Cold Drinks: ಒಂದು ತಿಂಗಳು ಕೋಲ್ಡ್‌ ಡ್ರಿಂಕ್ಸ್‌ ಕುಡಿಯದೇ ಇದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ತಿಳಿದ್ರೆ ಅಚ್ಚರಿ ಪಡ್ತಿರಾ
ಕನ್ನಡ ಸುದ್ದಿ  /  ಜೀವನಶೈಲಿ  /  Cold Drinks: ಒಂದು ತಿಂಗಳು ಕೋಲ್ಡ್‌ ಡ್ರಿಂಕ್ಸ್‌ ಕುಡಿಯದೇ ಇದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ತಿಳಿದ್ರೆ ಅಚ್ಚರಿ ಪಡ್ತಿರಾ

Cold Drinks: ಒಂದು ತಿಂಗಳು ಕೋಲ್ಡ್‌ ಡ್ರಿಂಕ್ಸ್‌ ಕುಡಿಯದೇ ಇದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ತಿಳಿದ್ರೆ ಅಚ್ಚರಿ ಪಡ್ತಿರಾ

Quitting Cool Drinks: ಒಂದು ತಿಂಗಳಗಳು ಕಾಲ ತಂಪು ಪಾನೀಯಗಳನ್ನು ಕುಡಿಯುವುದನ್ನು ನಿಲ್ಲಿಸಿದರೆ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಅಲ್ಲದೆ ಇವೆಲ್ಲವೂ ಧನಾತ್ಮಕ ಬದಲಾವಣೆಗಳು ಎಂಬುದು ಖುಷಿಯ ವಿಚಾರ. ಹಾಗಾದರೆ ಆ ಬದಲಾವಣೆಗಳೇನು ನೋಡಿ.

ಒಂದು ತಿಂಗಳು ಕೋಲ್ಡ್‌ ಡ್ರಿಂಕ್ಸ್‌ ಕುಡಿಯದೇ ಇದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?
ಒಂದು ತಿಂಗಳು ಕೋಲ್ಡ್‌ ಡ್ರಿಂಕ್ಸ್‌ ಕುಡಿಯದೇ ಇದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?

ಕೆಲವರಿಗೆ ಕೂಲ್‌ ಡ್ರಿಂಕ್ಸ್‌ ಕುಡಿಯೋದು ಅಂದ್ರೆ ಅದೇನೋ ಒಂಥರಾ ಖುಷಿ. ಇದರಿಂದ ಆರೋಗ್ಯ ಹಾಳಾಗುತ್ತೆ ಅನ್ನುವ ಅರಿವಿದ್ದರೂ ಕೂಡ ದೇಹವನ್ನು ಚಿಲ್‌ ಆಗಿರುವ ಕೂಲ್‌ ಡ್ರಿಂಕ್ಸ್‌ ಕುಡಿತಾನೇ ಇರ್ತಾರೆ. ಇನ್ನು ಕೆಲವರಿಗೆ ಒಂದು ಕೆಟ್ಟ ಅಭ್ಯಾಸವಿದೆ. ಅದೇನೆಂದರೆ ಊಟದ ಜೊತೆ ಅಂದರೆ ಊಟ ಮಾಡುವಾಗ ಕೂಲ್‌ ಡ್ರಿಂಕ್ಸ್‌ ಕುಡಿಯುವುದು. ನಿಮ್ಮಲ್ಲೂ ಇಂತಹ ಅಭ್ಯಾಸವಿದ್ದರೆ ಈ ಕ್ಷಣಕ್ಕೆ ಅದನ್ನು ನಿಲ್ಲಿಸುವುದು ಉತ್ತಮ.

ಅತಿಯಾಗಿ ಕೂಲ್‌ ಡ್ರಿಂಕ್ಸ್‌ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿ ತೊಂದರೆಗಳಿವೆ ಎಂಬುದನ್ನು ಎಲ್ಲರಿಗೂ ಗೊತ್ತು. ಸರಿ ಹಾಗಾದ್ರೆ ಒಂದು ತಿಂಗಳ ಕಾಲ ಕೂಲ್‌ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳನ್ನು ಕುಡಿಯೋದು ನಿಲ್ಲಿಸಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ನೋಡಿ.

ʼಒಂದು ತಿಂಗಳಗಳು ಕಾಲ ತಂಪು ಪಾನೀಯಗಳನ್ನು ಕುಡಿಯುವುದನ್ನು ನಿಲ್ಲಿಸಿದರೆ ದೇಹತೂಕ, ಹೈಡ್ರೇಷನ್‌ ಹಾಗೂ ಜೀರ್ಣಕ್ರಿಯೆಯ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಇದರಿಂದ ದೇಹದಲ್ಲಿ ಕಡುಬಯಕೆಗಳು ಕಡಿಮೆಯಾಗುವ ಜೊತೆಗೆ ಜಲಸಂಚಯನ ಮಟ್ಟವು ಸುಧಾರಿಸುತ್ತದೆ. ಏಕೆಂದರೆ ಒಂದು ತಿಂಗಳ ಕಾಲ ತಂಪು ಪಾನೀಯಗಳನ್ನು ತ್ಯಜಿಸಿದಾಗ ಸಕ್ಕರೆ ಹಾಗೂ ಕೆಫಿನ್‌ ಪ್ರಮಾಣವೂ ನಿಮ್ಮ ದೇಹವನ್ನು ಸೇರುವುದು ಕಡಿಮೆಯಾಗುತ್ತದೆ ಎಂದು ಹೈದರಾಬಾದ್‌ನ ಯಶೋದ ಆಸ್ಪತ್ರೆಯ ಡಾ. ಸೋಮನಾಥ್‌ ಗುಪ್ತಾ ಹೇಳುತ್ತಾರೆ.

ʼತಂಪು ಪಾನೀಯಗಳನ್ನು ನಿರಂತರವಾಗಿ ಸೇವಿಸದ ಕಾರಣ ನಿಮ್ಮ ದೇಹದ ಉಷ್ಣತೆಯ ಕೂಡ ನಿಯಂತ್ರಣಕ್ಕೆ ಬರುತ್ತದೆʼ ಎಂದು ಡಾ. ಸೋಮನಾಥ್‌ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕರುಳಿನ ಆರೋಗ್ಯ ಸುಧಾರಣೆ 

ಈ ವಿಷಯವಾಗಿ ಮಾತನಾಡಿದ ಡಾ. ದಿಲೀಪ್‌ ಗುಡೆ ʼತಿಂಗಳ ಕಾಲ ತಂಪು ಪಾನೀಯವನ್ನು ಕುಡಿಯುವುದನ್ನು ನಿಲ್ಲಿಸಿದ್ದಾಗ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಕರುಳು ಉತ್ತಮ ಮೈಕ್ರೊಬಯೋಟಾದ ಬೆಳವಣಿಗೆಗೆ ಸಹಕರಿಸುತ್ತದೆ. ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಪ್ರಮಾಣ ಕಡಿಮೆಯಾಗಿ ಹೊಟ್ಟೆಯ ಪದೇ ಪದೇ ಕೆಡುವುದನ್ನು ನಿಲ್ಲಿಸುತ್ತದೆʼ ಎಂದು ವಿವರಣೆ ನೀಡುತ್ತಾರೆ.

ʼಕೋಲ್ಡ್‌ ಡ್ರಿಂಕ್ಸ್‌ ಸೇವನೆಗೆ ಕಡಿವಾಣ ಹಾಕುವುದರಿಂದ ದಂತಕುಳಿ, ಹಲ್ಲು ಹುಳುಕು ಹಾಗೂ ವಸಡಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎನ್ನುತ್ತಾರೆ ಡಾ. ದಿಲೀಪ್‌.

ತೂಕ ಇಳಿಕೆ 

ನೀವು ತೂಕ ಇಳಿಕೆಯ ಬಗ್ಗೆ ಯೋಚಿಸುತ್ತಿದ್ದರೆ, ಕೂಲ್‌ ಡ್ರಿಂಕ್ಸ್‌ ಕುಡಿಯುವುದನ್ನು ನಿಲ್ಲಿಸುವುದರಿಂದ ಹಲವು ಉಪಯೋಗಗಳಿವೆ. ಇದರಿಂದ ದೇಹದಲ್ಲಿ ಕ್ಯಾಲೊರಿ ಅಂಶ ಕಡಿಮೆಯಾಗುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಮಧುಮೇಹದಂತಹ ಸಮಸ್ಯೆಗಳು ಕಾಡುವ ಭಯದಿಂದಲೂ ದೂರ ಇರಬಹುದು ಎಂದು ಅವರು ಹೇಳುತ್ತಾರೆ.

ಸೌಂದರ್ಯ ವೃದ್ಧಿ

ಅಷ್ಟೇ ಅಲ್ಲದೆ ಸೌಂದರ್ಯಕ್ಕೂ ಇದು ಉತ್ತಮ. ಒಂದು ತಿಂಗಳ ಕಾಲ ಕೋಲ್ಡ್‌ ಡ್ರಿಂಕ್ಸ್‌ ಕುಡಿಯುವುದನ್ನು ನಿಲ್ಲಿಸಿದಾಗ ನಿಮ್ಮ ಚರ್ಮವು ಯಾವುದೇ ಕಲೆ, ಮೊಡವೆಯಿಲ್ಲದೆ ಸ್ವಚ್ಛವಾಗುತ್ತದೆ. ಮುಖ ಒಣಗಿದಂತಾಗುವುದು ಕಡಿಮೆಯಾಗುತ್ತದೆ. ಮೊಡವೆ ಸಮಸ್ಯೆಗೂ ಪರಿಹಾರ ಸಿಗುತ್ತದೆ. ದೇಹದಲ್ಲಿ ಶಕ್ತಿ ಮಟ್ಟ ಹೆಚ್ಚುವ ಜೊತೆಗೆ ಚುರುಕುತನವು ಹೆಚ್ಚುತ್ತದೆ. ಅಲ್ಲದೆ ಉತ್ತಮ ನಿದ್ದೆಗೂ ಇದು ಸಹಕಾರಿ.

ಕೋಲ್ಡ್‌ ಡ್ರಿಂಕ್ಸ್‌ ಬದಲಿಗೆ ಇದನ್ನು ಕುಡಿಯಿರಿ

ಕೋಲ್ಡ್‌ ಡ್ರಿಂಕ್ಸ್‌ ಕುಡಿಯಲು ಇಷ್ಟವಾಗುತ್ತದೆ ನಿಜ, ಆದರೆ ಇದರಿಂದ ಆರೋಗ್ಯಕ್ಕೆ ನೂರಾರು ತೊಂದರೆಗಳಾಗುವುದು ಅಷ್ಟೇ ಸತ್ಯ. ಅದಕ್ಕಾಗಿ ಅದರ ಬದಲು ಕೆಲವು ಆರೋಗ್ಯಕ್ಕೆ ಹಿತ ಎನ್ನಿಸುವ ಪಾನೀಯಗಳನ್ನು ಸೇವಿಸಬಹುದು.

ಗಿಡಮೂಲಿಕ ಚಹಾ: ಇದು ದೇಹಕ್ಕೆ ಚೈತನ್ಯ ನೀಡುವ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಳ ಸೇರಿದಂತೆ ದೇಹಕ್ಕೆ ಹಲವು ರೀತಿಯಲ್ಲಿ ಉಪಯೋಗವಿದೆ.

ತರಕಾರಿ, ಹಣ್ಣಿನ ರಸ: ಯಾವುದೇ ಸಕ್ಕರೆ ಅಥವಾ ಫ್ಲೇವರ್‌ ಸೇರಿಸದ ನೈಸರ್ಗಿಕ ಹಣ್ಣಿನ ರಸವನ್ನು ಕುಡಿಯಬಹುದು.

ಮಜ್ಜಿಗೆ: ಮಜ್ಜಿಗೆ ಯಾವಾಗಲೂ ಕೂಲ್‌ ಡ್ರಿಂಕ್ಸ್‌ಗೆ ಉತ್ತಮ ಪರ್ಯಾಯ.

ಎಳನೀರು: ಎಲ್ಲಾ ಕಾಲದಲ್ಲೂ ಎಳನೀರು ಸೇವನೆಯಿಂದ ದೇಹಕ್ಕೆ ಪ್ರಯೋಜನ ನೂರಾರಿದೆ.

ಕೋಲ್ಡ್‌ ಡ್ರಿಂಕ್‌ ಹಾಗೂ ಇತರ ಸಿಹಿ ಪಾನೀಯಗಳನ್ನು ಯಾರು ಸೇವಿಸಬಾರದು ನೋಡಿ

ಡಾ. ಗುಪ್ತಾ ಅವರ ಪ್ರಕಾರ ಮಕ್ಕಳು ಯಾವುದೇ ಕಾರಣಕ್ಕೂ ಕೋಲ್ಡ್‌ ಡ್ರಿಂಕ್ಸ್‌ ಕುಡಿಯಲೇಬಾರದು. ಇದು ಅವರ ಹಲ್ಲಿನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ದೇಹಕ್ಕೆ ಹೆಚ್ಚುವರಿ ಸಕ್ಕರೆ ಅಂಶ ಸೇರುವ ಸಂಭವ ಇರುವ ಕಾರಣ ಮಕ್ಕಳನ್ನು ಇದನ್ನು ಕುಡಿಯಲೇಬಾರದು. ಇದರಲ್ಲಿ ಕೆಫಿನ್‌ ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಕಾರಣ ಗರ್ಭಿಣಿಯರ ಕುಡಿಯಬಾರದು. ಬೊಜ್ಜಿನ ಸಮಸ್ಯೆ, ಪ್ರಿ ಡಯಾಬಿಟಿಕ್‌, ಹೃದಯ, ಕಿಡ್ನಿ, ಲಿವರ್‌ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಕೋಲ್ಡ್‌ ಡ್ರಿಂಕ್ಸ್‌ ಕುಡಿಯಬಾರದು.

Whats_app_banner