ನಿಮ್ಮ ಮೂಳೆಗಳು ಸವಕಳಿ ಬರದಂತೆ ತಡೆಯಲು ಕ್ಯಾಲ್ಸಿಯಂ ಅತಿ ಮುಖ್ಯ, ಇವುಗಳನ್ನುತಿಂದರೆ ಮೂಳೆಗಳ ಬಲ ಹೆಚ್ಚುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಮೂಳೆಗಳು ಸವಕಳಿ ಬರದಂತೆ ತಡೆಯಲು ಕ್ಯಾಲ್ಸಿಯಂ ಅತಿ ಮುಖ್ಯ, ಇವುಗಳನ್ನುತಿಂದರೆ ಮೂಳೆಗಳ ಬಲ ಹೆಚ್ಚುತ್ತೆ

ನಿಮ್ಮ ಮೂಳೆಗಳು ಸವಕಳಿ ಬರದಂತೆ ತಡೆಯಲು ಕ್ಯಾಲ್ಸಿಯಂ ಅತಿ ಮುಖ್ಯ, ಇವುಗಳನ್ನುತಿಂದರೆ ಮೂಳೆಗಳ ಬಲ ಹೆಚ್ಚುತ್ತೆ

ನಿಮ್ಮ ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಬಯಸಿದರೆ ನೀವು ಈ ಅಂಶಗಳನ್ನು ಗಮನಿಸಿ. ಹಾಲು, ಹಣ್ಣು ಮತ್ತು ಮೊಟ್ಟೆಯನ್ನು ನಿಯಮಿತವಾಗಿ ತಿನ್ನಿ. ನಿಮ್ಮ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಿ.

ಮೂಳೆ ಸವಕಳಿ
ಮೂಳೆ ಸವಕಳಿ

ನಿಮ್ಮ ಆರೋಗ್ಯ ನಿಮಗೆ ತುಂಬಾ ಮುಖ್ಯ. ಆರೋಗ್ಯವಾಗಿದ್ದರೆ ಮಾತ್ರ ನೀವು ಜೀನದಲ್ಲಿ ಏನಾದರೊಂದನ್ನು ಸಾಧಿಸಲು ಸಾಧ್ಯ. ಅದರ ಹೊರತಾಗಿ ಏನೂ ಸಾಧ್ಯವಿಲ್ಲ. ಹೀಗಿರುವಾ ನೀವು ನಿಮ್ಮ ಮೂಳೆಗಳ ಆರೋಗ್ಯದ ಬಗ್ಗೆಯೂ ಗಮನಕೊಡಬೇಕು. ಈಗ ಯಾರಿಗೆ ನೋಡಿದರೂ ಜಾಂಯ್ಟ್‌ ಪೇನ್ ಎಂಬ ಮಾತು ಕೇಳಿ ಬರುತ್ತದೆ. ಆ ಮಾತಿನಿಂದ ನೀವು ಹೊರತಾಗಬೇಕು. ನಿಮ್ಮ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇನ್ನು ಕುಳಿತು ಕೆಲಸ ಮಾಡುವವರಿಗೂ ಇದೇ ಸಮಸ್ಯೆ ಬಾಧಿಸುತ್ತಿದೆ.ಎಷ್ಟೋ ಜನರ ಬೆನ್ನೆಲುಬಿನಲ್ಲಿ ಸವಕಳಿ ಕಾಣಿಸುತ್ತದೆ.

ಅವರ ಆಹಾರದಲ್ಲಿ ಮೂಳೆಯ ಆರೋಗ್ಯವನ್ನು ಉತ್ತೇಜಿಸುವ ಆಹಾರವನ್ನು ಸೇರಿಸುವುದು ಅತ್ಯಗತ್ಯ. ಅಂತಹ ಆಹಾರಗಳ ಬಗ್ಗೆ ತಿಳಿಯೋಣ. ಈ ಆಹಾರಗಳಲ್ಲಿ ಕ್ಯಾಲ್ಸಿಯಂ ಇರುವುದು ಅತಿ ಮುಖ್ಯವಾಗುತ್ತದೆ. ಮೂಳೆಯ ಬೆಳವಣಿಗೆ ಹಾಗೂ ಬಲವೃದ್ದಿಗೆ ಇದು ತುಂಬಾ ಸಹಕಾರಿಯಾಗುತ್ತದೆ.

ಹಾಲು: ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳು ಹೆಚ್ಚಿನ ಕ್ಯಾಲ್ಸಿಯಂ ಅಂಶ ಹೊಂದಿರುತ್ತದೆ. ಪ್ರತಿನಿತ್ಯ ಹಾಲು ಕುಡಿಯುವುದರಿಂದ ನಿಮ್ಮ ಮೂಳೆಗಳಿಗೆ ಬಲ ದೊರೆಯುತ್ತದೆ. ಇನ್ನು ನಿಮ್ಮ ಹಲ್ಲುಗಳು ಸಹ ಗಟ್ಟಿಯಾಗುತ್ತದೆ. ಮೂಳೆ ರಚನೆಗೆ ಇದು ಅವಶ್ಯಕವಾಗಿದೆ. ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಡಿ ಕೂಡ ಇರುತ್ತದೆ. ಇದೆಲ್ಲವೂ ಮೂಳೆಗೆ ಉಪಯುಕ್ತವಾಗಿದೆ.

ಹಸಿರು ಸೊಪ್ಪು: ಅದರಲ್ಲೂ ಪಾಲಕ್ ಸೊಪ್ಪು ನಿಮಗೆ ಹೆಚ್ಚಿನ ಪೋಷಕಾಂಶವನ್ನು ನೀಡುತ್ತದೆ. ಇದು ನಿಮ್ಮ ಮೂಳೆ ಬೆಳವಣಿಗೆಗೆ ಕಾರಣವಾಗುತ್ತದೆ. ವಿಟಮಿನ್ ಕೆ ಇದರಲ್ಲಿ ಇರುತ್ತದೆ. ಇನ್ನು ಎಲೆಕೋಸು ಸಹ ಒಂದು ಉತ್ತಮ ಮೂಲವಾಗಿದೆ. ನೀವು ಇವುಗಳನ್ನು ತಿಂದಲ್ಲಿ ನಿಮ್ಮ ಮೂಳೆ ಸವಕಳಿಯ ಅಪಾಯ ಕಡಿಮೆ ಆಗುತ್ತದೆ.

ಬಾದಾಮಿ: ಬಾದಾಮಿಯು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ಅನ್ನು ಹೆಚ್ಚಾಗಿ ಹೊಂದಿದೆ. ಈ ಕಾರಣಕ್ಕೆ ನೀವು ಇವುಗಳನ್ನು ತಿನ್ನಬೇಕು. ಬಾದಾಮಿ ಇದೊಂದೇ ಕಾರಣಕ್ಕೂ ಅಲ್ಲ. ಮೆದುಗಳನ್ನು ಚುರುಕುಗೊಳಿಸಲು ಸಹ ತುಂಬಾ ಉಪಯುಕ್ತವಾಗಿದೆ. ಚಿಕ್ಕ ಮಕ್ಕಳಿಗೆ ಇದನ್ನು ಪ್ರತಿನಿತ್ಯ ಕೊಡಿ. ಇದರಿಂದ ಅವರ ಮೂಳೆಗಳು ಬಲಗೊಳ್ಳುತ್ತದೆ.

ಹಣ್ಣುಗಳು: ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ದ್ರಾಕ್ಷಿ ಹೀಗೆ ಸ್ವಲ್ಪ ಹುಳಿ ಇರುವ ಹಣ್ಣುಗಳನ್ನು ತಿನ್ನಬೇಕು.. ಇವುಗಳು ಸಹ ಮೂಳೆಗಳನ್ನು ಬಲ ಪಡಿಸುವಲ್ಲಿ ಸಹಾಯ ಮಾಡುತ್ತದೆ. ಸೋಯಾಬೀನ್ ಮತ್ತು ಸೋಯಾ ಚೀಸ್ ನಂತಹ ಪದಾರ್ಥಗಳು ಸಹ ಸಹಕಾರಿಯಾಗಿದೆ.

ಮೂಳೆ ಸವಕಳಿಗೆ ಮುಖ್ಯ ಕಾರಣ ಸರಿಯಾಗಿ ತಿನ್ನದೇ ಇರುವುದು ಅಂದರೆ ಪೋಷಕಾಂಶಗಳ ಕೊರತೆ ಆಗಿರುತ್ತದೆ.

Whats_app_banner