ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮಿಷ್ಟದ ವ್ಯಕ್ತಿಗಾಗಿ ಏನಾದ್ರೂ ಸ್ಪೆಷಲ್‌ ರೆಸಿಪಿ ಮಾಡ್ಬೇಕು ಅಂತಿದೀರಾ; ಹಾಗಿದ್ರೆ ಕುರ್‌ಕುರೆ ಪನೀರ್‌ ಪಕೋಡಾ ಟ್ರೈ ಮಾಡಿ

ನಿಮ್ಮಿಷ್ಟದ ವ್ಯಕ್ತಿಗಾಗಿ ಏನಾದ್ರೂ ಸ್ಪೆಷಲ್‌ ರೆಸಿಪಿ ಮಾಡ್ಬೇಕು ಅಂತಿದೀರಾ; ಹಾಗಿದ್ರೆ ಕುರ್‌ಕುರೆ ಪನೀರ್‌ ಪಕೋಡಾ ಟ್ರೈ ಮಾಡಿ

ನಿಮ್ಮ ಸಂಗಾತಿ ಅಥವಾ ಪ್ರೇಮಿಗೆ ಏನಾದ್ರೂ ಸ್ಪೆಷಲ್‌ ಡಿಶ್‌ ಮಾಡಿಕೊಡಬೇಕು ಅಂತ ಅಂದ್ಕೋತಾ ಇದೀರಾ, ಆ ಮೂಲಕ ಅವರನ್ನು ಖುಷಿ ಪಡಿಸುವ ಪ್ಲಾನ್‌ ನಿಮಗಿದ್ರೆ ನೀವು ಪನೀರ್‌ ಪಕೋಡಾ ಟ್ರೈ ಮಾಡಬಹುದು. ಬಹಳ ಸರಳವಾಗಿ ಹಾಗೂ ಥಟ್ಟಂತ ತಯಾರಿಸಬಹುದಾದ ರೆಸಿಪಿ ಇದು. ಹೇಗೆ ಮಾಡೋದು ಅಂತ ನೋಡಿ.

ನೀವಿಷ್ಟಪಟ್ಟ ವ್ಯಕ್ತಿಗಾಗಿ ಏನಾದ್ರೂ ಸ್ಪೆಷಲ್‌ ರೆಸಿಪಿ ಮಾಡ್ಬೇಕು ಅಂತಿದೀರಾ; ಹಾಗಿದ್ರೆ ಕುರ್‌ಕುರೆ ಪನ್ನೀರ್ ಪಕೋಡಾ ಟ್ರೈ ಮಾಡಿ
ನೀವಿಷ್ಟಪಟ್ಟ ವ್ಯಕ್ತಿಗಾಗಿ ಏನಾದ್ರೂ ಸ್ಪೆಷಲ್‌ ರೆಸಿಪಿ ಮಾಡ್ಬೇಕು ಅಂತಿದೀರಾ; ಹಾಗಿದ್ರೆ ಕುರ್‌ಕುರೆ ಪನ್ನೀರ್ ಪಕೋಡಾ ಟ್ರೈ ಮಾಡಿ

ನಮ್ಮ ಪ್ರೀತಿ ಪಾತ್ರರನ್ನು ಮೆಚ್ಚಿಸಲು ನೂರಾರು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಆ ಮೂಲಕ ಅವರ ಮನ ಗೆಲ್ಲುವ ಬಯಕೆ ನಮ್ಮದು. ಈ ಮಾರ್ಗಗಳಲ್ಲಿ ರುಚಿ ರುಚಿಯಾಗಿ ಅಡುಗೆ ಮಾಡುವುದು ಕೂಡ ಒಂದು. ನೀವು ನಿಮ್ಮ ಸಂಗಾತಿಗೆ ಸ್ಪೆಷಲ್‌ ತಿನಿಸುಗಳನ್ನು ತಯಾರಿಸಿ ಖುಷಿ ಪಡಿಸಬೇಕು ಅಂತ ಪ್ಲಾನ್‌ ಮಾಡ್ತಾ ಇದ್ದು, ಏನ್‌ ಮಾಡೋದು ಅಂತ ತಿಳೀತಾ ಇಲ್ವಾ? ಹಾಗಿದ್ರೆ ನೀವು ಕುರ್‌ಕುರೆ ಪನೀರ್‌ ಪಕೋಡಾ ಟ್ರೈ ಮಾಡಬಹುದು. ಇದು ಸೂಪರ್‌ ಸ್ನ್ಯಾಕ್ಸ್‌ ಆಗಿದ್ದು, ಸಂಜೆ ಹೊತ್ತಿಗೆ ನಿಮ್ಮ ಸಂಗಾತಿಯೊಂದಿಗೆ ಕುಳಿತು ಟೈಮ್‌ಪಾಸ್‌ ಮಾಡುವಾಗ ತಿನ್ನಲು ಹೇಳಿ ಮಾಡಿಸಿದ್ದು. ಕುರ್‌ಕುರೆ ಅಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆ ನಿಮ್ಮ ಮನದಲ್ಲಿ ಮೂಡಬಹುದು. ಆದರೆ ಈ ಪಕೋಡ ಖಂಡಿತ ಆರೋಗ್ಯಕ್ಕೆ ಕೆಟ್ಟದ್ದಲ್ಲ. ಇದು ಪ್ರೊಟೀನ್‌ ಸಮೃದ್ಧವಾಗಿದೆ.

ಟ್ರೆಂಡಿಂಗ್​ ಸುದ್ದಿ

ಪನೀರ್‌, ಮಸಾಲೆ ಪದಾರ್ಥಗಳು ಸೇರಿ ಭಿನ್ನ ರುಚಿ ಕೊಡುವುದಂತೂ ಖಂಡಿತ. ನೀವು ಅಡುಗೆ ತಿಳಿಯದವರಾಗಿದ್ರು ಈ ರೆಸಿಪಿ ಟ್ರೈ ಮಾಡಬಹುದು. ಕಾಫಿ, ಟೀ ಜೊತೆ ಇದು ಸೂಪರ್‌ ಕಾಂಬಿನೇಷನ್‌.

ಕುರ್‌ಕುರೆ ಪನೀರ್‌ ಪಕೋಡಾ

ಬೇಕಾಗುವ ಸಾಮಗ್ರಿಗಳು: ಪನೀರ್‌ - 250 ಗ್ರಾಂ, ಕಡಲೆಹಿಟ್ಟು - 1 ಕಪ್‌, ಖಾರದ ಪುಡಿ - 1 ಟೀ ಚಮಚ, ಅರಿಸಿನ ಪುಡಿ - ಅರ್ಧ ಚಮಚ, ಗರಂ ಮಸಾಲೆ - 1 ಚಮಚ, ಚಾಟ್‌ ಮಸಾಲೆ - 1 ಚಮಚ, ಎಣ್ಣೆ - ಕರಿಯಲು, ಉಪ್ಪು - ರುಚಿಗೆ

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಗರಂ ಮಸಾಲೆ, ಖಾರದಪುಡಿ, ಅರಿಸಿನ ಪುಡಿ, ಚಾಟ್‌ ಮಸಾಲೆ, ಕಡಲೆಹಿಟ್ಟು ಹಾಗೂ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಿ. ಈಗ ಕಾರ್ನ್‌ ಫ್ಲೇಕ್ಸ್‌ಗಳನ್ನು ಪುಡಿ ಮಾಡಿ, ಕಾರ್ನ್‌ ಫ್ಲೇಕ್ಸ್‌ ಕ್ರಂಚ್‌ ತಯಾರಿಸಿಕೊಳ್ಳಿ. ಪ್ಯಾನ್‌ವೊಂದರಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಪನೀರ್‌ ಕ್ಯೂಬ್‌ಗಳನ್ನು ತಯಾರಿಸಿಕೊಂಡ ಹಿಟ್ಟಿನಲ್ಲಿ ಅದ್ದಿ, ಅದನ್ನು ಕಾರ್ನ್‌ ಫ್ಲೇಕ್ಸ್‌ ಕ್ರಂಚ್‌ನಲ್ಲಿ ಅದ್ದಿ. ಇದನ್ನು ಎಣ್ಣೆಯಲ್ಲಿ ಬಣ್ಣ ಬದಲಾಗುವವರೆಗೆ ಕರಿಯಿರಿ. ಇದನ್ನು ನಿಮ್ಮಿಷ್ಟದ ಸಾಸ್‌ ಜೊತೆ ಅದ್ದಿಕೊಂಡು ತಿನ್ನಬಹುದು.

ಇದನ್ನೂ ಓದಿ

ಬ್ರೇಕ್‌ಫಾಸ್ಟ್‌ಗೆ ಏನ್ಮಾಡೋದು ಅನ್ನೋ ಚಿಂತೆ ಬಿಡಿ, ಸಿಂಪಲ್‌ ಆಗಿ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ, ರೆಸಿಪಿ ಇಲ್ಲಿದೆ

Cabbage Pulao Recipe: ಮನೆಯಲ್ಲಿ ಅಡುಗೆ ಮಾಡ್ಕೊಂಡು ತಿನ್ನೋರಿಗೆ ಪ್ರತಿದಿನ ಬೆಳಗಾದ್ರೆ ಏನಪ್ಪಾ ತಿಂಡಿ ಮಾಡೋದು ಅನ್ನೋ ಚಿಂತೆ. ಅದ್ರಲ್ಲೂ ಈ ಗಡಿಬಿಡಿಯ ಬದುಕಿನಲ್ಲಿ ಗಂಟೆಗಟ್ಟಲೆ ಗ್ಯಾಸ್‌ ಸ್ಟೌ ಮುಂದೆ ನಿಲ್ಲುವಷ್ಟು ಸಮಯ ಯಾರಿಗೂ ಇಲ್ಲ. ನೀವು ಬ್ರೇಕ್‌ಫಾಸ್ಟ್‌ಗೆ ಡಿಫ್ರೆಂಟಾಗಿ, ಬೇಗ ರೆಡಿ ಆಗೋ ತಿಂಡಿ ಹುಡುಕ್ತಾ ಇದ್ರೆ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ