Badam Milk: ಮನೆಯಲ್ಲೇ ಮಾಡಿ ಡಿಲೀಶಿಯಸ್ ಬಾದಾಮಿ ಹಾಲು...ನಾಲ್ಕೇ ಪದಾರ್ಥಗಳು ಸಾಕು
ದೇಹಕ್ಕೆ ರಿಫ್ರೆಶ್ ಅನುಭವ ನೀಡುವ ಬಾದಾಮ್ ಮಿಲ್ಕ್ ಮನೆಯಲ್ಲಿ ಕೂಡಾ ತಯಾರಿಸಬಹುದು. ಇದನ್ನು ಮಾಡೋದು ಅಷ್ಟು ಕಷ್ಟದ ಕೆಲಸವಂತೂ ಖಂಡಿತ ಅಲ್ಲ. ಈ ಸಾಮಗ್ರಿಗಳು ನಿಮ್ಮ ಮನೆಯಲ್ಲಿ ಇದ್ದರೆ ಕೆಲವೇ ಕ್ಷಣಗಳಲ್ಲಿ ರುಚಿಯಾದ ಬಾದಾಮ್ ಮಿಲ್ಕ್ ತಯಾರಿಸಬಹುದು.
ಸಾಮಾನ್ಯವಾಗಿ ಹೊರಗೆ ಶಾಪಿಂಗ್ ಅಥವಾ ಇನ್ನಿತರ ಕೆಲಸಗಳಿಗೆ ಹೋದಾಗ ಎಲ್ಲಾದರೂ ಬಾದಾಮಿ ಹಾಲು ನೋಡಿದರೆ ಒಂದು ಕ್ಷಣ ನಿಂತು ಕುಡಿಯಬೇಕೆಂಬ ಮನಸ್ಸಾಗುತ್ತದೆ. ಬೇಸಿಗೆ ಇದ್ದರೆ ಕೋಲ್ಡ್ ಬಾದಾಮ್ ಮಿಲ್ಕ್ ಅಥವಾ ಚಳಿ, ಮಳೆಗಾಲವಾಗಿದ್ದರೆ ಬಿಸಿ ಬಾದಾಮ್ ಮಿಲ್ಕ್ ಸೇವಿಸುತ್ತೇವೆ.
ದೇಹಕ್ಕೆ ರಿಫ್ರೆಶ್ ಅನುಭವ ನೀಡುವ ಬಾದಾಮ್ ಮಿಲ್ಕ್ ಮನೆಯಲ್ಲಿ ಕೂಡಾ ತಯಾರಿಸಬಹುದು. ಇದನ್ನು ಮಾಡೋದು ಅಷ್ಟು ಕಷ್ಟದ ಕೆಲಸವಂತೂ ಖಂಡಿತ ಅಲ್ಲ. ಈ ಸಾಮಗ್ರಿಗಳು ನಿಮ್ಮ ಮನೆಯಲ್ಲಿ ಇದ್ದರೆ ಕೆಲವೇ ಕ್ಷಣಗಳಲ್ಲಿ ರುಚಿಯಾದ ಬಾದಾಮ್ ಮಿಲ್ಕ್ ತಯಾರಿಸಬಹುದು. ಡಿಲೀಶಿಯಸ್ ಬಾದಾಮಿ ಹಾಲು ತಯಾರಿಸಲು ನಾಲ್ಕೇ ಸಾಮಗ್ರಿಗಳು ಸಾಕು.
ಬೇಕಾಗುವ ಸಾಮಗ್ರಿಗಳು
ಬಾದಾಮಿ - 25 ಗ್ರಾಂ
ಸಕ್ಕರೆ - 3 ಟೇಬಲ್ ಸ್ಪೂನ್
ಕೇಸರಿ - ಚಿಟಿಕೆ
ಹಾಲು - 1/2 ಲೀಟರ್
ತಯಾರಿಸುವ ವಿಧಾನ
ಬಾದಾಮಿಗೆ ನೀರು ಸೇರಿಸಿ ಸುಮಾರು 4 ಗಂಟೆಗಳ ಕಾಲ ನೆನೆಯಲು ಬಿಡಿ
4 ಗಂಟೆಗಳ ನಂತರ ಬಾದಾಮಿ ಸಿಪ್ಪೆಗಳನ್ನು ಬಿಡಿಸಿಕೊಳ್ಳಿ
ಪಾತ್ರೆಯಲ್ಲಿ ಹಾಲು ಸೇರಿಸಿ ಕುದಿಯಲು ಬಿಡಿ, ಅಷ್ಟರಲ್ಲಿ ಸಿಪ್ಪೆ ಬಿಡಿಸಿದ ಬಾದಾಮಿಯನ್ನು ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ
ಬಾದಾಮಿ ಗ್ರೈಂಡ್ ಮಾಡಲು ನೀರಿನ ಬದಲಿಗೆ ಸ್ವಲ್ಪ ಹಾಲು ಬಳಸಿ
ಹಾಲು ಕುದಿಯಲು ಆರಂಭಿಸಿದ ನಂತರ ಬಿಡದೆ ತಿರುವುತ್ತಾ 5 ನಿಮಿಷಗಳ ನಂತರ ಸಕ್ಕರೆ ಸೇರಿಸಿ ಮತ್ತೆ ತಿರುವಿ
ಸಕ್ಕರೆ ಕರಗಿದ ನಂತರ ಗ್ರೈಂಡ್ ಮಾಡಿಕೊಂಡ ಬಾದಾಮಿ ಪೇಸ್ಟ್ ಸೇರಿಸಿ ತಿರುವಿ
ನಂತರ ಕೇಸರಿ ಸೇರಿಸಿ ಎಲ್ಲಾ ಹೊಂದಿಕೊಳ್ಳುವಂತೆ ತಿರುವಿ 5 ನಿಮಿಷದ ನಂತರ ಸ್ಟೋಫ್ ಆಫ್ ಮಾಡಿದರೆ ಬಾದಾಮಿ ಹಾಲು ರೆಡಿ
ನಿಮಗೆ ಬಿಸಿ ಬೇಕೆಂದರೆ ತಕ್ಷಣ ಸೇವಿಸಿ, ಅಥವಾ ಕೋಲ್ಡ್ ಬೇಕೆಂದರೆ ಸ್ವಲ್ಪ ಸಮಯ ರೆಫ್ರಿಜರೇಟರ್ನಲ್ಲಿಡಿ
ಸರ್ವಿಂಗ್ ಗ್ಲಾಸ್ಗೆ ವರ್ಗಾಯಿಸಿ ಬಾದಾಮಿ ಚೂರು ಹಾಗೂ ಕೇಸರಿ ದಳಗಳೊಂದಿಗೆ ಅಲಂಕರಿಸಿ ಸರ್ವ್ ಮಾಡಿ
ವಿಭಾಗ