ದಸರಾ ರಜೆಯಲ್ಲಿ ಮಕ್ಕಳಿಗೆ ಏನಾದ್ರೂ ಸ್ಪೆಷಲ್ ತಿಂಡಿ ಮಾಡಿಕೊಡಬೇಕು ಅಂತಿದ್ರೆ ರಾಗಿ ಕೇಕ್‌ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ದಸರಾ ರಜೆಯಲ್ಲಿ ಮಕ್ಕಳಿಗೆ ಏನಾದ್ರೂ ಸ್ಪೆಷಲ್ ತಿಂಡಿ ಮಾಡಿಕೊಡಬೇಕು ಅಂತಿದ್ರೆ ರಾಗಿ ಕೇಕ್‌ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ದಸರಾ ರಜೆಯಲ್ಲಿ ಮಕ್ಕಳಿಗೆ ಏನಾದ್ರೂ ಸ್ಪೆಷಲ್ ತಿಂಡಿ ಮಾಡಿಕೊಡಬೇಕು ಅಂತಿದ್ರೆ ರಾಗಿ ಕೇಕ್‌ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ದಸರಾ ರಜೆ ಇರುವ ಕಾರಣಕ್ಕೆ ಮಕ್ಕಳು ಮನೆಯಲ್ಲೇ ಇರುತ್ತಾರೆ, ಏನಾದ್ರೂ ಸ್ಪೆಷಲ್ ತಿಂಡಿ ಮಾಡ್ಬೇಕು ಅಂತಿದ್ರೆ ರಾಗಿ ಕೇಕ್ ಟ್ರೈ ಮಾಡಿ. ಬೆಲ್ಲ, ರಾಗಿಹಿಟ್ಟು, ಕೋಕಾ ಪೌಡರ್‌, ತುಪ್ಪ ಬಳಸಿ ಮಾಡುವ ಈ ಕೇಕ್ ಮಕ್ಕಳಿಗೆ ಖಂಡಿತ ಸಖತ್ ಇಷ್ಟ ಆಗುತ್ತೆ, ಇದು ಆರೋಗ್ಯಕ್ಕೂ ಉತ್ತಮ. ಸುಲಭವಾಗಿ ಕುಕ್ಕರ್‌ನಲ್ಲೂ ಮಾಡಬಹುದಾದ ರೆಸಿಪಿಯಿದು.

ರಾಗಿ ಕೇಕ್ ಮಾಡುವ ವಿಧಾನ
ರಾಗಿ ಕೇಕ್ ಮಾಡುವ ವಿಧಾನ

ರಜಾದಿನಗಳಲ್ಲಿ ಮಕ್ಕಳು ಮನೆಯಲ್ಲಿ ಇರುವಾಗ ತಿಂಡಿಗಾಗಿ ಹಟ ಮಾಡುವುದು ಸಹಜ. ಪದೇ ಪದೇ ಹೊರಗಡೆ ತಿಂಡಿ ತಿಂದರೆ ಆರೋಗ್ಯ ಕೆಡುತ್ತೆ. ಮನೆಯಲ್ಲೇ ಒಂದೇ ರೀತಿಯ ತಿಂಡಿ ಮಾಡಿದ್ರೂ ಅವರಿಗೆ ಇಷ್ಟವಾಗುವುದಿಲ್ಲ. ಕೇಕ್, ಬಿಸ್ಕತ್ತು ಅವರಿಗೆ ಇಷ್ಟವಾದ್ರೂ ಆರೋಗ್ಯ ಕೆಡುತ್ತೆ ಎನ್ನುವ ಕಾರಣಕ್ಕೆ ಕೊಡಲು ನಿಮಗೆ ಮನಸ್ಸು ಬರುವುದಿಲ್ಲ. ಹಾಗಿದ್ದಾಗ ಮನೆಯಲ್ಲಿ ಮಕ್ಕಳಿಗೆ ಇಷ್ಟವಾಗುವ ಆರೋಗ್ಯಕರ ತಿಂಡಿ ಮಾಡಬೇಕು. ಅದಕ್ಕೆ ನಿಮಗೆ ಬೆಸ್ಟ್ ಐಡಿಯಾ ಇಲ್ಲಿದೆ.

ಮಕ್ಕಳಿಗಾಗಿ ನೀವು ಮನೆಯಲ್ಲೇ ರಾಗಿ ಕೇಕ್ ತಯಾರಿಸಬಹುದು. ಕೇಕ್ ಅಂದ್ರೆ ಮೈದಾಹಿಟ್ಟು, ಸಕ್ಕರೆ ಬಳಸಬೇಕು, ಆರೋಗ್ಯ ಕೆಡುತ್ತೆ ಎನ್ನುವ ಚಿಂತೆ ಮಾಡ್ಬೇಡಿ. ಯಾಕೆಂದರೆ ಈ ಕೇಕ್‌ಗೆ ಬಳಸೋದು ಮೈದಾಹಿಟ್ಟಲ್ಲ ಬದಲಾಗಿ ರಾಗಿಹಿಟ್ಟು, ಸಕ್ಕರೆಯಲ್ಲ ಬದಲಾಗಿ ಬೆಲ್ಲ. ಇದನ್ನು ದೊಡ್ಡವರು ಕೂಡ ಯಾವುದೇ ಆರೋಗ್ಯ ಸಮಸ್ಯೆ ಕಾಡುತ್ತೆ ಎನ್ನುವ ಭಯವಿಲ್ಲದೇ ತಿನ್ನಬಹುದು. ನಿಮ್ಮ ಮನೆಯಲ್ಲಿ ಓವನ್ ಇಲ್ಲ ಅಂದ್ರೂ ಕುಕ್ಕರ್‌ ಅಥವಾ ಪಾತ್ರೆಯಲ್ಲಿ ಬೇಯಿಸಬಹುದು. ಚಾಕೊಲೇಟ್ ಫ್ಲೇವರ್‌ನ ಈ ಕೇಕ್‌ ನಿಮ್ಮ ಮನೆಯವರಿಗೆಲ್ಲಾ ಖಂಡಿತ ಇಷ್ಟವಾಗುತ್ತದೆ.

ರಾಗಿ ಕೇಕ್‌ಗೆ ಬೇಕಾಗುವ ಸಾಮಗ್ರಿಗಳು 

ರಾಗಿಹಿಟ್ಟು - ಎರಡು ಕಪ್, ಬೆಲ್ಲದ ಪುಡಿ - ಒಂದು ಕಪ್, ಮೊಸರು - ಅರ್ಧ ಕಪ್, ಹಾಲು - ಅರ್ಧ ಕಪ್, ಎಣ್ಣೆ ಅಥವಾ ತುಪ್ಪ - ಕಾಲು ಕಪ್, ವೆನಿಲಾ ಎಸೆನ್ಸ್ - ನಾಲ್ಕು ಹನಿ, ಕೋಕಾ ಪೌಡರ್ - 2ಚಮಚ, ಅಡಿಗೆ ಸೋಡಾ - ಚಿಟಿಕೆ, ಬೇಕಿಂಗ್ ಪೌಡರ್ - ಒಂದು ಟೀ ಚಮಚ

ರಾಗಿ ಕೇಕ್ ಮಾಡುವ ವಿಧಾನ

ಓವನ್ ಹಾಗೂ ಕುಕ್ಕರ್‌ನಲ್ಲಿ ರಾಗಿ ಕೇಕ್‌ ಮಾಡುವುದು ಹೇಗೆ ನೋಡಿ. ನೀವು ಓವೆನ್‌ನಲ್ಲಿ ಕೇಕ್ ಮಾಡಲು ಬಯಸಿದರೆ ಓವೆನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಫ್ರೀ ಹೀಟ್ ಮಾಡಿ. ನೀವು ಕೇಕ್ ಅನ್ನು ಕುಕ್ಕರ್‌ನಲ್ಲಿ ಮಾಡಲು ಬಯಸಿದರೆ ಮೊದಲು ಕುಕ್ಕರ್ ಅನ್ನು ಆವರಿಸಿರುವ ಗ್ಯಾಸ್ಕೆಟ್ ಅನ್ನು ತೆಗೆದುಹಾಕಿ. ಸ್ಟವ್ ಹೊತ್ತಿಸಿ ಕುಕ್ಕರ್ ಇಟ್ಟು ಅದರ ಬುಡಕ್ಕೆ ಉಪ್ಪು ಹಾಕಿ. ಕವರ್ ಮತ್ತು ಪೂರ್ವಭಾವಿಯಾಗಿ ಕಾಯಿಸಲು ಹತ್ತು ನಿಮಿಷಗಳ ಕಾಲ ಸಿಮ್‌ನಲ್ಲಿ ಇರಿಸಿ. ನಂತರ ಕೇಕ್ ಮಿಶ್ರಣ ಇರಿಸಿ. 

ರಾಗಿ ಕೇಕ್‌ಗೆ ಹಿಟ್ಟು ತಯಾರಿಸುವುದು: ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಬೆಲ್ಲದ ಪುಡಿ ಹಾಕಿ. ಮೇಲೆ ಹೇಳಿದಷ್ಟು ಪ್ರಮಾಣದಲ್ಲಿ ಹಾಲು, ಮೊಸರು, ವೆನಿಲ್ಲಾ ಎಸೆನ್ಸ್ ಹಾಗೂ ಎಣ್ಣೆ ಅಥವಾ ತುಪ್ಪ ಸೇರಿಸಿ. ಬೆಲ್ಲದ ಪುಡಿ ಕರಗಿ ಕೆನೆಯಾಗುವವರೆಗೆ ಮಿಶ್ರಣ ಮಾಡಿ. ಈಗ ಈ ರೀತಿ ತಯಾರಿಸಿದ ತೆಳುವಾದ ಮಿಶ್ರಣಕ್ಕೆ ಎಲ್ಲಾ ಪುಡಿಗಳನ್ನು ಸೇರಿಸಿ. ಕಟ್ ಮತ್ತು ಫೋಲ್ಡ್ ವಿಧಾನವನ್ನು ಬಳಸಿ ಚೆನ್ನಾಗಿ ಮಿಶ್ರಣ ಮಾಡಿ. ಅಂದರೆ ರಾಗಿ ಹಿಟ್ಟು, ಕೋಕೊ ಪೌಡರ್, ಅಡಿಗೆ ಸೋಡಾ, ಬೇಕಿಂಗ್ ಪೌಡರ್‌ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದೀರ್ಘಕಾಲದವರೆಗೆ ಹೊರಗೆ ಇಡಬಾರದು. ಕೂಡಲೇ ಬಟರ್ ಪೇಪರ್ ಮತ್ತು ತುಪ್ಪ ಸವರಿದ ಕೇಕ್ ಟಿನ್‌ಗೆ ಹಿಟ್ಟನ್ನು ಸುರಿಯಿರಿ. ಅದನ್ನು ಒಮ್ಮೆ ಟ್ಯಾಪ್ ಮಾಡಿ. ಇದರಿಂದ ಕೇಕ್‌ ನೀಟಾಗಿ ಪಾತ್ರೆಗೆ ಹೊಂದಿಕೊಳ್ಳುತ್ತದೆ. ಇದನ್ನು ಫ್ರಿ ಹೀಟ್ ಮಾಡಿದ ಓವೆನ್‌ ಅಥವಾ ಕುಕ್ಕರ್‌ನಲ್ಲಿ ಹಾಕಿ ಸುಮಾರು 30 ರಿಂದ 40 ನಿಮಿಷಗಳ ಕಾಲ ಬೇಯಿಸಿ.

ಗ್ಯಾಸ್ ಬಳಸುವವರು ಸ್ಟೌ ಅನ್ನು ಸಿಮ್‌ನಲ್ಲಿ ಇರಿಸಲು ಮರೆಯದಿರಿ. ಕೇಕ್ ಸಂಪೂರ್ಣವಾಗಿ ಬೆಂದಿದೆ ಅನ್ನಿಸಿದಾಗ ಬೌಲ್ ಅನ್ನು ಹೊರತೆಗೆಯಿರಿ. ಸಂಪೂರ್ಣವಾಗಿ ತಣ್ಣಗಾದ ನಂತರ ಡಿ-ಮೋಲ್ಡ್. ಬೇಕಾದರೆ ಚಾಕೊಲೇಟ್ ಸಿರಪ್‌ನಿಂದ ಅಲಂಕಾರ ಮಾಡಿ.

Whats_app_banner