ಕನ್ನಡ ಸುದ್ದಿ  /  Lifestyle  /  Monday Motivation Doing Hard Work May Change Life Very Easy And Happy Motivational Story Rsm

Monday Motivation: ಜೀವನಕ್ಕೊಂದು ಸ್ಫೂರ್ತಿ ಮಾತು; ಸ್ಮಾರ್ಟ್‌ ವರ್ಕ್‌, ಹಾರ್ಡ್‌ ವರ್ಕ್‌ ಯಾವುದು ಸರಿ? ಕಲಿಕೆ ಕಷ್ಟವಾಗಿದ್ದರೆ ಜೀವನ ಸುಲಭ

Monday Motivation: ಜೀವನದಲ್ಲಿ ಕಷ್ಟ ಪಟ್ಟು ದುಡಿಯುವುದು, ಕಷ್ಟ ಪಟ್ಟು ಕಲಿಯುವುದಕ್ಕಿಂತ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಸುಲಭ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಿಜಕ್ಕೂ ಎಲ್ಲಾ ಸಂದರ್ಭಕ್ಕೂ ಇದು ಒಗ್ಗುವುದಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

ಸೋಮವಾರದ ಸ್ಫೂರ್ತಿ ಮಾತು
ಸೋಮವಾರದ ಸ್ಫೂರ್ತಿ ಮಾತು

Monday Motivation: ವಿದ್ಯಾರ್ಥಿಗಳಾಗಲೀ, ಉದ್ಯೋಗಿಗಳಾಗಲೀ ಹೊಸತನ್ನು ಕಲಿಯಲು ಕೆಲವರು ಬಹಳ ಆಲಸ್ಯ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಒಂದು ಟ್ರೆಂಡ್‌ ಶುರು ಆಗಿದೆ. ಅದನ್ನು ಸ್ಮಾರ್ಟ್‌ ವರ್ಕ್‌ ಹೆಸರಿನಲ್ಲಿ ಕರೆಯಲಾಗುತ್ತದೆ. ಆದರೆ ಸ್ಮಾರ್ಟ್‌ ವರ್ಕ್‌ ಮಾಡಿದರೆ ನಿಜಕ್ಕೂ ಉಪಯೋಗವಾಗುವುದಾ? ಸ್ಮಾರ್ಟ್‌ ವರ್ಕ್‌ ಎಲ್ಲರನ್ನೂ ಎತ್ತರಕ್ಕೆ ಕೊಂಡೊಯ್ಯುವುದಾ? ಅನ್ನೋದು ನಮ್ಮ‌ ಮುಂದಿರುವ ಪ್ರಶ್ನೆ.

ಪ್ರತಿ ವಿಚಾರಕ್ಕೂ ಸ್ಮಾರ್ಟ್‌ ವರ್ಕ್‌ ಅನ್ವಯವಾಗುವುದಿಲ್ಲ. ಏನಾದರೂ ಕಲಿತುಕೊಳ್ಳಬೇಕು ಎಂದಾದಲ್ಲಿ ಅದನ್ನು ಕಷ್ಟಪಟ್ಟು ಕಲಿಯಬೇಕು. ವಿದ್ಯಾರ್ಥಿದೆಸೆಯಲ್ಲಿ ಕಲಿಯುವುದು ಕಷ್ಟವಾಗಿದ್ದಲ್ಲಿ ಮಾತ್ರ ಜೀವನದ ಮೌಲ್ಯ ಏನೆಂದು ಅರ್ಥವಾಗುತ್ತದೆ. ಉದ್ಯೋಗಿ ಆಗಲೀ, ಬೇರೆ ಯಾರಿಗಾದರೂ ಕಲಿಯುವುದು ಎಂದರೆ ಬಹಳ ಕಠಿಣವಾಗಿರಬೇಕು. ಆಗಲೇ ಅದರ ಅರ್ಥ ಏನೆಂದು ಅರ್ಥವಾಗುತ್ತದೆ. ನಮ್ಮ ತಾತ , ಮುತ್ತಾತನವರನ್ನು ಏನಾದರೂ ಕೇಳಿದರೆ ಎಲ್ಲವನ್ನೂ ಬಾಯಿಯ ಮೂಲಕವೇ ಹೇಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆ ರೀತಿ ಅಲ್ಲ, ಏನಾದರೂ ಕೇಳಿದರೆ ಎಲ್ಲವನ್ನೂ ಮೊಬೈಲ್‌ ನೋಡುವ ಮೂಲಕವೇ ಹೇಳಲಾಗುತ್ತದೆ. ಇದೇ ವಿಚಾರವಾಗಿ ಒಬ್ಬ ಕಳ್ಳನು ತನ್ನ ಮಗನಿಗೆ ಹೇಳಿಕೊಟ್ಟ ಪಾಠದ ಬಗ್ಗೆ ಒಂದು ಕಥೆಯನ್ನು ಕೇಳಿ.

ಒಬ್ಬ ವ್ಯಕ್ತಿಯು ಕಷ್ಟಕರ ಕೆಲಸಗಳನ್ನು ಎಷ್ಟು ಸುಲಭದಲ್ಲಿ ಮಾಡಬಲ್ಲನು ಎಂಬುದು ಆತನ ಆಲೋಚನೆಯ ಮೇಲೆ ಅವಲಂಬಿತವಾಗಿದೆ. ಕಳ್ಳನ ಮಗನು ಕಳ್ಳತನ ಮಾಡಲು ಸುಲಭದ ದಾರಿಯೊಂದನ್ನು ಹೇಳುವಂತೆ ತಂದೆಗೆ ಕೇಳುತ್ತಾನೆ. ಕಳ್ಳ ಕೂಡಾ ಮಗನಿಗೆ ಕಳ್ಳತನ ಕಲಿಸುವುದಾಗಿ ಒಪ್ಪಿಕೊಂಡು ಆ ರಾತ್ರಿ ಒಂದು ದೊಡ್ಡ ಮನೆಯಲ್ಲಿ ಕಳ್ಳತನ ಮಾಡಲು ಕರೆದೊಯ್ಯುತ್ತಾನೆ. ಆ ಮನೆಯಲ್ಲಿ ಎಲ್ಲರೂ ಮಲಗಿರುವಾಗ ಕಳ್ಳನು ಮಗನನ್ನು ಬಟ್ಟೆಗಳನ್ನು ಇಟ್ಟಿರುವ ಕೋಣೆಗೆ ಕರೆದೊಯ್ಯುತ್ತಾನೆ. ಬಟ್ಟೆಗಳನ್ನು ಕದಿಯುವಂತೆ ಮಗನಿಗೆ ಹೇಳುತ್ತಾನೆ. ಆ ಬಾಲಕ ತನ್ನ ತಂದೆ ಹೇಳಿದ ರೀತಿಯೇ ಕಳ್ಳತನ ಮಾಡುತ್ತಾನೆ.

ಮಗ ಕಳ್ಳತನದಲ್ಲಿ ನಿರತನಾಗಿರುವಾಗ ತಂದೆಯು ಆ ಕೋಣೆಯಿಂದ ಮೆಲ್ಲಗೆ ಹೊರಗೆ ಬರುತ್ತಾನೆ. ಕಳ್ಳತನ ಮಾಡುತ್ತಿರುವುದು ಗೊತ್ತಾಗಲಿ ಎಂಬ ಉದ್ದೇಶದಿಂದ ಬಾಗಿಲು ಬಡಿದು ಆ ಮನೆಯವರನ್ನು ಎಬ್ಬಿಸುತ್ತಾನೆ. ಆ ಸಮಯದಲ್ಲಿ ಮಗ ಕೂಡಾ ಹೇಗೋ ತಪ್ಪಿಸಿಕೊಂಡು ಹೊರಗೆ ಬರುತ್ತಾನೆ. ಇದಾದ ನಂತರ ಮಗ ಮನೆಗೆ ಬಂದು ತಂದೆಯನ್ನು ಅದರ ಬಗ್ಗೆ ಪ್ರಶ್ನಿಸುತ್ತಾನೆ. ಅಪ್ಪ ಏಕೆ ಮನೆ ಬಾಗಿಲು ತಟ್ಟಿದೆ? ನಾನು ಅಲ್ಲಿ ಏನೂ ಕದಿಯಲಿಲ್ಲ, ಆದರೆ ತಪ್ಪಿಸಿಕೊಳ್ಳುವುದು ಹೇಗೆಂದು ಕಲಿತಿದ್ದಾಗಿ ಹೇಳುತ್ತಾನೆ.

ಆಗ ತಂದೆ, ಕಳ್ಳತನದಲ್ಲಿ ನಿನ್ನ ಮೊದಲ ಪಾಠ ಕಲಿತಿರುವೆ. ಕಷ್ಟ ಬಂದಾಗ ತಪ್ಪಿಸಿಕೊಳ್ಳುವ ಮಾರ್ಗದ ಬಗ್ಗೆ ಯೋಚಿಸುವುದೇ ನಿಜವಾದ ಕಲಿಕೆ ಎನುತ್ತಾನೆ. ನೀವು ಯಾವುದೇ ಪರಿಸ್ಥಿತಿಯಲ್ಲಿದ್ದರೂ, ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲೂ, ಏನನ್ನು ಕಲಿಯಲು ಬಯಸುತ್ತೀರಿ ಎಂಬುದರ ಮೇಲೆ ಗಮನ ಕೇಂದ್ರೀಕರಿಸಬೇಕು. ಸಂದರ್ಭಗಳು ಏನೇ ಇರಲಿ, ನಿಮ್ಮ ಮನಸ್ಥಿತಿ ಚೆನ್ನಾಗಿರಬೇಕು. ಆಗ ಮಾತ್ರ ಕಲಿಯಲು ಹೆಚ್ಚಿನ ಅವಕಾಶ ಸಿಗುತ್ತದೆ. ಭಯದಿಂದ ಒಂದೇ ಕಡೆ ನಿಂತರೆ, ನೀವು ಏನನ್ನೂ ಕಲಿಯುವುದಿಲ್ಲ. ಆ ರೀತಿ ಆದರೆ ನೀವು ಜೀವನದಲ್ಲಿ ಹಿಂದೆಯೇ ಉಳಿಯುವಿರಿ, ಏನನ್ನೂ ಕಲಿಯಲು ಆಗುವುದಿಲ್ಲ.

ವಿಭಾಗ