ಕನ್ನಡ ಸುದ್ದಿ  /  ಜೀವನಶೈಲಿ  /  ಎಸ್ಎಸ್‌ಎಲ್‌ಸಿ, ಪಿಯುಸಿ ಅನುತೀರ್ಣರಾಗಿ ಮುಂದೆ ಓದಲು ಇಷ್ಟಾ ಇಲ್ವಾ? ಆಸಕ್ತರಿಗಾಗಿ ಕೇಶ ವಿನ್ಯಾಸ ತರಬೇತಿ ಆರಂಭ

ಎಸ್ಎಸ್‌ಎಲ್‌ಸಿ, ಪಿಯುಸಿ ಅನುತೀರ್ಣರಾಗಿ ಮುಂದೆ ಓದಲು ಇಷ್ಟಾ ಇಲ್ವಾ? ಆಸಕ್ತರಿಗಾಗಿ ಕೇಶ ವಿನ್ಯಾಸ ತರಬೇತಿ ಆರಂಭ

ಎಸ್‌ಎಸ್‌ಎಲ್‌ಸಿ, ಪಿಯುಸಿ ಅನುತೀರ್ಣರಾಗಿ ಮುಂದೆ ಓದಲು ಆಸಕ್ತಿ ಇಲ್ಲವೇ, ನಿಮಗಾಗಿ ಉದ್ಯೋಗದ ಅವಕಾಶಗಳು ಇಲ್ಲಿವೆ. ಸ್ಪಿನ್ ಸಲೂನ್ ಅಕಾಡೆಮಿ ವತಿಯಿಂದ ಆತ್ಯಾಧುನಿಕ ಕೇಶ ವಿನ್ಯಾಸದ ತರಬೇತಿ ನೀಡಲಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಬಾಗಲಗುಂಟೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫೇಲ್ ಆಗಿ ಮುಂದೆ ಓದಲು ಆಸಕ್ತಿ ಇಲ್ಲದವರಿಗಾಗಿ ಕೇಶ ವಿನ್ಯಾಸ ತರಬೇತಿ ನೀಡಲಾಗುತ್ತಿದೆ.
ಬೆಂಗಳೂರಿನ ಬಾಗಲಗುಂಟೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫೇಲ್ ಆಗಿ ಮುಂದೆ ಓದಲು ಆಸಕ್ತಿ ಇಲ್ಲದವರಿಗಾಗಿ ಕೇಶ ವಿನ್ಯಾಸ ತರಬೇತಿ ನೀಡಲಾಗುತ್ತಿದೆ.

ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC), ಪಿಯುಸಿಯಲ್ಲಿ (PUC) ಅನುತೀರ್ಣರಾಗಿ ಮುಂದೆ ಓದಲು ಆಸಕ್ತಿ ಇಲ್ಲದ ಬಾಲಕರಿಗಾಗಿ ಉದ್ಯೋಗ (Employment News) ಕುರಿತ ಮಾಹಿತಿ ಇಲ್ಲಿದೆ. ಸ್ಪಿನ್ ಸಲೂನ್, ಸ್ಪಿನ್ ಅಕಾಡಿಮೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫೇಲ್ ಆಗಿ ಮುಂದೆ ಓದಲು ಆಸಕ್ತಿ ಇಲ್ಲದವರಿಗೆ ಆಧುನಿಕ ರೀತಿಯಲ್ಲಿ ಉಚಿತ ಕೇಶ ವಿನ್ಯಾಸದ ತರಬೇತಿ (Free Hairstyle Cutting Training) ನೀಡುತ್ತಿದೆ. ಸ್ಪಿನ್ ಸಲೂನ್ ಪ್ರಕಾರ, ಕುಲವೃತ್ತಿಯನ್ನು ಆಧುನಿಕ ರೀತಿಯಲ್ಲಿ ಕಲಿಯಲು ಆಸಕ್ತಿ ಇರುವ ಮತ್ತು ಈಗಾಗಲೇ ಕಲಿತು ಇನ್ನೂ ಹೆಚ್ಚಿನ ವೃತ್ತಿ ಕೌಶಲ್ಯವನ್ನು ಕಲಿಯ ಬಯಸುವ ಯುವಕರಿಗೆ ಉಚಿತವಾಗಿ ವಸತಿಯನ್ನು ಕಲ್ಪಿಸಿ ಆಧುನಿಕ ಕೇಶವಿನ್ಯಾಸ ತರಬೇತಿಯನ್ನು ನೀಡುವುದಾಗಿ ಹೇಳಿದೆ. ಆಸಕ್ತರು ಈ ತರಬೇತಿಯಲ್ಲಿ ಭಾಗವಹಿಸಬಹುದು. ಆದರೆ ಇದಕ್ಕಾಗಿ ಒಂದಿಷ್ಟು ಷರತ್ತುಗಳನ್ನು ವಿಧಿಸಿದೆ.

ಟ್ರೆಂಡಿಂಗ್​ ಸುದ್ದಿ

ಸ್ಪಿನ್ ಸಲೂನ್ ಉಚಿತ ಕೇಶ ವಿನ್ಯಾಸ ತರಬೇತಿಯಲ್ಲಿ ಭಾಗವಹಿಸಲು ಇರುವ ಷರತ್ತುಗಳು

  • ಅಭ್ಯರ್ಥಿಗಳಿಗೆ 18 ರಿಂದ 23 ವರ್ಷಗಳ ವಯೋಮಿತಿ ಕಡ್ಡಾಯವಾಗಿದೆ
  • 10 ಯುವಕರಿಗೆ ಪ್ರಥಮ ಆದ್ಯತೆ
  • ತರಬೇತಿಯಲ್ಲಿ ಭಾಗವಹಿಸುವ ಅರ್ಹರಿಗೆ ಯಾವುದೇ ದುಶ್ಚಟಗಳು ಇರಬಾರದು
  • ಅಭ್ಯರ್ಥಿಗಳು ತಮ್ಮ ಕುಟುಂಬಕ್ಕೆ ಸಹಾಯ ಮಾಡುವಂತಿರಬೇಕು
  • ಕೌಶಲ್ಯ ಕಲಿಯುವುದರ ಜೊತೆಗೆ ತರಬೇತಿ ಭತ್ಯೆಯನ್ನು ನೀಡಲಾಗುತ್ತದೆ
  • 6 ತಿಂಗಳ ಕಾಲ ತರಬೇತಿ ಕಡ್ಡಾಯವಾಗಿರುತ್ತದೆ
  • ಈಗಾಗಲೇ ವೃತ್ತಿ ತಿಳಿದವರಿಗೆ ಆಧುನಿಕ ಶೈಲಿಯ ತರಬೇತಿ ಕೌಶಲ್ಯ ನೀಡಲಾಗುತ್ತದೆ

ಸ್ಥಳ - ನಂ-1, ಡೊಮಿನೊಸ್ ಪಿಜಾ ಮೇಲೆ, ಡಿಫೆನ್ಸ್ ಕಾಲೊನಿ, ಬಾಗಲಗುಂಟೆ, ಬೆಂಗಳೂರು, ಕರ್ನಾಟಕ - 560073. ಆಸಕ್ತರು ಹೆಚ್ಚಿನ ಮಾಹಿತಿಗಾಗಿ - 96201 07595, 63643 13131

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)