Impair Fertility: ಹೆಚ್ಚುತ್ತಿರುವ ಬಂಜೆತನ; ಹಾರ್ಮೋನ್‌ ಅಸಮತೋಲನ, ಫಲವಂತಿಕೆಗೆ ಅಡ್ಡಿಪಡಿಸುವ ಪ್ರಮುಖ ಅಂಶಗಳಿವು-health news impair fertility in men and women disrupt hormones lifestyle changes smoking age obesity kannada news rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Impair Fertility: ಹೆಚ್ಚುತ್ತಿರುವ ಬಂಜೆತನ; ಹಾರ್ಮೋನ್‌ ಅಸಮತೋಲನ, ಫಲವಂತಿಕೆಗೆ ಅಡ್ಡಿಪಡಿಸುವ ಪ್ರಮುಖ ಅಂಶಗಳಿವು

Impair Fertility: ಹೆಚ್ಚುತ್ತಿರುವ ಬಂಜೆತನ; ಹಾರ್ಮೋನ್‌ ಅಸಮತೋಲನ, ಫಲವಂತಿಕೆಗೆ ಅಡ್ಡಿಪಡಿಸುವ ಪ್ರಮುಖ ಅಂಶಗಳಿವು

Impair Fertility in Men and Women: ಇತ್ತೀಚೆಗೆ ಮಹಿಳೆಯರು ಹಾಗೂ ಪುರುಷರಲ್ಲಿ ಫಲವಂತಿಕೆಯ ಸಮಸ್ಯೆ ಹೆಚ್ಚುತ್ತಿದೆ, ಬಂಜೆತನಕ್ಕೂ ಇದೇ ಕಾರಣವಾಗುತ್ತಿದೆ. ಹಾರ್ಮೋನ್‌ಗಳ ಅಸಮತೋಲನ ಹಾಗೂ ಫಲವಂತಿಕೆಯ ಸಮಸ್ಯೆಗೆ ಜೀವನಶೈಲಿಯು ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಹಾಗಾದರೆ ಫಲವಂತಿಕೆಯ ಮೇಲೆ ಪರಿಣಾಮ ಬೀರುವ ಜೀವನಶೈಲಿಗೆ ಸಂಬಂಧಿಸಿದ ಪ್ರಮುಖ ಅಂಶಗಳು ಯಾವುವು?

ಹೆಚ್ಚುತ್ತಿರುವ ಫಲವಂತಿಕೆ ಸಮಸ್ಯೆ, ಬಂಜೆತನ
ಹೆಚ್ಚುತ್ತಿರುವ ಫಲವಂತಿಕೆ ಸಮಸ್ಯೆ, ಬಂಜೆತನ

ಇಂದು ಮನುಷ್ಯರನ್ನು ಕಾಡುತ್ತಿರುವ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣ ಅಸಮರ್ಪಕ ಅಥವಾ ಅನಾರೋಗ್ಯಕರ ಜೀವನಶೈಲಿ. ಆದರೆ ನಮ್ಮ ದೈಹಿಕ ಚಟುವಟಿಕೆಯ ಮಟ್ಟ, ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರು, ಉಸಿರಾಡುವ ಗಾಳಿ ಹಾಗೂ ನಿದ್ದೆಯ ಅವಧಿ ಇವೆಲ್ಲವೂ ನಮ್ಮ ಆರೋಗ್ಯದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಫಲವಂತಿಕೆಯೂ ಇದಕ್ಕೆ ಹೊರತಾಗಿಲ್ಲ. ನಮ್ಮ ಜೀವನಶೈಲಿಯ ಆಯ್ಕೆಗಳು ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಫಲಿವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಕೆಲವು ಅಂಶಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಅವಶ್ಯ.

ಈ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ಗೆ ಸಂದರ್ಶನ ನೀಡಿದ ಮುಂಬೈನ ನೋವಾ ಐವಿಎಫ್‌ ಫರ್ಟಿಲಿಟಿಯ ಕ್ಲಿನಿಕಲ್‌ ನಿರ್ದೇಶಕರಾದ ಡಾ. ಸುಲ್ಭಾ ಅರೋರಾ ಪುರುಷ ಹಾಗೂ ಮಹಿಳೆಯರ ಹಾರ್ಮೋನ್‌ಗಳಲ್ಲಿನ ಅಸಮತೋಲನ ಹಾಗೂ ಫಲವಂತಿಕೆ ಸಮಸ್ಯೆಗಳ ಮೇಲೆ ಪರಿಣಾಮ ಬೀರುವ 6 ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಧೂಮಪಾನ

ಧೂಮಪಾನವು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಿಗರೇಟ್‌ ಹೊಗೆಯು ದೇಹಕ್ಕೆ ಅಪಾಯಕಾರಿಯಾದ 4,000 ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಶ್ವಾಸಕೋಶ ಮತ್ತು ಹೃದಯಕ್ಕೆ ಮಾತ್ರವಲ್ಲ, ಸಂತಾನೋತ್ಪತ್ತಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದು ಷುರುಷ ಹಾಗೂ ಮಹಿಳೆಯರಲ್ಲಿ ಬಂಜೆತನವನ್ನು ಉಂಟು ಮಾಡುತ್ತದೆ. ಧೂಮಪಾನದಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯ ಕೊರತೆ, ವೀರ್ಯಾಣುವಿನ ಸಾಂದ್ರತೆ ಕೊರತೆ, ಹೆಚ್ಚಿನ ಶೇಕಡಾವಾರು ಅಸಹಜ ವೀರ್ಯಾಣುಗಳ ಬೆಳವಣಿಗೆಗೆ ಹೆಚ್ಚಿದ ವೀರ್ಯಾಣು-ಡಿಎನ್‌ಎ ವಿಘಟನೆಗೆ ಕಾರಣವಾಗುತ್ತದೆ. ಈ ಅಂಶಗಳು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.

ಧೂಮಪಾನವು ಮಹಿಳೆಯರಲ್ಲಿ ಅಂಡಾಣುಗಳ ಗುಣಮಟ್ಟ ಮತ್ತು ಪ್ರಮಾಣಗಳ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನದಿಂದ ಓಸೈಟ್‌ಗಳ ವೇಗವರ್ಧಿತ ಅಟ್ರೆಸಿಯಾವು ಈಗಾಗಲೇ ಕ್ಷೀಣಿಸುತ್ತಿರುವ ಅಂಡಾಣುಗಳ ಎಣಿಕೆಯನ್ನು ವೇಗವಾಗಿ ಕ್ಷೀಣಿಸುತ್ತದೆ. ಇದರಿಂದ ಮಹಿಳೆಯರು ಬೇಗನೆ ಋತುಬಂಧಕ್ಕೆ ಒಳಗಾಗಬಹುದು. ಇದು ಮಹಿಳೆಯರಲ್ಲಿ ಗರ್ಭಾಪಾತ ಮತ್ತು ಅಸಹಜ ಗರ್ಭಧಾರಣೆಯ ಅಪಾಯವನ್ನು ಹೆಚ್ಚಿಸಬಹುದು. ಧೂಮಪಾನಿಗಳು ಮಾತ್ರವಲ್ಲ, ಧೂಮಪಾನದ ಹೊಗೆ ಸೇವಿಸಿದವರಲ್ಲೂ ಈ ಸಮಸ್ಯೆಗಳು ಕಾಣಿಸಬಹುದು. ಆದರೆ ಧೂಮಪಾನವನ್ನು ತ್ಯಜಿಸುವುದರಿಂದ ಫಲವತ್ತತೆಯ ಮೇಲಿನ ನಕಾರಾತ್ಮಕ ಪರಿಣಾಮಗಳು ಬದಲಾಗಬಹುದು. ಅಲ್ಲದೆ ಧೂಮಪಾನ ತ್ಯಜಿಸಿದ ಒಂದು ವರ್ಷದೊಳಗೆ ಫಲವತ್ತತೆಯ ಸಾಮರ್ಥ್ಯವನ್ನು ಸಾಮಾನ್ಯ ಸ್ಥಿತಿಗೆ ತರಬಹುದಾಗಿದೆ. ಆದ್ದರಿಂದ ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಧೂಮಪಾನ ತ್ಯಜಿಸಲು ಹಾಗೂ ಆರೋಗ್ಯವಾಗಿರಲು ಇದು ಉತ್ತಮ ಸಮಯ.

ವಯಸ್ಸು

ಗರ್ಭಧಾರಣೆಯ ವಿಷಯದಲ್ಲಿ ಹೆಣ್ಣುಮಕ್ಕಳ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿರ್ಣಾಯಕ ಅಂಶ ಕೂಡ ಹೌದು. ಪುರುಷರಲ್ಲಿ ಪ್ರತಿದಿನ ವೀರ್ಯಾಣುಗಳು ವೃದ್ಧಿಯಾಗುತ್ತವೆ, ಆದರೆ ಮಹಿಳೆಯರು ಇದಕ್ಕೆ ಭಿನ್ನವಾಗಿರುತ್ತಾರೆ, ಅಲ್ಲದೆ ಇವರಲ್ಲಿ ನಿಶ್ಚಿತ ಸಂಖ್ಯೆಯ ಅಂಡಾಣುಗಳು ಉತ್ಪತ್ತಿಯಾಗುತ್ತವೆ. ಈ ಸಂಖ್ಯೆಗಳು ಹುಟ್ಟಿನಿಂದಲೇ ಕ್ಷೀಣಿಸಲು ಆರಂಭವಾಗುತ್ತದೆ. ಮಹಿಳೆಯರು ಅಂಡಾಣುಗಳನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಈಗಾಗಲೇ ಇರುವ ಅಂಡಾಣುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು. ಒಂದು ಹುಡುಗಿಯ ಅಂಡಾಶಯಗಳು ಹುಟ್ಟಿನಿಂದ ಸುಮಾರು 20,00,000 ಅಂಡಾಣುಗಳನ್ನು ಹೊಂದಿರುತ್ತವೆ ಮತ್ತು ಹುಟ್ಟಿನಿಂದಲೇ ಈ ಸಂಖ್ಯೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹುಡುಗಿಯೊಬ್ಬಳು ಮೊದಲ ಬಾರಿ ಮುಟ್ಟಾದಾಗ 4 ಲಕ್ಷದಷ್ಟು ಅಂಡಾಣುಗಳು ಕಡಿಮೆಯಾಗುತ್ತದೆ, ಅಲ್ಲದೆ ಈ ಸಂಖ್ಯೆಯು ಮುಂದುವರಿಯುತ್ತಾ ಹೋಗುತ್ತದೆ. 30 ವಯಸ್ಸಿನ ನಂತರ ಅಂಡಾಣುಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಿ ವೇಗವಾಗಿ ಕುಸಿತ ಉಂಟಾಗುತ್ತದೆ. ಆದ್ದರಿಂದ ವಯಸ್ಸಾದಂತೆ ಮಹಿಳೆಯು ಗರ್ಭ ಧರಿಸುವ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗುತ್ತದೆ.

ಇಂದು ಹೆಣ್ಣಿಗೆ ಶಿಕ್ಷಣ ಹಾಗೂ ವೃತ್ತಿಯೂ ಬಹಳ ಮುಖ್ಯ. ಆ ಕಾರಣಕ್ಕೆ ಮೂವತ್ತು ವರ್ಷಕ್ಕೂ ಮೊದಲು ಗರ್ಭ ಧರಿಸಲು ಸಾಧ್ಯವಾಗದೇ ಇರಬಹುದು. ತಡವಾಗಿ ಮದುವೆಯಾಗುವುದು ಮತ್ತು ಮಗುವಿನ ಜನನವು ಜೈವಿಕ ಚಕ್ರವು ನಿಧಾನವಾಗಿ ಆಗುವುದರಿಂದ ನಂತರದ ದಿನಗಳಲ್ಲಿ ಆಕೆಯ ಗರ್ಭ ಧರಿಸುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು. ಮಹಿಳೆಯರಲ್ಲಿ ವಯಸ್ಸಿನ ಪ್ರಭಾವವು ಹೆಚ್ಚಾದರೂ, ಪುರುಷರಲ್ಲೂ ಈ ಸಮಸ್ಯೆ ಕಾಡುತ್ತದೆ. 35 ರಿಂದ 40 ವರ್ಷ ದಾಟಿದ ಪುರುಷರಲ್ಲಿ ವೀರ್ಯಾಣುಗಳ ಗುಣಮಟ್ಟ ಕ್ಷೀಣಿಸಬಹುದು. ಪ್ಲಾನಿಂಗ್‌ ಮಾಡುವ ದಂಪತಿಗಳು ಈ ಬಗ್ಗೆಯೂ ಯೋಚಿಸಬೇಕು. ಮಹಿಳೆಯರು ಕಿರಿಯ ವಯಸ್ಸಿನಲ್ಲಿ ಅಂಡಾಣುಗಳನ್ನು ಫ್ರೀಜ್‌ ಮಾಡಬಹುದು. ವಿವಾಹಿತ ಮಹಿಳೆಯರು ತಮ್ಮ ಸ್ವಂತ ಸಂರಕ್ಷಿತ ಗ್ಯಾಮೆಟ್‌ಗಳು ಅಥವಾ ಭ್ರೂಣಗಳನ್ನು ಬಳಸಿಕೊಂಡು ನಂತರ ಜೀವನದಲ್ಲಿ ಆರೋಗ್ಯಕರ ಮಗುವನ್ನು ಹೊಂದುವ ಸಾಧ್ಯತೆಗಳನ್ನು ಹೆಚ್ಚಿಸಲು ಭ್ರೂಣದ ಘನೀಕರಣಕ್ಕೆ ಒಳಗಾಗಬಹುದು.

ಸ್ಥೂಲಕಾಯತೆ

ಇಂದು ಜೀವನಶೈಲಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಲ್ಲಿ ಸ್ಥೂಲಕಾಯವು ಒಂದು. ಅಲ್ಲದೆ ಈ ಸಮಸ್ಯೆಯು ಇಂದು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ. ಇದನ್ನು ಸಾಂಕ್ರಾಮಿಕ ರೋಗ ಎಂದೂ ಪರಿಗಣಿಸಲಾಗಿದೆ. ಬೊಜ್ಜು ದೇಹದ ಹಾರ್ಮೋನುಗಳಿಗೆ ಅಡ್ಡಿಪಡಿಸುತ್ತದೆ. ಸ್ಥೂಲಕಾಯತೆಯು ಮಹಿಳೆಯರ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಯನ್ನು ಹೆಚ್ಚಿಸಬಹುದು. ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆಗೂ ಇದು ಕಾರಣವಾಗಬಹುದು. ಆರೋಗ್ಯಕರ, ಸಮತೋಲಿತ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮ ಮಾಡುವುದು ಬಹಳ ಅವಶ್ಯ.

ಪೋಷಕಾಂಶ

ಇತ್ತೀಚಿಗೆ ಪೋಷಕಾಂಶದ ಕೊರತೆಯು ಬಂಜೆತನಕ್ಕೆ ಪ್ರಮುಖ ಕಾರಣವಾಗಿದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಗಡಿಬಿಡಿಯ ಹಾಗೂ ತಕ್ಷಣಕ್ಕೆ ಸಿಕ್ಕಿದ ಆಹಾರ ಸೇವಿಸುವುದು ಸಾಮಾನ್ಯವಾಗಿದೆ. ಜಂಕ್‌ಫುಡ್‌ ಹಾಗೂ ಸಂಸ್ಕರಿತ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡುತ್ತೇವೆ. ಆರೋಗ್ಯಕರ ಸಮತೋಲಿತ ಆಹಾರವು ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ, ಇದು ಅಂಡಾಣು ಮತ್ತು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ. ಪ್ರಿಸರ್ವೆಟಿವ್ಸ್‌ಗಳನ್ನು ಬಳಸಿದ ಪ್ಯಾಕೆಟ್‌ ಆಹಾರಗಳು ಫಲಿವಂತಿಕೆಯ ಮೇಲೆ ಪರಿಣಾಮ ಬೀರಬಹುದು. ಇವು ದೇಹದ ಹಾರ್ಮೋನುಗಳ ಸ್ರವಿಕೆಗೆ ಅಡ್ಡಿಪಡಿಸುವ ಹಾಗೂ ಅಂಡಾಣು, ವೀರ್ಯಾಣುಗಳ ಗುಣಮಟ್ಟವನ್ನು ತಗ್ಗಿಸುವ ರಾಸಾಯನಿಕಗಳಾಗಿವೆ.

ಒತ್ತಡ

ದೇಹದಲ್ಲಿ ಹಾರ್ಮೋನ್‌ ಅಸಮತೋಲನಕ್ಕೆ ಒತ್ತಡವು ಪ್ರಮುಖ ಕಾರಣವಾಗಬಹುದು. ಇದು ಗರ್ಭಧಾರಣೆಗೆ ಅಡ್ಡಿ ಪಡಿಸಬಹುದು. ಪ್ರೊಲ್ಯಾಕ್ಟಿನ್‌ ಮಟ್ಟದ ಏರಿಕೆಯು ಮಹಿಳೆಯರಲ್ಲಿ ಒತ್ತಡದ ಮಟ್ಟವನ್ನು ಏರಿಸುತ್ತದೆ. ಅಲ್ಲದೆ ಇದು ಅಂಡೋತ್ಪತ್ತಿಗೆ ಅಡ್ಡಿ ಪಡಿಸುತ್ತದೆ ಮತ್ತು ಪುರುಷರಲ್ಲಿ ನಿಮಿರುವಿಕೆಯನ್ನು ನಿಯಂತ್ರಿಸುತ್ತದೆ. ಒತ್ತಡದ ಹಾರ್ಮೋನುಗಳು ಅಂಡೋತ್ಪತ್ತಿ ಪ್ರಕ್ರಿಯೆಗೆ ಅಡ್ಡಿ ಪಡಿಸಬಹುದು. ಹೆಚ್ಚಿದ ಒತ್ತಡವು ಪುರುಷರಲ್ಲಿ ಕಡಿಮೆ ಟೆಸ್ಟೋಸ್ಟೆರಾನ್‌ ಮತ್ತು ಹೆಚ್ಚಿನ ಎಲ್‌ಎಚ್‌ (ಲ್ಯುಟೈನೈಜಿಂಗ್ ಹಾರ್ಮೋನ್) ಮಟ್ಟಗಳಿಗೆ ಕಾರಣವಾಗಬಹುದು.

ಅಸಮರ್ಪಕ ನಿದ್ದೆ

ದೇಹದಲ್ಲಿನ ವಿವಿಧ ಅಂಗಾಂಶಗಳು ಮತ್ತು ಅಂಗಗಳ ಚೇತರಿಕೆಗೆ ನಿದ್ರೆ ಅತ್ಯಗತ್ಯ. ಸಾಕಷ್ಟು ನಿದ್ರೆ ಅಂತಃಸ್ರಾವಕ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸುತ್ತದೆ. ಅನಿಯಮಿತ ನಿದ್ರೆಯ ಮಾದರಿಗಳು ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಪೂರ್ವಭಾವಿಯಾಗಿ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತವೆ.