Christmas 2024: ಕ್ರಿಸ್‌ಮಸ್‌ಗೆ ಭಾಷಣ- ಪ್ರಬಂಧ ಸ್ಪರ್ಧೆಗೆ ಸೇರಿದ್ದೀರಾ, ಕ್ರಿಸ್‌ಮಸ್ ಭಾಷಣ ಮಾಡಲು ಈ ಅಂಶಗಳನ್ನು ಪರಿಗಣಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Christmas 2024: ಕ್ರಿಸ್‌ಮಸ್‌ಗೆ ಭಾಷಣ- ಪ್ರಬಂಧ ಸ್ಪರ್ಧೆಗೆ ಸೇರಿದ್ದೀರಾ, ಕ್ರಿಸ್‌ಮಸ್ ಭಾಷಣ ಮಾಡಲು ಈ ಅಂಶಗಳನ್ನು ಪರಿಗಣಿಸಿ

Christmas 2024: ಕ್ರಿಸ್‌ಮಸ್‌ಗೆ ಭಾಷಣ- ಪ್ರಬಂಧ ಸ್ಪರ್ಧೆಗೆ ಸೇರಿದ್ದೀರಾ, ಕ್ರಿಸ್‌ಮಸ್ ಭಾಷಣ ಮಾಡಲು ಈ ಅಂಶಗಳನ್ನು ಪರಿಗಣಿಸಿ

ಪ್ರಪಂಚದಾದ್ಯಂತ ಕ್ರಿಸ್‌ಮಸ್ ಸಂಭ್ರಮ ಶುರುವಾಗಿದೆ. ಕ್ರಿಸ್‌ಮಸ್‌ ಎಂದರೆ ಶಾಲೆಗಳಿಗೆ ರಜೆ, ಮಕ್ಕಳಿಗೆ ಸಂಭ್ರಮ. ಈ ಹಬ್ಬದ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಮಕ್ಕಳಿಗೆ ಭಾಷಣ, ಪ್ರಬಂಧ ಸ್ಪರ್ಧೆ ಏರ್ಪಡಿಸುತ್ತಾರೆ. ನಿಮ್ಮ ಮಗು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ಕ್ರಿಸ್‌ಮಸ್‌ ಭಾಷಣ ಇಲ್ಲಿದೆ . ಪ್ರಬಂಧಕ್ಕೂ ನೀವು ಈ ಅಂಶಗಳನ್ನು ಪರಿಗಣಿಸಬಹುದು.

ಕ್ರಿಸ್‌ಮಸ್ ಭಾಷಣ
ಕ್ರಿಸ್‌ಮಸ್ ಭಾಷಣ (PC: Canva)

ಏಸುಕ್ರಿಸ್ತನ ಜನ್ಮದಿನಾಚರಣೆಯ ಅಂಗವಾಗಿ ಡಿಸೆಂಬರ್ 25 ಅನ್ನು ಪ್ರಪಂಚದಾದ್ಯಂತ ಕ್ರಿಸ್‌ಮಸ್ ಎಂದು ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ ಸಂಭ್ರಮ ಇದೀಗ ಶುರುವಾಗಿದ್ದು, ಈ ಸಮಯದಲ್ಲಿ ಮಕ್ಕಳಿಗಾಗಿ ಭಾಷಣ, ಪ್ರಬಂಧ ಸ್ಪರ್ಧೆಯನ್ನೂ ಏರ್ಪಡಿಸಿರುತ್ತಾರೆ. ನಿಮ್ಮ ಮಗು ಕೂಡ ಕ್ರಿಸ್‌ಮಸ್ ಭಾಷಣ ಸ್ಪರ್ಧೆಗೆ ಸೇರಿದ್ದರೆ ಮಗುವಿನ ಭಾಷಣಕ್ಕಾಗಿ ಈ ಅಂಶಗಳನ್ನು ನೀವು ಪರಿಗಣಿಸಬಹುದು.

ಏಸುಕ್ರಿಸ್ತ ಹಾಗೂ ಕ್ರಿಸ್‌ಮಸ್ ಹಿನ್ನೆಲೆಯ ಈ ಭಾಷಣದ ಅಂಶಗಳನ್ನು ನೀವು ಪ್ರಬಂಧ ಸ್ಪರ್ಧೆ ಇದ್ದರೂ ಪರಿಗಣಿಸಬಹುದು. ಇಲ್ಲಿದೆ ಮಕ್ಕಳಿಗೆ ಕ್ರಿಸ್‌ಮಸ್ ಭಾಷಣ.

ಕ್ರಿಸ್‌ಮಸ್‌ ಭಾಷಣ, ಪ್ರಬಂಧ

ನಾನಿಂದು ಕ್ರಿಸ್‌ಮಸ್‌ ಬಗ್ಗೆ ಭಾಷಣ ಮಾಡುತ್ತಿದ್ದೇನೆ. ನಿಮ್ಮಗೆಲ್ಲರಿಗೂ ತಿಳಿದಂತೆ ಕ್ರಿಸ್‌ಮಸ್ ಎಂದರೆ ಕ್ರಿಸ್ತನ ಹಬ್ಬ. ಏಸುಕ್ರಿಸ್ತನ ಜನ್ಮದಿನಾಚರಣೆಯನ್ನು ನಾವು ಕ್ರಿಸ್‌ಮಸ್‌ ಎಂದು ಆಚರಿಸುತ್ತೇವೆ. ಕ್ರಿಸ್‌ಮಸ್ ಎಂದರೆ ರಜಾದಿನ, ಆದರೆ ಈ ದಿನವನ್ನು ಎಲ್ಲರೂ ಬಹಳ ಸಂತೋಷ, ಸಂಭ್ರಮದಿಂದ ಆಚರಿಸುತ್ತಾರೆ. ಕ್ರಿಸ್‌ಮಸ್‌ ದಿನ ಏಸುವಿಗೆ ಗೌರವ ಸಲ್ಲಿಸುತ್ತೇವೆ. ಕ್ರಿಶ್ಚಿಯನ್ ಧರ್ಮದಲ್ಲಿ ಜೀಸಸ್‌ ಕ್ರೈಸ್ಟ್‌ನನ್ನು ದೇವರ ಮಗ ಎಂದು ಪರಿಗಣಿಸಲಾಗುತ್ತದೆ.

ಕ್ರಿಸ್‌ಮಸ್‌ ಸಮಯ ಹತ್ತಿರ ಬರುತ್ತಿದ್ದಂತೆ ಪ್ರಪಂಚದಾದ್ಯಂತ ಮನೆಗಳ ಮುಂದೆ ಕ್ರಿಸ್‌ಮಸ್‌ ಟ್ರೀಗಳನ್ನು ನೆಡುತ್ತಾರೆ. ಗೋದಲಿಗಳನ್ನು ನಿರ್ಮಾಣ ಮಾಡುತ್ತಾರೆ. ದೀಪಗಳಿಂದ ಮನೆಯನ್ನು ಅಲಂಕಾರ ಮಾಡುತ್ತಾರೆ. ಪ್ಲಂ ಕೇಕ್‌ ಪರಿಮಳ ಎಲ್ಲೆಲ್ಲೂ ಹರಡಿರುತ್ತದೆ. ಭಾರತದಲ್ಲೂ ಕ್ರಿಸ್‌ಮಸ್ ಸಂಭ್ರಮ ಜೋರಿರುತ್ತದೆ.

ಕ್ರಿಶ್ಚಿಯನ್ನರ ಪ್ರಮುಖ ಹಬ್ಬವಾದ ಕ್ರಿಸ್‌ಮಸ್‌ ಆಚರಣೆಯ ಸಂದರ್ಭ ಮನೆಮಂದಿಯೆಲ್ಲಾ ಒಂದಾಗುತ್ತದೆ. ವರ್ಷಾಂತ್ಯದ ಸಮಯದಲ್ಲಿ ಕ್ರಿಸ್‌ಮಸ್ ಬರುವ ಕಾರಣ ವಾರಗಟ್ಟಲೇ ಕ್ರಿಸ್‌ಮಸ್‌ ಹಬ್ಬದ ಸಂಭ್ರಮವಿರುತ್ತದೆ. ಈ ಸಮಯದಲ್ಲಿ ಕ್ರಿಸ್‌ಮಸ್‌ ಕಾರ್ಡ್‌ಗಳು, ಉಡುಗೊರೆಗಳನ್ನು ನೀಡಲಾಗುತ್ತದೆ. ಸಾಂಟಾಕ್ಲಾಸ್‌ ಕೂಡ ಉಡುಗೊರೆಗಳನ್ನು ನೀಡುವುದು ವಿಶೇಷ. ಕ್ರಿಶ್ಚಿಯನ್ನರು ಮಾತ್ರವಲ್ಲದೇ, ಬಹುತೇಕ ಎಲ್ಲ ಧರ್ಮದವರೂ ಕ್ರಿಸ್‌ಮಸ್‌ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ.

ಇದಲ್ಲದೆ, ಅವರು ಯೇಸುಕ್ರಿಸ್ತನ ಮರಣ ಮತ್ತು ಪುನರುತ್ಥಾನವನ್ನು ನೆನಪಿಟ್ಟುಕೊಳ್ಳಲು ಈಸ್ಟರ್ ಹಬ್ಬವನ್ನು ಸಹ ಆಚರಿಸಲಾಗುತ್ತದೆ.

ಕ್ರಿಸ್‌ಮಸ್‌ ಶಾಂತಿ ಮತ್ತು ಭರವಸೆಯ ಸಂದೇಶವನ್ನು ತರುತ್ತದೆ. ನಾವು ಎದುರಿಸುವ ಕಷ್ಟಗಳು ಏನೇ ಇರಲಿ, ದಯೆ ಮತ್ತು ಸಂತೋಷವನ್ನು ಹರಡಲು ಯಾವಾಗಲೂ ಒಂದು ಕಾರಣವಿದೆ ಎಂದು ಇದು ನೆನಪಿಸುತ್ತದೆ. ಕ್ರಿಸ್‌ಮಸ್ ಎಂದರೆ ಶಾಂತಿ, ಪ್ರೀತಿಯನ್ನು ಸಂಭ್ರಮಿಸುವ ದಿನ ಎಂಬುದನ್ನು ನೆನಪಿಸೋಣ.  ನಿಮ್ಮೆಲ್ಲರಿಗೂ ಪ್ರೀತಿ ಮತ್ತು ಸಂತೋಷದಿಂದ ತುಂಬಿದ ಮೇರಿ ಕ್ರಿಸ್ಮಸ್ ಶುಭಾಶಯಗಳು. ಏಸು ಕ್ರಿಸ್ತ ಸದಾ ನಿಮಗೆ ಒಳಿತು ಮಾಡಲಿ. 

Whats_app_banner