ಕಾಲಿವುಡ್​​ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್
ಕನ್ನಡ ಸುದ್ದಿ  /  ಮನರಂಜನೆ  /  ಕಾಲಿವುಡ್​​ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್

ಕಾಲಿವುಡ್​​ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್

Sreeleela Tamil debut: ‘ಸುರರೈ ಪೊಟ್ರು’ ಫೇಮ್ ಸುಧಾ ಕೊಂಗರಾ ಅವರ ನಿರ್ದೇಶನದಲ್ಲಿ ಸೆಟ್ಟೆರಿರುವ ಶಿವಕಾರ್ತಿಕೇಯನ್ ಅವರ ಚಿತ್ರದಲ್ಲಿ ಕಿಸ್ಸಿಕ್ ಬೆಡಗಿ ಶ್ರೀಲೀಲಾ ನಟಿಸಲಿದ್ದಾರೆ. ಆ ಮೂಲಕ ಕಾಲಿವುಡ್​​ಗೂ ಕಾಲಿಟ್ಟಿದ್ದಾರೆ ಕಿಸ್ ಬೆಡಗಿ.

ಕಾಲಿವುಡ್​​ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್
ಕಾಲಿವುಡ್​​ಗೆ ಹಾರಿದ ಕಿಸ್ಸಿಕ್ ಬೆಡಗಿ ಶ್ರೀಲೀಲಾ; 300 ಕೋಟಿ ಕ್ಲಬ್ ಸೇರಿದ ಅಮರನ್ ಚಿತ್ರದ ಹೀರೋ ಜೊತೆ ರೊಮ್ಯಾನ್ಸ್

‘ಪುಷ್ಪ 2’ ಚಿತ್ರದಲ್ಲಿ ಶ್ರೀಲೀಲಾ (Sreeleela) ಕಾಣಿಸಿಕೊಂಡಿದ್ದು ಒಂದೇ ಹಾಡಿನಲ್ಲಿ. ಆದರೆ, ‘ಕಿಸ್ಸಿಕ್’ ಎಂಬ ಆ ಹಾಡು ಆಕೆಗೆ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಸದ್ಯದ ಮಟ್ಟಿಗೆ ಬರೀ ಟಾಲಿವುಡ್‍ ಅಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗಗಳಲ್ಲೂ ಬಹಳ ಬೇಡಿಕೆ ನಟಿಯಾಗಿರುವ ಶ್ರೀಲೀಲಾ, ಇದೀಗ ಕಾಲಿವುಡ್‍ಗೆ ಹೊರಟು ನಿಂತಿದ್ದಾರೆ.

ಹೌದು, ಟಾಲಿವುಡ್‍ ಆಯ್ತು, ಬಾಲಿವುಡ್‍ ಆಯ್ತು, ಇದೀಗ ತಮಿಳು ಚಿತ್ರರಂಗಕ್ಕೂ ಶ್ರೀಲೀಲಾ ಕಾಲಿಟ್ಟಿದ್ದಾರೆ. ಈ ಹಿಂದೆ ‘ಸುರರೈ ಪೊಟ್ರು’ ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದ ಸುಧಾ ಕೊಂಗರಾ (Sudha Kongara), ನಿರ್ದೇಶನದ ಹೊಸ ಚಿತ್ರದಲ್ಲಿ ಶ್ರೀಲೀಲಾ ಅಭಿನಯ ಮಾಡುತ್ತಿರುವುದು ವಿಶೇಷ. ಈ ಚಿತ್ರದ ನಾಯಕ ಯಾರು ಗೊತ್ತಾ? ಶಿವಕಾರ್ತಿಕೇಯನ್‍.

ಶಿವಕಾರ್ತಿಕೇಯನ್​ಗೆ ಶ್ರೀಲೀಲಾ ಜೋಡಿ

ಇತ್ತೀಚೆಗೆ ಬಿಡುಗಡೆಯಾಗಿ 300+ ಕೋಟಿ ಕ್ಲಬ್ ಸೇರಿದ ‘ಅಮರನ್‍’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಶಿವಕಾರ್ತಿಕೇಯನ್‍ (Sivakarthikeyan), 24 ಚಿತ್ರಗಳನ್ನು ಮುಗಿಸಿ, 25ನೇ ಚಿತ್ರಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುವ ಮೂಲಕ ಕಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಅಧಿಕೃತ ಘೋಷಣೆಯಾಗಿದ್ದು, ಚಿತ್ರ ಮುಂದಿನ ವರ್ಷ ಪ್ರಾರಂಭವಾಗುವ ಸಾಧ್ಯತೆ ಇದೆ.

ಇದಲ್ಲದೆ, ಈ ವರ್ಷ ಹಿಂದಿ ಚಿತ್ರರಂಗಕ್ಕೂ ಶ್ರೀಲೀಲಾ ಪದಾರ್ಪಣೆ ಮಾಡಿದ್ದಾರೆ. ವರುಣ್‍ ಧವನ್‍ ನಿರ್ದೇಶನದ ಹೊಸ ಚಿತ್ರದಲ್ಲಿ ಶ್ರೀಲಾ ನಟಿಸುತ್ತಿದ್ದು, ಆ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ, ಸೈಫ್‍ ಅಲಿ ಖಾನ್ ‍ಮಗ ಇಬ್ರಾಹಿಂ ಖಾನ್‍ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೂ ಶ್ರೀಲೀಲಾ ನಾಯಕಿ ಎಂದು ಹೇಳಲಾಗುತ್ತಿದೆ.

ಶ್ರೀಲೀಲಾ ಸಿನಿಮಾಗಳ ಪಟ್ಟಿ ಹೀಗಿದೆ

ತಮಿಳು ಮತ್ತು ಹಿಂದಿಯಲ್ಲದೆ, ತೆಲುಗಿನಲ್ಲಿ ಒಂದಿಷ್ಟು ಚಿತ್ರಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ರವಿತೇಜ ಅಭಿನಯದ ‘ಮಾಸ್ ಜಾತ್ರಾ’, ನಿತಿನ್‍ ಅಭಿನಯದ ‘ರಾಬಿನ್‍ಹುಡ್‍’, ಪವನ್‍ ಕಲ್ಯಾಣ್‍ ಅಭಿನಯದ ‘ಉಸ್ತಾದ್ ಭಗತ್‍ ಸಿಂಗ್‍’, ನಾಗಚೈತನ್ಯ ಮತ್ತು ಅಖಿಲ್‍ ಅಭಿನಯದ ಹೊಸ ಚಿತ್ರಗಳಲ್ಲೂ ಶ್ರೀಲೀಲಾ ನಟಿಸುತ್ತಿದ್ದು, ಈ ಚಿತ್ರಗಳು ಮುಂದಿನ ವರ್ಷ ಬಿಡುಡೆಯಾಗಲಿದೆ.

ಕನ್ನಡದ ‘ಕಿಸ್‍’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, ಆ ನಂತರ ‘ಬೈಟು ಲವ್‍’ ಚಿತ್ರದಲ್ಲಿ ನಟಿಸಿದ್ದರು. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಗ ಕಿರೀಟಿ ಅಭಿನಯದ ‘ಜ್ಯೂನಿಯರ್’ ಎಂಬ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ, ಈಗ ಯಾವ ಹಂತದಲ್ಲಿದೆಯೋ ಸುದ್ದಿಯಿಲ್ಲ.

ವರದಿ: ಚೇತನ್‌ ನಾಡಿಗೇರ್

Whats_app_banner