ಥಟ್‌ ಅಂತ ತಯಾರಾಗೋ, ಡಿಫ್ರೆಂಟ್‌ ಟೇಸ್ಟ್‌ ಇರೋ ಆಲೂ ಪಾಲಕ್‌ ಪರೋಟವನ್ನು ಮನೆಯಲ್ಲೂ ಮಾಡಬಹುದು; ರೆಸಿಪಿ ಇಲ್ಲಿದೆ-food recipe nutritious full of aloo palak stuffed paratha can be prepared easily in five minutes here is the steps rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಥಟ್‌ ಅಂತ ತಯಾರಾಗೋ, ಡಿಫ್ರೆಂಟ್‌ ಟೇಸ್ಟ್‌ ಇರೋ ಆಲೂ ಪಾಲಕ್‌ ಪರೋಟವನ್ನು ಮನೆಯಲ್ಲೂ ಮಾಡಬಹುದು; ರೆಸಿಪಿ ಇಲ್ಲಿದೆ

ಥಟ್‌ ಅಂತ ತಯಾರಾಗೋ, ಡಿಫ್ರೆಂಟ್‌ ಟೇಸ್ಟ್‌ ಇರೋ ಆಲೂ ಪಾಲಕ್‌ ಪರೋಟವನ್ನು ಮನೆಯಲ್ಲೂ ಮಾಡಬಹುದು; ರೆಸಿಪಿ ಇಲ್ಲಿದೆ

ಅದೇ ರೊಟ್ಟಿ, ಅದೇ ಚಪಾತಿ ತಿಂದು ಬೋರಾಗಿದ್ಯಾ..? ಹೊಸ ರೀತಿಯ ಪರೋಟಾದ ಜೊತೆಯಲ್ಲಿ ಸಾಕಷ್ಟು ಪೌಷ್ಠಿಕಾಂಶ ಕೂಡ ದೇಹಕ್ಕೆ ಸಿಗುತ್ತೆ ಎಂದರೆ ಬೇಡ ಎನ್ನುವವರು ಯಾರಿದ್ದಾರೆ ಹೇಳಿ..? ನೀವು ಕೂಡ ಹೊಸ ಹೊಸ ರುಚಿಯ ಹುಡುಕಾಟದಲ್ಲಿದ್ದರೆ ಸಿಂಪಲ್​ ಹಾಗೂ ಟೇಸ್ಟಿಯಾಗಿ ಆಲೂ ಪಾಲಕ್​ ಪರೋಟಾ ಮಾಡೋದು ಹೇಗೆ ಅನ್ನೋದನ್ನು ನಾವು ಕಲಿಸಿಕೊಡ್ತೀವಿ.

ಆಲೂ ಪಾಲಕ್‌ ಪರೋಟ
ಆಲೂ ಪಾಲಕ್‌ ಪರೋಟ (NDTV )

ಯಾವಾಗಲೂ ಚಪಾತಿ ತಿಂದು ತಿಂದು ಬೇಸರ ಬಂದಿರಬಹುದು ಅಲ್ವೇ..? ಬಾಯಿಗೂ ರುಚಿ ಎನಿಸಿ ಆರೋಗ್ಯಕ್ಕೂ ಹಿತ ಎನಿಸಬೇಕು ಎಂದರೆ ನೀವು ಸ್ಟಫ್ಡ್​ ಪರೋಟಾಗಳನ್ನು ಮನೆಯಲ್ಲಿ ಟ್ರೈ ಮಾಡಲೇಬೇಕು. ನಿಮ್ಮ ನೆಚ್ಚಿನ ಹೂರಣಗಳನ್ನು ಪರೋಟಾದ ಒಳಗೆ ಹಾಕಿ ತುಪ್ಪದ ಕಾಯಿಸಿ ತಿಂದರೆ ಆಹಾ.. ಸ್ವರ್ಗಕ್ಕೆ ಮೂರೇ ಗೇಣು..! ಕೆಲವರು ಆಲೂಗಡ್ಡೆಯ ಸ್ಟಫ್​ ಹಾಕುತ್ತಾರೆ. ಇನ್ನೂ ಕೆಲವರು ಮೂಲಂಗಿ ಬಳಕೆ ಮಾಡುತ್ತಾರೆ, ಮತ್ತೂ ಕೆಲವರು ಪನ್ನೀರನ್ನು ಬಳಕೆ ಮಾಡುತ್ತಾರೆ. ಇಂದು ನಾವು ನಿಮಗೆ ಪಾಲಕ್​ ಹಾಗೂ ಆಲೂಗಡ್ಡೆಯ ಸ್ಟಫ್​ನಿಂದ ತಯಾರಿಸುವ ರುಚಿಕರವಾದ ಆಲೂ ಸ್ಟಫ್ಡ್​ ಪರೋಟಾ ಮಾಡುವುದು ಹೇಗೆ ಎನ್ನುವುದನ್ನು ಕಲಿಸಿಕೊಡುತ್ತೇವೆ.

ಆಲೂ ಪಾಲಕ್​ ಪರೋಟಾವು ಬಾಯಿಗೆ ರುಚಿ ನೀಡುವುದರ ಜೊತೆಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನವನ್ನೂ ಹೊಂದಿದೆ. ಆಲೂಗಡ್ಡೆಯ ಹೂರಣವನ್ನು ಮಾತ್ರ ತುಂಬಿಸಿ ಅನೇಕರು ಪರೋಟಾವನ್ನು ತಯಾರಿಸುತ್ತಾರೆ. ಆದರೆ ಆಲುಗಡ್ಡೆಯ ಜೊತೆಯಲ್ಲಿ ನೀವು ಪಾಲಕ್​ ಕೂಡ ಬಳಕೆ ಮಾಡಿದಲ್ಲಿ ನೀವು ಹೆಚ್ಚಿನ ಪೌಷ್ಠಿಕಾಂಶವನ್ನು ಪಡೆಯಬಹುದಾಗಿದೆ. ಪಾಲಕ್​ನಲ್ಲಿ ಇರುವ ಕಬ್ಬಿಣಾಂಶ, ವಿಟಮಿನ್​ಗಳು ನಿಮ್ಮ ದೇಹಕ್ಕೆ ಸಿಗಲಿದೆ.

ಆಲೂ ಪಾಲಕ್ ಪರೋಟಾ ಆರೋಗ್ಯಕ್ಕೆ ಒಳ್ಳೆಯದೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದನ್ನು ತಯಾರಿಸುವಾಗ ಅತಿಯಾದ ಎಣ್ಣೆ ಅಥವಾ ತುಪ್ಪದ ಬಳಕೆಯ ಅಗತ್ಯ ಇರುವುದಿಲ್ಲ. ಅಲ್ಲದೇ ಇದರಲ್ಲಿ ಹೆಚ್ಚಾಗಿ ಗೋಧಿ ಹಿಟ್ಟನ್ನು ಹಾಗೂ ಕಡಿಮೆ ಪ್ರಮಾಣದಲ್ಲಿ ಮೈದಾ ಹಿಟ್ಟನ್ನು ಬಳಕೆ ಮಾಡುವುದರಿಂದ ಮೈದಾದಿಂದ ಆರೋಗ್ಯ ಕೆಡಬಹುದು ಎಂಬ ಭಯ ಕೂಡ ಇರುವುದಿಲ್ಲ. ವಿಟಮಿನ್​ ಬಿ ಹಾಗೂ ಇ, ಕ್ಯಾಲ್ಶಿಯಂ, ಮೆಗ್ನೀಷಿಯಂ ಹಾಗೂ ಪೊಟ್ಯಾಷಿಯಂನ್ನು ನೀವು ಹೇರಳವಾಗಿ ಪಡೆಯಲಿದ್ದೀರಿ. ಆಲೂಗಡ್ಡೆಯಲ್ಲಿರುವ ಫೈಬರ್​ ಅಂಶ, ಆಂಟಿ ಆಕ್ಸಿಡಂಟ್​ಗಳು ಹಾಗೂ ಪೋಟ್ಯಾಷಿಯಂ ಅಂಶದ ಲಾಭ ಕೂಡ ನಿಮಗೆ ಸಿಗಲಿದೆ.

ಆಲೂ ಪಾಲಕ್​ ಪರೋಟಾವನ್ನು ತಯಾರಿಸುವುದು ತುಂಬಾನೇ ಸುಲಭ. ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳ ಬಗ್ಗೆ ತಿಳಿದುಕೊಳ್ಳೋಣ

ಬೇಕಾಗುವ ಸಾಮಗ್ರಿಗಳು : ಗೋಧಿ ಹಿಟ್ಟು,ಮೈದಾಹಿಟ್ಟು ಸ್ವಲ್ಪ,ಎಳ್ಳು, ಆಲೂಗಡ್ಡೆ, ಪಾಲಕ್​, ಈರುಳ್ಳಿ, ಬೆಳ್ಳುಳ್ಳಿ, ಮಸಾಲೆ ಪದಾರ್ಥಗಳು, ಎಣ್ಣೆ, ನೀರು, ರುಚಿಗೆ ತಕ್ಕಷ್ಟು ಉಪ್ಪು

1. ಒಂದು ಕಪ್​ ಗೋಧಿ ಹಿಟ್ಟಿಗೆ ಸ್ವಲ್ಪೇ ಸ್ವಲ್ಪ ಮೈದಾ ಹಿಟ್ಟನ್ನು ಸೇರಿಸಿಕೊಳ್ಳಿ.ಇದಕ್ಕೆ ಎಳ್ಳು ಸೇರಿಸಿ, ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ. ಬಳಿಕ ಹಿಟ್ಟು ಹದ ಮಾಡಲು ಬೇಕಾಗುವಷ್ಟು ಉಗುರು ಬೆಚ್ಚಗಿನ ನೀರನ್ನು ಹಾಕಿ ಹಿಟ್ಟನ್ನು ಕಲಿಸಿಟ್ಟುಕೊಳ್ಳಿ. ಸ್ವಲ್ಪ ಸಮಯದವರೆಗೆ ಹಿಟ್ಟನ್ನು ಮುಚ್ಚಿ ಇಡಿ.

1. ಸಂಪೂರ್ಣ ಗೋಧಿ ಹಿಟ್ಟನ್ನು ಸ್ವಲ್ಪ ಮೈದಾ, ಎಳ್ಳು, ತುಪ್ಪ/ಎಣ್ಣೆ ಮತ್ತು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮೃದುವಾದ ಹಿಟ್ಟನ್ನು ತಯಾರಿಸಿ. ಬೆರೆಸಿ, ಮುಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಪಕ್ಕಕ್ಕೆ ಇರಿಸಿ.

2.ಈಗ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಮಧ್ಯಮ ಉರಿಯಲ್ಲಿ ಗ್ಯಾಸ್​ ಆನ್​ ಮಾಡಿ. ಬಾಣಲೆಗೆ ಸ್ವಲ್ಪ ಎಣ್ಣೆ, ಪುಡಿ ಮಾಡಿದ ಬೆಳ್ಳುಳ್ಳಿ, ಲವಂಗವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಇದೇ ಪಾತ್ರೆಗೆ ಸಣ್ಣಗೆ ಕತ್ತರಿಸಿಟ್ಟ ಈರುಳ್ಳಿಯನ್ನು ಹಾಕಿ. ಬಳಿಕ ಕಾರದ ಪುಡಿ ಮತ್ತು ಕತ್ತರಿಸಿಟ್ಟ ಪಾಲಕ್​ ಸೊಪ್ಪನ್ನು ಸೇರಿಸಿ,ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಕೆಲವು ನಿಮಿಷಗಳ ಕಾಲ ಇದನ್ನು ಬೇಯಲು ಬಿಡಿ.

3. ಈಗಾಗಲೇ ಕುಕ್ಕರ್​ನಲ್ಲಿ ಬೇಯಿಸಿ ಬಳಿಕ ಹಿಸುಕಿಟ್ಟ ಆಲೂಗಡ್ಡೆ ಹಾಗೂ ಚಾಟ್​ ಮಸಾಲಾವನ್ನು ಪಾಲಕ್​ ಮಿಶ್ರಣದ ಜೊತೆ ಸೇರಿಸಿ. ಈಗ ನೀವು ಗ್ಯಾಸ್​ ಬಂದ್​ ಮಾಡಬಹುದು. ಈ ಮಿಶ್ರಣ ರೆಡಿಯಾದ ಬಳಿಕ ನೀವು ಆಗಲೇ ಮಾಡಿಟ್ಟುಕೊಂಡ ಪರೋಟಾ ಹಿಟ್ಟನ್ನು ನಿಂಬು ಗಾತ್ರ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಇವುಗಳ ಒಳಗೆ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಲಟ್ಟಿಸಿ.

4.ಕಾದ ತವಾಗೆ ಸ್ವಲ್ಪ ಬೆಣ್ಣೆಯನ್ನು ಹಾಕಿ ಬಳಿ ಪರೋಟಾದ ಎರಡೂ ಬದಿಯನ್ನು ಚೆನ್ನಾಗಿ ಕಾಯಿಸಿ. ಬಿಸಿಬಿಸಿಯಾದ ಪರೋಟಾವನ್ನು ನೀವು ಚಟ್ನಿಯ ಜೊತೆಯಲ್ಲಿ ಸರ್ವ್​ ಮಾಡಬಹುದು. ಮೊಸರು, ಉಪ್ಪಿನಕಾಯಿ, ಚಟ್ನಿಯ ಜೊತೆಯಲ್ಲಿ ನೀವು ಆಲೂ ಪಾಲಕ್​ ಪರೋಟಾವನ್ನು ಎಂಜಾಯ್​ ಮಾಡಬಹುದಾಗಿದೆ.

mysore-dasara_Entry_Point