ಮರದ ಬಾಗಿಲು, ಕಿಟಕಿ ಕ್ಲೀನ್ ಮಾಡಲು ಸಿಂಪಲ್ ಮತ್ತು ಪವರ್‌ಫುಲ್ ಟಿಪ್ಸ್ ಇಲ್ಲಿದೆ; ಇಷ್ಟು ಮಾಡಿದ್ರೆ ಹೊಸದರಂತೆ ಹೊಳೆಯುತ್ತೆ
ಮನೆಯ ಶುಚಿತ್ವ ಕೆಲಸದಲ್ಲಿ ಬಾಗಿಲು ಮತ್ತು ಕಿಟಕಿಗಳ ಸ್ವಚ್ಛತೆಯೂ ಮುಖ್ಯ. ಮರದ ವಸ್ತುಗಳ ವರ್ಷ ಕಳೆದಂತೆ ಅದರ ಹೊಳಪು ಕಳೆದುಕೊಳ್ಳುತ್ತವೆ. ಆದರೆ, ನೀವು ಸರಿಯಾಗಿ ಸ್ವಚ್ಛಗೊಳಿಸದರೆ ಬಾಗಿಲುಗಳು ಮತ್ತು ಕಿಟಕಿಗಳು ಕೂಡಾ ಹೊಸದರಂತೆ ಕಾಣುತ್ತವೆ. ಅದಕ್ಕೆ ನೀವು ಈ ಸಲಹೆಗಳನ್ನು ಪಾಲಿಸಿದರೆ ಸಾಕು.
ಹಬ್ಬದ ಸಂಭ್ರಮದ ನಡುವೆ ಮನೆಯ ಸ್ವಚ್ಛತೆಗೆ ಹೆಚ್ಚು ಸಮಯ ಸಿಗುವುದಿಲ್ಲ. ಹಾಗಂತಾ ಸ್ವಚ್ಛತೆ ಮಾಡದೆ ಇರಲು ಸಾಧ್ಯವಿಲ್ಲ. ಲಭ್ಯ ಸಮಯದಲ್ಲಿ ಬೇಗನೆ ಕೆಲಸಗಳನ್ನು ಮುಗಿಸಬೇಕಾಗುತ್ತದೆ. ಸದ್ಯ ನವರಾತ್ರಿ ಸಂಭ್ರಮ ಮುಗಿದಿದ್ದು, ದೀಪಾವಳಿ ಹಬ್ಬಕ್ಕೆ ಸಿದ್ಧತೆ ಆರಂಭವಾಗುತ್ತದೆ. ಮನೆಯ ಗೋಡೆ, ಕಿಟಕಿ-ಬಾಗಿಲುಗಳಿಗೆ ಬಣ್ಣ ಹಚ್ಚುವುದು, ಅವುಗಳನ್ನು ಸ್ವಚ್ಚಗೊಳಿಸುವ ಕೆಲಸ ನಡೆಯುತ್ತದೆ. ಮನೆಯ ಮರದ ಕಿಟಕಿಗಳು ಹಾಗೂ ಬಾಗಿಲುಗಳನ್ನು ಸ್ವಚ್ಛಗೊಳಿಸುವುದು ಕೂಡಾ ಅವಶ್ಯಕ. ವರ್ಷ ಕಳೆದಂತೆ ಮರದು ವಸ್ತುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ನಿಮಗೆ ಕಿಟಕಿ-ಬಾಗಿಲುಗಳನ್ನು ಹೊಳಪು ಮತ್ತೆ ಬರುವಂತಾಗಲು ಸುಲಭ ಉಪಾಯಗಳಿವೆ. ನಿಮ್ಮ ಸ್ವಚ್ಛತೆಯ ಕೆಲಸದಲ್ಲಿ ಇದನ್ನು ಸಾಧ್ಯವಾಗಿಸಬಹುದು.
ಆರಂಭದಲ್ಲಿ ಬ್ರಷ್ ಸಹಾಯದಿಂದ ಬಾಗಿಲುಗಳ ಮೂಲೆಗಳಲ್ಲಿ ಸಂಗ್ರಹವಾಗಿರುವ ಬಲೆ ಅಥವಾ ಧೂಳನ್ನು ಸ್ವಚ್ಛಗೊಳಿಸಿ. ಮೊದಲಿಗೆ ಬಾಗಿಲಿನ ಮೇಲೆ ಅಂಟಿರುವ ಕೊಳೆಯ ಪದರ ಸ್ವಚ್ಛವಾಗುತ್ತದೆ. ಮರದ ಬಾಗಿಲುಗಳು ಮತ್ತು ಕಿಟಕಿಗಳಿದ್ದರೆ, ಅವುಗಳನ್ನು ಸ್ವಚ್ಛಗೊಳಿಸಲು ಡಿಶ್ ವಾಶ್ ಲಿಕ್ವಿಡ್ ಮತ್ತು ವಿನೆಗರ್ ಬಳಸಬಹುದು. ಇವುಗಳನ್ನು ನೀರಿನಲ್ಲಿ ಬೆರೆಸಿ. ಈ ಮಿಶ್ರಣಕ್ಕೆ ಬಟ್ಟೆಯನ್ನು ಅದ್ದಿ ಅದರಲ್ಲಿ ಮರದ ವಸ್ತುಗಳನ್ನು ಸ್ವಚ್ಛಗೊಳಿಸಿ. ಇದರಿಂದ ಅಂಟಿರುವ ಧೂಳು, ಕೊಳೆ ಎಲ್ಲವೂ ಸ್ವಚ್ಛವಾಗುತ್ತದೆ.
ಬಾಗಿಲುಗಳು ಮತ್ತು ಕಿಟಕಿಗಳನ್ನು ನೀರಿನಿಂದ ಸ್ವಚ್ಛಗೊಳಿಸಿದ ನಂತರ, ಒಂದು ಒಣಗಿದ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಮರದ ಪೀಠೋಪಕರಣ ಸೇರಿದಂತೆ ಯಾವುದೇ ವಸ್ತುಗಳು ನೀರು ಹೀರಿಕೊಳ್ಳಬಾರದು. ಹೀಗಾಗಿ ನೀರು ಸರಿಯಾಗಿ ಆರುವಂತೆ ಮಾಡಿ. ನಂತರ ಈ ಬಾಗಿಲುಗಳಿಗೆ ಹೊಳಪನ್ನು ತರಲು ಕೆಳಗೆ ತಿಳಿಸಿರುವ ಮಿಶ್ರಣವನ್ನು ಹಚ್ಚಿ. ಆಗ ನಿಮ್ಮ ಮನೆಯ ಮರದ ವಸ್ತುಗಳು ಹೊಸದರಂತೆ ಕಾಣುತ್ತವೆ. ಈ ಮಿಶ್ರಣವನ್ನು ತಯಾರಿಸಲು, ಈ ಮೂರು ಪದಾರ್ಥಗಳು ಮಾತ್ರವೇ ಸಾಕು.
- ಆಲಿವ್ ಆಯಿಲ್
- ವಿನೆಗರ್
- ಎರಡು ಹನಿ ಸಾರಭೂತ ತೈಲ
ಇದನ್ನೂ ಓದಿ | ನವರಾತ್ರಿ ಪೂಜೆಗೆ ಬಳಸಿದ್ದ ಬೆಳ್ಳಿ, ಹಿತ್ತಾಳೆ, ಕಂಚು ಪಾತ್ರೆಗಳನ್ನು ಕ್ಲೀನ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಒಂದು ಬೌಲ್‌ನಲ್ಲಿ ಆಲಿವ್ ಎಣ್ಣೆ, ವಿನೆಗರ್ ಮತ್ತು ಒಂದೆರಡು ಹನಿ ಸಾರಭೂತ ತೈಲವನ್ನು ಹಾಕಿ ಮಿಶ್ರಣ ತಯಾರಿಸಿ. ಅದಕ್ಕೆ ಬಟ್ಟೆಯನ್ನು ಅದ್ದಿ ಮನೆಯ ಬಾಗಿಲು ಮತ್ತು ಕಿಟಕಿಗಳ ಮೇಲೆ ಹಚ್ಚಿ ಚೆನ್ನಾಗಿ ಒರೆಸಿ. ಈ ಮಿಶ್ರಣವನ್ನು ಹಚ್ಚುವುದರಿಂದ, ಮರದ ಬಾಗಿಲುಗಳು ಮತ್ತು ಕಿಟಕಿಗಳು ಹೊಸದರಂತೆ ಕಾಣುತ್ತವೆ.