Pomegranate health benefits: ದಿನಕ್ಕೆ ಒಂದು ಕಪ್ ದಾಳಿಂಬೆ ಸೇವಿಸಿ.. ಮಧುಮೇಹ, ಹೃದ್ರೋಗ, ಕ್ಯಾನ್ಸರ್​​ನಿಂದ ದೂರವಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Pomegranate Health Benefits: ದಿನಕ್ಕೆ ಒಂದು ಕಪ್ ದಾಳಿಂಬೆ ಸೇವಿಸಿ.. ಮಧುಮೇಹ, ಹೃದ್ರೋಗ, ಕ್ಯಾನ್ಸರ್​​ನಿಂದ ದೂರವಿರಿ

Pomegranate health benefits: ದಿನಕ್ಕೆ ಒಂದು ಕಪ್ ದಾಳಿಂಬೆ ಸೇವಿಸಿ.. ಮಧುಮೇಹ, ಹೃದ್ರೋಗ, ಕ್ಯಾನ್ಸರ್​​ನಿಂದ ದೂರವಿರಿ

ದಾಳಿಂಬೆ ಕೇವಲ ರುಚಿಕರ ಹಣ್ಣು ಮಾತ್ರವಲ್ಲ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು. ದಿನಕ್ಕೆ ಒಂದು ಕಪ್ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹ, ಹೃದ್ರೋಗ, ಕ್ಯಾನ್ಸರ್​​ನಿಂದ ದೂರವಿರಬಹುದು ಎಂದು ತಜ್ಞರು ಹೇಳುತ್ತಾರೆ.

<p>ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳು (pixabay)</p>
ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳು (pixabay)

ದಾಳಿಂಬೆ ಕೇವಲ ರುಚಿಕರ ಹಣ್ಣು ಮಾತ್ರವಲ್ಲ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು. ದಿನಕ್ಕೆ ಒಂದು ಕಪ್ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹ, ಹೃದ್ರೋಗ, ಕ್ಯಾನ್ಸರ್​​ನಿಂದ ದೂರವಿರಬಹುದು ಎಂದು ತಜ್ಞರು ಹೇಳುತ್ತಾರೆ.

ಮಧುಮೇಹ ನಿಯಂತ್ರಣ

ದಾಳಿಂಬೆ ಹಣ್ಣಿನಲ್ಲಿ ಸಕ್ಕರೆ ಅಂಶ ಇದೆ, ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಮಧುಮೇಹಿಗಳು ದಾಳಿಂಬೆ ಸೇವನೆಯಿಂದ ದೂರ ಸರಿಯುತ್ತಾರೆ. ಆದರೆ ನೀವು ದಾಳಿಂಬೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹವನ್ನು ನಿಯಂತ್ರಿಸಬಹುದು. ಟೈಪ್ 2 ಮಧುಮೇಹ ಹೊಂದಿರುವವರು ದಾಳಿಂಬೆಯ ಸೇವನೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ದಾಳಿಂಬೆ ಸೇವನೆಯು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ರೋಗಿಗಳಿಗೆ ಇದು ಉಪಯುಕ್ತವಾಗಿದೆ. ಮಧುಮೇಹ ಇಲ್ಲದೇ ಇರುವವರು ದಿನನಿತ್ಯ ಒಂದು ಕಪ್​ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹದಿಂದ ದೂರವಿರಬಹುದು.

ಹೃದ್ರೋಗ ತಡೆಗಟ್ಟುವಿಕೆ

ದಾಳಿಂಬೆಯಲ್ಲಿನ ಫೈಬರ್ ಅಂಶವು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೇ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಪೊಟ್ಯಾಶಿಯಮ್ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಯಾಸ, ಸ್ನಾಯು ನೋವು ಮುಂತಾದ ಅಧಿಕ ರಕ್ತದ ಸಕ್ಕರೆಯ ಲಕ್ಷಣಗಳನ್ನು ಕಡಿಮೆ ಮಾಡಲು ದಾಳಿಂಬೆ ಸಹಾಯಕವಾಗಿದೆ.

ಕ್ಯಾನ್ಸರ್ ವಿರುದ್ಧ ಹೋರಾಟ

ದಾಳಿಂಬೆ ಸೇವನೆಯು ಹಲವಾರು ವಿಧದ ಕ್ಯಾನ್ಸರ್ ಅನ್ನು ತಡೆಯುವುದು ಮತ್ತು ವಿವಿಧ ಹಂತದಲ್ಲಿ ಇರುವಂತಹ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ದಾಳಿಂಬೆಯಲ್ಲಿ ಇರುವ ಉರಿಯೂತ ಶಮನಕಾರಿ ಗುಣ ಮತ್ತು ಪಾಲಿಫೆನಾಲ್‌ ಅಂಶವು ಡಿಎನ್ಎ ಪರಿವರ್ತನೆ ಆಗುವುದರಿಂದ ರಕ್ಷಿಸುತ್ತದೆ, ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಈ ಮೂಲಕ ಕ್ಯಾನ್ಸರ್ ಹರಡದಂತೆ ತಡೆಯುತ್ತದೆ. ಸ್ತನ, ಕರುಳು, ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ವಿವಿಧ ಬಗೆಯ ಕ್ಯಾನ್ಸರ್ ತಡೆಯುವಲ್ಲಿ ದಾಳಿಂಬೆ ಸಹಾಯಕ. ಹೀಗಾಗಿ ದಿನನಿತ್ಯ ದಾಳಿಂಬೆ ಹಣ್ಣು ತಿಂದು ಆರೋಗ್ಯದಿಂದಿರಿ.

ದಾಳಿಂಬೆಯ ಇತರ ಆರೋಗ್ಯ ಪ್ರಯೋಜನಗಳು

- ದಾಳಿಂಬೆಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

- ಇದು ಸಾಕಷ್ಟು ಫೈಬರ್ ಅನ್ನು ಹೊಂದಿರುವುದರಿಂದ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

- ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ.

- ದಾಳಿಂಬೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ನಿಮ್ಮ ರಕ್ತವನ್ನು ತೆಳುವಾಗಿಸುತ್ತದೆ.

- ದಾಳಿಂಬೆ ಬೀಜಗಳು ನಿಮ್ಮ ರಕ್ತದ ಪ್ಲೇಟ್‌ಲೆಟ್‌ಗಳು ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.

- ದಾಳಿಂಬೆ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

- ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ದಾಳಿಂಬೆ ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಪ್ರತಿನಿತ್ಯ ನಿಮ್ಮ ಮಕ್ಕಳಿಗೆ ದಾಳಿಂಬೆ ಹಣ್ಣು ಸೇವಿಸಲು ನೀಡಿ.

- ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ಕಾಂತಿಯುತ ಚರ್ಮವನ್ನು ನೀವು ಪಡೆಯುತ್ತೀರಿ.

- ಗರ್ಭಿಣಿಯರು ದಾಳಿಂಬೆ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯವಾಗಿರಬಹುದು.

Whats_app_banner