Bakrid Recipe: ವೆಜ್‌ ಪಲಾವ್‌ ಗೊತ್ತು, ಚಿಕನ್‌ ಪಲಾವ್‌ ರುಚಿ ನೋಡಿದ್ದೀರಾ; ಮನೆಯಲ್ಲೇ ಸುಲಭವಾಗಿ ಚಿಕನ್‌ ಪಲಾವ್‌ ಮಾಡುವ ವಿಧಾನ ಇಲ್ಲಿದೆ-eid al adha islamic festival bakrid celebration indian traditional recipe non veg special chicken pualo in kannada rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Bakrid Recipe: ವೆಜ್‌ ಪಲಾವ್‌ ಗೊತ್ತು, ಚಿಕನ್‌ ಪಲಾವ್‌ ರುಚಿ ನೋಡಿದ್ದೀರಾ; ಮನೆಯಲ್ಲೇ ಸುಲಭವಾಗಿ ಚಿಕನ್‌ ಪಲಾವ್‌ ಮಾಡುವ ವಿಧಾನ ಇಲ್ಲಿದೆ

Bakrid Recipe: ವೆಜ್‌ ಪಲಾವ್‌ ಗೊತ್ತು, ಚಿಕನ್‌ ಪಲಾವ್‌ ರುಚಿ ನೋಡಿದ್ದೀರಾ; ಮನೆಯಲ್ಲೇ ಸುಲಭವಾಗಿ ಚಿಕನ್‌ ಪಲಾವ್‌ ಮಾಡುವ ವಿಧಾನ ಇಲ್ಲಿದೆ

Chicken Pualo: ವೆಜ್‌ ಪಲಾವ್‌ ಬಹುತೇಕರಿಗೆ ಇಷ್ಟ. ನೀವು ನಾನ್‌ವೆಜ್‌ ಪ್ರಿಯರಾಗಿದ್ದು, ಚಿಕನ್‌ ಪಲಾವ್‌ ತಿಂದಿದ್ದೀರಾ? ಚಿಕನ್‌ ಪಲಾವ್‌ ರುಚಿಯನ್ನು ಸವಿದೇ ನೋಡಬೇಕು. ಮನೆಯಲ್ಲಿ ರುಚಿಯಾಗಿ ಪಲಾವ್‌ ತಯಾರಿಸಿ ತಿನ್ನಬಹುದು. ಈ ಬಕ್ರೀದ್‌ಗೆ ನೀವು ಮನೆಯಲ್ಲಿ ಚಿಕನ್‌ ಪಲಾವ್‌ ತಯಾರಿಸಿ, ಹಬ್ಬದ ಸಂಭ್ರಮ ಹೆಚ್ಚಿಸಿ.

ಚಿಕನ್‌ ಪಲಾವ್‌
ಚಿಕನ್‌ ಪಲಾವ್‌

ರೈಸ್‌ ಐಟಂಗಳಲ್ಲಿ ಹಲವರಿಗೆ ಫೇವರಿಟ್‌ ಪಲಾವ್‌. ತರಕಾರಿ, ಬಟಾಣಿ, ಬ್ರೆಡ್‌ ತುಂಡುಗಳನ್ನು ಸೇರಿಸಿ ಮಾಡಿರುವ ಪಲಾವ್‌ ಅನ್ನು ಮೊಸರು ಬಜ್ಜಿಯೊಂದಿಗೆ ಸೇರಿಸಿ ತಿನ್ನುತ್ತಿದ್ದರೆ, ಇನ್ನಷ್ಟು ತಿನ್ನಬೇಕು ಎನ್ನಿಸುವುದು ಸುಳ್ಳಲ್ಲ. ವೆಜ್‌ ಸಾಮಾನ್ಯವಾಗಿ ನಾವೆಲ್ಲರೂ ತಿಂದಿರುತ್ತೇವೆ, ಆದರೆ ಚಿಕನ್‌ ಪಲಾವ್‌ ತಿಂದಿದ್ದೀರಾ? ಚಿಕನ್‌ ಪಲಾವ್ ಅನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಿ ತಿನ್ನಬಹುದು. ಈ ಬಕ್ರೀದ್‌ ಹಬ್ಬಕ್ಕೆ ನೀವು ಮನೆಯಲ್ಲಿ ಚಿಕನ್‌ ಪಲಾವ್‌ ಮಾಡಿ ಸವಿಯಿರಿ.

ಚಿಕನ್‌ ಪಲಾವ್‌

ಬೇಕಾಗುವ ಸಾಮಗ್ರಿಗಳು: ಚಿಕನ್‌ - ಮುಕ್ಕಾಲು ಕೆಜಿ, ಬೆಳ್ಳುಳ್ಳಿ - 5 ರಿಂದ 6 ಎಸಳು, ಏಲಕ್ಕಿ - 8, ಅರಿಸಿನ - ಅರ್ಧ ಟೀ ಚಮಚ, ಹಸಿಮೆಣಸು - 7, ಲವಂಗ- 6, ಬಾಸುಮತಿ ಅಕ್ಕಿ - 3 ಕಪ್‌, ಗರಂ ಮಸಾಲೆ - 1 ಚಮಚ, ನೀರು - 5 ಕಪ್‌, ಶುಂಠಿ - 3 ಇಂಚು, ದಾಲ್ಚಿನ್ನಿ ಎಲೆ - 6, ಚಕ್ಕೆಪುಡಿ - 1 ಚಮಚ, ಖಾರದ ಪುಡಿ - 1 ಚಮಚ, ನಕ್ಷತ್ರ ಮೊಗ್ಗು - 6, ಮೊಸರು - 4 ಚಮಚ, ಈರುಳ್ಳಿ - 2 ಹೆಚ್ಚಿಕೊಂಡಿದ್ದು,

ಉಪ್ಪು - ರುಚಿಗೆ, ನಿಂಬೆರಸ - 1, ಕೊತ್ತಂಬರಿ ಸೊಪ್ಪು - ಸ್ವಲ್ಪ

ತಯಾರಿಸುವ ವಿಧಾನ: ಶುಂಠಿ-ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್‌ ತಯಾರಿಸಿಕೊಳ್ಳಿ. ತರಕಾರಿಗಳನ್ನು ತೊಳೆದು ಹೆಚ್ಚಿಕೊಳ್ಳಿ. ಚಿಕನ್‌ ಅನ್ನು ತೊಳೆದು ತುಂಡು ಮಾಡಿ ಇರಿಸಿಕೊಳ್ಳಿ.

ಬೌಲ್‌ವೊಂದರಲ್ಲಿ ಗರಂ ಮಸಾಲೆ, ಖಾರದಪುಡಿ, ಉಪ್ಪು, ಅರಿಸಿನಪುಡಿ, ಅರ್ಧದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿ. ಅದಕ್ಕೆ ಚಿಕನ್‌ ತುಂಡುಗಳನ್ನು ಸೇರಿಸಿ 20 ನಿಮಿಷಗಳ ಕಾಲ ನೆನೆಸಿಡಿ.

ಈಗ ಪಾನ್‌ವೊಂದನ್ನು ಸ್ಟೌ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ದಾಲ್ಚಿನ್ನಿ ಎಲೆ, ಏಲಕ್ಕಿ, ಲವಂಗ, ಚಕ್ಕೆ, ಹಸಿಮೆಣಸು ಹಾಗೂ ನಕ್ಷತ್ರ ಮೊಗ್ಗು ಸೇರಿಸಿ ಹುರಿಯಿರಿ. ಅದಕ್ಕೆ ಕತ್ತರಿಸಿಕೊಂಡು ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಈರುಳ್ಳಿ ಬಣ್ಣ ಬದಲಾಗುವವರೆಗೂ ಕೈಯಾಡಿಸಿ. ಈಗ ಅದಕ್ಕೆ ನೆನೆಸಿಟ್ಟು ಚಿಕನ್‌ ತುಂಡುಗಳನ್ನು ಸೇರಿಸಿ. ಚಿಕನ್‌ ತುಂಡುಗಳಿಗೆ ಉಳಿದ ಸಾಮಗ್ರಿಗಳು ಸೇರುವಂತೆ ಕೈಯಾಡಿಸಿ. ನಂತರ ಅದಕ್ಕೆ ಮೊಸರು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ನಂತರ ಅಕ್ಕಿ, 5 ಕಪ್‌ ನೀರು, ಅರಿಸಿನ ಹುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಉಪ್ಪು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಅಕ್ಕಿ ಹಾಗೂ ಚಿಕನ್‌ ತುಂಡುಗಳು ಚೆನ್ನಾಗಿ ಬೇಯುವವರೆಗೂ ಮಧ್ಯಮ ಉರಿಯಲ್ಲಿ ಬೇಯಿಸಿ. ಬೆಂದ ನಂತರ ಸ್ಟೌ ಆಫ್‌ ಮಾಡಿ. ನಿಂಬೆರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸಿ, ಬಡಿಸಿಕೊಂಡು ಸವಿಯಿರಿ.

ಇದನ್ನೂ ಓದಿ

Bakrid: ಮಟನ್‌ ಮಂಡಿ ಬಿರಿಯಾನಿ ತಿಂದು ಫಿದಾ ಆಗಿದ್ದೀರಾ; ಬಕ್ರೀದ್‌ಗೆ ನೀವೂ ಮನೆಯಲ್ಲಿ ತಯಾರಿಸಿ ಈ ಸ್ಪೆಷಲ್‌ ಬಿರಿಯಾನಿ; ಇಲ್ಲಿದೆ ರೆಸಿಪಿ

Eid Al Adha: ಜೂನ್‌ 29 ರಂದು ಭಾರತದಲ್ಲಿ ಬಕ್ರೀದ್‌ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ವಿಶೇಷ ಖಾದ್ಯಗಳನ್ನು ತಯಾರಿಸಿ ಸಂಭ್ರಮಿಸುವುದು ವಾಡಿಕೆ. ಈ ಬಕ್ರೀದ್‌ಗೆ ನೀವು ಮಟನ್‌ ಮಂಡಿ ಬಿರಿಯಾನಿ ತಯಾರಿಸಬಹುದು. ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಇದರ ರೆಸಿಪಿ ಇಲ್ಲಿದೆ ನೋಡಿ.

ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ʼಈದ್‌ ಉಲ್‌ ಅದ್ಹಾʼ. ಭಾರತದಲ್ಲಿ ಈ ಹಬ್ಬವನ್ನು ʼಬಕ್ರೀದ್‌ʼ ಎಂದು ಆಚರಿಸಲಾಗುತ್ತದೆ. ಜೂನ್‌ 29ರಂದು ದೇಶದಾದ್ಯಂತ ಮುಸ್ಲಿಮರು ಈ ಹಬ್ಬವನ್ನು ಆಚರಿಸುತ್ತಾರೆ.

mysore-dasara_Entry_Point