Heat Stroke: ಮಳೆಗಾಲದಲ್ಲೂ ಏರಿಕೆಯಾದ ತಾಪಮಾನ; ಹೆಚ್ಚುತ್ತಿದೆ ಮೆದುಳು, ಹೃದಯದ ಸಮಸ್ಯೆ; ಆರೋಗ್ಯದ ಮೇಲಿರಲಿ ಗಮನ
Heatstroke Affects: ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಲಿನ ತಾಪದಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಮಳೆ ಆರಂಭವಾಗಿದ್ದರೂ ಬಿಸಿಲಿನ ತಾಪ ಕಡಿಮೆಯಾಗಿಲ್ಲ. ಅತಿಯಾದ ಬಿಸಿಲಿನ ತಾಪವು ಶಾಖಾಘಾತದ ಪ್ರಮಾಣವನ್ನು ಹೆಚ್ಚಿಸುತ್ತಿದೆ, ಮಾತ್ರವಲ್ಲ ಇದು ಹೃದಯ ಹಾಗೂ ಮೆದುಳಿನ ಆರೋಗ್ಯ ಸ್ಥಿತಿ ಹದಗೆಡಲು ಕಾರಣವಾಗುತ್ತಿದೆ.
ಜೂನ್ ತಿಂಗಳು ಆರಂಭವಾದರೂ ಮಳೆಗಾಲ ಆರಂಭವಾಗಿಲ್ಲ. ದಿನ ಹೋದ ಹಾಗೂ ಸೂರ್ಯನ ಬಿಸಿಲಿನ ಶಾಖ ಹೆಚ್ಚುತ್ತಲೇ ಇದೆ. ಅತಿಯಾದ ಸೂರ್ಯನ ಶಾಖಾದಿಂದ, ತೀವ್ರ ಉಷ್ಣತೆಯು ಮೆದುಳು, ಹೃದಯ, ಮೂತ್ರಪಿಂಡಗಳು ಮತ್ತು ಸ್ನಾಯು ಸಮಸ್ಯೆ ಸೇರಿದಂತೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಆರೋಗ್ಯ ಅಪಾಯಗಳು ಇನ್ನಷ್ಟು ಹೆಚ್ಚುತ್ತಿವೆ. ಹೆಚ್ಚುತ್ತಿರುವ ಬಿಸಿಲಿನ ಪ್ರಮಾಣವು ಶಾಖಾಘಾತಕ್ಕೆ ಕಾರಣವಾಗುತ್ತಿದೆ ಮತ್ತು ದೀರ್ಘಕಾಲದವರೆಗೆ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ದೇಹದ ಮೇಲೆ ಹೊಡೆತ ಬೀರುತ್ತಿದೆ. ಇದು ಈ ವರ್ಷದ ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ.
ಇದರಿಂದ ಹೃದಯಾಘಾತ, ಹೃದಯ ಸಂಭ್ತನ, ಪಾರ್ಶ್ವವಾಯವಿನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಹೃದಯ ಮತ್ತು ಮೆದುಳಿಗೆ ರಕ್ತದ ಸಾಮಾನ್ಯ ಹರಿವಿನಲ್ಲಿ ಅಡಚಣೆಗಳಿಂದ ಉಂಟಾಗುತ್ತದೆ.
ಅಧ್ಯಯನವೊಂದರ ಪ್ರಕಾರ ಹೃದ್ರೋಗಿ ವಿಶೇಷವಾಗಿ ಶಾಖಾಘಾತಕ್ಕೆ ಹೆಚ್ಚು ಗುರಿಯಾಗುತ್ತಾರೆ. ಆ ಕಾರಣಕ್ಕೆ ಹೃದಯದ ಸಮಸ್ಯೆ ಇರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ಹೃದಯ ಹಾಗೂ ಮೆದುಳಿನ ಮೇಲೆ ಅತಿಯಾದ ಬಿಸಿಲಿನ ಪ್ರಮಾಣ
ಅತಿ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ಶಾಖಾಘಾತ ಅಥವಾ ಶಾಖ ಬಳಲಿಕೆಯ ಅಪಾಯವನ್ನು ಹೆಚ್ಚಿಸಬಹುದು, ಇದು ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಹೆಚ್ಚಿಸುತ್ತದೆ.
ಶಾಖವು ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದ ಹೃದಯವು ಕಾರ್ಯಚಟುವಟಿಕೆಯೂ ಹೆಚ್ಚಬಹುದು. ಬಿಸಿ ವಾತಾವರಣ ಎಂದರೆ ನಮ್ಮ ಇಡೀ ದೇಹವು ತಾಪಮಾನವನ್ನು ಸಾಮಾನ್ಯ ಮಟ್ಟಕ್ಕೆ ಇಡಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ನಮ್ಮ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟು ಮಾಡುತ್ತದೆ.
ಶಾಖಘಾತದ ಪರಿಣಾಮವು ಮೆದುಳು ಮತ್ತು ಇತರ ಪ್ರಮುಖ ಅಂಗಗಳು ಊದಿಕೊಳ್ಳಲು ಕಾರಣವಾಗಬಹುದು, ಅಲ್ಲದೆ ಇದು ಶಾಶ್ವತ ಹಾನಿಗೆ ಕಾರಣವಾಗಬಹುದು. ತ್ವರಿತ ಮತ್ತು ಸಾಕಷ್ಟು ಚಿಕಿತ್ಸೆ ಇಲ್ಲದೆ ಶಾಖಾಘಾತವು ಮಾರಣಾಂತಿಕವಾಗಬಹುದು.
ರೋಗನಿರ್ಣಯ
ಸಾಮಾನ್ಯವಾಗಿ, ಶಾಖಾಘಾತವು ವೈದ್ಯರಿಗೆ ಸ್ವಷ್ಟವಾಗಿ ಅರಿವಾಗುತ್ತದೆ. ಶಾಘಾಖಾತವನ್ನು ನಿರ್ದಿಷ್ಟ ಪರೀಕ್ಷೆಗಳ ಮೂಲಕ ವೈದ್ಯರು ಕಂಡು ಹಿಡಿಯುತ್ತಾರೆ. ರೋಗನಿರ್ಣಯ ಪರೀಕ್ಷೆಗಳೂ ಇದರಲ್ಲಿ ಸೇರಿವೆ.
ದೇಹದ ಉಷ್ಣತೆ: ಸಂಪೂರ್ಣ ದೇಹದ ಉಷ್ಣತೆಯನ್ನು ಪರಿಶೀಲನೆ ಮಾಡುವುದು. ಗುದನಾಳದ ಉಷ್ಣತೆಯು ಬಾಯಿ ಅಥವಾ ಹಣೆಯ ತಾಪಮಾನಕ್ಕಿಂತ ಹೆಚ್ಚು ನಿಖರವಾಗಿರುತ್ತದೆ ಎನ್ನುತ್ತಾರೆ ತಜ್ಞರು. ದೇಹದ ಉಷ್ಣತೆಯನ್ನು ನಿರ್ಧರಿಸಲು ಇದು ಅತ್ಯಂತ ನಿಖರವಾದ ಮಾರ್ಗವಾಗಿದೆ.
ರಕ್ತಪರೀಕ್ಷೆ: ರಕ್ತ ಹಾಗೂ ಮೂತ್ರಪಿಂಡದ ಕಾರ್ಯ, ಸೀರಮ್ ಎಲೆಕ್ಟ್ರೋಲೈಟ್ ಮಟ್ಟ ಮತ್ತು ರಕ್ತದಲ್ಲಿನ ಅಪಧಮನಿಯ ಅನಿಲಗಳ ಪರೀಕ್ಷೆಯನ್ನು ಮಾಡಲಾಗುತ್ತದೆ.
ಮೂತ್ರ ಪರೀಕ್ಷೆ: ಶಾಖಾಘಾತದಿಂದ ಪ್ರಭಾವಿತವಾಗಬಹುದಾದ ಮೂತ್ರದ ಬಣ್ಣದ, ನಿರ್ದಿಷ್ಟ ಗುರುತ್ವಾಕರ್ಷಣೆ ಮತ್ತು ಸೂಕ್ಷ್ಮ ವಿಷಯಗಳನ್ನು ಪರೀಕ್ಷಿಸಲು ಮೂತ್ರ ಪರೀಕ್ಷೆ ಮಾಡಲಾಗುತ್ತದೆ.
ಈ ಪರೀಕ್ಷೆಗಳ ಜೊತೆಗೆ ಹೃದಯ ವೈಫಲ್ಯವನ್ನು ಮೌಲ್ಯಮಾಪನ ಮಾಡಲು ಮತ್ತು ರೋಗನಿರ್ಣಯ ಮಾಡಲು ಇಸಿಜಿ ಮತ್ತು ಎಕೋಕಾರ್ಡಿಯೋಗ್ರಫಿಯನ್ನು ಮಾಡಬೇಕು. ಅಲ್ಲದೆ ಯಾವುದೇ ರೋಗಿಯಲ್ಲಿ ಪಾರ್ಶ್ವವಾಯುವಿನ ಲಕ್ಷಣ ಕಂಡುಬಂದರೆ ಮೆದುಳಿನ ಸಿಟಿ ಅಥವಾ ಎಂಆರ್‌ಐ ಸ್ಕ್ಯಾನ್ ಮಾಡಬೇಕಾಗುತ್ತದೆ ಎಂದು ಡಾ. ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಸಿಟಿ ಎಕ್ಸ್‌ರೇ ಅಂಡ್ ಸ್ಯಾನಿಂಗ್ ಸೆಂಟರ್‌ನ ಡಾ. ಸುನೀತಾ ಕಪೂರ್ ಹೇಳಿದ್ದಾರೆ.
ಚಿಕಿತ್ಸೆ
ಶಾಖಾಘಾತಕ್ಕೆ ತಕ್ಷಣ ಚಿಕಿತ್ಸೆ ಎಂದರೆ ದೇಹವನ್ನು ತಂಪು ಮಾಡುವುದು. ಇದು ಹೃದಯ, ಮೆದುಳು ಸೇರಿದಂತೆ ದೇಹದ ಇತರ ಭಾಗಗಳನ್ನು ತಂಪಾಗಿಸುತ್ತದೆ. ಅಲ್ಲದೆ ಇತರ ಪ್ರಮುಖ ಅಂಗಗಳಿಗೆ ಹಾನಿಯಾಗುವುದನ್ನು ತಡೆಗಟ್ಟಲು ಇದರಿಂದ ಸಾಧ್ಯವಾಗುತ್ತದೆ. ಈ ತಕ್ಷಣಕ್ಕೆ ದೇಹ ತಂಪಾಗುವಂತೆ ನೋಡಿಕೊಳ್ಳುವುದೇ ಇದಕ್ಕಿರುವ ಪ್ರಥಮ ಚಿಕಿತ್ಸೆ. ನಂತರ ತಡ ಮಾಡದೇ ವೈದ್ಯರ ಬಳಿ ಕರೆದ್ಯೊಯಬೇಕು. ತಕ್ಷಣಕ್ಕೆ ಪ್ಯಾನ್ ಅಡಿಗೆ ಮಲಗಿಸುವುದು, ದ್ರವಾಹಾರ ಅಥವಾ ಒಆರ್‌ಎಸ್ ಕುಡಿಸುವುದು ಮುಖ್ಯವಾಗುತ್ತದೆ.
ವಿಭಾಗ