Paneer Kalakand: ಬಿರಿಯಾನಿ, ಬಟರ್‌ ಮಸಾಲಾ ಮಾತ್ರವಲ್ಲ ಪನೀರ್‌ನಿಂದ ಕಲಾಕಂಡ್‌ ಕೂಡಾ ತಯಾರಿಸಬಹುದು; ರೆಸಿಪಿ ಹೀಗಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Paneer Kalakand: ಬಿರಿಯಾನಿ, ಬಟರ್‌ ಮಸಾಲಾ ಮಾತ್ರವಲ್ಲ ಪನೀರ್‌ನಿಂದ ಕಲಾಕಂಡ್‌ ಕೂಡಾ ತಯಾರಿಸಬಹುದು; ರೆಸಿಪಿ ಹೀಗಿದೆ ನೋಡಿ

Paneer Kalakand: ಬಿರಿಯಾನಿ, ಬಟರ್‌ ಮಸಾಲಾ ಮಾತ್ರವಲ್ಲ ಪನೀರ್‌ನಿಂದ ಕಲಾಕಂಡ್‌ ಕೂಡಾ ತಯಾರಿಸಬಹುದು; ರೆಸಿಪಿ ಹೀಗಿದೆ ನೋಡಿ

Paneer Kalakand: ಸಿಹಿ ಪ್ರಿಯರು ವೆರೈಟಿ ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಒಂದು ವೇಳೆ ನಿಮಗೆ ಸುಲಭವಾದ ರೆಸಿಪಿಯನ್ನು ಮನೆಯಲ್ಲೇ ತಯಾರಿಸಲು ಅವಕಾಶ ದೊರೆತರೆ ಮಿಸ್‌ ಮಾಡಿಕೊಳ್ಳಬೇಡಿ. ನಿಮಗೆ ಕುಕಿಂಗ್‌ನಲ್ಲಿ ಆಸಕ್ತಿ ಇದ್ದರೆ ಒಮ್ಮೆ ಪನೀರ್‌ ಕಲಾಕಂಡ್‌ ತಯಾರಿಸಿ ನೋಡಿ.

ಪನೀರ್‌ ಕಲಾಕಂಡ್‌ ರೆಸಿಪಿ
ಪನೀರ್‌ ಕಲಾಕಂಡ್‌ ರೆಸಿಪಿ

ಪನೀರ್ ಕಲಾಕಂಡ್: ಸಸ್ಯಾಹಾರಿಗಳು ಪನೀರ್ ತಿನ್ನುವುದರಿಂದ ಸಾಕಷ್ಟು ಪ್ರೋಟೀನ್ ಸಿಗುತ್ತದೆ. ಪನೀರ್‌ನಿಂದ ಪನೀರ್ ಬಿರಿಯಾನಿ, ಪನೀರ್ ಬಟರ್ ಮಸಾಲಾ, ಪಾಲಕ್ ಪನೀರ್ ಸೇರಿದಂತೆ ಅನೇಕ ವೆರೈಟಿ ತಯಾರಿಸಲಾಗುತ್ತದೆ. ಆದರೆ ಖಾರ ಮಾತ್ರವಲ್ಲದೆ ಪನೀರ್‌ನಿಂದ ಸಿಹಿಯನ್ನು ಕೂಡಾ ತಯಾರಿಸಬಹುದು.

ಪನೀರನ್ನು ಕಲಾಕಂಡ್‌ನಂತಹ ಸಿಹಿ ತಿಂಡಿಗಳಲ್ಲಿಯೂ ಬಳಸಬಹುದು. ಇದು ಬಹಳ ಸುಲಭ, ತಯಾರಿಸಲು ಕಡಿಮೆ ಸಾಮಗ್ರಿಗಳು ಸಾಕು. ಸಿಹಿ ಇಷ್ಟಪಡುವವರು ಒಮ್ಮೆ ಕಡಿಮೆ ಕ್ವಾಂಟಿಟಿ ಬಳಸಿ ತಯಾರಿಸಿ ನೋಡಿ, ಖಂಡಿತ ನಿಮಗೆ ಇಷ್ಟವಾಗುತ್ತದೆ. ಇದನ್ನು ಮಕ್ಕಳು ಕೂಡಾ ಇಷ್ಟಪಟ್ಟು ತಿನ್ನುತ್ತಾರೆ. ವಿಶೇಷವಾಗಿ ಪನೀರ್ ತಿನ್ನುವುದರಿಂದ ಸಾಕಷ್ಟು ಪ್ರೊಟೀನ್ ದೊರೆಯುತ್ತದೆ. ಹಾಗಾಗಿ ಮಕ್ಕಳು ಆರೋಗ್ಯವಾಗಿರುತ್ತಾರೆ. ಪನೀರ್‌ ಕಲಾಕಂಡ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆಂದು ನೋಡೋಣ.

ಪನೀರ್ ಕಲಾಕಂಡ್ ರೆಸಿಪಿಗೆ ಬೇಕಾಗುವ ಪದಾರ್ಥಗಳು

  • ಪನೀರ್ - 300 ಗ್ರಾಂ
  • ಸಕ್ಕರೆ - ಎರಡು ಕಪ್
  • ಹಾಲಿನ ಪುಡಿ - ಮೂರು ಕಪ್‌
  • ಏಲಕ್ಕಿ ಪುಡಿ - 1 ಚಮಚ
  • ತುಪ್ಪ - 2 ಟೇಬಲ್‌ ಚಮಚ
  • ಫ್ರೆಶ್‌ ಕ್ರೀಮ್‌ - 3 ಕಪ್‌
  • ಬಾದಾಮಿ, ಪಿಸ್ತಾ - 1 ಹಿಡಿ

ಇದನ್ನೂ ಓದಿ: ಮಿಕ್ಕುಳಿದ ಅನ್ನದ ಕುರಿತು ಚಿಂತೆ ಏಕೆ, ಬಾಕಿ ಉಳಿದ ಅನ್ನದಿಂದ ಈ 5 ರೆಸಿಪಿ ಟ್ರೈ ಮಾಡಿ

ಪನೀರ್ ಕಲಾಕಂಡ್ ತಯಾರಿಸುವ ವಿಧಾನ

  • ಅಗಲ, ಆಳವಾದ ಕಡಾಯಿ ತೆಗೆದುಕೊಂಡು ಸ್ಟೌವ್‌ ಹಚ್ಚಿ ಕಡಿಮೆ ಉರಿ ಇರಿಸಿ
  • ಈ ಪಾತ್ರೆಗೆ ತುರಿದ ಪನೀರ್‌, ಸಕ್ಕರೆ, ಫ್ರೆಶ್‌ ಕ್ರೀಮ್‌, ಹಾಲಿನ ಪುಡಿ ಸೇರಿಸಿ ಮಿಕ್ಸ್‌ ಮಾಡಿ
  • ಕಡಿಮೆ ಉರಿ ಇರಿಸಿಯೇ ಎಲ್ಲವನ್ನೂ ಮಿಕ್ಸ್‌ ಮಾಡಿ, ಫ್ಲೇಮ್‌ ಜಾಸ್ತಿ ಮಾಡಿದರೆ ಸೀದು ಹೋಗುತ್ತದೆ
  • ಹಾಗೇ ಆಗ್ಗಾಗ್ಗೆ ಬಿಡದೆ ತಿರುವುತ್ತಿರಿ, ಇಲ್ಲದಿದ್ದರೆ ಮಿಶ್ರಣ ಪಾತ್ರೆ ತಳಕ್ಕೆ ಅಂಟುತ್ತದೆ
  • ಮಿಶ್ರಣ ಗಟ್ಟಿ ಆದಾಗ ತುಪ್ಪ ಸೇರಿಸಿ ಸ್ಟೌವ್‌ ಆಫ್‌ ಮಾಡಿ ಮೇಲೆ ಏಲಕ್ಕಿ ಸೇರಿಸಿ ಮಿಕ್ಸ್‌ ಮಾಡಿ
  • ಒಂದು ಪಾತ್ರೆಗೆ ತುಪ್ಪ ಸವರಿ ಪನೀರ್‌ ಮಿಶ್ರಣವನ್ನು ಅದರಲ್ಲಿ ಸುರಿದು ಸಮನಾಗಿ ಹರಡಿ
  • ಇದರ ಮೇಲೆ ಚಾಪ್‌ ಮಾಡಿದ ಬಾದಾಮಿ, ಪಿಸ್ತಾವನ್ನು ಹರಡಿ ಮಿಶ್ರಣ ತಣ್ಣಗಾಗಲು ಬಿಡಿ
  • ಮಿಶ್ರಣ ತಣ್ಣಗಾದ ನಂತರ ನಿಮಗೆ ಇಷ್ಟವಾದ ಆಕಾರಕ್ಕೆ ಕತ್ತರಿಸಿ

ಇದನ್ನೂ ಓದಿ: ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೇ ಮಾಡಬಹುದಾದ 6 ಸುಲಭ ರೆಸಿಪಿಗಳು ಇಲ್ಲಿವೆ

ನಿಮ್ಮ ಮನೆಗೆ ಗೆಸ್ಟ್‌ ಬಂದಾಗ ಕೂಡಾ ನೀವು ಪನೀರ್‌ ಕಲಾಕಂಡ್‌ ತಯಾರಿಸಿ ಅವರಿಗೆ ಕೊಡಬಹುದು. ಮಾಂಸಾಹಾರಿಗಳು ಚಿಕನ್‌ನಲ್ಲಿ ಹೇಗೆ ಪ್ರೋಟೀನ್‌ ದೊರೆಯುವುದೋ ಸಸ್ಯಾಹಾರಿಗಳಿಗೆ ಪನೀರ್‌ನಲ್ಲಿ ಪ್ರೋಟೀನ್‌ ದೊರೆಯುತ್ತದೆ. ಪನೀರ್‌ನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದರಲ್ಲಿ ಸಾಕಷ್ಟು ವಿಟಮಿನ್ ಡಿ ಇದೆ. ಆದ್ದರಿಂದ ಮೂಳೆಗಳು ಬಲವಾಗಿರುತ್ತವೆ. ಮಹಿಳೆಯರು ತಿನ್ನಲೇಬೇಕಾದ ಆಹಾರಗಳಲ್ಲಿ ಪನೀರ್ ಕೂಡಾ ಒಂದು. ಇದನ್ನು ತಿಂದರೆ ಹೃದಯಕ್ಕೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಪನೀರ್ ತಿನ್ನುವುದರಿಂದ ತ್ವಚೆಯು ಯೌವನದಿಂದ ಹೊಳೆಯುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಪನೀರ್‌ನೊಂದಿಗೆ ಮಾಡಿದ ಭಕ್ಷ್ಯಗಳನ್ನು ತಿನ್ನುವುದು ಬಹಳ ಮುಖ್ಯ. ವಾರಕ್ಕೊಮ್ಮೆಯಾದರೂ ಮಕ್ಕಳಿಗೆ ಪನೀರ್ ಖಾದ್ಯಗಳನ್ನು ತಿನ್ನಿಸಿ. ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಪನೀರ್ ನಿಮಗೆ ಸಹಾಯ ಮಾಡುತ್ತದೆ. ಇವುಗಳನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದ್ದರಿಂದ ಹೆಚ್ಚು ಹಸಿವಾಗುವುದಿಲ್ಲ. ಇತರ ಆಹಾರಗಳನ್ನು ತಿನ್ನುವ ಆಸಕ್ತಿ ಕಡಿಮೆಯಾಗುತ್ತದೆ. ಒಮ್ಮೆ ಪನೀರ್‌ ಕಲಾಕಂಡ್‌ ತಯಾರಿಸಿ ರುಚಿ ಹೇಗಿತ್ತು ಅಂತ ಕಾಮೆಂಟ್‌ ಮಾಡಿ.

Whats_app_banner