Mindful Bath: ಸ್ನಾನ ದೇಹ, ಮನಸ್ಸಿಗೆ ಎಷ್ಟು ಮುಖ್ಯ? ಮನಃಸ್ಫೂರ್ತಿಯಾಗಿ ಸ್ನಾನ ಮಾಡುವುದು ಹೇಗೆ?
Mindful Bath: ಸ್ನಾನ ನಮ್ಮ ದೇಹ ಹಾಗೂ ಮನಸ್ಸು ಎರಡಕ್ಕೂ ಖುಷಿ ಕೊಡುವ ದಿನಚರಿಯ ಭಾಗ. ಸ್ನಾನವನ್ನು ಮನಪೂರ್ವಕವಾಗಿ, ಆಹ್ಲಾದಕರ ಭಾವದಿಂದ ಮಾಡಬೇಕು ಎನ್ನುತ್ತದೆ ವಿಜ್ಞಾನ ಹಾಗೂ ಆಯುರ್ವೇದ. ಹಾಗಾದರೆ ಮನಸ್ಸಿಗೆ ಆಹ್ಲಾದ ನೀಡುವಂತೆ ಸ್ನಾನ ಮಾಡುವುದು ಹೇಗೆ?
ಸ್ನಾನ ಮಾಡಿ ಸ್ನಾನದ ಕೋಣೆಯಿಂದ ಹೊರ ಬರುವಾಗ ಸಿಗುವ ಆಹ್ಲಾದ, ಖುಷಿ ಬೇರೆ ಸ್ನಾನ ಮಾಡಿ ಸ್ನಾನದ ಕೋಣೆಯಿಂದ ಹೊರ ಬರುವಾಗ ಸಿಗುವ ಆಹ್ಲಾದ, ಖುಷಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎನ್ನಿಸುವುದು ಸುಳ್ಳಲ್ಲ. ಸ್ನಾನ ಮಾಡುವುದರಿಂದ ಕೇವಲ ದೇಹ ಸ್ವಚ್ಛವಾಗುವುದು ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಇದು ಮದ್ದು. ಇದು ಸ್ವ- ಕಾಳಜಿಯ ಅಂಶವೂ ಹೌದು.
ಸ್ನಾನ ನಮ್ಮ ದೇಹ ಹಾಗೂ ಮನಸ್ಸು ಎರಡಕ್ಕೂ ಖುಷಿ ಕೊಡುವ ದಿನಚರಿಯ ಭಾಗ. ಆದರೆ ಕೆಲವೊಮ್ಮೆ ಗಡಿಬಿಡಿಯಲ್ಲಿ ಸ್ನಾನ ಮಾಡುತ್ತೇವೆ. ಇನ್ನೂ ಕೆಲವೊಮ್ಮೆ ಮಾಡಲೇಬೇಕಲ್ಲ ಎಂಬ ಬೇಸರದಲ್ಲೇ ಮಾಡುತ್ತೇವೆ. ಆದರೆ ಸ್ನಾನವನ್ನು ಮನಃಪೂರ್ವಕವಾಗಿ, ಆಹ್ಲಾದಕರ ಭಾವದಿಂದ ಮಾಡಬೇಕು ಎನ್ನುತ್ತದೆ ವಿಜ್ಞಾನ ಹಾಗೂ ಆಯುರ್ವೇದ. ಹಾಗಾದರೆ ಮನಸ್ಸಿಗೆ ಆಹ್ಲಾದ ನೀಡುವಂತೆ ಸ್ನಾನ ಮಾಡುವುದು ಹೇಗೆ?
ಸಮಯವನ್ನು ಸೃಷ್ಟಿಸಿ
ಸಮಯ ಸೃಷ್ಟಿಸುವುದು ಎಂದರೆ ಸ್ನಾನಕ್ಕೂ ಮೊದಲ ಸ್ನಾನದ ಮನೆಯನ್ನು ಅಲಂಕಾರ ಮಾಡುವುದು ಎಂದರ್ಥವಲ್ಲ. ಸ್ನಾನವು ಕೂಡ ಮಾನಸಿಕ ಆರೋಗ್ಯದ ಭಾಗವಾದ ಕಾರಣ ಸ್ನಾನಕ್ಕೆ ಹೋಗುವ ಮೊದಲು ಒತ್ತಡಗಳಿಂದ ಬಿಡಿಸಿಕೊಳ್ಳಿ. ನಿಮ್ಮ ಕೆಲಸ, ಕಾರ್ಯಗಳ ಗೊಂದಲದ ನಡುವೆ ಗಡಿಬಿಡಿಯ ಸ್ನಾನ ಬೇಡ. ಬದಲಾಗಿ ಮನಸ್ಸಿಗೆ ಖುಷಿ ಎನ್ನಿಸುವಷ್ಟು ಹೊತ್ತು ಸ್ನಾನದ ಮನೆಯಲ್ಲಿ ಕಳೆಯಿರಿ. ಮನಸ್ಸಿನ ಬೇಸರವೆಲ್ಲಾ ಕಳೆಯಬೇಕು ಎನ್ನುವಷ್ಟರ ಮಟ್ಟಿಗೆ ನೀರು ಹೊಯ್ದುಕೊಳ್ಳಿ.
ವಾತಾವರಣ ಹೊಂದಿಸಿ
ಸ್ನಾನ ಮಾಡುವುದು ಎಂದರೆ ಮೈಗಂಟಿದ ಕೊಳೆ ತೊಳೆಯವುದಲ್ಲ. ಹಾಗಾಗಿ ಸ್ನಾನದ ಕೋಣೆಗೆ ಹೋಗುವ ಮೊದಲು ಸ್ನಾನ ಕೋಣೆಯ ವಾತಾವರಣವನ್ನು ಸರಿಯಾಗಿ ಗಮನಿಸಿ. ಸ್ನಾನದ ಮನೆ ಸ್ವಚ್ಛವಾಗಿಲ್ಲ ಎಂದರೆ ಒಮ್ಮೆ ಚೆನ್ನಾಗಿ ಸ್ವಚ್ಛ ಮಾಡಿಕೊಂಡು ನಂತರ ಸ್ನಾನ ಮಾಡಿ. ಆಹ್ಲಾದಕರ ಸ್ನಾನ ಎಂದರೆ ನಮ್ಮ ದೇಹದ 5 ಇಂದ್ರೀಯಗಳಿಗೂ ಇಷ್ಟವಾಗುವ ರೀತಿ ಸ್ನಾನ ಮಾಡಬೇಕು.
ನೀರು ಹದವಾಗಿರಲಿ
ಹವಾಗುಣಕ್ಕೆ ತಕ್ಕ ಹಾಗೆ ಸ್ನಾನದ ನೀರಿನ ಹದ ಇರಲಿ. ಬೇಸಿಗೆಯಲ್ಲಿ ಅತಿ ಬೆಚ್ಚನೆಯ ನೀರು, ಚಳಿಗಾಲದಲ್ಲಿ ತಣ್ಣನೆಯ ನೀರು ಹೀಗೆ ಬೇಡ. ಸ್ನಾನಕ್ಕೂ ಮೊದಲು ನೀರಿಗೆ ಪರಿಮಳದ ಎಣ್ಣೆಯನ್ನು ಬೆರೆಸಿ, ಇದರಿಂದ ದೇಹಕ್ಕೂ ಮನಸ್ಸಿಗೂ ಹಾಯ್ ಎನ್ನಿಸುತ್ತದೆ. ಸ್ನಾನ ಮಾಡುವಾಗ ಮನಸ್ಸು ದೇಹ ಎರಡಕ್ಕೂ ನೆಮ್ಮದಿ ಸಿಗುವಷ್ಟು ಹೊತ್ತು ಮಾಡಬೇಕು, ಆ ಕಾರಣಕ್ಕೆ ಸಾಕಷ್ಟು ನೀರು ಮೊದಲೇ ತುಂಬಿಟ್ಟಿರಿ.
ಸ್ನಾನ ಮಾಡುವ ಸಮಯ
ಆಹ್ಲಾದಕರ ಅಥವಾ ಮನಃಪೂರ್ತಿಯಾಗಿ ಸ್ನಾನ ಮಾಡುವುದು ಎಂದರೆ ಕನಿಷ್ಠ 20ನಿಮಿಷಗಳ ಹೊತ್ತು ಮಾಡಬೇಕು. 20 ನಿಮಿಷಗಳ ಕಾಲ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ನೆಮ್ಮದಿ ಸಿಗುತ್ತದೆ. ಸ್ನಾನದ ಸಮಯದಲ್ಲಿ ಮನಸ್ಸಿನ ಗೊಂದಲ, ಚಿಂತೆ ದೂರಾಗುತ್ತದೆ. ಬಿಸಿನೀರಿನ ಸ್ನಾನವು ಮೆದುಳಿನ ಥೀಟಾ ಅಲೆಗಳನ್ನು ಪ್ರಚೋದಿಸುತ್ತದೆ. ಇದು ಮನಸ್ಸಿಗೆ ವಿಶ್ರಾಂತಿ, ಶಾಂತಿ ಹಾಗೂ ಹಿತ ನೀಡುತ್ತದೆ.
ವಿಭಾಗ