National Mathematics Day: ಶಾಲೆಗಷ್ಟೇ ಅಲ್ಲ ಬದುಕಿಗೂ ಬೇಕು ಲೆಕ್ಕಾಚಾರ; ರಾಷ್ಟ್ರೀಯ ಗಣಿತ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  National Mathematics Day: ಶಾಲೆಗಷ್ಟೇ ಅಲ್ಲ ಬದುಕಿಗೂ ಬೇಕು ಲೆಕ್ಕಾಚಾರ; ರಾಷ್ಟ್ರೀಯ ಗಣಿತ ದಿನದ ಇತಿಹಾಸ, ಮಹತ್ವ ತಿಳಿಯಿರಿ

National Mathematics Day: ಶಾಲೆಗಷ್ಟೇ ಅಲ್ಲ ಬದುಕಿಗೂ ಬೇಕು ಲೆಕ್ಕಾಚಾರ; ರಾಷ್ಟ್ರೀಯ ಗಣಿತ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಇಂದು (ಡಿ.22) ರಾಷ್ಟ್ರೀಯ ಗಣಿತ ದಿನ. ಶ್ರೀನಿವಾಸ ರಾಮಾನುಜನ್‌ ಅವರ ಹುಟ್ಟುಹಬ್ಬದ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ನಮ್ಮೆಲ್ಲರ ಬದುಕಿನಲ್ಲಿ ಗಣಿತದ ಮಹತ್ವವನ್ನು ಸಾರುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಗಣಿತ ದಿನ
ರಾಷ್ಟ್ರೀಯ ಗಣಿತ ದಿನ

ಗಣಿತ... ಇದು ಹಲವರಿಗೆ ಕಬ್ಬಿಣದ ಕಡಲೆ, ಆದರೆ ಕೆಲವರಿಗೆ ಕಬ್ಬಿನ ಜಲ್ಲೆ. ಗಣಿತವನ್ನು ಇಷ್ಟ ಪಡುವವರಿಗೆ ಇದು ನಿಜಕ್ಕೂ ಸಿಹಿಯಾದ ಬೆಲ್ಲ. ಆದರೆ ಶಾಲೆಯಲ್ಲಾಗಲಿ, ಬದುಕಿನಲ್ಲಾಗಿ ಲೆಕ್ಕಾಚಾರ ಇಲ್ಲ ಎಂದರೆ ಬದುಕು ನಿಜಕ್ಕೂ ದುಸ್ತರ. ಹೀಗಾಗಿ ಗಣಿತ ಎನ್ನುವುದು ಎಲ್ಲರಿಗೂ ಬೇಕು. ಅಂತ ಹಾಗೆ ಇಂದು ರಾಷ್ಟ್ರೀಯ ಗಣಿತ ದಿನ. ಗಣಿತ ಹಾಗೂ ಲೆಕ್ಕಾಚಾರ ನಮ್ಮ ಬದುಕಿನ ಭಾಗವಾಗಿದೆ. ಶಾಲೆಯಲ್ಲಿ ಗಣಿತವನ್ನು ಕಲಿಯುವುದರಿಂದ ಹಿಡಿದು ನಮ್ಮ ದೈನಂದಿನ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವವರೆಗೂ ಈ ವಿಷಯದ ಮಹತ್ವವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಗಣಿತ ಕಲಿಯುವುದು ಮೋಜಿನ ಸಂಗತಿಯೂ ಹೌದು. ಗಣಿತ ಸೂತ್ರ, ತಂತ್ರಗಳು ಆಸಕ್ತಿದಾಯಕ.

ನಮ್ಮ ನಿರಂತರ ಬದುಕಿನಲ್ಲಿ ಗಣಿತವನ್ನು ಅಳವಡಿಸಿಕೊಳ್ಳಲು ಇದನ್ನು ಕಲಿಯುವ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ.

ಗಣಿತಕ್ಕೆ ಭಾರತೀಯರ ಕೊಡುಗೆ ಅಪಾರ. ಆರ್ಯಭಟ, ಬ್ರಹ್ಮಗುಪ್ತ, ಮಹಾವೀರ, ಭಾಸ್ಕರ II, ಶ್ರೀನಿವಾಸ ರಾಮಾನುಜನ್‌ ಹಾಗೂ ಇತರ ಹಲವು ಗಣಿತಜ್ಞರ ಕೊಡುಗೆಗಳಿಂದ ಗಣಿತ ಕ್ಷೇತ್ರವು ಶ್ರೀಮಂತಗೊಂಡಿದೆ.

ಈ ವಿಶೇಷ ದಿನದಂದು ಶ್ರೀನಿವಾಸ ರಾಮಾನುಜನ್‌ ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಗೌರವ ಸಲ್ಲಿಸುತ್ತಾರೆ. ಗಣಿತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಶ್ಲಾಘಿಸುತ್ತಾರೆ.

ಇಂದು ರಾಷ್ಟ್ರೀಯ ಗಣಿತ ದಿನವಿದ್ದು ಈ ದಿನದ ಆಚರಣೆಯ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿಯೋಣ.

ದಿನಾಂಕ

ಪ್ರತಿವರ್ಷ ಡಿಸೆಂಬರ್‌ 22ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ ಅವ ಹುಟ್ಟುಹಬ್ಬದ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಶುಕ್ರವಾರ ಅಂದರೆ ಇಂದು ಶ್ರೀನಿವಾಸ ರಾಮಾನುಜ ಅವರ ಹುಟ್ಟುಹಬ್ಬದ ಆಚರಣೆ ಇದೆ.

ಇತಿಹಾಸ

2012ರಲ್ಲಿ ಆಗ ಪ್ರಧಾನಿಯಾಗಿದ್ದ ಡಾ. ಮನಮೋಹನ್‌ ಸಿಂಗ್‌ ಡಿಸೆಂಬರ್‌ 22 ರಂದು ಆಯೋಜಿಸಲಾದ ಸಮಾರಂಭದಲ್ಲಿ ಶ್ರೀನಿವಾಸ ರಾಮಾನುಜನ್‌ ಅವರ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಜನ್ಮದಿನದ ಸ್ಮರಣಾರ್ಥ ಹಾಗೂ ಗಣಿತಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ದಿನ ಆಚರಣೆಯನ್ನು ಚಾಲ್ತಿಗೊಳಿಸಲಾಯಿತು. ಈ ಖ್ಯಾತ ಗಣಿತಜ್ಞನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಡಿಸೆಂಬರ್‌ 22 ಅನ್ನು ರಾಷ್ಟ್ರೀಯ ಗಣತ ದಿನವೆಂದು ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಗಣಿತ ದಿನ ಆಚರಣೆ ಚಾಲ್ತಿಯಲ್ಲಿದೆ.

ಮಹತ್ವ

ಬದುಕಿನಲ್ಲಿ ಗಣಿತ ಅತ್ಯವಶ್ಯ. ಕೂಡು, ಕಳೆ, ಭಾಗಿಸು, ಗುಣಿಸು ಹೀಗೆ ಮೂಲಗಣಿತವನ್ನಾದರೂ ನಾವು ಕಲಿತಿರಬೇಕು. ಗಣಿತವಿಲ್ಲದೇ ಬದುಕಲು ಸಾಧ್ಯವಿಲ್ಲ ಎನ್ನಬಹುದು. ಹಾಗಾಗಿ ಬದುಕಿನಲ್ಲಿ ಗಣಿತದ ಮಹತ್ವವನ್ನು ತಿಳಿಸುವ ಉದ್ದೇಶ ಹಾಗೂ ಗಣಿತ ಕಲಿಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರಣ ಜನರು ಒಗ್ಗೂಡುತ್ತಾರೆ. ಬೆಳವಣಿಗೆಯ ಮನೋಭಾವವನ್ನು ಬೆಳೆಸಲು, ಈ ಆಸಕ್ತಿದಾಯಕ ವಿಷಯವನ್ನು ಕಲಿಯಲು ಒಟ್ಟಿಗೆ ಕೈ ಜೋಡಿಸಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಸಹ ನೀಡಲಾಗುತ್ತದೆ. ರಾಷ್ಟ್ರೀಯ ಗಣಿತ ದಿನದಂದು, ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಗಣಿತದ ಬಗ್ಗೆ ಜ್ಞಾನವನ್ನು ಹರಡುವ ಮೂಲಕ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ಜನರಿಗೆ ಕಲಿಸುವ ಮೂಲಕ ದಿನವನ್ನು ಆಚರಿಸುತ್ತವೆ.

Whats_app_banner