ಕನ್ನಡ ಸುದ್ದಿ  /  Lifestyle  /  Healthy And Tasty Monsoon Soup

Monsoon Food: ಶೀತ, ಕೆಮ್ಮಿನಿಂದ ನಮ್ಮನ್ನು ಕಾಪಾಡುವ ಸೂಪ್ ಇದು...ತಯಾರಿಸೋದು ಹೇಗೆ ನೋಡಿ

ಮೆಂತ್ಯ ಸೊಪ್ಪು ಹಾಗೂ ಕಾರ್ನ್ ಎರಡೂ ಸೂಪ್​​​ಗೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಈ ಸೂಪ್ ತಯಾರಿಸಬಹುದು. ಈ ಆರೋಗ್ಯಕರ ರೆಸಿಪಿ ಮಾಡಲು ಬೇಕಾದ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಯೋಣ.

ಮೆಂತ್ಯ ಕಾರ್ನ್ ಸೂಪ್
ಮೆಂತ್ಯ ಕಾರ್ನ್ ಸೂಪ್ (ಫೋಟೋ ಕೃಪೆ: ಪಿಕ್ಸ ಬೇ)

ಬಹಳಷ್ಟು ಜನರು ಊಟಕ್ಕೆ ಮುನ್ನ ಸೂಪ್ ಕುಡಿಯುತ್ತಾರೆ. ಅದರಲ್ಲೂ ಚಳಿ ಹಾಗೂ ಮಳೆಗಾದಲ್ಲಿ ಹೆಚ್ಚು ಸೂಪ್ ಕುಡಿಯುತ್ತಾರೆ. ಈ ಮಾನ್ಸೂನ್​​​​​​​​​​ಗೆ ಸರಿ ಹೊಂದುವ ಸೂಪ್​​​​​​ ರೆಸಿಪಿಯನ್ನು ನಾವು ನಿಮಗಾಗಿ ಹೇಳಿಕೊಡುತ್ತಿದ್ದೇವೆ.

ಮೆಂತ್ಯ ಸೊಪ್ಪಿನ ಸೂಪ್ ಎಂದಾದರೂ ಸೇವಿಸಿದ್ದೀರಾ..? ಮೆಂತ್ಯ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಅವುಗಳನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಬಳಸಲಾಗುತ್ತದೆ. ಮೆಂತ್ಯ ಸೊಪ್ಪು ಹಾಗೂ ಕಾರ್ನ್ ಎರಡೂ ಸೂಪ್​​​ಗೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಈ ಸೂಪ್ ತಯಾರಿಸಬಹುದು. ಈ ಆರೋಗ್ಯಕರ ರೆಸಿಪಿ ಮಾಡಲು ಬೇಕಾದ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಗ್ರಿಗಳು

ಮೆಂತ್ಯ ಸೊಪ್ಪು - ಒಂದು ಹಿಡಿ

ಕಾರ್ನ್ ಫ್ಲೋರ್​​​ - 1 ಟೀ ಸ್ಪೂನ್

ಕಾರ್ನ್​ - 1 ಕಪ್

ಬೆಣ್ಣೆ - ಅರ್ಧ ಟೀ ಸ್ಪೂನ್

ಸ್ಪ್ರಿಂಗ್ ಆನಿಯನ್ - 2

ಬೆಳ್ಳುಳ್ಳಿ - 2

ಚಿಕ್ಕ ಕ್ಯಾರೆಟ್ - 1

ಕರಿಮೆಣಸಿನ ಪುಡಿ - ಚಿಟಿಕೆ

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಒಂದು ಬೌಲ್​​​ಗೆ ಕಾರ್ನ್ ಫ್ಲೋರ್ ಹಾಗೂ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಪಕ್ಕಕ್ಕೆ ಇರಿಸಿ

ಕ್ಯಾರೆಟ್, ಸ್ಪ್ರಿಂಗ್ ಆನಿಯನ್, ಮೆಂತ್ಯ ಸೊಪ್ಪು, ಬೆಳ್ಳುಳ್ಳಿ ಎಲ್ಲವನ್ನೂ ಸ್ವಚ್ಛಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಿ

ಒಂದು ಪ್ಯಾನ್​​​​​​​​​​​​​ಗೆ ಬೆಣ್ಣೆ ಸೇರಿಸಿ ಅದು ಕರಗಿದ ನಂತರ ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್, ಬೆಳ್ಳುಳ್ಳಿ ಮತ್ತು ಕ್ಯಾರೆಟ್ ಸೇರಿಸಿ ಮಧ್ಯಮ ಉರಿಯಲ್ಲಿ 2-3 ನಿಮಿಷ ಫ್ರೈ ಮಾಡಿ

ಇದರೊಂದಿಗೆ ಕಾರ್ನ್ ಸೇರಿಸಿ 2 ನಿಮಿಷ ಹುರಿಯಿರಿ, ನಂತರ ಉಪ್ಪು ಹಾಗೂ ಎರಡು ಕಪ್ ನೀರು ಸೇರಿಸಿ

ಈ ಮಿಶ್ರಣವನ್ನು ಸುಮಾರು 6-7 ನಿಮಿಷಗಳ ಕಾಲ ಬೇಯಿಸಿ

ನಂತರ ಸ್ವಚ್ಛ ಮಾಡಿ, ಸಣ್ಣಗೆ ಹೆಚ್ಚಿದ ಮೆಂತ್ಯ ಸೊಪ್ಪು ಸೇರಿಸಿ ಮತ್ತೆ ಎರಡು ನಿಮಿಷ ಬೇಯಿಸಿ

ಈಗ ಮೊದಲೇ ಮಿಕ್ಸ್ ಮಾಡಿಕೊಂಡಿದ್ದ ಕಾರ್ನ್ ಫ್ಲೋರ್ ಮಿಶ್ರಣವನ್ನು ಸೇರಿಸಿ ಗಂಟುಗಳಾಗದಂತೆ ಮಿಕ್ಸ್ ಮಾಡಿ

ಒಂದು ನಿಮಿಷದ ನಂತರ ಕರಿಮೆಣಸಿನ ಪುಡಿ ಸೇರಿಸಿ ಸ್ಟೋವ್ ಆಫ್ ಮಾಡಿ

ಈ ರುಚಿಯಾದ, ಆರೋಗ್ಯಕರ ಸೂಪನ್ನು ಬಿಸಿ ಬಿಸಿ ಸರ್ವ್ ಮಾಡಿ

ಈ ಸೂಪ್​ ನಿಮಗೆ, ಮಾನ್ಸೂನ್‌ನಲ್ಲಿ ಕಾಡುವ ಶೀತದಿಂದ ಪರಿಹಾರ ನೀಡುತ್ತದೆ. ಈ ಸೂಪ್ ಸೇವಿಸಲು ಬಹಳ ರುಚಿ ಮಾತ್ರವಲ್ಲದೆ ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳು ಬಾರದಂತೆ ತಡೆಯುತ್ತದೆ. ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ.

ವಿಭಾಗ