ನಿದ್ದೆ ಬರುತ್ತಿಲ್ಲವೆಂದು ಔಷಧಿ ಮೊರೆ ಹೋದ್ರಾ; ಗುಣಮಟ್ಟದ ನಿದ್ದೆಗೆ ಈ ಮನೆಮದ್ದು ಪ್ರಯತ್ನಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿದ್ದೆ ಬರುತ್ತಿಲ್ಲವೆಂದು ಔಷಧಿ ಮೊರೆ ಹೋದ್ರಾ; ಗುಣಮಟ್ಟದ ನಿದ್ದೆಗೆ ಈ ಮನೆಮದ್ದು ಪ್ರಯತ್ನಿಸಿ ನೋಡಿ

ನಿದ್ದೆ ಬರುತ್ತಿಲ್ಲವೆಂದು ಔಷಧಿ ಮೊರೆ ಹೋದ್ರಾ; ಗುಣಮಟ್ಟದ ನಿದ್ದೆಗೆ ಈ ಮನೆಮದ್ದು ಪ್ರಯತ್ನಿಸಿ ನೋಡಿ

ನಿದ್ರಾಹೀನತೆ ಹಲವರನ್ನು ಕಾಡುವ ಸಮಸ್ಯೆ. ನಿತ್ಯ ನಿದ್ದೆ ಬರದೆ ಒದ್ದಾಡಿ ವೈದ್ಯರ ಮೊರೆ ಹೋಗುವವರು ಹಲವರಿದ್ದಾರೆ. ಆದರೆ, ಇದಕ್ಕೆ ಮನೆಯಲ್ಲೇ ಪರಿಹಾರವಿದೆ. ಕೆಲವೊಂದು ಮನೆಮದ್ದುಗಳು ನಿಮ್ಮ ಮಾನಸಿಕ ಆರೋಗ್ಯಕ್ಕೆ ಉಪಕಾರಿಯಾಗಿವೆ. ಈ ಸುಲಭ ಮನೆಮದ್ದು ಪ್ರಯತ್ನಿಸಿ ನೋಡಿ.

ನಿದ್ದೆ ಬರುತ್ತಿಲ್ಲವೆಂದು ಔಷಧಿ ಮೊರೆ ಹೋದ್ರಾ; ಸುಖನಿದ್ದೆಗೆ ಈ ಮನೆಮದ್ದು ಪ್ರಯತ್ನಿಸಿ ನೋಡಿ
ನಿದ್ದೆ ಬರುತ್ತಿಲ್ಲವೆಂದು ಔಷಧಿ ಮೊರೆ ಹೋದ್ರಾ; ಸುಖನಿದ್ದೆಗೆ ಈ ಮನೆಮದ್ದು ಪ್ರಯತ್ನಿಸಿ ನೋಡಿ (sleep)

ರಾತ್ರಿ ಸರಿಯಾಗಿ ನಿದ್ರೆ ಬಾರದಿದ್ದರೆ, ಮರುದಿನ ಪೂರ್ತಿ ಜೋಶ್ ಕಳೆದುಕೊಳ್ಳುತ್ತೇವೆ. ಹಗಲಿಡೀ ದಣಿದ ದೇಹಕ್ಕೆ ರಾತ್ರಿ ಚೆನ್ನಾಗಿ ನಿದ್ದೆ ಬೇಕು. ಪ್ರತಿನಿತ್ಯ ಏನಿಲ್ಲವೆಂದರೂ ಕನಿಷ್ಠ 7 ಗಂಟೆಗಳ ನಿದ್ದೆ ಆರೋಗ್ಯಕರ ದೇಹಕ್ಕೆ ಅಗತ್ಯ. ಕೆಲವೊಮ್ಮೆ ಎಷ್ಟೇ ಪ್ರಯತ್ನ ಮಾಡಿದರೂ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ. ಹಾಸಿಗೆಯಲ್ಲಿ ಎತ್ತ ಹೊರಳಿದರೂ, ಏನೇ ಪ್ರಯತ್ನ ಮಾಡಿದರೂ ವಿಶ್ರಾಂತಿ ಸಮಸ್ಯೆಯಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ನಮ್ಮ ಜೀವನಶೈಲಿಯ ಕೆಲವೊಂದು ದೋಷಗಳು ನಿದ್ದೆ ಮೇಲೆ ಪರಿಣಾಮ ಬೀಡುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಸರಿಯಾದ ದಿನಚರಿ ಅನುಸರಿಸಿದರೂ ನಿದ್ದೆ ಮಾತ್ರ ಬರಲ್ಲ. ಇಂಥಾ ಸಮಯದಲ್ಲಿ ನೀವು ಕೆಲವೊಂದು ಮನೆಮದ್ದು ಅನುಸರಿಸಬಹುದು.

ನಿದ್ರೆಯ ಕೊರತೆಯು ದೈಹಿಕ ಮಾತ್ರವಲ್ಲದೆ ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ​​ಏಕಾಗ್ರತೆ ಕಳೆದುಕೊಳ್ಳುವುದು, ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಖಿನ್ನತೆ, ಬೊಜ್ಜು, ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮ ನಿದ್ದೆಯ ಗುಣಮಟ್ಟ ಹೆಚ್ಚಲು ಪ್ರಮುಖ ಮನೆಮದ್ದು ಹೀಗಿವೆ.

ಆಲ್ಕೋಹಾಲ್‌ ಕುಡಿಬೇಡಿ, ಇದು ಕುಡಿಯಿರಿ

ರಾತ್ರಿ ಮಲಗುವ ಮುನ್ನ ಆಲ್ಕೋಹಾಲ್ ಕುಡಿಯಬೇಡಿ. ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ನಿದ್ರೆಯ ಸಮಸ್ಯೆ ಇರುವವರು ಮಲಗುವ ಮುನ್ನ ಬಿಸಿ ಹಾಲು, ಕ್ಯಾಮೊಮೈಲ್ ಚಹಾ ಮತ್ತು ಟಾರ್ಟ್ ಚೆರ್ರಿ ರಸವನ್ನು ಕುಡಿಯಬಹುದು. ಈ ಪಾನೀಯಗಳಲ್ಲಿ ಯಾವುದಾದರೂ ಒಂದನ್ನು ಕುಡಿದರೆ ಸಾಕು. ಇದು ನಿಮ್ಮ ನಿದ್ರೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಇದಕ್ಕೆ ಹೆಚ್ಚು ವೈಜ್ಞಾನಿಕ ಪುರಾವೆಗಳು ಇಲ್ಲದಿದ್ದರೂ, ಇದರಿಂದ ಯಾವುದೇ ಹಾನಿ ಇಲ್ಲ ಎಂದು ತಜ್ಞರು ಹೇಳುತ್ತಾರೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಸಸ್ಯದಿಂದ ಮಾಡುವ ಒಂದು ರೀತಿಯ ಸಾರಭೂತ ತೈಲವೇ ಲ್ಯಾವೆಂಡರ್ ಎಣ್ಣೆ. ನಿದ್ರೆ ಸುಧಾರಿಸಲು ಮತ್ತು ಶಾಂತತೆಯ ಭಾವನೆ ಬರಲು ನೈಸರ್ಗಿಕ ಪರಿಹಾರವಾಗಿ ಜನರು ಸಾವಿರಾರು ವರ್ಷಗಳಿಂದ ಈ ಎಣ್ಣೆಯನ್ನು ಬಳಸುತ್ತಿದ್ದಾರೆ. 2015ರ ಅಧ್ಯಯನವೊಂದು ಲ್ಯಾವೆಂಡರ್ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿದಿದೆ.

ಕಾಳು ಮೆಣಸು ಮತ್ತು ಅರಿಶಿನ

ಹಲವು ಆರೋಗ್ಯ ಸಮಸ್ಯೆಗಳಿಗೆ ಬಳಕೆಯಾಗುವ ಮೆಣಸು ಮತ್ತು ಅರಿಶಿನವನ್ನು ನಿದ್ರಾಹೀನತೆಗೆ ಪರಿಹಾರವಾಗಿ ಬಳಸಬಹುದು. ನೀವು ಕುಡಿಯುವ ಹಾಲಿಗೆ ನಾಲ್ಕೈದು ಕಾಳು ಮೆಣಸು ಮತ್ತು ಚಿಟಿಕೆ ಅರಿಶಿನ ಹಾಕಿ ಕುದಿಸಿ ಕುಡಿಯಬೇಕು. ನಿತ್ಯ ಈ ರೀತಿ ಹಾಲು ಕುಡಿಯುವ ಮೂಲಕ ನಿದ್ರೆಯ ಗುಣಮಟ್ಟ ಹೆಚ್ಚಿಸಬಹುದು.

ಬಾಳೆ ಹಣ್ಣು, ಜೇನುತುಪ್ಪ

ಹಾಲಿನೊಂದಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ನಿದ್ದೆ ಸುಧಾರಿಸಬಹುದು. ಹಾಲಿನಲ್ಲಿರುವ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳಲು ಜೇನುತುಪ್ಪ ನೆರವಾಗುತ್ತದೆ. ಮತ್ತೊಂದೆಡೆ ಊಟದ ನಂತರ ಹಾಗೂ ಮಲಗುವ ಮುನ್ನ ಬಾಳೆಹಣ್ಣು ಸೇವನೆ ಬಗ್ಗೆ ನೀವು ಕೇಳಿರುತ್ತೀರಿ. ಬಾಳೆಹಣ್ಣಿನಲ್ಲಿ ಕ್ಯಾಲ್ಶಿಯಂ, ಕಬ್ಬಿಣಾಂಶ ಸೇರಿ ಹಲವು ಖನಿಜಗಳಿವೆ. ಇದು ಉತ್ತಮ ನಿದ್ದೆಗೆ ಸಹಕಾರಿಯಾಗಿದೆ.

ಧ್ಯಾನ ಮಾಡಿ

ಮನಸ್ಸಿಗೆ ಏಕಾಗ್ರತೆ ಬಂದರೆ, ನೀವು ಬೇಕಾದ ಸಮಯದಲ್ಲಿ ಅಂದುಕೊಂಡದ್ದನ್ನು ಮಾಡಬಹುದು. ಧ್ಯಾನ ಇದಕ್ಕೆ ಪರಿಣಾಮಕಾರಿ ಮಾರ್ಗ. ಮಲಗುವ ಮುನ್ನ ಕೆಲಹೊತ್ತು ಧ್ಯಾನ ಮಾಡುವ ಪ್ರಯತ್ನ ಮಾಡಿ. ಅಥವಾ ನಿಮಗೆ ಸಮಯವಾದಾಗ ಸುಮ್ಮನೆ ಕುಳಿತು ಮೆಡಿಟೇಷನ್‌ ಅಭ್ಯಾಸ ಮಾಡಿ. ಇದು ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸುತ್ತದೆ. ಸಾವಧಾನತೆಯು ನಿದ್ರೆಯ ಮೇಲೆ ಸುಧಾರಿತ ಪರಿಣಾಮ ಬೀಡುವ ಪ್ರಭಾವ ಹೊಂದಿದೆ.

Whats_app_banner