ಗೃಹೋಪಯೋಗಿ ವಸ್ತುಗಳು ತುಕ್ಕು ಹಿಡಿಯುತ್ತಿವೆಯೇ: ಮಳೆಗಾಲದಲ್ಲಿ ಅವುಗಳನ್ನು ರಕ್ಷಿಸಲು ಇಲ್ಲಿವೆ ಸರಳ ತಂತ್ರಗಳು-kitchen tips prevent rust on household items during monsoon how to prevent rust on household items prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗೃಹೋಪಯೋಗಿ ವಸ್ತುಗಳು ತುಕ್ಕು ಹಿಡಿಯುತ್ತಿವೆಯೇ: ಮಳೆಗಾಲದಲ್ಲಿ ಅವುಗಳನ್ನು ರಕ್ಷಿಸಲು ಇಲ್ಲಿವೆ ಸರಳ ತಂತ್ರಗಳು

ಗೃಹೋಪಯೋಗಿ ವಸ್ತುಗಳು ತುಕ್ಕು ಹಿಡಿಯುತ್ತಿವೆಯೇ: ಮಳೆಗಾಲದಲ್ಲಿ ಅವುಗಳನ್ನು ರಕ್ಷಿಸಲು ಇಲ್ಲಿವೆ ಸರಳ ತಂತ್ರಗಳು

ಮಳೆಗಾಲದಲ್ಲಿ ಹೆಚ್ಚಿದ ಆರ್ದ್ರತೆ ಮತ್ತು ತೇವಾಂಶದಿಂದ ಗೃಹೋಪಯೋಗಿ ವಸ್ತುಗಳ ಮೇಲೆ ತುಕ್ಕು ಹಿಡಿಯುವುದಕ್ಕೆ ಕಾರಣವಾಗಬಹುದು.ಮಳೆಗಾಲದ ಉದ್ದಕ್ಕೂ ನಿಮ್ಮ ಮನೆಯ ವಸ್ತುಗಳು ತುಕ್ಕು ಮುಕ್ತವಾಗಿ, ಉತ್ತಮ ಸ್ಥಿತಿಯಲ್ಲಿ ಇಡುವುದು ಹೇಗೆ ಎಂದು ಚಿಂತಿಸುತ್ತಿದ್ದರೆ, ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಗೃಹೋಪಯೋಗಿ ವಸ್ತುಗಳನ್ನು ತುಕ್ಕು ಮುಕ್ತವಾಗಿ, ಉತ್ತಮ ಸ್ಥಿತಿಯಲ್ಲಿ ಇಡುವುದು ಹೇಗೆ ಎಂದು ಚಿಂತಿಸುತ್ತಿದ್ದರೆ, ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
ಗೃಹೋಪಯೋಗಿ ವಸ್ತುಗಳನ್ನು ತುಕ್ಕು ಮುಕ್ತವಾಗಿ, ಉತ್ತಮ ಸ್ಥಿತಿಯಲ್ಲಿ ಇಡುವುದು ಹೇಗೆ ಎಂದು ಚಿಂತಿಸುತ್ತಿದ್ದರೆ, ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. (freepik)

ಮಳೆಗಾಲದಲ್ಲಿ ವಾತಾವರಣವು ತಂಪಾಗಿರುವುದರಿಂದ ಮನಸ್ಸು ಹಿತಕರವಾಗಿರುತ್ತದೆ. ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಆದರೆ, ಮಳೆಗಾಲದಲ್ಲಿ ಗೃಹೋಪಯೋಗಿ ವಸ್ತುಗಳನ್ನು ನಿರ್ವಹಿಸುವುದು ಅಂದ್ರೆ ಸವಾಲೇ ಸರಿ. ಗಾಳಿಯಲ್ಲಿ ಹೆಚ್ಚಿದ ಆರ್ದ್ರತೆ ಮತ್ತು ತೇವಾಂಶದಿಂದಾಗಿ ಲೋಹದ ವಸ್ತುಗಳಿಗೆ ತುಕ್ಕು ಹಿಡಿಯುತ್ತದೆ. ತುಕ್ಕು ಹಿಡಿಯುವುದರಿಂದ ವಸ್ತುಗಳು ಬಾಳಿಕೆ ಬರುವುದು ಕಡಿಮೆ. ಅಮೂಲ್ಯ ವಸ್ತುಗಳನ್ನು ತುಕ್ಕು ಹಿಡಿಯುವುದರಿಂದ ರಕ್ಷಿಸಲು ಇಲ್ಲಿ ಐದು ಪರಿಹಾರಗಳನ್ನು ತಿಳಿಸಲಾಗಿದೆ. ಈ ಸರಳ ಮತ್ತು ಪರಿಣಾಮಕಾರಿ ತಂತ್ರಗಳು ಗೃಹೋಪಯೋಗಿ ವಸ್ತುಗಳನ್ನು ರಕ್ಷಿಸಲು ನಿಮಗೆ ಸಹಾಯ ಮಾಡುತ್ತದೆ. ಮಳೆಗಾಲದ ಉದ್ದಕ್ಕೂ ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡಬಹುದು. ಇಲ್ಲಿ ತಿಳಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ವಸ್ತುಗಳನ್ನು ತುಕ್ಕು ಹಿಡಿಯದಂತೆ ಸಂರಕ್ಷಿಸಬಹುದು.

ವಸ್ತುಗಳನ್ನು ಒಣಗಿಸಿ: ವಸ್ತುಗಳು ತುಕ್ಕು ಹಿಡಿಯಲು ಪ್ರಮುಖ ಕಾರಣ ತೇವಾಂಶ. ಹೀಗಾಗಿ ಲೋಹದ ವಸ್ತುಗಳನ್ನು ಆಗಾಗ ಒಣಗಿಸುತ್ತಿರಬೇಕು. ಇದಕ್ಕಾಗಿ ನಿಯಮಿತವಾಗಿ ವಸ್ತುಗಳನ್ನು ಹತ್ತಿ ಬಟ್ಟೆಯಿಂದ ಒರೆಸಿ ಇಡಬೇಕು. ಅದರಲ್ಲೂ ವಿಶೇಷವಾಗಿ, ಅವುಗಳು ನೀರಿಗೆ ಒಡ್ಡಿಕೊಂಡಿದ್ದರೆ ಕೂಡಲೇ ಒರೆಸಿ ಇಡುವುದು ಸೂಕ್ತ. ವಸ್ತುಗಳನ್ನು ಮನೆಯಿಂದ ಹೊರಗೆ ಸಂಗ್ರಹಿಸಿದ್ದರೆ ಅವುಗಳಿಗೆ ಜಲನಿರೋಧಕ ಕವರ್‌ಗಳನ್ನು ಬಳಸಿ. ಮನೆಯೊಳಗಿನ ವಸ್ತುಗಳು ಸಹ ಮಳೆಗಾಲದಲ್ಲಿ ತೇವಾಂಶವನ್ನು ಪಡೆದುಕೊಳ್ಳಬಹುದು, ಹೀಗಾಗಿ ಎಚ್ಚರಿಕೆ ವಹಿಸಬೇಕು.

ರಕ್ಷಣಾತ್ಮಕ ಲೇಪನವನ್ನು ಅನ್ವಯಿಸಿ: ಲೋಹದ ಮೇಲ್ಮೈಗಳಿಗೆ ರಕ್ಷಣಾತ್ಮಕ ಲೇಪನವನ್ನು ಅನ್ವಯಿಸಬಹುದು. ಈ ರೀತಿ ಮಾಡುವುದರಿಂದ ತುಕ್ಕು ತಡೆಗಟ್ಟಬಹುದು. ತೈಲ, ಮೇಣ ಅಥವಾ ತುಕ್ಕು ತಡೆಗಟ್ಟುವ ಸ್ಪ್ರೇ ಅನ್ನು ಬಳಸಬಹುದು. ಉಪಕರಣಗಳು ಅಥವಾ ಅಡುಗೆ ಪಾತ್ರೆಗಳಂತಹ ವಸ್ತುಗಳಿಗೆ, ಸಸ್ಯಜನ್ಯ ಎಣ್ಣೆಯನ್ನು ಹಚ್ಚುವುದರಿಂದ ಪರಿಹಾರವನ್ನು ಪಡೆಯಬಹುದು. ಹೊರಾಂಗಣ ಪೀಠೋಪಕರಣಗಳಂತಹ ದೊಡ್ಡ ವಸ್ತುಗಳಿಗೆ ವಿಶೇಷವಾದ ತುಕ್ಕು ತಡೆಗಟ್ಟುವ ಬಣ್ಣ ಅಥವಾ ಸ್ಪ್ರೇ ಅನ್ನು ಬಳಸಬಹುದು.

ಸಿಲಿಕಾ ಜೆಲ್ ಪ್ಯಾಕ್‌ ಬಳಸಬಹುದು: ಸಿಲಿಕಾ ಜೆಲ್ ಪ್ಯಾಕ್‌ಗಳು ತೇವಾಂಶವನ್ನು ಹೀರಿಕೊಳ್ಳಲು ಉತ್ತಮವಾಗಿವೆ. ಲೋಹದ ವಸ್ತುಗಳನ್ನು ಇರಿಸಲಾಗಿರುವ ಶೇಖರಣಾ ಪೆಟ್ಟಿಗೆಗಳು, ಟೂಲ್‌ಬಾಕ್ಸ್‌ಗಳು ಅಥವಾ ಡ್ರಾಯರ್‌ಗಳಲ್ಲಿ ಇರಿಸಬಹುದು. ಈ ಪ್ಯಾಕ್‌ಗಳು ಅಗ್ಗವಾಗಿದ್ದು, ಒಣಗಿದ ನಂತರ ಮರುಬಳಕೆ ಮಾಡಬಹುದು. ತುಕ್ಕು ಹಿಡಿಯುವ ಯಾವುದೇ ವಸ್ತುವಿನ ಬಳಿ ಸಿಲಿಕಾ ಜೆಲ್ ಪ್ಯಾಕ್ ಅನ್ನು ಇರಿಸಬಹುದು.

ವಸ್ತುಗಳನ್ನು ಸರಿಯಾಗಿ ಸಂಗ್ರಹಿಸಿ: ವಸ್ತುಗಳ ಸರಿಯಾದ ಶೇಖರಣೆಯು ತುಕ್ಕು ತಡೆಗಟ್ಟುವಲ್ಲಿ ಪ್ರಮುಖವಾಗಿದೆ. ಲೋಹದ ವಸ್ತುಗಳನ್ನು ಸೂಕ್ತ ಸ್ಥಳದಲ್ಲಿ ಸಂಗ್ರಹಿಸಿಡುವುದು ಸೂಕ್ತ. ನೆಲಮಾಳಿಗೆಗಳು ಅಥವಾ ಸ್ನಾನಗೃಹಗಳಂತಹ ತೇವಾಂಶ ಇರುವ ಪ್ರದೇಶಗಳಲ್ಲಿ ಅವುಗಳನ್ನು ಸಂಗ್ರಹಿಸದರಿ. ವಸ್ತುಗಳನ್ನು ಸಂಗ್ರಹಿಸುವ ಮೊದಲು ಪ್ಲಾಸ್ಟಿಕ್ ಹೊದಿಕೆ ಅಥವಾ ಮೇಣದ ಕಾಗದದಂತಹ ತೇವಾಂಶ-ನಿರೋಧಕವನ್ನು ಸುತ್ತಿಡುವುದು ಉತ್ತಮ.

ನಿಯಮಿತ ನಿರ್ವಹಣೆ: ಮಳೆಗಾಲದಲ್ಲಿ ಲೋಹದ ವಸ್ತುಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ನಿರ್ವಹಿಸುವುದು ಬಹಳ ಮುಖ್ಯ. ವಸ್ತುಗಳಿಗೆ ತುಕ್ಕು ಹಿಡಿಯುವ ಲಕ್ಷಣಗಳು ಗೋಚರಿಸಿದ್ರೆ ತಕ್ಷಣ ಶುಚಿಗೊಳಿಸಿ. ಬಳಿಕ ರಕ್ಷಣಾತ್ಮಕ ಲೇಪನವನ್ನು ಅನ್ವಯಿಸುವುದು ಸೂಕ್ತ.

ಈ ಸರಳ ಸಲಹೆಗಳನ್ನು ಅನುಸರಿಸಿ, ವಸ್ತುಗಳನ್ನು ತುಕ್ಕು ಹಿಡಿಯದಂತೆ ರಕ್ಷಿಸಬಹುದು. ಹಾಗೂ ಮಳೆಗಾಲದಲ್ಲಿ ಅವುಗಳನ್ನು ಅತ್ಯುತ್ತಮ ಸ್ಥಿತಿಯಲ್ಲಿ ಇರಿಸಬಹುದು. ಈ ರೀತಿ ಮಾಡುವುದರಿಂದ ಸಮಯ ಮತ್ತು ಹಣವನ್ನು ಉಳಿಸಬಹುದು. ಅಲ್ಲದೆ, ವಸ್ತುಗಳು ತುಕ್ಕು-ಮುಕ್ತ ಮತ್ತು ಬಾಳಿಕೆ ಬರುವಂತೆ ನೋಡಿಕೊಳ್ಳುತ್ತದೆ.