7 Cup Burfi: ಅಡುಗೆ ಮಾಡಲು ಬಾರದವರು ಈ 7 ಕಪ್ ಬರ್ಫಿ ಮಾಡಬಹುದು; ಸರಳ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  7 Cup Burfi: ಅಡುಗೆ ಮಾಡಲು ಬಾರದವರು ಈ 7 ಕಪ್ ಬರ್ಫಿ ಮಾಡಬಹುದು; ಸರಳ ವಿಧಾನ ಇಲ್ಲಿದೆ

7 Cup Burfi: ಅಡುಗೆ ಮಾಡಲು ಬಾರದವರು ಈ 7 ಕಪ್ ಬರ್ಫಿ ಮಾಡಬಹುದು; ಸರಳ ವಿಧಾನ ಇಲ್ಲಿದೆ

7 ಕಪ್ ಬರ್ಫಿ: ಏಳು ಕಪ್ ಪದಾರ್ಥಗಳೊಂದಿಗೆ ಮಾಡುವ ಸರಳ ಸಿಹಿ ಪದಾರ್ಥ ಯಾವುದಾದರೂ ಇದ್ರೆ ಅದು ಬರ್ಫಿ ರೆಸಿಪಿ. ಅಡುಗೆ ಗೊತ್ತಿಲ್ಲದವರೂ ಕೂಡ ಸ್ವೀಟ್ ಅನ್ನು ತಯಾರಿಸಬಹುದು. 7 ಕಪ್ ಬರ್ಫಿಯನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಮನೆಯಲ್ಲೇ ಸರಳವಾಗಿ 7 ಕಪ್ ಬರ್ಫಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ
ಮನೆಯಲ್ಲೇ ಸರಳವಾಗಿ 7 ಕಪ್ ಬರ್ಫಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ

ತುಂಬಾ ಜನಕ್ಕೆ ಸ್ವೀಟ್ ಅಂದರೆ ಇಷ್ಟ. ಅದರಲ್ಲೂ ಹಬ್ಬಹರಿದಿನಗಳಲ್ಲಿ ಮನೆಗೆ ಬರುವ ಅತಿಥಿಗಳಿಗೆ, ನೆರೆ ಹೊರೆಯವರಿಗೆ ಸಿಹಿ ಹಂಚಬೇಕೆಂದರೆ ಅಂಗಡಿಯಿಂದ ತರಬೇಕಾಗುತ್ತದೆ. ಆದರೆ ಕೆಲವರು ಮನೆಯಲ್ಲಿ ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಅತಿ ಸುಲಭವಾಗಿ ಮಾಡುವ ಸಿಹಿ ರೆಸಿಪಿಗಳಲ್ಲಿ 7 ಕಪ್ ಬರ್ಫಿ ಕೂಡ ಒಂದು. ಈ ಸ್ವೀಟ್ ನಿಮ್ಮ ಹಬ್ಬದ ಖುಷಿಯನ್ನು ಹೆಚ್ಚಿಸುತ್ತದೆ. ನೀವೇನಾದರೂ ಸಿಹಿ ತಿಂಡಿಗಳನ್ನು ಇಷ್ಟಪಡುವವರಾಗಿದ್ದರೆ ಈ 7 ಕಪ್ ಬರ್ಫಿ ರೆಸಿಪಿಯನ್ನು ಮನೆಯಲ್ಲಿ ಟ್ರೈ ಮಾಡಿ. ಈ ಸ್ವೀಟ್ ತಯಾರಿಸಲು ಸ್ವಲ್ಪ ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ. ಸುಲಭವಾಗಿ 7 ಕಪ್ ಬರ್ಫಿಯನ್ನು ಮಾಡಬಹುದು. ಇದೇ ಕಾರಣಕ್ಕೆ ಈ ಸಿಹಿಗೆ ಆ ಹೆಸರು ಬಂದಿದೆ. ಈ ಸಿಹಿ ತಯಾರಿಸಲು ಬಳಸುವ ಪದಾರ್ಥಗಳನ್ನು ಒಂದೇ ಕಪ್ ನಲ್ಲಿ 7 ಬಾರಿ ಅಳೆಯುತ್ತೇವೆ. ಯಾವುದೇ ಹೆಚ್ಚಿನ ಅಳತೆಯಿಲ್ಲದೆ ಉತ್ತಮವಾದ ಸಿಹಿ ಸಿದ್ಧವಾಗುತ್ತೆ. ಅದನ್ನು ಹೇಗೆ ಮಾಡಬೇಕೆಂದು ನೋಡಿ.

7 ಕಪ್ ಬರ್ಫಿಗೆ ಬೇಕಾಗುವ ಪದಾರ್ಥಗಳು

  • 1 ಕಪ್ ಹಾಲು
  • 1 ಕಪ್ ಕಡಲೆ ಹಿಟ್ಟು
  • 1 ಕಪ್ ತುರಿದ ತೆಂಗಿನಕಾಯಿ
  • 1 ಕಪ್ ತುಪ್ಪ
  • 3 ಕಪ್ ಸಕ್ಕರೆ
  • ಒಂದು ಚಿಟಿಕೆ ಏಲಕ್ಕಿ ಪುಡಿ

7 ಕಪ್ ಬರ್ಫಿ ಮಾಡುವುದು ಹೇಗೆ

  1. ಮೊದಲೇ ಹೇಳಿದಂತೆ ಮೇಲಿನ ಎಲ್ಲಾ ಪದಾರ್ಥಗಳನ್ನು ಒಂದು ಕಪ್‌ನಲ್ಲಿ ಅಳತೆ ಮಾಡಿಕೊಂಡಿರಬೇಕು.
  2. ಪಾತ್ರೆ ಸ್ವಲ್ಪ ಬಿಸಿಯಾದ ನಂತರ, 1 ಕಪ್ ತುಪ್ಪ, 1 ಕಪ್ ಹಾಲು, 1 ಕಪ್ ಬೇಳೆ ಹಿಟ್ಟು, 1 ಕಪ್ ತೆಂಗಿನ ತುರಿ ಮತ್ತು 3 ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  3. ಹಿಟ್ಟನ್ನು ಉಂಡೆಗಳು ಬಾರದಂತೆ ಚಮಚದೊಂದಿಗೆ ಮಿಶ್ರಣ ಮಾಡಬೇಕು. ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಫ್ರೈ ಮಾಡಿ ಮತ್ತು ಬ್ಯಾಟರ್ ಬಣ್ಣವನ್ನು ಬದಲಾಯಿಸುತ್ತದೆ. ಈ ಬಣ್ಣಕ್ಕೆ ತಿರುಗಿದ ನಂತರ ಪಾತ್ರೆಯನ್ನು ಇಳಿಸಿಕೊಳ್ಳಿ
  4. ಸ್ವಲ್ಪ ಸಮಯದ ನಂತರ ಅದು ದಪ್ಪವಾಗುತ್ತದೆ ಮತ್ತು ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಆಗ ಎಲ್ಲವನ್ನೂ ಚೆನ್ನಾಗಿ ಬೆಂದಿವೆ ಎಂದರ್ಥ. ಈಗ ಸ್ವಲ್ಪ ಏಲಕ್ಕಿ ಪುಡಿಯನ್ನು ಉದುರಿಸಿ ಮಿಶ್ರಣ ಮಾಡಿ. ಗ್ಯಾಸ್ ಆಫ್ ಮಾಡಿ.
  5. ಆಳವಾದ ತಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ತುಪ್ಪವನ್ನು ಹರಡಿ. ಸಿದ್ಧಪಡಿಸಿದ ಹಿಟ್ಟಿನ ಮಿಶ್ರಣವನ್ನು ಅದರಲ್ಲಿ ಸುರಿಯಿರಿ. ಅರ್ಧ ಘಂಟೆಯ ನಂತರ, ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. 7 ಕಪ್ ಬರ್ಫಿ ಸಿದ್ಧವಾಗುತ್ತದೆ.

7 ಕಪ್ ಬರ್ಫಿಯನ್ನು ಮನೆಯಲ್ಲೇ ತುಂಬಾ ಸರಳವಾಗಿ ತಯಾರಿಸಿಕೊಳ್ಳಬಹುದು. ಹಬ್ಬದಲ್ಲಿ ಈ ಸಿಹಿಯನ್ನು ಹಂಚುವ ಮೂಲಕ ನಿಮ್ಮ ಖುಷಿಯನ್ನು ಹೆಚ್ಚಿಸಿಕೊಳ್ಳಿ.

Whats_app_banner