Health News: ಕಾರಿನೊಳಗಿನ ಗಾಳಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳಿವೆ; ಅಧ್ಯಯನದ ವರದಿ ಹೀಗಿದೆ-health news the air inside the car contains cancer causing chemicals study report details here rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Health News: ಕಾರಿನೊಳಗಿನ ಗಾಳಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳಿವೆ; ಅಧ್ಯಯನದ ವರದಿ ಹೀಗಿದೆ

Health News: ಕಾರಿನೊಳಗಿನ ಗಾಳಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳಿವೆ; ಅಧ್ಯಯನದ ವರದಿ ಹೀಗಿದೆ

ಕಾರೊಳಗಿನ ಗಾಳಿಯೂ ಅಪಾಯಕಾರಿ. ಈ ಗಾಳಿಯಲ್ಲಿ ಕಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳು ಇರುತ್ತವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಎನ್ವಿರಾನ್ಮೆಂಟಲ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಕಟವಾಗಿರುವ ವರದಿಯ ವಿವರ ಇಲ್ಲಿದೆ.

ಕಾರಿನ ಒಳಗಡೆ ಇರುವ ಗಾಳಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳನ್ನು ಹೊಂದಿರುತ್ತದೆ ಎಂದು ಅಧ್ಯಯನವೊಂದು  ಹೇಳಿದೆ.
ಕಾರಿನ ಒಳಗಡೆ ಇರುವ ಗಾಳಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳನ್ನು ಹೊಂದಿರುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಮ್ಮೆಯಾದರೂ ಸ್ವಂತ ಕಾರು ಖರೀದಿಬೇಕೆಂಬ ಆಸೆ ಇರುತ್ತದೆ. ಬೇಸಿಗೆಯಲ್ಲಿ ಅಂತೂ ಕಾರಿನ ಕಿಟಕಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಎಸಿ ಹಾಕಿಕೊಂಡು ಹೋಗುತ್ತಿದ್ದರೆ ಅದರ ಮಜಾನೇ ಬೇರೆ ಇರುತ್ತದೆ. ತಂಪಾದ ಗಾಳಿ ಪ್ರಯಾಣದ ಖುಷಿಯನ್ನು ದುಪ್ಪಟ್ಟು ಮಾಡುತ್ತದೆ. ಆದರೆ ಇಂಥ ಗಾಳಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿರುವುದು ಹಲವರಲ್ಲಿ ಕಳವಳಕ್ಕೆ ಕಾರಣವಾಗಿದೆ. ಕಾರಿನೊಳಗಿನ ಗಾಳಿ (Air Inside the Car) ಆರೋಗ್ಯದ (Health News) ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎನ್ವಿರಾನ್ಮೆಂಟಲ್ ಸೈನ್ ಅಂಡ್ ಟೆಕ್ನಾಲಜಿಯಲ್ಲಿ (Environmental Science and Technology) ಪ್ರಕಟವಾಗಿರುವ ವರದಿಯ ಪ್ರಕಾರ, ಕಾರಿನ ಕ್ಯಾಬಿನ್ ಗಾಳಿಯ (Car Cabin Air) ಗುಣಮಟ್ಟವು ಅತ್ಯಂತ ಅಪಾಯಕಾರಿಯಾಗಿದೆ. ಈ ಗಾಳಿಯಲ್ಲಿ ಕ್ಯಾನ್ಸರ್‌ಗೆ (Cancer) ಕಾರಣವಾಗುವಂತಹ ರಾಸಾಯನಿಕಗಳು (Chemicals) ಇರುತ್ತವೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಸಂಶೋಧಕರು ಈ ಅಧ್ಯಯನಕ್ಕಾಗಿ 2015 ರಿಂದ 2022 ರೊಳಗಿನ 101 ಎಲೆಕ್ಟ್ರಿಕ್, ಗ್ಯಾಸ್ ಹಾಗೂ ಹೈಬ್ರಿಡ್ ವಾಹಗಳ ಕ್ಯಾಬಿನ್ ಗಾಳಿಯನ್ನು ಪರೀಕ್ಷಿಸಿದ್ದಾರೆ. 2015ರ ಕೆಲವು ಮಾದರಿಯ ಕಾರುಗಳು ಹಾಗೂ ಹೊಸ ಕಾರುಗಳ ಕ್ಯಾಬಿನ್‌ಗಳ ಒಳಗಿನ ಗಾಳಿ ಜ್ವಾಲೆಯ ನಿವಾರಕಗಳಿಂದ ಕಲುಷಿತಗೊಂಡಿದೆ ಎಂಬುದನ್ನು ಈ ಅಧ್ಯಯನ ಪತ್ತೆಹಚ್ಚಿದೆ.

ಚಳಿಗಾಲಕ್ಕೆ ಹೋಲಿಸಿದರೆ ಬೇಸಿಗೆಯಲ್ಲಿ ಕಾರಿನ ಕ್ಯಾಬಿನ್‌ಗಳಲ್ಲಿ ಗಾಳಿಯ ಜ್ವಾಲೆಯ ನಿವಾರಕ ಮಟ್ಟ ಎರಡರಿಂದ ಐದು ಪಟ್ಟು ಹೆಚ್ಚು ಇರುತ್ತದೆ ಎಂಬುದನ್ನು ಡ್ಯೂಕ್ ಯೂನಿವರ್ಟಿಸಿ ಮತ್ತು ಗ್ರೀನ್ ಸೈನ್ಸ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಕಂಡು ಹಿಡಿದಿದ್ದಾರೆ.

ಏನಿದು ಜ್ವಾಲೆಯ ನಿವಾರಕ?

ಜ್ವಾಲೆಯ ನಿವಾರಕ ಎಂದರೆ ರಾಸಾಯನಿಕ ಅಥವಾ ಅದೊಂದು ವಸ್ತುವಾಗಿದ್ದು, ಇವುಗಳ ದಹನವನ್ನುಕಡಿಮೆ ಮಾಡಲು ಮತ್ತು ಬೆಂಕಿಯ ಹರಡುವಿಕೆಯನ್ನು ತಡೆಯಲು ವಸ್ತುಗಳಲ್ಲಿ ಅಳವಡಿಸಲಾಗಿರುತ್ತದೆ. ಕಾರುಗಳಲ್ಲಿ ಬೆಂಕಿಯ ಸುರಕ್ಷತೆಯನ್ನು ಹೆಚ್ಚಿಸಲು, ಕಾರ್ಪೆಟ್‌ಗಳು, ನಿರೋಧನ ಹಾಗೂ ಎಲೆಕ್ಟ್ರಿಕ್ ಘಟಕಗಳಂತಹ ವಿವಿಧ ಕಾರಣಗಳಿಗೆ ಜ್ವಾಲೆಯ ನಿವಾರಕಗಳನ್ನು ಸಾಮಾನ್ಯವಾಗಿ ಬಳಸಾಗಿರುತ್ತದೆ.

ಈ ವಸ್ತುಗಳು ಸುರಕ್ಷತಾ ಮಾನದಂಡಗಳು ಮತ್ತು ನಿಬಂಧನೆಗಳನ್ನು ಪೂರೈಸಲು ಕಠಿಣ ಪರೀಕ್ಷೆಗೆ ಒಳಗಾಗುತ್ತವೆ. ಸಂಭಾವ್ಯ ಬೆಂಕಿಯ ಘಟನೆಗಳ ಸಮಯದಲ್ಲಿ ಶಾಖ ಮತ್ತು ಜ್ವಾಲೆಯಗಳನ್ನು ತಡೆದುಕೊಳ್ಳುತ್ತವೆ ಎಂಬ ಕಾರಣಕ್ಕಾಗಿ ಇವುಗಳನ್ನು ಬಳಸಲಾಗುತ್ತದೆ. ವಾಹನಗಳಲ್ಲಿ ಕಂಡು ಬರುವ ಬೆಂಕಿ, ಅಪಘಾತದಂತಹ ಸಂದರ್ಭದಲ್ಲಿ ಇವು ಗಾಯಗಳು, ಸಾವು-ನೋವುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಾರುಗಳಲ್ಲಿ ಹೆಚ್ಚಿನ ಮಟ್ಟದ ಆರ್ಗನೋಫಾಸ್ಟೇಟ್ ಎಸ್ಟರ್‌ಗಳನ್ನು ಇರುವುದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸಾಮಾನ್ಯವಾಗಿ ಜ್ವಾಲೆಯ ನಿವಾರಕಗಳು ಪ್ಲಾಸ್ಟಿಸೈಜರ್‌ಗಳು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್, ಜವಳಿ ಹಾಗೂ ಕಟ್ಟಡ ಸಾಮಗ್ರಿಗಳು ಸೇರಿದಂತೆ ವಿವಿಧ ಗ್ರಾಹಕ ಉತ್ಪನ್ನಗಳಲ್ಲಿ ಬಳಸಲಾಗುವ ರಾಸಾಯನಿಕಗಳ ವರ್ಗವಾಗಿದೆ. ಅಗ್ನಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಉತ್ಪನ್ನದ ಕಾರ್ಯಕ್ಷಮತೆಯನ್ನು ಸುಧಾರಿಸಲು ಇವು ಕೆಲಸ ಮಾಡುತ್ತವೆ. ಆದರೆ ಇವು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಳಿಯಲ್ಲಿ ಸೇರಿಕೊಳ್ಳುವ ರಾಸಾಯನಿಕಗಳು ನರಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಲಿವರ್, ಕಿಡ್ನಿ, ಸಂತಾನೋತ್ಪತ್ತಿ ಪ್ರಕ್ರಿಯೆ ಸೇರಿದಂತೆ ದೇಹದ ವಿವಿಧ ಅಂಗಗಳಲ್ಲಿ ವಿಷವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ ಎಂದು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.

ಹಾರ್ಮೋನ್ ಸಮಸ್ಯೆ, ಉಸಿರಾಟದ ತೊಂದರೆ, ನ್ಯೂರೋಬಿಹೇವಿಯರಲ್ ಡಿಸಾರ್ಡರ್‌ಗಳು ಹಾಗೂ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಇದು ಕಾರಣವಾಗುವ ಸಾಧ್ಯತೆ ಇದೆ. ಇದರಿಂದ ಪಾರಾಗಾಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಕಾರಿನ ಕ್ಯಾಬಿನ್‌ನೊಳಗೆ ನೈಸರ್ಗಿಕ ಗಾಳಿ ಇರುವಂತೆ ನೋಡಿಕೊಳ್ಳಬೇಕು. ಅಂದರೆ ಬಹುತೇಕ ಸಮಯದಲ್ಲಿ ಕಾರಿನ ಕಿಟಕಿಗಳನ್ನು ತೆರೆದಿರಬೇಕು. ವಾಹನದೊಳಗೆ ಧೂಮಪಾನ ಮಾಡುವುದನ್ನ ತಪ್ಪಿಸಬೇಕು. ಕಾರಿನಗೊಳಗೆ ಇರುವ ಧೂಳು ಮತ್ತು ಕಸವನ್ನು ತೆರೆಯಲು ಆಗಾಗ ಕಾರನ್ನು ಸ್ವಚ್ಛಗೊಳಿಸುತ್ತಿರಬೇಕು. ಹೀಗಿ ಮಾಡಿದಾಗ ಕಾರಿನ ಕ್ಯಾಬಿನ್ ಗಾಳಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ಸಂಶೋಧಕರು ಹೊಸ ಅಧ್ಯಯನದಲ್ಲಿ ಹೇಳಿದ್ದಾರೆ.

mysore-dasara_Entry_Point