಷಯಗಳನ್ನು ಪರಿಗಣಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ. ಈ ವಿಷಯಗಳನ್ನು ತಿಳಿದುಕೊಂಡು ನಿಮ್ಮ ಸಂಗಾತಿಯನ್ನು ಆರಿಸಿಕೊಳ್ಳುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಶಾಶ್ವತವಾಗಿ ಸಂತೋಷ ನೆಲೆಸಿರುತ್ತದೆ.

ಸಮಾನ ಮನಸ್ಕರನ್ನು ಆಯ್ಕೆ ಮಾಡುವುದು

ಮದುವೆಗೆ ಮುನ್ನ ಹೆಂಡತಿಗೆ ನಿಮ್ಮ ಹಿನ್ನೆಲೆ ತಿಳಿದಿರಬೇಕು. ಸಂಗಾತಿಯ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯ ಬಗ್ಗೆ ನೀವೂ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಮದುವೆ ಎಂಬ ಬಂಧವು ಯಾವಾಗಲೂ ಸಮಾನ ಮನಸ್ಕರು ಹಾಗೂ ಆರ್ಥಿಕ ಸ್ಥಿತಿಯಲ್ಲೂ ಒಂದೇ ಸಮಕ್ಕೆ ಇರುವವರ ನಡುವೆ ನಡೆಯಬೇಕು ಎಂದು ಚಾಣಕ್ಯ ಹೇಳಿದ್ದಾರೆ. ನಿಮ್ಮ ಸಂಗಾತಿಯ ಕುಟುಂಬವು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರೆ ಅಥವಾ ತೀರಾ ಬಡತನದಲ್ಲಿ ಇದ್ದರೆ ಮದುವೆಯ ನಂತರ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೂ ಇವೆಲ್ಲದರ ನಡುವೆ ಹೃದಯ ಶ್ರೀಮಂತಿಕೆ ಇರುವವರನ್ನು ಮದುವೆಯಾಗುವುದು ಸೂಕ್ತ ಎಂದು ಚಾಣಕ್ಯ ಹೇಳಿದ್ದಾರೆ.

ತಾಳ್ಮೆ ಅತ್ಯವಶ್ಯ

ತಾಳ್ಮೆ ಮತ್ತು ಪರಿಶ್ರಮ ಹೊಂದಿರುವವರು ಕುಟುಂಬವನ್ನು ಎಲ್ಲಾ ಕಷ್ಟದ ಸಂದರ್ಭಗಳಿಂದ ರಕ್ಷಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ. ಆಪತ್ಕಾಲದಲ್ಲಿ ಕುಟುಂಬವು ಬಲವಾಗಿರುವುದು ಒಳ್ಳೆಯದು. ಮದುವೆಗೂ ಮುನ್ನ ನಿಮ್ಮ ಸಂಗಾತಿಯ ತಾಳ್ಮೆಯನ್ನು ಕೂಲಂಕಷವಾಗಿ ಪರೀಕ್ಷಿಸಬೇಕು. ಅತಿಯಾದ ಕೋಪ ಮಾಡಿಕೊಳ್ಳುವ ಜನರು ನಿಮ್ಮ ಜೀವನದಲ್ಲಿ ತೊಂದರೆ ತರುತ್ತಾರೆ. ಆಗಾಗ ಕೋಪ ಮಾಡಿಕೊಳ್ಳುವ ವ್ಯಕ್ತಿಯು ತನ್ನ ಸಂಗಾತಿಯ ಜೀವನದಲ್ಲಿ ಸಾಕಷ್ಟು ಕಿರಿಕಿರಿಯನ್ನು ಉಂಟುಮಾಡುತ್ತಾನೆ.

ಮಾತು ಗಮನಿಸಿ

ಉತ್ತಮ ಸಂವಹನದಿಂದ ಯಾವುದೇ ಸಂಬಂಧವನ್ನು ಗಟ್ಟಿಗೊಳಿಸಬಹುದು ಎಂಬುದನ್ನು ಮರೆಯಬಾರದು. ಮಾತು ಸಂಬಂಧವನ್ನು ಬೆಸೆಯುವಂತಿರಬೇಕು. ವೈವಾಹಿಕ ಜೀವನಕ್ಕೆ ಪತಿ-ಪತ್ನಿಯರ ನಡುವಿನ ಸಂವಹನ ಬಹಳ ಮುಖ್ಯ. ನಿಮ್ಮ ಸಂಗಾತಿಯ ಕಹಿ ಮಾತುಗಳು ನಿಮ್ಮ ದಾಂಪತ್ಯದಲ್ಲಿ ಬಿರುಕು ತರಬಹುದು. ಮದುವೆಗೆ ಮುನ್ನ ನಿಮ್ಮ ಸಂಗಾತಿಯ ಜೀವನಶೈಲಿಯನ್ನು ನೀವು ತಿಳಿದಿರಬೇಕು. ಆಗ ಮಾತ್ರ ಅದು ಸುಂದರವಾಗಿರುತ್ತದೆ.

ಸೌಂದರ್ಯವನ್ನು ಮಾತ್ರ ನೋಡಬೇಡಿ

ಕೇವಲ ಸೌಂದರ್ಯಕ್ಕಾಗಿ ಹುಡುಗಿಯನ್ನು ಮದುವೆಯಾಗಬೇಡಿ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳ ಮುಖ್ಯ. ಚಾಣಕ್ಯ ನೀತಿಯ ಪ್ರಕಾರ ಸುಳ್ಳು ಹೇಳುವವರನ್ನು ಎಂದಿಗೂ ಜೀವನ ಸಂಗಾತಿಯನ್ನಾಗಿ ಆರಿಸಿಕೊಳ್ಳಬೇಡಿ. ಅವರು ನಿಮ್ಮ ಭವಿಷ್ಯಕ್ಕೆ ಖಂಡಿತ ಅಪಾಯಕಾರಿ.

ಚಾಣಕ್ಯ ನೀತಿಯ ಪ್ರಕಾರ, ಮದುವೆಗೆ ಮೊದಲು, ನಿಮ್ಮ ಸಂಗಾತಿ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾರೆಯೇ ಎಂದು ತಿಳಿದುಕೊಳ್ಳುವುದು ಅವಶ್ಯಕ. ಏಕೆಂದರೆ ದೇವರನ್ನು ನಂಬುವವರು ತಮ್ಮ ಗೌರವವನ್ನು ಮರೆಯುವುದಿಲ್ಲ. ಅವರ ಜೀವನವು ಅವರ ಕುಟುಂಬಕ್ಕೆ ಎಂದೆಂದಿಗೂ ಮೀಸಲಾಗಿರುತ್ತದೆ. ಅಂತಹವರು ಯಾವುದೇ ದುಶ್ಚಟಗಳನ್ನು ಮಾಡುವುದಿಲ್ಲ ಎಂದು ಚಾಣಕ್ಯ ಹೇಳಿದರು. ನಿಮ್ಮ ಜೀವನವು ಸುಗಮವಾಗಿರುತ್ತದೆ.

ನಂಬಿಕೆ ಬಹಳ ಮುಖ್ಯ

ಇನ್ನೊಂದು ಮುಖ್ಯವಾದ ವಿಷಯವೆಂದರೆ ಮದುವೆಯಾಗುವ ವ್ಯಕ್ತಿಯ ಮೇಲೆ ಸಂಪೂರ್ಣ ನಂಬಿಕೆ ಇರಬೇಕು. ನಂಬಿಕೆ ಇದ್ದರೆ ಮಾತ್ರ ಸಂಬಂಧದಲ್ಲಿ ಮುನ್ನಡೆಯಬೇಕು. ಇಲ್ಲದಿದ್ದರೆ ಜೀವನ ನಿಲ್ಲುತ್ತದೆ. ಅನುಮಾನ ಎನ್ನುವುದು ದೊಡ್ಡ ರೋಗ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ನಂಬಿಕೆ ತುಂಬಾ ಮುಖ್ಯವಾಗಿದೆ. ನಂಬಿಕೆಯಿಲ್ಲದ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.

ಅಭ್ಯಾಸಗಳನ್ನು ತಿಳಿಯಿರಿ

ನಿಮ್ಮ ಸಂಗಾತಿಯ ಅಭ್ಯಾಸಗಳ ಬಗ್ಗೆ ನೀವು ನಿಖರವಾಗಿ ತಿಳಿದಿರಬೇಕು ಎಂದು ಚಾಣಕ್ಯ ನೀತಿ ಹೇಳುತ್ತಾರೆ. ನಿಮ್ಮಲ್ಲಿ ಒಳ್ಳೆಯ ಅಭ್ಯಾಸಗಳಿದ್ದರೆ ಏನು ಅಲ್ಲ.. ಆದರೆ ಕೆಟ್ಟ ಅಭ್ಯಾಸಗಳಿದ್ದರೆ ನಿಮ್ಮ ಜೀವನವೇ ಹಾಳಾಗುತ್ತದೆ. ನೀವು ಮದುವೆಯಾಗಲಿರುವ ವ್ಯಕ್ತಿಯ ಅಭ್ಯಾಸಗಳನ್ನು ನೀವು ಮುಂಚಿತವಾಗಿ ತಿಳಿದಿರಬೇಕು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner