ಕಾಶಿ ಹಲ್ವಾದ ಟೇಸ್ಟ್‌ಗೆ ಫಿದಾ ಆಗಿದ್ದೀರಾ, ಮತ್ತೆ ಮತ್ತೆ ತಿನ್ನಬೇಕು ಅನ್ನಿಸ್ತಿದ್ಯಾ; ಸಿಂಪಲ್ ಆಗಿ ಮನೆಯಲ್ಲೇ ಮಾಡಬಹುದು ನೋಡಿ
ಕಾಶಿ ಹಲ್ವಾ ಹೆಸರು ಕೇಳಿದ್ರೆ ಹಲವರ ಬಾಯಲ್ಲಿ ನೀರೂರುತ್ತೆ. ಕರ್ನಾಟಕದ ವಿಶೇಷ ಸಿಹಿ ತಿನಿಸುಗಳ ಪಟ್ಟಿಯಲ್ಲಿ ಇದಕ್ಕೆ ಅಗ್ರಸ್ಥಾನ. ನೀವು ಎಲ್ಲಾದರೂ ಕಾಶಿ ಹಲ್ವಾ ತಿಂದಿದ್ದು, ಮತ್ತೆ ಮತ್ತೆ ತಿನ್ನಬೇಕು ಅನ್ನಿಸಿದರೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು. ಬೂದುಗುಂಬಳ ಕಾಯಿಯಿಂದ ತಯಾರಿಸಬಹುದಾದ ಈ ಸಿಹಿತಿಂಡಿ ಮಾಡುವ ವಿಧಾನ ಇಲ್ಲಿದೆ.
ವಿಭಿನ್ನ ರುಚಿ, ಪರಿಮಳ ಹೊಂದಿರುವ ಕಾಶಿ ಹಲ್ವಾ ಹಲವರಿಗೆ ಫೇವರಿಟ್. ಶುಭ ಸಮಾರಂಭಗಳಲ್ಲಿ ವಿಶೇಷವಾಗಿ ಇದನ್ನು ತಯಾರಿಸಲಾಗುತ್ತದೆ. ಸಿಹಿ ತಿನಿಸಿನ ಪ್ರೇಮಿಗಳಿಗೆ ಇದು ಅಚ್ಚುಮೆಚ್ಚು. ಬೂದುಕುಂಬಳ ಕಾಯಿಯಿಂದ ತಯಾರಿಸುವ ಈ ವಿಶೇಷ ತಿನಿಸನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸದೇ ಇರುವುದಿಲ್ಲ. ಮಕ್ಕಳು ಕೂಡ ಕಾಶಿಹಲ್ವಾವನ್ನು ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಬಹುದಾದ ಈ ಸಿಹಿ ತಿನಿಸನ್ನು ಅರ್ಧಗಂಟೆ ಒಳಗೆ ಮಾಡಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳು ಕೂಡ ಕಡಿಮೆ. ಇದನ್ನು ಮಾಡುವ ವಿಧಾನ ಇಲ್ಲಿದೆ.
ಕಾಶಿ ಹಲ್ವಾ ರೆಸಿಪಿಗೆ ಬೇಕಾಗುವ ಸಾಮಗ್ರಿಗಳು
ಚಿಕ್ಕದಾಗಿ ತುರಿದು ಇಟ್ಟುಕೊಂಡ ಬೂದು ಕುಂಬಳಕಾಯಿ - ಎರಡು ಕಪ್
ಸಕ್ಕರೆ - ಒಂದು ಕಪ್
ಕೇಸರಿ ದಳಗಳು - 10
ಗೋಡಂಬಿ - ಕಾಲು ಕಪ್
ತುಪ್ಪ - ಮೂರು ಚಮಚ
ಕಾಶಿ ಹಲ್ವಾ ತಯಾರಿಸುವ ವಿಧಾನ
1. ಕೇಸರಿ ದಳಗಳನ್ನು ಎರಡು ಚಮಚ ಬೆಚ್ಚಗಿನ ನೀರಿನಲ್ಲಿ ನೆನೆಸಿ.
2. ಈಗ ಆಳವಾದ, ದಪ್ಪ ಬಟ್ಟಲನ್ನು ತೆಗೆದುಕೊಂಡು ಅದನ್ನು ಒಲೆಯ ಮೇಲೆ ಇರಿಸಿ ಮತ್ತು ತುಪ್ಪ ಸೇರಿಸಿ.
3. ತುಪ್ಪಕ್ಕೆ ಗೋಡಂಬಿ ಸೇರಿಸಿ, ಹುರಿದಿಟ್ಟುಕೊಳ್ಳಿ.
4. ಗೋಡಂಬಿಯನ್ನು ಹೊರತೆಗೆದು ಪಕ್ಕಕ್ಕೆ ಇರಿಸಿ.
5. ಈಗ ತುರಿದ ಸೋರೆಕಾಯಿಯನ್ನು ಅದೇ ತುಪ್ಪದಲ್ಲಿ ಹುರಿಯಿರಿ.
6. ಕಡಿಮೆ ಉರಿಯಲ್ಲಿ ಹುರಿಯುವುದರಿಂದ ಕಮರು ವಾಸನೆ ಬರುವುದಿಲ್ಲ.
7. ಬೂದು ಕುಂಬಳಕಾಯಿ ಮೃದುವಾಗುವವರೆಗೆ ಮತ್ತು ಎಲ್ಲಾ ನೀರು ಹೀರಿಕೊಳ್ಳುವವರೆಗೆ ತಿರುಗಿಸುತ್ತಿರಿ.
8. ಹೆಚ್ಚು ನೀರು ಸೇರಿಸಿದರೆ ಅದು ಮೃದುವಾಗುತ್ತದೆ.
9. ಆ ಸಮಯದಲ್ಲಿ ಮೊದಲೇ ನೆನೆಸಿದ ಕೇಸರಿ ದಳಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ನಂತರ ಸಕ್ಕರೆ ಸೇರಿಸಿ ಮತ್ತು ಮಿಶ್ರಣ ಮಾಡಿ.
10. ಸಕ್ಕರೆ ಕರಗಿ ನೀರಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸುತ್ತಿರಿ.
11. ಬಹುತೇಕ ಹಲ್ವಾ ಗಟ್ಟಿ ರೂಪಕ್ಕೆ ಬಂದಾಗ ಸ್ಟವ್ ಆಫ್ ಮಾಡಿ.
12. ಮೊದಲೇ ಹುರಿದ ಗೋಡಂಬಿಯನ್ನು ಸಿಂಪಡಿಸಿ. ಅಷ್ಟೇ, ರುಚಿಯಾದ ಕಾಶಿ ಹಲ್ವಾ ರೆಡಿ. ಕುಂಬಳಕಾಯಿ, ತುಪ್ಪ, ಕೇಸರಿ ಪರಿಮಳಕ್ಕೆ ನೀವು ಮನಸೋಲೋದು ಖಂಡಿತ.
ಕುಂಬಳಕಾಯಿ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಕಾಶಿಹಲ್ವಾ ಬಳಸುವಾಗ ನೀವು ಬಿಳಿ ಸಕ್ಕರೆಗಿಂತ ಕಂದು ಸಕ್ಕರೆ ಬಳಸುವುದು ಉತ್ತಮ. ಯಾಕೆಂದರೆ ಬಿಳಿ ಸಕ್ಕರೆ ಆರೋಗ್ಯಕ್ಕೆ ಹಾನಿಕರ. ಹಾಗಾಗಿ ಕಂದು ಸಕ್ಕರೆ ಬಳಸಿದರೇ ಉತ್ತಮ. ಕಾಶಿ ಹಲ್ವಾವನ್ನು ನೈವೇದ್ಯದ ರೂಪದಲ್ಲೂ ಬಳಸುತ್ತಾರೆ.
ಕುಂಬಳಕಾಯಿಯ ಆಹಾರವನ್ನು ಆಗಾಗ ತಿನ್ನುತ್ತಿರಬೇಕು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವೈರಸ್ಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಕ್ಯಾರೆಟ್ ಹಲ್ವಾ, ಬೀಟ್ರೂಟ್ ಹಲ್ವಾಗಳಂತಹ ಕುಂಬಳಕಾಯಿ ಹಲ್ವಾವನ್ನು ಒಮ್ಮೆ ಪ್ರಯತ್ನಿಸಿ. ಇದು ತುಂಬಾ ರುಚಿಕರವಾಗಿದೆ.
ವಿಭಾಗ