ಮಗುವಿಗೆ ಎರಡು ವರ್ಷವಾದ್ರೂ ಎದೆಹಾಲಿಗೆ ಹಟ ಮಾಡುತ್ತಿದ್ಯಾ: ಸ್ತನ್ಯಪಾನ ಬಿಡಿಸುವುದು ಹೇಗೆ, ತಾಯಂದಿರಿಗೆ ತಿಳಿದಿರಬೇಕಾದ ವಿಷಯ ಇದು-child care how to stop breastfeeding for 1 year baby what to apply on nipples to stop breastfeeding home remedies prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಗುವಿಗೆ ಎರಡು ವರ್ಷವಾದ್ರೂ ಎದೆಹಾಲಿಗೆ ಹಟ ಮಾಡುತ್ತಿದ್ಯಾ: ಸ್ತನ್ಯಪಾನ ಬಿಡಿಸುವುದು ಹೇಗೆ, ತಾಯಂದಿರಿಗೆ ತಿಳಿದಿರಬೇಕಾದ ವಿಷಯ ಇದು

ಮಗುವಿಗೆ ಎರಡು ವರ್ಷವಾದ್ರೂ ಎದೆಹಾಲಿಗೆ ಹಟ ಮಾಡುತ್ತಿದ್ಯಾ: ಸ್ತನ್ಯಪಾನ ಬಿಡಿಸುವುದು ಹೇಗೆ, ತಾಯಂದಿರಿಗೆ ತಿಳಿದಿರಬೇಕಾದ ವಿಷಯ ಇದು

ನವಜಾತ ಶಿಶುಗಳ ಬೆಳವಣಿಗೆಗೆ ತಾಯಿಯ ಎದೆಹಾಲು ಅತ್ಯಗತ್ಯ.ಮಗುವಿಗೆ ಕನಿಷ್ಠ ಆರು ತಿಂಗಳವರೆಗೆ ಎದೆ ಹಾಲನ್ನೇ ನೀಡಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಮಕ್ಕಳ ಪೋಷಣೆ, ಬೆಳವಣಿಗೆಗೆ ಎದೆಹಾಲು ಬೇಕೇ ಬೇಕು. ಮಗುವಿಗೆ ಒಂದು ವರ್ಷವಾದ ನಂತರ ಎದೆಹಾಲನ್ನು ಬಿಡಿಸಲು ತಾಯಂದಿರು ಹೆಣಗಾಡುತ್ತಾರೆ. ಹೀಗಾಗಿ, ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಮಗುವಿಗೆ ಒಂದು ವರ್ಷವಾದ ನಂತರ ಎದೆಹಾಲನ್ನು ಬಿಡಿಸಲು ತಾಯಂದಿರು ಹೆಣಗಾಡುತ್ತಾರೆ, ಇಲ್ಲಿ ನೀಡಲಾಗಿರುವ ಸಲಹೆಗಳನ್ನು ಪಾಲಿಸಬಹುದು.
ಮಗುವಿಗೆ ಒಂದು ವರ್ಷವಾದ ನಂತರ ಎದೆಹಾಲನ್ನು ಬಿಡಿಸಲು ತಾಯಂದಿರು ಹೆಣಗಾಡುತ್ತಾರೆ, ಇಲ್ಲಿ ನೀಡಲಾಗಿರುವ ಸಲಹೆಗಳನ್ನು ಪಾಲಿಸಬಹುದು.

ಇಂದು ಕೆಲ ಮಹಿಳೆಯರು ಸೌಂದರ್ಯ ಹಾಳಾಗುತ್ತದೆ ಅಂತಾ ಮಗುವಿಗೆ ಎದೆಹಾಲು ಉಣಿಸುವುದಿಲ್ಲ. ಆದರೆ, ನವಜಾತ ಶಿಶುವಿಗೆ ತಾಯಿಯ ಹಾಲು ಅತ್ಯುತ್ತಮ ಆಹಾರ. ಮಗುವಿಗೆ ಕನಿಷ್ಠ ಆರು ತಿಂಗಳವರೆಗೆ ಎದೆ ಹಾಲನ್ನೇ ನೀಡಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಸ್ತನ್ಯಪಾನವು ಶಿಶುಗಳಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಶಿಶುವಿನ ಆರೋಗ್ಯಕ್ಕಾಗಿ ಎದೆಹಾಲನ್ನು ಉಣಿಸುವುದು ಬಹಳ ಮುಖ್ಯ. ತಾಯಿಯ ಹಾಲು ಪೋಷಕಾಂಶಗಳು, ಪ್ರತಿಕಾಯಗಳು ಮತ್ತು ಕಿಣ್ವಗಳಲ್ಲಿ ಸಮೃದ್ಧವಾಗಿದೆ. ಇದು ಮಗುವಿನ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಲು ತಾಯಿಯ ಎದೆಹಾಲು ಸಹಾಯ ಮಾಡುತ್ತದೆ.

ಪೌಷ್ಟಿಕಾಂಶದ ಪ್ರಯೋಜನಗಳನ್ನು ಮೀರಿ, ಸ್ತನ್ಯಪಾನವು ತಾಯಿ ಮತ್ತು ಮಗುವಿನ ನಡುವೆ ಬಲವಾದ ಭಾವನಾತ್ಮಕ ಬಂಧವನ್ನು ಬೆಳೆಸುತ್ತದೆ. ಸ್ತನ್ಯಪಾನ ಮಾಡುವುದರಿಂದ ತಾಯಂದಿರಿಗೂ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಹಾಲುಣಿಸುವಿಕೆ ನವಜಾತ ಶಿಶುಗಳಿಗೆ ಅತ್ಯವಶ್ಯಕ. ಆದರೆ, ಆರು ತಿಂಗಳಿನ ನಂತರ ಎದೆಹಾಲಿನ ಜೊತೆಗೆ ಪೌಷ್ಠಿಕಾಂಶವುಳ್ಳ ಆಹಾರಗಳನ್ನು ನೀಡಬೇಕಾಗುತ್ತದೆ. ಆದರೆ, ಮಗುವಿಗೆ ಒಂದು ವರ್ಷವಾಗುತ್ತಿದ್ದಂತೆ ಬಹಳಷ್ಟು ಮಂದಿ ಎದೆಹಾಲು ನಿಲ್ಲಿಸಲು ಮುಂದಾಗುತ್ತಾರೆ. ಆದರೆ, ಮಕ್ಕಳು ಅಷ್ಟು ಸುಲಭಕ್ಕೆ ಹಾಲು ಬಿಡಲು ಕೇಳುವುದಿಲ್ಲ. ಇದರಿಂದ ಬಹುತೇಕ ತಾಯಂದಿರು ಹೆಣಗಾಡುವುದು ಸಾಮಾನ್ಯ. ಕೆಲವೊಂದು ಮಹಿಳೆಯರು ಮಗುವಿಗೆ ಮೂರು ವರ್ಷವಾಗಿದ್ದರೂ ಹಾಲು ಕೊಡುವುದನ್ನು ಮುಂದುವರೆಸುವವರು ಇದ್ದಾರೆ. ಆದರೆ, ಎಲ್ಲಾ ತಾಯಂದಿರೂ ಇದೇ ರೀತಿ ಇರುವುದಿಲ್ಲ. ಮನೆಯಲ್ಲಿ ಹಿರಿಯರಿದ್ದರೆ 1 ವರ್ಷಕ್ಕೆ ಹಾಲು ಬಿಡಿಸುವುದು ಏತಕ್ಕೆ ಎಂದು ರೇಗುತ್ತಾರೆ. ಮಗುವಿಗೆ ಹಾಲುಣಿಸುವುದನ್ನು ಯಾವಾಗ ನಿಲ್ಲಿಸಬೇಕು ಎಂಬ ಬಗ್ಗೆ ನಿಮಗೂ ಗೊಂದಲವಿರಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

ಯಾವಾಗ ಮಗುವಿಗೆ ಹಾಲುಣಿಸುವಿಕೆಯನ್ನು ನಿಲ್ಲಿಸಬಹುದು?

ಮಗುವಿಗೆ ಒಂದು ವರ್ಷ ತುಂಬಿದಾಗ, ತಾಯಿಯ ಹಾಲಿಗಿಂತ ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯವಿರುತ್ತದೆ. ಹೀಗಾಗಿ ಹಾಲು, ಕಾಳುಗಳು, ಧಾನ್ಯಗಳು, ತರಕಾರಿಗಳು, ಮೊಟ್ಟೆ ಇಂತಹ ಆಹಾರಗಳನ್ನು ನೀಡಲು ಪ್ರಯತ್ನಿಸಬೇಕು. ಈ ಆಹಾರಗಳನ್ನು ಮಗು ತಿನ್ನಲು ಪ್ರಾರಂಭಿಸಿದಾಗ ಸ್ತನ್ಯಪಾನವನ್ನು ಕಡಿಮೆ ಮಾಡಬಹುದು ಅಥವಾ ಹಾಲು ಬಿಡಿಸಲು ಪ್ರಯತ್ನಿಸಬಹುದು. ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಅನುಸರಿಸಬಹುದು.

ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ: ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಲು ನೀವು ನಿರ್ಧರಿಸಿದ ನಂತರ, ಈ ನಿರ್ಧಾರಕ್ಕೆ ಬದ್ಧರಾಗಿರಬೇಕು. ಯಾಕೆಂದರೆ, ಮಗುವಿಗೆ ಹಾಲು ಬಿಡಿಸುವ ಮೊದಲ ದಿನ ಮಗು ಜೋರಾಗಿ ಅಳುವುದು, ಕಿರುಚುವುದು, ಹಠ ಮಾಡುವುದು ಇತ್ಯಾದಿ ಮಾಡಬಹುದು. ಇದರಿಂದ ತಾಯಂದಿರಿಗೆ ನೋವಾಗುವುದು ಸಹಜ. ಆದರೂ, ಹಾಲಿ ಬಿಡಿಸಬೇಕು ಎಂದು ಒಮ್ಮೆ ನಿರ್ಧರಿಸಿದ ಮೇಲೆ ಅದಕ್ಕೆ ಬದ್ಧರಾಗಿರಿ.

ಹಾಲುಣಿಸುವಿಕೆಯನ್ನು ಕಡಿಮೆ ಮಾಡಿ: ಹಾಲು ಬಿಡಿಸಲು ಮೊದಲಿಗೆ ಹಾಲುಣಿಸುವುದನ್ನು ಕಡಿಮೆ ಮಾಡಬೇಕಾಗುತ್ತದೆ. ದಿನನಿತ್ಯ 8 ರಿಂದ 10 ಬಾರಿ ಹಾಲುಣಿಸುತ್ತಿದ್ದರೆ ಇದನ್ನು ಆದಷ್ಟು ಕಡಿಮೆ ಮಾಡಬೇಕು. ಮೂರರಿಂದ ನಾಲ್ಕು ಬಾರಿ ಹಾಲುಣಿಸಿ, ಕ್ರಮೇಣ ಹಾಲು ಕೊಡುವುದನ್ನು ನಿಲ್ಲಿಸಬಹುದು. ನೀವು ಹಾಲುಣಿಸುವಿಕೆಯನ್ನು ನಿಲ್ಲಿಸಿದಾಗ ಅಥವಾ ಕಡಿಮೆಗೊಳಿಸಿದಾಗ, ಮಗುವಿನ ನಡವಳಿಕೆಯು ಬದಲಾಗುತ್ತದೆ. ಹೀಗಾಗಿ ಮಗುವಿನ ವಯಸ್ಸಿಗೆ ತಕ್ಕಂತೆ ಬೇಕಾದ ಆಹಾರಗಳನ್ನು ನೀಡಬಹುದು.

ಹೊಟ್ಟೆ ತುಂಬ ತಿನ್ನಿಸಿ: ಮಗು ಹಸಿವಾದಾಗ ಮಾತ್ರ ಹಾಲು ಕೇಳುತ್ತದೆ. ಹೀಗಾಗಿ ಹೊಟ್ಟೆ ತುಂಬ ತಿನ್ನಿಸಿದರೆ, ಅಷ್ಟಾಗಿ ಎದೆಹಾಲಿಗೆ ಹಠ ಮಾಡುವುದಿಲ್ಲ. ಒಂದು ವರ್ಷದ ನಂತರ ಅನ್ನ, ಬೇಯಿಸಿದ ಬೇಳೆ ಮತ್ತು ಕ್ಯಾರೆಟ್‍ ಇತರೆ ತರಕಾರಿಗಳನ್ನು ನೀಡಬಹುದು. ಮನೆಯಲ್ಲೇ ತಯಾರಿಸಿದ ಹಣ್ಣಿನ ರಸವನ್ನು ಸಹ ಕುಡಿಸಬಹುದು. ಇವೆಲ್ಲವನ್ನೂ ಸಿದ್ಧವಾಗಿಟ್ಟುಕೊಳ್ಳಬೇಕು. ಮಗು ಹಸಿವಿಗೆ ಅಳುವ ಮುನ್ನವೇ ಈ ಆಹಾರಗಳನ್ನು ನೀಡಬೇಕು. ಇದರಿಂದ ಮಗುವಿನ ಗಮನ ಆಟದತ್ತ ಹೋಗುತ್ತದೆ. ಮಗು ಎದೆಹಾಲು ಕೇಳುವುದನ್ನು ಕಡಿಮೆ ಮಾಡಬಹುದು.

ಮಗುವನ್ನು ವಿಚಲಿತಗೊಳಿಸಿ: ಹಗಲಿನಲ್ಲಿ ಎದೆಹಾಲಿಗೆ ಬೇಡಿಕೆಯಿಟ್ಟಾಗ ಆ ಸಮಯದಲ್ಲಿ ಇತರೆ ಕುಟುಂಬ ಸದಸ್ಯರೊಂದಿಗೆ ಮಗುವನ್ನು ಆಟವಾಡಲು ಬಿಡಬಹುದು. ಇದರಿಂದ ಮಗುವಿನ ಗಮನ ಬೇರೆಡೆಗೆ ಹೋಗುತ್ತದೆ. ಜೊತೆಗೆ ಅವರ ಮೂಲಕವೇ ಆಹಾರವನ್ನು ತಿನ್ನಿಸುವುದರಿಂದ ಮಗು ಹಾಲು ಕೇಳುವುದನ್ನು ಕ್ರಮೇಣ ಕಡಿಮೆ ಮಾಡಬಹುದು.

ನಿರ್ದಿಷ್ಟ ಸಮಯದಲ್ಲಿ ಮಾತ್ರ ಹಾಲುಣಿಸಿ: ದಿನವಿಡೀ ಮಗುವಿಗೆ ಹಾಲುಣಿಸುವ ಬದಲು ಮಗು ಮಲಗುವ ವೇಳೆ ಅಥವಾ ಮಲಗಿ ಎದ್ದ ನಂತರ ಸ್ತನ್ಯಪಾನ ಮಾಡಬಹುದು. ಇದನ್ನು ಅಭ್ಯಾಸ ಮಾಡುವುದರಿಂದ ಮಗುವಿಗೆ ಹಾಲುಣಿಸುವುದನ್ನು ಬಿಡಿಸಲು ನಿಮಗೆ ಸುಲಭವಾಗುತ್ತದೆ.

ಹಾಲು ಬಿಡಿಸಲು ಏನು ಮಾಡಬೇಕು?

ಹಾಲುಣಿಸುವುದನ್ನು ಬಿಡಿಸುವ ಬಗ್ಗೆ ನಿರ್ಧಾರ ಮಾಡಿದ್ದರೆ ಒಂದೇ ಬಾರಿಗೆ ಬಿಡಿಸಬಾರದು. ಇದರಿಂದ ಮಕ್ಕಳಲ್ಲಿ ಭಯ ಮತ್ತು ಆತಂಕವನ್ನು ಹೆಚ್ಚಿಸುತ್ತದೆ. ಮೇಲೆ ತಿಳಿಸಿದಂತೆ ಒಂದೊಂದೇ ಹೆಜ್ಜೆ ಕಡಿಮೆ ಮಾಡುತ್ತಾ ಬರಬೇಕು. ಅಲ್ಲದೆ, ಈ ಸಮಯದಲ್ಲಿ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಇದರಿಂದ ಮಕ್ಕಳಲ್ಲಿ ಭಯ, ಆತಂಕ ಹುಟ್ಟಿಕೊಳ್ಳುವುದಿಲ್ಲ. ಹಾಗೆಯೇ ಮಕ್ಕಳು ಹಾಲು ಬೇಡ ಎಂದು ದೂರ ಹೋಗುವಂತೆ ಮಾಡಲು ಇಲ್ಲಿ ನೀಡಿರುವ ಈ ಸಲಹೆಗಳನ್ನು ಪಾಲಿಸಬಹುದು.

- ಪುದೀನಾ ಎಣ್ಣೆಯನ್ನು ಸ್ತನಗಳಿಗೆ ಹಚ್ಚಬೇಕು. ಇದು ಹಾಲು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪುದೀನಾ ಎಣ್ಣೆಯ ವಾಸನೆಯಿಂದ ಮಕ್ಕಳು ಕೂಡ ಎದೆಹಾಲು ಕುಡಿಯಲು ಹಿಂಜರಿಯುತ್ತಾರೆ.

- ಎಲೆಕೋಸು ಎಲೆಗಳನ್ನು ಚೆನ್ನಾಗಿ ತೊಳೆದು ಫ್ರಿಜ್‍ನಲ್ಲಿ ಇರಿಸಿ. ಇದು ಕೋಲ್ಡ್ (ತಂಪು) ಆದ ನಂತರ ಈ ಎಲೆಗಳನ್ನು ಎದೆಯ ಮೇಲಿಟ್ಟು ಬ್ರಾ ಧರಿಸಿ. ಇವುಗಳನ್ನು ಹೆಚ್ಚು ಹೊತ್ತು ಇಡುವುದರಿಂದ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಬಹುದು.

- ಮೊಲೆತೊಟ್ಟುಗಳ ಮೇಲೆ ಬೆಳ್ಳುಳ್ಳಿ ರಸ ಅಥವಾ ಶುಂಠಿಯ ರಸವನ್ನು ಹಾಕಿದರೂ ಮಗು ಹಾಲು ಕುಡಿಯುವುದನ್ನು ನಿರಾಕರಿಸಬಹುದು.

mysore-dasara_Entry_Point