Kidney Problem: ಮೂತ್ರಪಿಂಡದ ಆರೋಗ್ಯ ವೃದ್ಧಿಸುವ 7 ಗಿಡಮೂಲಿಕೆಗಳಿವು; ಕಿಡ್ನಿ ಸಮಸ್ಯೆ ಬರಬಾರ್ದು ಅಂದ್ರೆ ಪ್ರತಿದಿನ ಇವುಗಳನ್ನು ಸೇವಿಸಿ
ಇತ್ತೀಚೆಗೆ ಕಿಡ್ನಿ ಸಮಸ್ಯೆ ಹಲವರನ್ನು ಕಾಡುತ್ತಿದೆ, ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದೂ ಕಷ್ಟ. ಕಿಡ್ನಿ ಸಮಸ್ಯೆ ಗಂಭೀರ ಆದ್ರೆ ಜೀವಕ್ಕೂ ಅಪಾಯ ತಪ್ಪಿದ್ದಲ್ಲ. ಹಾಗಂತ ಹೆದರುವ ಅಗತ್ಯವಿಲ್ಲ. ಮನೆಯಲ್ಲೇ ಇರುವ ಕೆಲವು ಗಿಡಮೂಲಿಕೆಗಳಿಂದ ಕಿಡ್ನಿ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹಾಗಾದರೆ ಅವು ಯಾವುದು ನೋಡಿ.
ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಈಗ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎನ್ನುವ ಕಾಲ. ರೋಗವನ್ನು ಬರುವ ಮೊದಲೇ ತಡೆಗಟ್ಟಬೇಕು. ಇಲ್ಲದಿದ್ದರೆ ಒಂದಿಲ್ಲೊಂದು ಅಪಾಯಗಳು, ಒಂದರ ಹಿಂದೆ ಒಂದರಂತೆ ಸಾಲಾಗಿ ಬರುತ್ತವೆ. ಹಾಗಾಗಿ ಆಹಾರಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು ಬೆಸ್ಟ್ ಅಂತಲೇ ಹೇಳಬಹುದು.
ಕಿಡ್ನಿ ಮನುಷ್ಯ ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಕಿಡ್ನಿ ಸಮಸ್ಯೆ ಆರಂಭಿಕ ಹಂತದಲ್ಲಿ ಅರಿವಾಗುವುದಿಲ್ಲ. ಆದರೆ ಇದು ಮಿತಿ ಮೀರಿದರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಕಿಡ್ನಿ ಆರೋಗ್ಯವನ್ನು ಜೋಪಾನ ಮಾಡುವುದು ಅವಶ್ಯ. ಕರ್ಮ ಆಯುರ್ವೇದದ ಸ್ಥಾಪಕ, ನಿರ್ದೇಶಕ ಡಾ. ಪುನೀತ್ ಅವರು ಕಿಡ್ನಿ ಆರೋಗ್ಯ ಸುಧಾರಿಸುವ ಕೆಲವು ಗಿಡಮೂಲಿಕೆಗಳ ಬಗ್ಗೆ ತಿಳಿಸಿದ್ದಾರೆ. ಇವು ಕಿಡ್ನಿಯಲ್ಲಿನ ವಿಷಕಾರಿ ಅಂಶವನ್ನು ತ್ಯಜಿಸುವುದು ಮಾತ್ರವಲ್ಲ, ದೀರ್ಘಕಾಲದ ಅಪಾಯವನ್ನೂ ದೂರ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನು ದಿ ಯೋಗ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾದ ಡಾ. ಹಂಸಜಿ ಯೋಗೇಂದ್ರ ಅವರ ಪ್ರಕಾರ ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ನಿರ್ವಿಷಗೊಳಿಸಲು ಮತ್ತು ಸುಧಾರಿಸಲು ಕೆಲವು ಪರಿಣಾಮಕಾರಿ ಆಯುರ್ವೇದ ಗಿಡಮೂಲಿಕೆ ಪರಿಹಾರಗಳಿವೆ. ಅವರು ಹೇಳಿರುವ ಕೆಲವು ಆಯುರ್ವೇದ ಮೂಲಿಕೆಗಳು ಹಾಗೂ ಅವುಗಳ ಕಾರ್ಯಗಳಿವು.
ಕೊತ್ತಂಬರಿ
ಕೊತ್ತಂಬರಿ ಬೀಜ ಹಾಗೂ ಸೊಪ್ಪು ಎರಡೂ ಕಿಡ್ನಿಯ ಆರೋಗ್ಯಕ್ಕೆ ಬಹಳ ಉತ್ತಮ. ಇದು ಮೂತ್ರವರ್ಧಕವಾಗಿರುವುದರಿಂದ ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ದೇಹದಿಂದ ಹೊರ ಹೋಗುವಂತೆ ಮಾಡುತ್ತದೆ. ಇದು ಮೂತ್ರನಾಳದ ಸೋಂಕಿನ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ತುಳಸಿ
ತುಳಸಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದಿಂದ ವಿಷವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಚಹಾಕ್ಕೆ ಎರಡು ಎಲೆ ತುಳಸಿ ಸೇರಿಸಬಹುದು ಅಥವಾ ನೀರಿನಲ್ಲಿ ತುಳಸಿ ಎಲೆಗಳನ್ನು ಸೇರಿಸಿ, ಕುದಿಸಿ ಕುಡಿಯಬಹುದು.
ಪುನರ್ನವ
ಇದು ಅತ್ಯುತ್ತಮ ಉರಿಯೂತ ನಿವಾರಣ ಗುಣಗಳನ್ನು ಹೊಂದಿದೆ. ಅಲ್ಲದೆ ಇದು ಮೂತ್ರವರ್ಧಕವೂ ಹೌದು. ಇದರ ಬೇರುಗಳನ್ನು ಪುಡಿ ಮಾಡಿ ಬಳಸಬಹುದು.
ಗೋಖ್ರು
ಗೋಕ್ಷುರಾ ಎಂದೂ ಕರೆಯುವ ಈ ಆಯುರ್ವೇದ ಮೂಲಕೆಯು ಚಯಾಪಚಯ ಕ್ರಿಯೆಗಳಾದ ಅನಾಬೊಲಿಸಮ್ ಮತ್ತು ಕ್ಯಾಟಬಾಲಿಸಮ್ ಎಂಬ ಎರಡೂ ಅಂಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕೂಡ ಮೂತ್ರವರ್ಧಕ ಮೂಲಿಕೆಯಾಗಿದೆ. ಇದು ಮೂತ್ರದ ಉತ್ಪಾದನೆ ಹೆಚ್ಚಲು ಸಹಾಯ ಮಾಡುತ್ತದೆ.
ಶುಂಠಿ
ಶುಂಠಿಯು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಆಯುರ್ವೇದದ ಪ್ರಕಾರ ಮೂತ್ರಪಿಂಡದ ಸಮಸ್ಯೆಗಳಿಗೆ ಉರಿಯೂತ ಪ್ರಮುಖ ಕಾರಣ. ಶುಂಠಿಯು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮೂತ್ರಪಿಂಡಗಳ ಹಾನಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ತುರಿದು ಚಹಾದೊಂದಿಗೆ ಸೇರಿಸಿ ಕುದಿಸಿ ಕುಡಿಯಬಹುದು. ಚಳಿಗಾಲದಲ್ಲಿ ಶುಂಠಿ ಚಹಾ ಬೆಸ್ಟ್ ಎನ್ನುತ್ತಾರೆ ಡಾ. ಪುನೀತ್.
ಬೆಳ್ಳುಳ್ಳಿ
ಅಧಿಕ ರಕ್ತದೊತ್ತಡವು ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ. ಬೆಳ್ಳುಳ್ಳಿಯು ರಕ್ತದೊತ್ತಡವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇದು ಕಿಡ್ನಿಗೆ ಉತ್ತಮವಾಗಿರುವ ಗಿಡಮೂಲಿಕೆಯಾಗಿದೆ.
ಅರಿಸಿನ
ಅರಿಸಿನದಲ್ಲಿ ಬಲವಾದ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿರುವ ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದು ಮೂತ್ರಪಿಂಡದ ಆರೋಗ್ಯ ಸುಧಾರಣೆಗೆ ಉತ್ತಮ. ಇದು ಮೂತ್ರಪಿಂಡದ ಕಾರ್ಯವನ್ನು ಪುನರುಜ್ಜೀವನಗೊಳಿಸುತ್ತದೆ.
ವಿಭಾಗ