Keema Ball Sambar: ಮೊಟ್ಟೆ, ಕಡ್ಲೆ ಇಲ್ಲದೆ ತಯಾರಿಸಿ ರುಚಿಯಾದ ಕೈಮಾ ಉಂಡೆ ಸಾಂಬಾರ್; ರೆಸಿಪಿ ಕಲಿತುಕೊಳ್ಳಿ
Keema Ball Sambar: ಕೈಮಾ ಉಂಡೆ ಸಾಂಬಾರ್, ನಾನ್‌ವೆಜ್‌ಪ್ರಿಯರ ಮೆಚ್ಚಿನ ಡಿಶ್. ಕೆಲವರು ಇದನ್ನು ತಯಾರಿಸಲು ಮೊಟ್ಟೆ, ಕಡ್ಲೆ ಬಳಸುತ್ತಾರೆ. ಆದರೆ ಇವೆರಡೂ ಇಲ್ಲದೆ ಕೈಮಾ ಸಾಂಬಾರ್ ತಯಾರಿಸಬಹುದು.
Keema Ball Sambar: ನಾನ್‌ವೆಜ್ ಪ್ರಿಯರಿಗೆ ತಿನ್ನಲು ಸಾಕಷ್ಟು ಆಯ್ಕೆಗಳಿವೆ. ನಾನಾ ರೀತಿಯ ಫುಡ್‌ಗಳಿದ್ದರೂ ಕೆಲವೇ ಕೆಲವು ಮಾತ್ರ ಎಂದೆಂದಿಗೂ ಭೋಜನಪ್ರಿಯರ ಮೋಸ್ಟ್ ಫೇವರೆಟ್ ಆಗಿರುತ್ತದೆ. ಅದರಲ್ಲಿ ಕೈಮಾ ಸಾಂಬಾರ್ ಕೂಡಾ ಒಂದು. ಅದರಲ್ಲೂ ಮಟನ್ ಕೈಮಾಗೆ ಸರಿಸಮನಾದ ಡಿಶ್ ಇಲ್ಲವೇ ಇಲ್ಲ ಬಿಡಿ.
ಯಾವುದಾದರೂ ಫಂಕ್ಷನ್‌ನಲ್ಲಿ ನಾನ್‌ವೆಜ್ ಅಡುಗೆ ಇದೆ ಎಂದರೆ ಅಲ್ಲಿ ಕೈಮಾಗೆ ವಿಶೇಷ ಸ್ಥಾನ ಇದ್ದೇ ಇರುತ್ತದೆ. ಎಲ್ಲಾ ಸಾಮಗ್ರಿಗಳಿದ್ದರೆ ಮನೆಯಲ್ಲೇ ನೀವು ರುಚಿಯಾದ ಕೈಮಾ ತಯಾರಿಸಬಹುದು. ಕೆಲವರು ಕೈಮಾ ಸಾಂಬಾರ್ ತಯಾರಿಸಲು ಮೊಟ್ಟೆ, ಕಡ್ಲೆ ಬಳಸುತ್ತಾರೆ. ಆದರೆ ಅವೆರಡೂ ಇಲ್ಲದೆ ತಯಾರಿಸಬಹುದು.
ಕೈಮಾ ಸಾಂಬಾರ್ ತಯಾರಿಸಲು ಬೇಕಾದ ಸಾಮಗ್ರಿಗಳು
- ಮಟನ್ ಕೈಮಾ - 1/2 ಕಿಲೋ
- ಧನಿಯಾ - 1.5 ಟೀ ಸ್ಪೂನ್
- ಲವಂಗ - 12
- ಚೆಕ್ಕೆ - 1/2 ಇಂಚು
- ಏಲಕ್ಕಿ - 6
- ಶುಂಠಿ ಪೇಸ್ಟ್ - 1 ಟೀ ಸ್ಪೂನ್
- ಬೆಳ್ಳುಳ್ಳಿ - 1 ಟೀ ಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಕೆಂಪು ಮೆಣಸಿನ ಪುಡಿ - 2 ಸ್ಪೂನ್
- ಈರುಳ್ಳಿ - 2
- ಟೊಮೆಟೊ - 2
- ಎಣ್ಣೆ - 4 ಟೇಬಲ್ ಸ್ಪೂನ್
- ಕೊತ್ತಂಬರಿ ಸೊಪ್ಪು - 1/2 ಕಪ್
ಕೈಮಾ ಸಾಂಬಾರ್ ತಯಾರಿಸುವ ವಿಧಾನ
ಮೊದಲು ಕೈಮಾವನ್ನು ಸ್ವಚ್ಛವಾಗಿ ತೊಳೆದು ನೀರು ಸೋರಲು ಬಿಡಿ.
- ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ, ಧನಿಯಾ, ಬೆಳ್ಳುಳ್ಳಿ, ಶುಂಠಿ, ಚೆಕ್ಕೆ, ಲವಂಗ, ಏಲಕ್ಕಿ ಎಲ್ಲವನ್ನೂ ಸೇರಿಸಿ
2. ಜೊತೆಗೆ ಸ್ವಲ್ಪ ಉಪ್ಪು, ಅಚ್ಚ ಖಾರದ ಪುಡಿ ಸೇರಿಸಿ ತರಿಯಾಗಿ ಗ್ರೈಂಡ್ ಮಾಡಿಕೊಳ್ಳಿ. ( ನೀರು ಸೇರಿಸಬೇಡಿ)
3.ಒಂದು ತವಾದಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಈರುಳ್ಳಿ, ಟೊಮೆಟೊ ಸೇರಿಸಿ ಹುರಿಯಿರಿ.
4. ಇದನ್ನು ಮೊದಲೇ ಗ್ರೈಂಡ್ ಮಾಡಿಕೊಂಡ ಮಿಶ್ರಣದೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
5.ಇದರಲ್ಲಿ 2 ಟೇಬಲ್ ಸ್ಪೂನ್ ಮಸಾಲೆ ತೆಗೆದು ಪ್ರತ್ಯೇಕವಾಗಿಡಿ ಅದರೊಂದಿಗೆ ಕೈಮಾ, ಸ್ವಲ್ಪ ಅಚ್ಚ ಖಾರದ ಪುಡಿ ಸೇರಿಸಿ.
6.ಈ ಮಿಶ್ರಣವನ್ನು ಇನ್ನೊಬ್ಬ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ.
7.ಕೈಗೆ ಎಣ್ಣೆ ಸವರಿ ಈ ಮಿಶ್ರಣವನ್ನು ಉಂಡೆಗಳನ್ನಾಗಿ ಮಾಡಿಕೊಳ್ಳಿ.
8.ಒಂದು ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ನಿಧಾನವಾಗಿ ಒಂದೊಂದೇ ಕೈಮಾ ಉಂಡೆಗಳನ್ನು ಸೇರಿಸಿ ನಿಧಾನವಾಗಿ ಸುತ್ತಲೂ ರೋಸ್ಟ್ ಮಾಡಿಕೊಳ್ಳಿ.
9.ಜೊತೆಗೆ ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು, ಮೊದಲೇ ಗ್ರೈಂಡ್ ಮಾಡಿಕೊಂಡ ಮಸಾಲೆ ಸೇರಿಸಿ.
10.ಉಪ್ಪು ಹಾಗೂ ನೀರನ್ನು ಅಡ್ಜೆಸ್ಟ್ ಮಾಡಿಕೊಂಡು 20 ನಿಮಿಷ ಕುದಿಸಿದರೆ ಕೈಮಾ ಸಾಂಬಾರ್ ರೆಡಿ.
11. ರೊಟ್ಟಿ, ಚಪಾತಿ, ಅನ್ನ, ಮುದ್ದೆಯೊಂದಿಗೆ ಸಖತ್ ಕಾಂಬಿನೇಷನ್ ಈ ಕೈಮಾ ಉಂಡೆ ಸಾಂಬಾರ್.
ವಿಭಾಗ