ಕಸ ಎಂದು ಎಸೆಯುವ ಈರುಳ್ಳಿ ಸಿಪ್ಪೆಯಿಂದ ಕೂದಲಿಗಿದೆ ಅದ್ಭುತ ಪ್ರಯೋಜನ, ಕೂದಲು ಉದುರುವುದು ನಿಲ್ಲುವ ಜೊತೆ ತಲೆಹೊಟ್ಟಿಗೂ ಇದೇ ಪರಿಹಾರ
ಕನ್ನಡ ಸುದ್ದಿ  /  ಜೀವನಶೈಲಿ  /  ಕಸ ಎಂದು ಎಸೆಯುವ ಈರುಳ್ಳಿ ಸಿಪ್ಪೆಯಿಂದ ಕೂದಲಿಗಿದೆ ಅದ್ಭುತ ಪ್ರಯೋಜನ, ಕೂದಲು ಉದುರುವುದು ನಿಲ್ಲುವ ಜೊತೆ ತಲೆಹೊಟ್ಟಿಗೂ ಇದೇ ಪರಿಹಾರ

ಕಸ ಎಂದು ಎಸೆಯುವ ಈರುಳ್ಳಿ ಸಿಪ್ಪೆಯಿಂದ ಕೂದಲಿಗಿದೆ ಅದ್ಭುತ ಪ್ರಯೋಜನ, ಕೂದಲು ಉದುರುವುದು ನಿಲ್ಲುವ ಜೊತೆ ತಲೆಹೊಟ್ಟಿಗೂ ಇದೇ ಪರಿಹಾರ

ಕೂದಲಿನ ಹಲವು ಸಮಸ್ಯೆಗಳಿಗೆ ಈರುಳ್ಳಿ ರಸ ಮದ್ದು. ಕೂದಲು ಉದುರುವುದು, ತಲೆಹೊಟ್ಟು ನಿವಾರಣೆಗೆ ಈರುಳ್ಳಿ ಬಹಳ ಉತ್ತಮ ಎನ್ನುವುದು ಹಲವರಿಗೆ ತಿಳಿದಿದೆ. ಆದರೆ ಈರುಳ್ಳಿ ಸಿಪ್ಪೆಯಿಂದ ಕೂಡ ಕೂದಲಿಗೆ ಪ್ರಯೋಜನವಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಗೆ ಈರುಳ್ಳಿ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ.

ಕೂದಲಿನ ಆರೈಕೆಗೆ ಈರುಳ್ಳಿ ಸಿಪ್ಪೆ
ಕೂದಲಿನ ಆರೈಕೆಗೆ ಈರುಳ್ಳಿ ಸಿಪ್ಪೆ (PC: Canva)

ಕಸ ಎಂದು ಎಸೆಯುವ ಈರುಳ್ಳಿ ಸಿಪ್ಪೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈರುಳ್ಳಿ ಸಿಪ್ಪೆಗಿಂತ ಉತ್ತಮವಾಗಿರುವುದು ಇನ್ನೊಂದಿಲ್ಲ. ಈರುಳ್ಳಿ ಸಿಪ್ಪೆಯಲ್ಲಿರುವ ಸಾರವನ್ನು ಹಲವು ಹೇರ್‌ಕೇರ್ ಪ್ರಾಡಕ್ಟ್‌ಗಳಲ್ಲಿ ಬಳಲಾಗುತ್ತದೆ. ಕೂದಲಿನ ಆರೋಗ್ಯಕ್ಕೆ ಇದರಿಂದ ಸಂಭಾವ್ಯ ಪ್ರಯೋಜನಗಳಿವೆ.

ಈರುಳ್ಳಿ ಸಿಪ್ಪೆಯು ಕೂದಲಿನ ಕಿರುಚೀಲವನ್ನು ಬಲಪಡಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ದ್ರಾವಣವು ಕೂದಲಿಗೆ ಹೊಳಪನ್ನು ನೀಡುತ್ತದೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ ಈರುಳ್ಳಿ ಸಿಪ್ಪೆಯು ನೆತ್ತಿಯನ್ನು ಪೋಷಿಸುತ್ತದೆ. ಇದು ಒಟ್ಟಾರೆ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

ಕೂದಲಿನ ಬೆಳವಣಿಗೆಗೆ ಈರುಳ್ಳಿ ಸಿಪ್ಪೆಯ ಬಳಕೆ

ಈರುಳ್ಳಿ ಸಿಪ್ಪೆ ಎಣ್ಣೆ

ಮಾಡಲು ಬೇಕಾಗುವುದು: ಈರುಳ್ಳಿ ಸಿಪ್ಪೆ – ಸ್ವಲ್ಪ, ತೆಂಗಿನೆಣ್ಣೆ, ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ

ಎಣ್ಣೆ ತಯಾರಿಸುವುದು: 2, 3 ಈರುಳ್ಳಿಯಿಂದ ಸಿಪ್ಪೆಯನ್ನು ಬೇರ್ಪಡಿಸಿ. ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಸ್ವಲ್ಪ ಹುರಿದುಕೊಳ್ಳಿ. ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಕೂದಲಿನ ಬುಡದವರೆಗೆ ಎಣ್ಣೆ ತಾಕುವಂತೆ ನೋಡಿಕೊಳ್ಳಿ.

ಈರುಳ್ಳಿ ಸಿಪ್ಪೆ ಬಳಕೆಯ ಇನ್ನೊಂದು ವಿಧಾನ

ಬೇಕಾಗುವುದು: ಈರುಳ್ಳಿ ಸಿಪ್ಪೆ, ನೀರು

ಮಾಡುವುದು: 2 ರಿಂದ 3 ಕಪ್ ನೀರು ಕುದಿಸಿ. ಸ್ವಚ್ಛ ಮಾಡಿಟ್ಟುಕೊಂಡ ಈರುಳ್ಳಿ ಸಿಪ್ಪೆಯನ್ನು ಕುದಿಯುತ್ತಿರುವ ನೀರಿಗೆ ಹಾಕಿ ಕುದಿಸಿ. ಇದನ್ನು 15 ನಿಮಿಷಗಳ ಕಾಲ ಸ್ಟೌ ಆಫ್ ಮಾಡಿ. ಇದನ್ನು ತಣ್ಣಗಾಗಲು ಬಿಡಿ. ತಲೆಸ್ನಾನ ಮಾಡಿದ ನಂತರ ಈ ನೀರನ್ನು ಕೂದಲಿಗೆ ಹಚ್ಚಿ, ನೆತ್ತಿಯ ಬುಡದಿಂದ ಚೆನ್ನಾಗಿ ಮಸಾಜ್ ಮಾಡಿ. ಕೆಲವು ನಿಮಿಷಗಳ ಕಾಲ ಹಾಗೆ ಬಿಟ್ಟು ತಣ್ಣೀರಿನಿಂದ ಕೂದಲು ತೊಳೆಯಿರಿ.

ಈರುಳ್ಳಿ ಸಿಪ್ಪೆ ಟೋನರ್‌

ಬೇಕಾಗುವುದು: ಈರುಳ್ಳಿ ಸಿಪ್ಪೆ, ನೀರು

ಮಾಡುವುದು: ನೀರಿಗೆ ಈರುಳ್ಳಿ ಸಿಪ್ಪೆ ಸೇರಿಸಿ ಕುದಿಸಿ, ನೀರಿನ ಬಣ್ಣ ಬದಲಾದಾಗ ಸ್ಟೌ ಮಾಡಿ, ಇದನ್ನು ಬಾಟಲಿಯಲ್ಲಿ ತುಂಬಿಸಿ ಇಟ್ಟುಕೊಂಡು ಆಗಾಗ ಟೋನರ್ ರೂಪದಲ್ಲಿ ಕೂದಲಿಗೆ ಬಳಸಿ. ಇದರ ಫಲಿತಾಂಶ ಕಂಡು ನೀವೇ ಅಚ್ಚರಿ ಪಡುತ್ತೀರಿ.

ಈರುಳ್ಳಿ ಸಿಪ್ಪೆಯ ಹೇರ್ ಮಾಸ್ಕ್

ಬೇಕಾಗುವುದು: ಅಗಸೆಬೀಜ – 2 ಚಮಚ, ಆಲಿವ್ ಎಣ್ಣೆ – 1 ಚಮಚ, ಈರುಳ್ಳಿ ಸಿಪ್ಪೆ – ಒಂದು ಮುಷ್ಟಿ

ಮಾಡುವುದು: ನೀರಿಗೆ ಅಗಸೆಬೀಜ ಹಾಗೂ ಈರುಳ್ಳಿ ಸಿಪ್ಪೆ ಸೇರಿಸಿ ಚೆನ್ನಾಗಿ ಕುದಿಸಿ, ಈ ನೀರನ್ನು ಸೋಸಿ ಅದಕ್ಕೆ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೂದಲಿನ ಬುಡದಿಂದ ಹಚ್ಚಿ.

ಕೂದಲಿನ ಬೆಳವಣಿಗೆಗೆ ಈರುಳ್ಳಿ ಸಿಪ್ಪೆಯ ಪ್ರಯೋಜನ

ಕೂದಲು ಕಿರುಚೀಲಗಳನ್ನು ಉತ್ತೇಜಿಸುತ್ತದೆ: ಈರುಳ್ಳಿ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕೂದಲನ್ನು ಬಲಪಡಿಸುತ್ತದೆ: ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಸಲ್ಫರ್ ಸಮೃದ್ಧವಾಗಿದೆ, ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ, ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ಸಹಕರಿಸುತ್ತದೆ.

ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ: ಈರುಳ್ಳಿ ಸಿಪ್ಪೆಯ ನಿಯಮಿತ ಬಳಕೆಯು ನೆತ್ತಿಯ pH ಅನ್ನು ಸಮತೋಲನಗೊಳಿಸಲು, ತಲೆಹೊಟ್ಟು ಕಡಿಮೆ ಮಾಡಲು ಮತ್ತು ಒಟ್ಟಾರೆ ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೊಳಪನ್ನು ನೀಡುತ್ತದೆ: ಈರುಳ್ಳಿ ಸಿಪ್ಪೆಯಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ, ಇದು ಆರೋಗ್ಯಕರ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಗಮನಿಸಿ: ಇದು ಸಾಮಾನ್ಯ ಜ್ಞಾನವನ್ನು ಆಧರಿಸಿದ ಬರಹ. ಕೂದಲಿಗೆ ಈರುಳ್ಳಿ ಸಿಪ್ಪೆಯನ್ನು ಹಚ್ಚುವ ಮುನ್ನ ತಜ್ಞರ ಸಲಹೆ ಪಡೆಯಿರಿ. ನಿಮ್ಮ ನೆತ್ತಿಯ ಭಾಗದಲ್ಲಿ ಯಾವುದೇ ಪ್ಯಾಚ್‌ಗಳಿದ್ದರೆ ಇದನ್ನು ಬಳಸದೇ ಇರುವುದು ಉತ್ತಮ.

Whats_app_banner