Healthy Recipes: ಮಧುಮೇಹಿಗಳು ಕೂಡಾ ಭಯ ಇಲ್ಲದೆ ಈ ಮಫಿನ್ ತಿನ್ನಬಹುದು... ಏನೆಲ್ಲಾ ಪದಾರ್ಥ ಬಳಸಲಾಗಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Healthy Recipes: ಮಧುಮೇಹಿಗಳು ಕೂಡಾ ಭಯ ಇಲ್ಲದೆ ಈ ಮಫಿನ್ ತಿನ್ನಬಹುದು... ಏನೆಲ್ಲಾ ಪದಾರ್ಥ ಬಳಸಲಾಗಿದೆ ನೋಡಿ

Healthy Recipes: ಮಧುಮೇಹಿಗಳು ಕೂಡಾ ಭಯ ಇಲ್ಲದೆ ಈ ಮಫಿನ್ ತಿನ್ನಬಹುದು... ಏನೆಲ್ಲಾ ಪದಾರ್ಥ ಬಳಸಲಾಗಿದೆ ನೋಡಿ

ಕೇಕ್, ಮಫಿನ್​​, ಚಾಕೊಲೇಟ್​​​​ನಂತಹ ತಿಂಡಿಗಳನ್ನು ಮಧುಮೇಹಿಗಳು ಆಸೆ ಪಡುವ ಹಾಗಿಲ್ಲ. ಆದರೆ ಮಧುಮೇಹಿಗಳು ಕೂಡಾ ತಿನ್ನವಂತ ಮಫಿನ್ ರೆಸಿಪಿಯೊಂದನ್ನು ನಿಮಗೆ ಹೇಳಿಕೊಡುತ್ತಿದ್ದೇವೆ. ಒಮ್ಮೆ ಮಾಡಿ ನೋಡಿ.

<p>ಆರೋಗ್ಯಕರ ಮಫಿನ್ (freepik.com)</p>
ಆರೋಗ್ಯಕರ ಮಫಿನ್ (freepik.com)

ಮಧುಮೇಹಿಗಳು ಆಹಾರದ ವಿಚಾರದಲ್ಲಿ ಬಹಳ ಜಾಗರೂಕರಾಗಿರುತ್ತಾರೆ. ತಮಗೆ ಇಷ್ಟಬಂದದ್ದನ್ನು ತಿಂದರೆ ಎಲ್ಲಿ ಸಮಸ್ಯೆ ಹೆಚ್ಚಾಗುವುದೋ ಎಂದುಕೊಂಡು ಆಸೆಯಾದರೂ ಅದನ್ನು ಬದಿಗೊತ್ತಿ ಮಿತ ಹಾಗೂ ಆರೋಗ್ಯಕರ ಆಹಾರ ಸೇವಿಸುತ್ತಾರೆ.

ಕೇಕ್, ಮಫಿನ್​​, ಚಾಕೊಲೇಟ್​​​​ನಂತಹ ತಿಂಡಿಗಳನ್ನು ಮಧುಮೇಹಿಗಳು ಆಸೆ ಪಡುವ ಹಾಗಿಲ್ಲ. ಆದರೆ ಮಧುಮೇಹಿಗಳು ಕೂಡಾ ತಿನ್ನವಂತ ಮಫಿನ್ ರೆಸಿಪಿಯೊಂದನ್ನು ನಿಮಗೆ ಹೇಳಿಕೊಡುತ್ತಿದ್ದೇವೆ. ಒಮ್ಮೆ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು

ತುಪ್ಪ - ಕಾಲು ಕಪ್

ಖಂಡಸಾರಿ ಸಕ್ಕರೆ - 1/4 ಕಪ್

ರಾಗಿಹಿಟ್ಟು - 1 1/2 ಕಪ್

ಗೋಧಿ ಹಿಟ್ಟು - 3/4 ಕಪ್

ಕಾರ್ನ್ ಫ್ಲೋರ್ - 2 tbsp

ಏಲಕ್ಕಿ ಪುಡಿ - 1 ಟೀ ಸ್ಪೂನ್

ಬೇಕಿಂಗ್ ಪೌಡರ್ - 2 ಟೀ ಸ್ಪೂನ್

ಅಡುಗೆ ಸೋಡಾ - 1/2 ಟೀ ಚಮಚ

ಮಜ್ಜಿಗೆ - 1 ಕಪ್

ಖರ್ಜೂರ - 1 ಕಪ್

ಪಿಸ್ತಾ - 1 ಕಪ್

ತಯಾರಿಸುವ ವಿಧಾನ

180 ಡಿಗ್ರಿ ಸೆಲ್ಸಿಯಸ್ ಓವನ್​​ ಪ್ರೀ ಹೀಟ್ ಮಾಡಿ, ಓವನ್ ಇಲ್ಲದಿದ್ದರೆ ಮಫಿನ್ ಟ್ರೇ ಹಿಡಿಸುವಷ್ಟು ಒಂದು ದಪ್ಪ ತಳದ ಪಾತ್ರೆಯಿಂದ ಕೂಡಾ ಮಫಿನ್ ತಯಾರಿಸಬಹುದು.

ಮಫಿನ್ ಟ್ರೇಗಳಿಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯಿಂದ ಗ್ರೀಸ್ ಮಾಡಿ.

ಒಂದು ಬೌಲ್​​​​ಗೆ ಖಂಡಸಾರಿ ಸಕ್ಕರೆ ಹಾಗೂ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ

ನಂತರ ಇದಕ್ಕೆ ರಾಗಿ ಹಿಟ್ಟು, ಗೋಧಿ ಹಿಟ್ಟು, ಕಾರ್ನ್ ಫ್ಲೋರ್, ಏಲಕ್ಕಿ ಪುಡಿ, ಬೇಕಿಂಗ್ ಪೌಡರ್, ಅಡುಗೆ ಸೋಡಾ ಸೇರಿಸಿ ಗಂಟುಗಳು ಇಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಆ ಮಿಶ್ರಣಕ್ಕೆ ಮಜ್ಜಿಗೆ ಹಾಗೂ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಕೊನೆಗೆ ಕತ್ತರಿಸಿಕೊಂಡ ಖರ್ಜೂರ ಮತ್ತು ಪಿಸ್ತಾ ಸೇರಿಸಿ.

ಗ್ರೀಸ್ ಮಾಡಿದ ಮಫಿನ್​​​ಗಳಿಗೆ ಈ ಮಿಶ್ರಣವನ್ನು ಸೇರಿಸಿ 25-30 ನಿಮಿಷ ಬೇಕ್ ಮಾಡಿದರೆ ರುಚಿಯಾದ ಮಫಿನ್ ರೆಡಿ.

ಖರ್ಜೂರ ಮತ್ತು ಪಿಸ್ತಾಗಳಿಂದ ತುಂಬಿದ ಈ ಮಫಿನ್​​​​ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ. ಸಕ್ಕರೆಗೆ ಪರ್ಯಾಯವಾಗಿ ಖಂಡಸಾರಿ ಸಕ್ಕರೆ ಬಳಸಿರುವುದರಿಂದ ಮಧುಮೇಹಿಗಳು ಭಯ ಪಡುವ ಅಗತ್ಯವಿಲ್ಲ. ಖಂಡಸಾರಿ ಸಕ್ಕರೆಯನ್ನು ಕಾಫಿ/ಟೀಯೊಂದಿಗೆ ಕೂಡಾ ಬಳಸಬಹುದು.

ಗಮನಿಸಿ: ಖರ್ಜೂರದಲ್ಲಿ ಸಿಹಿ ಅಂಶವಿದ್ದು ಅದನ್ನು ಬಳಸಲು ಇಷ್ಟವಿಲ್ಲದಿದ್ದರೆ ಸ್ಕಿಪ್ ಮಾಡಬಹುದು.

Whats_app_banner