ಮಳೆಗಾಲದಲ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ನೋಡಿ ಸರಳ ಉಪಾಯ, ಈ ರೀತಿ ಮನೆಯ ವಾತಾವರಣ ನಿರ್ಮಿಸಿ
ಮಳೆಗಾಲದಲ್ಲಿ ಮನೆಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸೊಳ್ಳೆಗಳು ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ಹರಡುತ್ತವೆ. ಆದರೆ ಈ ರೋಗಗಳಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಸೊಳ್ಳೆಗಳು ಮನೆ ಒಳಗಡೆ ಬರದಂತೆ ಮಾಡಿಕೋಳ್ಳಬೇಕು. ಬೇವಿನ ಎಲೆಯ ಎಣ್ಣೆಯನ್ನು ನೀವು ಬಳಸಿ ಸೊಳ್ಳೆಗಳನ್ನು ಓಡಿಸಬಹುದು.
ಮಳೆಗಾಲದಲ್ಲಿ ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸುವುದು ಅಮ್ಮಂದಿರಿಗೆ ಒಂದು ಸವಾಲಿನ ಕೆಲಸ. ಮಳೆಗಾಲ ಮುಗಿಯಿತು ಎಂದು ಅಂದುಕೊಂಡರೂ ಸೊಳ್ಳೆಗಳ ಕಾಟ ಮಾತ್ರ ತಪ್ಪುತ್ತಿಲ್ಲ. ಮನೆಯ ಹೊರ ವಲಯವನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಸಾಲುವುದಿಲ್ಲ. ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡುವ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಜನರು ಮಾಡದ ಪ್ರಯತ್ನಗಳಿಲ್ಲ. ಅಂತಹ ಪ್ರಯತ್ನಗಳ ಸಾಲಿಗೆ ನೀವು ಇವುಗಳನ್ನೂ ಸೇರಿಸಿಕೊಳ್ಳಬಹುದು.
ಕಹಿ ಬೇವಿನ ಎಲೆ ಸಹಕಾರಿ
ನಿಮ್ಮ ಮನೆಯಲ್ಲಿ ನೀವು ಕಹಿ ಬೇವಿನ ಎಣ್ಣೆಯನ್ನು ಇಟ್ಟುಕೊಳ್ಳಿ. ಈ ಎಣ್ಣೆಯನ್ನು ಆಗಾಗ ಮೈಗೆ ಸವರಿಕೊಳ್ಳಿ. ಈ ಎಣ್ಣೆಯ ವಾಸನೆಗೆ ಸೊಳ್ಳೆಗಳು ನಿಮ್ಮ ಬಳಿ ಬರೋದಿಲ್ಲ. ಅವುಗಳಿಗೆ ಈ ವಾಸನೆ ಆಗೋದಿಲ್ಲ. ಇನ್ನು ಕಹಿ ಬೇವಿನ ಎಣ್ಣೆ ನಿಮ್ಮ ಬಳಿ ಇಲ್ಲ ಎಂದಾದರೆ ಕಹಿ ಬೇವಿನ ಸೊಪ್ಪುಗಳನ್ನು ತೆಗೆದುಕೊಳ್ಳಿ. ಅದನ್ನು ಕೈಯ್ಯಲ್ಲಿ ಸ್ವಲ್ಪ ಜಜ್ಜಿ ಅದರ ರಸವನ್ನು ನಿಮ್ಮ ಮೈಗೆ ಬಳಿದುಕೊಳ್ಳಿ. ಈ ರೀತಿ ಮಾಡಿದರೂ ಸೊಳ್ಳೆಗಳಿಂದ ನೀವು ದೂರ ಇರಬಹುದು.
ಇನ್ನು ಮನೆಯಲ್ಲಿ ಸೊಳ್ಳೆ ಪರದೆ ಬಳಸಿ
ಮನೆಯ ಒಳಗಡೆ ನೀವು ಮಲಗುವ ಕೋಣೆಯಲ್ಲಿ ಕಿಟಕಿ, ಬಾಗಿಲನ್ನು ಭದ್ರವಾಗಿ ಮುಚ್ಚಿ. ಅದರ ಜೊತೆಗೆ ನೀವು ಸೊಳ್ಳೆ ಪರದೆಯನ್ನು ಬಳಕೆ ಮಾಡಿ. ಕಹಿ ಬೇವಿನೊಂದಿಗೆ ಬೆರೆಸಿದ ಕರ್ಪೂರವನ್ನು ಸುಟ್ಟು ಅದರ ಹೊಗೆಯನ್ನು ಕೋಣೆಯ ತುಂಬಾ ಹಾಕಿ ಮಲಗಿಕೊಳ್ಳಿ. ಹೀಗೆ ಮಾಡಿದರೆ ಸೊಳ್ಳೆಗಳ ಕಾಟ ಕಡಿಮೆ ಆಗುತ್ತದೆ. ಸದಾ ಇದ್ದ ತೋಳಿನ ಅಂಗಿಯನ್ನೇ ಬಳಸಿ.
ನೀರು ನಿಲ್ಲದಂತೆ ನೋಡಿಕೊಳ್ಳಿ
ಮಳೆಗಾಲದಲ್ಲಿಯೂ ಅನೇಕ ನೀರಿನಿಂದ ಹರಡುವ ರೋಗಗಳು ಬರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಲ್ಲಬಾರದು. ನೀರು ತುಂಬಿದ್ದರೆ ಅದನ್ನು ತಕ್ಷಣ ಖಾಲಿ ಮಾಡಿ. ಯಾಕೆಂದರೆ ಆ ನಿಂತ ನೀರಿನಲ್ಲಿ ಸೊಳ್ಳೆಗಳು ಮರಿ ಇಡುತ್ತದೆ. ನೀವು ಒಂದು ಪಾತ್ರೆಯಲ್ಲಿ ಕಹಿ ಬೇವಿನ ಎಲೆಗಳು, ಗುಲಾಬಿ ದಳಗಳನ್ನು ಹಾಕಿ ಮನೆಯಲ್ಲಿ ಇಟ್ಟರೂ ಆಗುತ್ತದೆ.
ಕರ್ಪೂರ ಬಳಸಿ
ಕರ್ಪೂರ ಕಠುವಾದ ವಾಸನೆಯನ್ನು ಹೊಂದಿರುತ್ತದೆ. ಇದನ್ನು ಮನೆಯಲ್ಲಿ ಸುಟ್ಟರೆ ಆ ವಾಸನೆಗೆ ಸೊಳ್ಳೆಗಳು ಮನೆಯನ್ನು ಪ್ರವೇಶಿಸುವುದಿಲ್ಲ. ಇದರ ಜೊತೆ ಒಣಗಿಸಿದ ಕರಿ ಬೇವಿನ ಎಲೆಗಳಿದ್ದರೆ ಎರಡನ್ನೂ ಒಟ್ಟಿಗೆ ಹಾಕಿ ಸುಟ್ಟುಬಿಡಿ. ಈ ರೀತಿ ಮಾಡಿದರೂ ಸೊಳ್ಳೆಗಳ ಕಾಟ ತಪ್ಪುತ್ತದೆ. ನಿಮ್ಮ ಎಚ್ಚರಿಕೆಯಿಂದ ನೀವು ಇರಬೇಕು.
ವಿಭಾಗ