Periods: ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವಿಗೆ ಮಾತ್ರೆ ತೆಗೆದುಕೊಳ್ಳುವುದಕ್ಕಿಂತ ಮನೆಮದ್ದೇ ಬೆಸ್ಟ್, ನೋವು ನಿವಾರಣೆಗೆ ಈ ಸಲಹೆ ಪಾಲಿಸಿ
Period Pain: ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ತುಂಬಾ ತೊಂದರೆಯಾಗುತ್ತದೆ. ಆ ತೊಂದರೆಯಿಂದಾಗಿ ದಿನಪೂರ್ತಿ ನೋವಿನಲ್ಲೇ ಇರಬೇಕಾಗುತ್ತದೆ. ಹೊಟ್ಟೆ ನೋವು ಹೆಚ್ಚಾಗಿ ಮಹಿಳೆಯರನ್ನು ಬಾಧಿಸುತ್ತದೆ. ಇದನ್ನು ತಡೆದುಕೊಳ್ಳಲಾಗದೇ ಹಲವರು ನೋವಿನ ಮಾತ್ರೆ ತೆಗೆದುಕೊಳ್ಳುತ್ತಾರೆ. ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತೊಂದರೆಯಾಗುತ್ತದೆ.
ಕೆಲವರಿಗೆ ನೋವು ಸಹನೀಯವಾಗಿರುತ್ತದೆ. ಇನ್ನು ಕೆಲವರಿಗೆ ಈ ಮುಟ್ಟಿನ ನೋವು ಅಸಹನೀಯವಾಗಿರುತ್ತದೆ. ಈ ಸಮಯದಲ್ಲಿ ಹಾರ್ಮೋನುಗಳ ಏರಿಳಿತದ ಕಾರಣ, ಒತ್ತಡ ಮತ್ತು ಆತಂಕವೂ ಇರುತ್ತದೆ. ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ನೋವು ಶುರುವಾಗುತ್ತದೆ, ಋತುಚಕ್ರದ ಸಮಯದಲ್ಲಿ ಮಹಿಳೆಯರ ಅಂಡಾಶಯದಲ್ಲಿ ಪ್ರೋಸ್ಟಗ್ಲಾಂಡಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಕಿಪ್ಪೊಟ್ಟೆಯಲ್ಲಿ ನೋವು ಹೆಚ್ಚು ಮಾಡುತ್ತದೆ. ಈ ನೋವನ್ನು ಸಹಿಸಿಕೊಂಡು ಇರುವುದು ಖಂಡಿತ ಸುಲಭವಲ್ಲ. ಆದರೆ ಮಾತ್ರೆ ತಿನ್ನುವುದೊಂದೇ ಇದಕ್ಕೆ ಪರಿಹಾರ ಅಲ್ಲ. ಅದರ ಬದಲಾಗಿ ಹಲವು ಮನೆಮದ್ದುಗಳನ್ನು ನೀವು ಟ್ರೈ ಮಾಡಬಹುದು.
ರಿಯಡ್ಸ್ ಸಮಯದಲ್ಲಿ ನೋವು ಕಾಣಿಸಿಕೊಂಡರೆ ಗರ್ಭಾಶಯದ ಸ್ನಾಯುಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ.
ಸಾಕಷ್ಟು ನೀರು ಕುಡಿಯಿರಿ
ಮುಟ್ಟಿನ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರ. ಈ ಸಮಯದಲ್ಲಿ ನೀರಿನ ಸೇವನೆಯನ್ನು ಕಡಿಮೆ ಮಾಡಬೇಡಿ. ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ನಿಮಗೆ ಋತುಚಕ್ರದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿರ್ಜಲೀಕರಣವು ಈ ನೋವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಅದೇ ಸಮಯದಲ್ಲಿ, ಕಾಫಿ, ಚಹಾ, ಇತರ ಕೆಫೀನ್ ಪಾನೀಯಗಳು ಮತ್ತು ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ತಪ್ಪಿಸಬೇಕು. ಆದರೆ ಕೆಲವು ಗಿಡಮೂಲಿಕೆ ಚಹಾಗಳನ್ನು ಕುಡಿಯುವುದರಿಂದ ನೋವನ್ನು ನಿವಾರಿಸಬಹುದು.
ಬೆಲ್ಲ ತಿನ್ನಿ
ಇಂಟರ್ನ್ಯಾಷನಲ್ ಜರ್ನಲ್ ಆಫ್ ಕೆಮಿಕಲ್ ಸ್ಟಡೀಸ್ ಪ್ರಕಾರ ಋತುಚಕ್ರದ ಸಮಯದಲ್ಲಿ ರಕ್ತದ ನಷ್ಟವು ನಿಮ್ಮನ್ನು ದುರ್ಬಲ ಮತ್ತು ಶಕ್ತಿಹೀನರನ್ನಾಗಿ ಮಾಡಬಹುದು. ಇದನ್ನು ತಡೆಯಲು ಬೆಲ್ಲ ಪರಿಣಾಮಕಾರಿ. ಆಗೊಮ್ಮೆ ಈಗೊಮ್ಮೆ ಸ್ವಲ್ಪ ಬೆಲ್ಲವನ್ನು ತಿನ್ನುವುದು ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಬೆಲ್ಲವು ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಇದಲ್ಲದೆ ಕಿಬ್ಬೊಟ್ಟೆಯ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಎಣ್ಣೆಗಳಿಂದ ಮಸಾಜ್ ಮಾಡಿ
ಮುಟ್ಟಿನ ಸಮಯದಲ್ಲಿ ನೋವು ನಿವಾರಣೆಗೆ ಮಸಾಜ್ ಥೆರಪಿ ಪರಿಣಾಮಕಾರಿಯಾಗಿದೆ. ಲ್ಯಾವೆಂಡರ್, ಗುಲಾಬಿ, ಲವಂಗ ಮತ್ತು ದಾಲ್ಚಿನ್ನಿ ತೈಲಗಳಿಂದ ಹೊಟ್ಟೆಯ ಮೇಲೆ ಮಸಾಜ್ ಮಾಡಿದಾಗ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಈ ಎಣ್ಣೆಗಳನ್ನು ನೇರವಾಗಿ ಹಚ್ಚುವ ಬದಲು ಮೊದಲು ತೆಂಗಿನೆಣ್ಣೆಯನ್ನು ಹಚ್ಚಿ ನಂತರ ತೈಲವನ್ನು ಬಳಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೀಟಿಂಗ್ ಪ್ಯಾಡ್ ಬಳಸಿ
ಎವಿಡೆನ್ಸ್-ಬೇಸ್ಡ್ ನರ್ಸಿಂಗ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಿಸಿ ಅನುಭವ ಹೆಚ್ಚು ಶಾಂತಿಯನ್ನು ನೀಡುತ್ತದೆ. ಬಿಸಿಯಾದ ಹೀಟಿಂಗ್ ಪ್ಯಾಡ್ ಬಳಸುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಆ ಕಾರಣದಿಂದಾಗಿ ನಿಮಗೆ ನೋವು ಕಡಿಮೆ ಆಗುತ್ತದೆ. ಕಿಬ್ಬೊಟ್ಟೆಯ ಸೆಳೆತವನ್ನು ಕಡಿಮೆ ಮಾಡಲು ಇದು ಸಹ ಪ್ರಯೋಜನಕ್ಕೆ ಬರುತ್ತದೆ.
ವಿಶ್ರಾಂತಿ ತೆಗೆದುಕೊಳ್ಳಿ
ನೋವು ನಿವಾರಣೆಗೆ ಸಾಕಷ್ಟು ವಿಶ್ರಾಂತಿ ಅತ್ಯಗತ್ಯ. ಉಸಿರಾಟದ ವ್ಯಾಯಾಮಗಳು ಯಾವುದೇ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡುತ್ತದೆ. ಸಾಕಷ್ಟು ಸಮಯ ನೀವು ನಿದ್ರೆ ಮಾಡುವುದು ಕೂಡ ಈ ಸಮಯದಲ್ಲಿ ಅತ್ಯಗತ್ಯವಾಗಿದೆ.