ಮದುವೆ ಆದ ಮೇಲೆ ಹೊಂದಿಕೊಂಡು ಹೋಗುವುದು ಮುಖ್ಯ; ನಿಮ್ಮ ಸಂಗಾತಿ ಜೊತೆಗೆ ಜಗಳವಾಗದಿರಲು ಈ ರೀತಿ ಮಾಡಿ
Relationship Tips: ಗಂಡ ಹೆಂಡತಿ ಅಂದಮೇಲೆ ಸಣ್ಣ ಪುಟ್ಟ ಜಗಳ ಮನಸ್ತಾಪ ಆಗುತ್ತಾ ಮತ್ತೆ ಸರಿಯಾಗುತ್ತಾ ಜೀವನ ಸಾಗುತ್ತದೆ. ಆದರೆ ಕೆಲವೊಮ್ಮೆ ಇದೇ ಜಗಳ ದೊಡ್ಡ ಪ್ರಮಾಣದಲ್ಲಾಗುತ್ತದೆ. ನಂತರ ಇದು ಅವರ ವಿಚ್ಛೆದನಕ್ಕೂ ಕಾರಣವಾಗುತ್ತದೆ. ಆದರೆ ಜೀವನದಲ್ಲಿ ಹೊಂದಾಣಿಕೆ ತುಂಬಾ ಮುಖ್ಯ. ಹೇಗೆ ಹೊಂದಿಕೊಳ್ಳಬೇಕು ಎಂಬುದು ಇಲ್ಲಿದೆ.
ಹೊಂದಾಣಿಕೆ ಎಂಬುದು ಸಂಬಂಧದಲ್ಲಿ ಸಮಾನವಾಗಿ ಇರಬೇಕು ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅವರಿಗೆ ಏನು ಬೇಕು? ಏನು ಬೇಡ ಎನ್ನುವುದನ್ನು ತಿಳಿದುಕೊಂಡು ಜೀವನ ಮಾಡಬೇಕು. ಇಲ್ಲವಾದರೆ ಆಗೋದಿಲ್ಲ. ಹೊಂದಾಣಿಕೆ ಇಲ್ಲದಾಗ ಎರಡು ದೋಣಿಗಳ ಮೇಲೆ ಒಬ್ಬನೇ ಕಾಲಿಟ್ಟು ಸಾಗಿದಂತೆ ಆಗುತ್ತದೆ. ಜೀವನ ಎಂಬ ನೌಕೆಯನ್ನು ಇಬ್ಬರೂ ಜೊತೆಯಾಗಿ ಸಾಗಿಸಬೇಕು. ಯಾವಾಗಲೂ ನಿಮ್ಮ ಸಂಗಾತಿಯನ್ನು ಒಪ್ಪಿಸಲು ಪ್ರಯತ್ನ ಮಾಡಬೇಡಿ. ಕೆಲವೊಮ್ಮೆ ನೀವೇ ಅವರು ಹೇಳಿದ್ದಕ್ಕೆ ಒಪ್ಪಿಕೊಳ್ಳಿ.
ಹೊಂದಾಣಿಕೆ ಮುಖ್ಯ
ನಿಮ್ಮ ಮನಸಿನಲ್ಲಿ ಯಾವಾಗಲೂ ಇದೊಂದು ಆಲೋಚನೆ ಇರಲೇಬೇಕು. ಮದುವೆ ಎಂಬುದು ಶಾಶ್ವತ ನಮ್ಮ ಬಾಳ ಕೊನೆಯವರೆಗೂ ಸಂಗಾತಿಯಾಗಿ ಇರುವವರು ನಮ್ಮ ಪತಿ ಅಥವಾ ಪತ್ನಿಯೇ ಆಗಿರುತ್ತಾರೆ. ಇನ್ನು ನಿಮ್ಮ ಸ್ವಂತ ಮಕ್ಕಳೇ ಇದ್ದರೂ ಸಹ ಅವರು ನಿಮಗೆ ಶಾಶ್ವತ ಅಲ್ಲ. ಹೀಗಿರುವಾಗ ನಿಮ್ಮ ಸಂಗಾತಿ ಜೊತೆಗೆ ನೀವು ಹೊಂದಿಕೊಂಡು ಜೀವನ ಸಾಗಿಸುವುದು ತುಂಬಾ ಮುಖ್ಯವಾಗಿರುತ್ತದೆ. ಅವರೇ ನಿಮ್ಮ ಸರ್ವಸ್ವ ಆಗಿರುತ್ತಾರೆ. ಉಳಿದವರು ನಿಮ್ಮ ಜೀವನದಲ್ಲಿ ಬಂದು ಹೋಗುವವರಾಗಿರುತ್ತಾರೆ.
ಕ್ಷಮಾಪಣೆ
ತಪ್ಪು ಮಾಡುವುದು ಸಹಜ ಎಂದು ಹೇಳಲಾಗುತ್ತದೆ. ಅದು ಅಲ್ಲದೆ ಗಂಡ ಹೆಂಡತಿಯ ನಡುವೆ ಕೆಲವು ತಪ್ಪುಗಳು ನಡೆಯುತ್ತವೆ. ಆದರೆ ತಪ್ಪನ್ನ ಒಪ್ಪಿಕೊಳ್ಳುವುದು ತುಂಬಾ ಮುಖ್ಯ ನಿಮ್ಮದೇ ತಪ್ಪಿದ್ದರೆ ನೀವು ಮೊದಲು ನಿಮ್ಮ ಪತಿಯ ಹತ್ತಿರ ಅಥವಾ ಪತ್ನಿ ಹತ್ತಿರ ಕ್ಷಮೆ ಕೇಳಬೇಕು. ಕ್ಷಮೆ ಕೇಳಲು ಹಿಂದೆ ಮುಂದೆ ಯೋಚಿಸಿದರೆ ನಿಮ್ಮ ನಡುವೆ ಅಹಂಕಾರದ ಬಿರುಕು ಮೂಡುತ್ತಾ ಬರುತ್ತದೆ. ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಸಂದರ್ಭದಲ್ಲಿ ಬದಲಾವಣೆಯನ್ನು ತರುತ್ತದೆ ಅದಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕಾಗುತ್ತದೆ.
ಪಾರದರ್ಶಕತೆ
ಗಂಡ ಹೆಂಡತಿ ಇಬ್ಬರ ನಡುವೆ ಪಾರದರ್ಶಕತೆ ಮುಖ್ಯ. ನಕಾರಾತ್ಮಕ ಆಲೋಚನೆಗಳು ಬಂದಾಗ ಅಥವಾ ನಿಮ್ಮ ಸಂಗಾತಿಯ ಮೇಲೆ ನಿಮಗೆ ಅನುಮಾನ ಬಂದಾಗ ನಿಮ್ಮ ಸಂಬಂಧ ಹಾಳಾಗುತ್ತದೆ. ಆ ಕಾರಣದಿಂದಾಗಿ ಏನೇ ಅನುಮಾನ ಬಂದರೂ ಅದನ್ನು ಪಾರದರ್ಶಕವಾಗಿ ನೇರ ನೆರವಾಗಿ ನಿಮ್ಮ ಪತಿ ಅಥವಾ ಪತ್ನಿಯ ಕೇಳಿ ಬದಲಾಯಿಸಿಕೊಳ್ಳಿ. ಇದರಿಂದ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಬದಲಾವಣೆ
ಮದುವೆಯಾದ ನಂತರ ಪ್ರತಿಯೊಬ್ಬ ಜೀವನದಲ್ಲಿ ಬದಲಾವಣೆ ಆಗುತ್ತದೆ. ಸಂಗಾತಿ ಆದ್ಯತೆ ಏನಿರುತ್ತದೆಯೋ ಆ ರೀತಿ ನೀವು ಬದಲಾಗಬೇಕಾಗುತ್ತದೆ. ಆದರೆ ನಾನು ಯಾಕೆ ಬದಲಾಗಬೇಕು? ಎಂಬ ನಿಮ್ಮ ಮನೋಭಾವ ತುಂಬಾ ತಪ್ಪು. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ. ಒಬ್ಬರಿಗೊಬ್ಬರು ಮಾಡುವ ತ್ಯಾಗ ನಿಮ್ಮ ನಡುವೆ ಬಾಂಧವ್ಯವನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಪತಿಗೆ/ ಪತ್ನಿಗೆ ಸಹಕರಿಸಿದರೆ ನಿಮ್ಮ ಪತಿ / ಪತ್ನಿ ನಿಮಗೆ ಸಹಕರಿಸುತ್ತಾರೆ.
ವಿಭಾಗ