HDFC Scholarship: ಎಚ್‌ಡಿಎಫ್‌ಸಿ ಪರಿವರ್ತನ್ ವಿದ್ಯಾರ್ಥಿವೇತನ, 75 ಸಾವಿರ ರೂವರೆಗೆ ಸ್ಕಾಲರ್‌ಷಿಪ್ ಪಡೆಯಲು ಅವಕಾಶ
HDFC Bank Parivartan's ECSS Programme 2024-25: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪರಿವರ್ತನ್ ಇಸಿಎಸ್‌ಎಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 31, 2024 ಕೊನೆಯ ದಿನಾಂಕವಾಗಿದೆ. 1-12 ತರಗತಿ, ಡಿಪ್ಲೊಮಾ, ಯುಜಿ, ಪಿಜಿ ಕಲಿಯುತ್ತಿರುವ ಅರ್ಹ ಅಭ್ಯರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.
HDFC Scholarship 2024: ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿಯು ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುವ ವಿದ್ಯಾರ್ಥಿವೇತನವನ್ನು ಪ್ರತಿವರ್ಷ ನೀಡುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ ಇಸಿಎಸ್‌ಎಸ್ ಪ್ರೋಗ್ರಾಂನಡಿ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗುತ್ತದೆ. 1-12 ತರಗತಿಯ ವಿದ್ಯಾರ್ಥಿಗಳು, ಡಿಪ್ಲೊಮಾ, ಐಟಿಐ ಮುಂತಾದ ತಾಂತ್ರಿಕ ಶಿಕ್ಷಣ ಪಡೆಯುವವರು, ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಸೇರಿದಂತೆ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್ ಪ್ರಯೋಜನ ಪಡೆದುಕೊಳ್ಳಬಹುದು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆಗಳೇನು? ನಿಯಮಗಳೇನು? ಎಷ್ಟು ಮೊತ್ತ ಸ್ಕಾಲರ್‌ಷಿಪ್ ದೊರಕುತ್ತದೆ? ಇತ್ಯಾದಿ ಎಲ್ಲಾ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ಎಚ್‌ಡಿಎಫ್‌ಸಿ ಪರಿವರ್ತನ್ ವಿದ್ಯಾರ್ಥಿವೇತನ
ಅರ್ಹತೆಗಳು
- 1-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸರಕಾರಿ, ಖಾಸಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಈ ಹಿಂದಿನ ವರ್ಷ ಕನಿಷ್ಠ ಶೇಕಡ 55 ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
- ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ಡಿಪ್ಲೊಮಾ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸುವುದಾದರೆ, 12 ತರಗತಿಯ ಬಳಿಕ ಡಿಪ್ಲೊಮಾಕ್ಕೆ ಸೇರಿರುವವರಿಗೆ ಮಾತ್ರ ಅವಕಾಶವಿದೆ.
ವಿದ್ಯಾರ್ಥಿ ವೇತನದ ಮೊತ್ತ: 1-6ನೇ ತರಗತಿಯವರಿಗೆ 15,000 ರೂಪಾಯಿ, 7-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 18,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 31, 2024
ಪದವಿ ವಿದ್ಯಾರ್ಥಿಗಳಿಗೆ ಎಚ್‌ಡಿಎಫ್‌ಸಿ ಪರಿವರ್ತನ್ ಸ್ಕಾಲರ್‌ಷಿಪ್
ಅರ್ಹತೆಗಳು
- ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ ಮುಂತಾದ ಪದವಿ ಕೋರ್ಸ್‌ಗಳು, ಬಿಟೆಕ್, ಎಂಬಿಬಿಎಸ್, ಎಲ್‌ಎಲ್‌ಬಿ, ಬಿಆರ್ಕ್, ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಈ ಹಿಂದಿನ ಕೋರ್ಸ್‌ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.
- ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
- ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಿದ್ಯಾರ್ಥಿ ವೇತನದ ಮೊತ್ತ: ಸಾಮಾನ್ಯ ಪದವಿ ಕೋರ್ಸ್- 30 ಸಾವಿರ ರೂಪಾಯಿ, ವೃತ್ತಿಪರ ಪದವಿ ಕೋರ್ಸ್ 50,000 ರೂಪಾಯಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2024
ಸ್ನಾತಕೋತ್ತರ ಪದವೀಧರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ ವಿದ್ಯಾರ್ಥಿವೇತನ
ಅರ್ಹತೆಗಳು
- ಎಂಕಾಂ, ಎಂಎ ಮುಂತಾದ ಜನರಲ್ ಕೋರ್ಸ್, ಎಂಟೆಕ್, ಎಂಬಿಎ ಮುಂತಾದ ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಕಲಿಯುವವರು ಅರ್ಜಿ ಸಲ್ಲಿಸಬಹುದು.
- ಈ ಹಿಂದಿನ ಕೋರ್ಸ್‌ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.
- ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
- ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಿದ್ಯಾರ್ಥಿ ವೇತನ ಮೊತ್ತ: ಜನರಲ್ ಸ್ನಾತಕೋತ್ತರ ಪದವಿ: 35 ಸಾವಿರ ರೂಪಾಯಿ, ವೃತ್ತಿಪರ ಸ್ನಾತಕೋತ್ತರ ಕೋರ್ಸ್: 75 ಸಾವಿರ ರೂಪಾಯಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31, 2024
ಎಚ್‌ಡಿಎಫ್‌ಸಿ ಪರಿವರ್ತನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ವಿದ್ಯಾರ್ಥಿ ವೇತನಗಳಿಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ನೀಡಲಾದ ಲಿಂಕ್‌ನಲ್ಲಿ ತಿಳಿಸಿರುವ ದಾಖಲೆಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಎಚ್‌ಡಿಎಫ್‌ಸಿ ಪರಿವರ್ತನ್ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: hdfcbankecss.com