ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುವುದು ಹೇಗೆ? ಇಲ್ಲಿದೆ ಹಂತ ಹಂತದ ವಿವರ, ಗೃಹಿಣಿಯರಿಗಿದು ಉಪಯುಕ್ತ ಮಾಹಿತಿ-home and garden how to grow coriander from leaves at home step by step guide to grow coriander leaves rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುವುದು ಹೇಗೆ? ಇಲ್ಲಿದೆ ಹಂತ ಹಂತದ ವಿವರ, ಗೃಹಿಣಿಯರಿಗಿದು ಉಪಯುಕ್ತ ಮಾಹಿತಿ

ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುವುದು ಹೇಗೆ? ಇಲ್ಲಿದೆ ಹಂತ ಹಂತದ ವಿವರ, ಗೃಹಿಣಿಯರಿಗಿದು ಉಪಯುಕ್ತ ಮಾಹಿತಿ

How To Grow Coriander: ಭಾರತೀಯ ಅಡುಗೆ ಮನೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ವಿಶೇಷ ಮಹತ್ವವಿದೆ. ಅಡುಗೆಯ ಘಮ ಹೆಚ್ಚಿಸುವ ಕೊತ್ತಂಬರಿ ಸೊಪ್ಪು ವಿಶೇಷ ರುಚಿ ನೀಡುವುದು ಸುಳ್ಳಲ್ಲ. ಇಂತಹ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲೂ ಚಿಕ್ಕ ಜಾಗದಲ್ಲಿ ಸುಲಭವಾಗಿ ಬೆಳೆದುಕೊಳ್ಳಬಹುದು. ಕೊತ್ತಂಬರಿ ಸೊಪ್ಪು ಬೆಳೆಸುವ ಹಂತದ ಹಂತ ವಿವರ ಇಲ್ಲಿದೆ.

ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುವ ವಿಧಾನ
ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುವ ವಿಧಾನ

How To Grow Coriander Leaves: ಪ್ರಪಂಚದಾದ್ಯಂತ ಖಾದ್ಯಗಳ ರುಚಿ ಹಾಗೂ ಘಮ ಹೆಚ್ಚಿಸುವ ಸಲುವಾಗಿ ಕೊತ್ತಂಬರಿ ಸೊಪ್ಪು ಬಳಸುತ್ತಾರೆ. ಧನಿಯಾ ಅಂತಲೂ ಕರೆಯುವ ಕೊತ್ತಂಬರಿ ಸೊಪ್ಪಿಗೆ ಭಾರತೀಯ ಪಾಕವಿಧಾನದಲ್ಲೂ ವಿಶೇಷ ಮಹತ್ವವಿದೆ. ಕೊತ್ತಂಬರಿ ಸೊಪ್ಪು ಇಲ್ಲ ಎಂದಾದರೆ ಕೆಲವು ಅಡುಗೆಗಳು ಪೂರ್ಣಗೊಳ್ಳುವುದಿಲ್ಲ. ಹಾಗಂತ ಕೊತ್ತಂಬರಿ ಸೊಪ್ಪು ರಾಶಿ ತಂದು ಮನೆಯಲ್ಲಿ ಇಟ್ಟುಕೊಳ್ಳಲೂ ಸಾಧ್ಯವಿಲ್ಲ. 

ಕೊತ್ತಂಬರಿ ಸೊಪ್ಪು ಖಾಲಿಯಾದಾಗ ಮಾರುಕಟ್ಟೆಗೆ ಓಡುವ ಬದಲು ಮನೆಯಲ್ಲೇ ಸುಲಭವಾಗಿ ಬೆಳೆದುಕೊಳ್ಳಬಹುದು. ಅದಕ್ಕೆ ಹೆಚ್ಚು ಜಾಗ ಅವಶ್ಯಕತೆಯೂ ಇಲ್ಲ. ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆಸುವುದರಿಂದ ತಾಜಾ ಸೊಪ್ಪಿನ ಬಳಕೆಯೂ ಸಾಧ್ಯವಾಗುತ್ತದೆ. ಮಾತ್ರ ರಾಸಾಯನಿಕ ಮುಕ್ತ ಸೊಪ್ಪು ಬೆಳೆಸಬಹುದು. ಕೊತ್ತಂಬರಿ ಸೊಪ್ಪನ್ನು ಮನೆಯಲ್ಲೇ ಬೆಳೆಸುವುದು ಹೇಗೆ ಎಂಬ ಹಂತ ಹಂತದ ವಿವರ ಇಲ್ಲಿದೆ.

ಕೊತ್ತಂಬರಿ ಎಲೆಗಳಿಂದ ಕೊತ್ತಂಬರಿ ಸೊಪ್ಪು ಬೆಳೆಸುವುದು

ಹಂತ 1: ಒಂದು ಮಡಕೆಯನ್ನು ತೆಗೆದುಕೊಂಡು ಅದನ್ನು ಬರಿದು ಮಾಡಿದ ಫಲವತ್ತಾದ ಮತ್ತು ಕಡಿಮೆ ಸಾಂದ್ರವಾದ ಮಣ್ಣಿನಿಂದ ತುಂಬಿಸಿ. ಮಣ್ಣಿನ pH ಹಂತ 6.5-7.0 ರ ನಡುವೆ ಇರುಬೇಕು. ಸಾವಯವ ಮಣ್ಣನ್ನು ಬಳಸುವುದನ್ನು ಮುಖ್ಯವಾಗುತ್ತದೆ.

ಹಂತ 2: ಈಗ ಬೇರುಗಳನ್ನು ಹೊಂದಿರುವ ಆರೋಗ್ಯಕರ ಕೊತ್ತಂಬರಿ ಕಾಂಡಗಳನ್ನು ತೆಗೆದುಕೊಂಡು ಅವುಗಳನ್ನು ಬೇರುಗಳಿಂದ 2 ಇಂಚುಗಳಷ್ಟು ಬಿಟ್ಟು ಕತ್ತರಿಸಿ.

ಹಂತ 3: ಈ ಕಾಂಡಗಳನ್ನು 3-4 ಇಂಚುಗಳಷ್ಟು ಅಂತರದಲ್ಲಿ ಸಾವಯವ ಮಣ್ಣು ತುಂಬಿಸಿ ಇರುವ ಮಡಕೆಯಲ್ಲಿ ನೆಡಿ.

ಹಂತ 4: ಕೊತ್ತಂಬರಿ ಬೆಳೆಯಲು ಸಂಪೂರ್ಣ ಸೂರ್ಯನಿಂದ ಭಾಗಶಃ ನೆರಳು ಅಗತ್ಯವಿದೆ. ಹೀಗಾಗಿ, ಮಡಕೆಯನ್ನು ಕನಿಷ್ಠ 2-3 ಗಂಟೆಗಳ ನೇರ ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಪ್ರದೇಶದಲ್ಲಿ ಇರಿಸಿ.

ಹಂತ 5: ನೆಟ್ಟ ನಂತರ ಕುಂಡಕ್ಕೆ ಆಗಾಗ ನೀರು ಹಾಕಿ. ಕೊತ್ತಂಬರಿ ಸೊಪ್ಪಿಗೆ ನೀರು ಹಾಕುವುದು ಮುಖ್ಯ, ಏಕೆಂದರೆ ಅವುಗಳಿಗೆ ಪೋಷಕಾಂಶಗಳ ಏಕೈಕ ಮೂಲವಾಗಿದೆ. ಕುಂಡದ ಮಣ್ಣಿನ ಮೇಲ್ಪದರ ಯಾವಾಗಲೂ ನೀರಿನಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ.

ಕೊತ್ತಂಬರಿ ಗಿಡದ ಆರೈಕೆ

ಕೊತ್ತಂಬರಿ ಗಿಡ ಚಿಗುರಿದ ಮೇಲೆ ಅದನ್ನು ಆರೈಕೆ ಮಾಡಲು ಕೆಲವು ಕ್ರಮಗಳನ್ನು ಪಾಲಿಸಬೇಕು. ಈ ವಿಚಾರಗಳನ್ನು ಗಮನಿಸಿ.

ಕೀಟಗಳು ಬಾರದಂತೆ ನೋಡಿಕೊಳ್ಳಿ: ಕೊತ್ತಂಬರಿ ಸೊಪ್ಪಿನ ಗಿಡಗಳಿಗೆ ಬೇಗನೆ ಕೀಟಬಾಧೆಯಾಗುತ್ತದೆ. ಇದರಿಂದ ಗಿಡಗಳು ಬೇಗನೆ ಬಾಡಬಹುದು. ಬೇರು ಕೊಳೆಯಲು ಆರಂಭವಾಗುತ್ತದೆ. ಎಲೆಗಳ ಮೇಲೆ ಬಣ್ಣದ ಮೂಡಲು ಶುರುವಾಗುತ್ತದೆ. ಹಾಗಾಗಿ ಗಿಡಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಮುಖ್ಯವಾಗುತ್ತದೆ. ಕೀಟಗಳು ಮುತ್ತಿಕೊಳ್ಳದಂತೆ ನೋಡಿಕೊಳ್ಳಲು ಬೇವಿನೆಣ್ಣೆಯನ್ನು ಬಳಸಬಹುದು.

ಗೊಬ್ಬರ ನೀಡುವುದು: ಕೊತ್ತಂಬರಿ ಸೊಪ್ಪಿನ ಬೆಳವಣಿಗೆಯ ಋತುವಿನಲ್ಲಿ ಪ್ರತಿ 2-4 ವಾರಗಳಿಗೊಮ್ಮೆ ಅತ್ಯುತ್ತಮ ಬೆಳವಣಿಗೆಗೆ ಗೊಬ್ಬರದ ಅಗತ್ಯವಿರುತ್ತದೆ. ಆದ್ದರಿಂದ, ಅವರಿಗೆ ಸಾಕಷ್ಟು ರಸಗೊಬ್ಬರಗಳನ್ನು ಬುಡಕ್ಕೆ ಹಾಕಿ.

ಆಗಾಗ ಕತ್ತರಿಸುವುದು: ಕೊತ್ತಂಬರಿ ಸೊಪ್ಪಿನ ಗಿಡವನ್ನು ಆಗಾಗ ಕತ್ತರಿಸುವುದ ಬಹಳ ಮುಖ್ಯವಾಗುತ್ತದೆ. ಇಲ್ಲದೇ ಹೋದರೆ ಅದು ಪೊದೆಯಂತೆ ಬೆಳೆಯುತ್ತದೆ. ಕೊತ್ತಂಬರಿ ಗಿಡವು 6 ಇಂಚು ಎತ್ತರವನ್ನು ತಲುಪಿದ ನಂತರ ನೀವು ಎಲೆಗಳನ್ನು ಕತ್ತರಿಸಬಹುದು.

ಕೊತ್ತಂಬರಿ ಬೀಜದಿಂದಲೂ ಕೊತ್ತಂಬರಿ ಗಿಡ ಬೆಳೆಸಬಹುದು. ಇದನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಿ. ಆಗಾಗ ನೀರು ಸಿಂಪಡಿಸುತ್ತಿರಿ. ಸ್ವಲ್ಪ ಗಾಳಿಯಾಡುವಂತೆ ನೋಡಿಕೊಳ್ಳಿ. ನಿಧಾನಕ್ಕೆ ಬೀಜ ಮೊಳಕೆಯೊಡೆದು ಸಸಿಯಾಗುತ್ತದೆ. ಆದರೆ ಕೊತ್ತಂಬರಿ ಬೀಜವು ಉತ್ತಮ ಗುಣಮಟ್ಟದ್ದಾಗಿರಬೇಕು ಎಂಬುದನ್ನು ಮರೆಯಬೇಡಿ.

mysore-dasara_Entry_Point