Karnataka News Live December 17, 2024 : Karnataka Reservoirs: ಕರ್ನಾಟಕದ ಯಾವ ಜಲಾಯಶದಲ್ಲಿ 6 ತಿಂಗಳಲ್ಲಿ ಅತಿ ಹೆಚ್ಚು ಟಿಎಂಸಿ ನೀರು ಹೊರ ಹರಿದಿದೆ, ಈ ವರ್ಷ ಸಂಗ್ರಹವಾದ ನೀರೆಷ್ಟು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 17 Dec 202404:14 PM IST
- Karnataka Reservoirs Level: ಕರ್ನಾಟಕದ ಜಲಾಶಯಗಳಲ್ಲಿ ಡಿಸೆಂಬರ್ ಮೂರನೇ ವಾರದಲ್ಲೂ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಚೆನ್ನಾಗಿದೆ. ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ಎನ್ನುವ ವಿವರ ಇಲ್ಲಿದೆ.
Tue, 17 Dec 202402:38 PM IST
ಕರ್ನಾಟಕ ಸರ್ಕಾರದ ಅಂಬೇಡ್ಕರ್ ಅಭಿವೃದ್ದಿ ನಿಗಮವು ಸ್ವಯಂ ಉದ್ಯೋಗ ಯೋಜನೆಯಡಿ ಸಾರಥಿ ಫುಡ್ ಕಾರ್ಟ್ ಸ್ಥಾಪನೆ ಸಾಲ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ.
Tue, 17 Dec 202401:48 PM IST
- ಕರ್ನಾಟಕದ ಶಾಸಕರಿಗೆ ವೇತನ ಹಾಗೂ ಭತ್ಯೆ ಹೆಚ್ಚಳದ ಬೇಡಿಕೆ ಕೇಳಿ ಬಂದಿದೆ.ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಶಾಸಕರು ಚರ್ಚಿಸಿದ್ದು ಆಯೋಗ ರಚನೆ ಪರಿಶೀಲನೆ ಮಾಡುವ ಬಗ್ಗೆ ಸ್ಪೀಕರ್ ಯು.ಟಿ.ಖಾದರ್, ಸಚಿವ ಕೃಷ್ಣಬೈರೇಗೌಡ ಪ್ರಸ್ತಾಪಿಸಿದ್ದಾರೆ.
Tue, 17 Dec 202412:40 PM IST
- ಕರ್ನಾಟದಲ್ಲಿ ನೈರುತ್ಯ ರೈಲ್ವೆ ವಲಯವು ಒಟ್ಟು 116 ಪ್ಯಾಸೆಂಜರ್ ರೈಲುಗಳ ಸಂಖ್ಯೆಯನ್ನು ಬದಲು ಮಾಡಲಿದೆ. ಸಂಖ್ಯೆ ಬದಲಾಗುವ ಯಾವ ರೈಲು ಎನ್ನುವ ಪಟ್ಟಿ ಇಲ್ಲಿದೆ.
Tue, 17 Dec 202412:06 PM IST
- ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಡಿಸೆಂಬರ್ 18ರ ಬುಧವಾರದಿಂದ ಎರಡು ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
- ವರದಿ: ಎಚ್.ಮಾರುತಿ. ಬೆಂಗಳೂರು
Tue, 17 Dec 202411:30 AM IST
Karnataka High Court: ಉಯಿಲು ಪತ್ರ ವ್ಯಾಜ್ಯ ಹೆಚ್ಚಾಗುತ್ತಿರುವ ಕಾರಣ ಮತ್ತು ಉಯಿಲು ಬರೆಯಿಸಿದವರ ಆಸೆ ಈಡೇರಿಸುವ ನ್ಯಾಯಯುತ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ, ಉಯಿಲು ಪತ್ರ ನಿಖರವಾಗಿರಲಿ, ವ್ಯಾಜ್ಯಮುಕ್ತ ವಿಲ್‌ಗೆ ತಂತ್ರಜ್ಞಾನ ಬಳಸಿ ಎಂದು ಸರ್ಕಾರದ ಗಮನಸೆಳೆಯಲು ಕರ್ನಾಟಕ ಹೈಕೋರ್ಟ್ ಹೇಳಿದ 4 ಅಂಶಗಳ ವಿವರ ಇಲ್ಲಿದೆ.
Tue, 17 Dec 202410:37 AM IST
- ಕ್ರಿಸ್ ಮಸ್ 2024 ಸಡಗರ ಶುರುವಾಗಿದೆ. ಅದರಲ್ಲೂ ಮೈಸೂರಿನಲ್ಲಿರುವ ಎರಡು ನೂರು ವರ್ಷದಷ್ಟು ಹಳೆಯದಾದ, ಸೌಹಾರ್ದತೆಯ ಕೇಂದ್ರದಂತಿರುವ ಸೆಂಟ್ ಫಿಲೋಮಿನಾ ಚರ್ಚ್ ನಲ್ಲೂ ತಯಾರಿಗಳೂ ನಡೆದಿವೆ.
Tue, 17 Dec 202410:27 AM IST
Karnataka High Court: ಚುನಾಯಿತ ಜನಪ್ರತಿನಿಧಿಗಳ ಜಾತಿಗೆ ಸಂಬಂಧಿಸಿದ ತಕರಾರು ಅರ್ಜಿ ಬಂದಾಗ, ಅದರ ವಿಚಾರಣೆ ನಡೆಸಿ ಇತ್ಯರ್ಥಗೊಳಿಸುವ ಅಧಿಕಾರ ಕರ್ನಾಟಕ ಹೈಕೋರ್ಟ್‌ಗೆ ಇದೆ. ಅದಕ್ಕೆ ಯಾವುದೇ ಕಾನೂನು ಅಡ್ಡಿ ಆಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಏನಿದು ಕೇಸ್ - ಇಲ್ಲಿದೆ ವಿವರ.
Tue, 17 Dec 202410:00 AM IST
- ಕರ್ನಾಟಕದ ಮಹಾರಾಷ್ಟ್ರ ಹಾಗೂ ಗೋವಾ ಗಡಿಗೆ ಹೊಂದಿಕೊಂಡಂತೆ ಇರುವ ಭೀಮಾ ಅರಣ್ಯ ಪ್ರದೇಶದಲ್ಲಿನ ನಿವಾಸಿಗಳನ್ನು ಕಾಡಿನಿಂದ ಹೊರಗೆ ಸ್ಥಳಾಂತರಿಸಲು ಸಿದ್ದತೆಗಳು ಶುರುವಾಗಿವೆ.
Tue, 17 Dec 202408:05 AM IST
- Online Scam Alert: ಮದುವೆ ಆಮಂತ್ರಣ ಪತ್ರವನ್ನು ವಾಟ್ಸಪ್ ಮೂಲಕ ಕಳುಹಿಸುವ ಹೊಸ ಬಗೆಯ ಆನ್‌ಲೈನ್ ವಂಚನೆ ಕುರಿತು ಬೆಂಗಳೂರು ನಗರ ಪೊಲೀಸರು ಜನರನ್ನು ಎಚ್ಚರಿಸಿದ್ದಾರೆ. ಈ ಕುರಿತು ಮಾರತ್ತಹಳ್ಳಿಯ ಎಸಿಪಿ ಡಾ. ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ ಉಪಯುಕ್ತ ವಿಡಿಯೋ ಹಂಚಿಕೊಂಡಿದ್ದಾರೆ.
Tue, 17 Dec 202406:21 AM IST
Sindhanur Accident: ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ರಸ್ತೆ ಬದಿ ನಿಂತವರ ಮೇಲೆ ಲಾರಿ ಪಲ್ಟಿಯಾಗಿದೆ. ಈ ದುರಂತದಲ್ಲಿ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣಕ್ಕೀಡಾದರು.
Tue, 17 Dec 202405:04 AM IST
Bengaluru Crime: ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ 50 ಲಕ್ಷ ರೂ ಚಿನ್ನಾಭರಣ ಕಳುವಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಮೊಬೈಲ್ ಅಂಗಡಿಯಿಂದ 3 ಲಕ್ಷ ರೂ ಮೌಲ್ಯದ ಮೊಬೈಲ್ ಅನ್ನು ಖದೀಮರು ದೋಚಿದ್ದಾರೆ. ಇನ್ನೊಂದೆಡೆ, ಮದ್ಯಪಾನ ಮಾಡಿ ವಾಹನ ಚಾಲನೆಯ 556 ಕೇಸ್ ದಾಖಲಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Tue, 17 Dec 202404:24 AM IST
Bengaluru Techie Suicide: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರಿದಿದೆ. ಆರೋಪಿಗಳ ಪೈಕಿ ಸುಶಿಲ್ ಸಿಂಘಾನಿಯಾಗೆ ಜಾಮೀನು ಸಿಕ್ಕಿದೆ. ಉಳಿದ ಮೂವರು ಜೈಲಲ್ಲಿದ್ದಾರೆ. ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ ಪೊಲೀಸ್ ಬಲೆಗೆ ಬೀಳಲು ಕಾರಣವಾದ ವಿಚಾರ ಮತ್ತು ಇತರೆ ಪ್ರಮುಖ ವಿವರ ಇಲ್ಲಿದೆ.
Tue, 17 Dec 202401:41 AM IST
Weather Forecast: ಬೆಂಗಳೂರು ಹವಾಮಾನ ಪ್ರಕಾರ ಇಂದು ಬೆಂಗಳೂರು ನಗರ ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 17) ಮುಂಜಾನೆ ಮಂಜು, ಚಳಿ ಕಾಡಲಿದೆ. ತಣ್ಣನೆಯ ರಾತ್ರಿಯೂ ಅನುಭವಕ್ಕೆ ಬರಲಿದೆ. ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ವಿಪರೀತ ಶೀತ ಗಾಳಿ ಕಾರಣ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕರ್ನಾಟಕ ಹವಾಮಾನ ವಿವರ ಇಲ್ಲಿದೆ.