ನೀವು 1990ರ ಆಸುಪಾಸಿನಲ್ಲಿ ಜನಿಸಿದವರಾ?, ಇನ್ನು 10 ವರ್ಷದೊಳಗೆ ಈ 20 ಕೆಲಸಗಳನ್ನು ಮಾಡಿ ಮುಗಿಸಿಬಿಡಿ!
ಮನುಷ್ಯ ಬದುಕಿನಲ್ಲಿ 40 ಎಂಬುದು ಒಂದು ನಿರ್ಣಾಯಕ ಘಟ್ಟ. ಅದು ಶೈಶವ, ಬಾಲ್ಯ, ಹರೆಯ, ಯೌವನ ಮುಗಿಸಿ ಮಧ್ಯವಯಸ್ಸಿಗೆ ಬಂದಿರುವುದರ ಸಂಕೇತ. ನೀವು 1990ರ ಆಸುಪಾಸಿನಲ್ಲಿ ಜನಿಸಿದವರಾ? ಹಾಗಾದರೆ ಇನ್ನು 10 ವರ್ಷದೊಳಗೆ ಈ 20 ಕೆಲಸಗಳನ್ನು ಮಾಡಿ ಮುಗಿಸಿಬಿಡಿ!, ಅವು ಯಾವುವು ಇಲ್ಲಿದೆ ವಿವರ.
ನಲವತ್ತು ವರ್ಷ ಆಯಿತಾ? ಹಾಗಾದ್ರೆ ನೀವು ಮಧ್ಯವಯಸ್ಸಿಗೆ ಬಂದಿದ್ದೀರಿ ಎಂದರ್ಥ. ಈ ವಯಸ್ಸಿನ ಗಡಿ ದಾಟಿದ ಅನೇಕರು ನಿಮ್ಮ ಗಮನಕ್ಕೆ ಬಂದಿರಬಹುದು. ಛೇ ಆ ವಯಸ್ಸಲ್ಲಿ ಅದನ್ನೆಲ್ಲ ಮಾಡಿಬಿಡಬೇಕಿತ್ತು. ಇನ್ನು ಅದು ನನ್ನಿಂದಾಗದು ಎಂದು ಕೊರಗುತ್ತಿರುವುದನ್ನು ಕಂಡಿರಬಹುದು. ಹೌದು ವಯಸ್ಸಿನಲ್ಲಿ ಈ ಗಡಿ ದಾಟಿದ ಬಳಿಕ ಕೆಲವು ಕೆಲಸಗಳನ್ನು ಮಾಡುವುದು ಸಾಧ್ಯವಿಲ್ಲ. ನಿಮಗೆ ನಲವತ್ತು ವರ್ಷ ತುಂಬುವ ಮೊದಲೇ ಆ ಕೆಲಸಗಳನ್ನೆಲ್ಲ ಮಾಡಿ ಮುಗಿಸಿ.
ಇದು ನೇರವಾಗಿ 1990ರ ಆಸುಪಾಸಿನಲ್ಲಿ ಹುಟ್ಟಿದವರಿಗೆ ಸಂಬಂಧಿಸಿದ ವಿಷಯ. ಹೌದು ಇನ್ನು ಹೆಚ್ಚು ಕಡಿಮೆ 10 ವರ್ಷ ನಿಮ್ಮ ಬಳಿ ಇದೆ. ಅಷ್ಟಾಗುತ್ತಲೇ ನಿಮ್ಮ ವಯಸ್ಸು ಕೂಡ 40ಕ್ಕೆ ಬಂದಿರುತ್ತದೆ. ಅಷ್ಟರೊಳಗೆ ಮಾಡಬೇಕಾದ ಕೆಲಸಗಳನ್ನು ಮಾಡಿ ಮುಗಿಸಿದರೆ ಕೊರುಗವವರಂತೆ ನೀವೂ ಕೊರಗಬೇಕಾಗಿರಲ್ಲ! ಏನಪ್ಪಾ ಅಂಥ ಕೆಲಸ ಎಂದು ಹುಬ್ಬೇರಿಸಬೇಡಿ.
40 ವರ್ಷದೊಳಗೆ ಮಾಡಿ ಮುಗಿಸಬೇಕಾದ 20 ಕೆಲಸಗಳಿವು
1) ಸಾಲಗಳನ್ನು ಮರುಪಾವತಿಸಿ. ನಲವತ್ತು ವರ್ಷ ತುಂಬುವ ಮೊದಲೇ ಸಾಲದಿಂದ ಹೊರಬನ್ನಿ
2) ನಿಮ್ಮ ನಿವೃತ್ತಿಯ ನಂತರದ ಜೀವನಕ್ಕಾಗಿಯೂ ಹಣ ಉಳಿಸಲು ಶುರುಮಾಡಿ. ವೈಯಕ್ತಿಕ ಹಣಕಾಸಿನ ಕಡೆಗೆ ಗಮನಕೊಡಿ.
3) ನಿಮ್ಮ ಮಗುವಿನ ಭವಿಷ್ಯ ಚೆನ್ನಾಗಿ ಯೋಜಿಸಿ. ನೀವು ಏನು ಮಾಡಬಹುದೋ ಅದನ್ನು 100% ಮಾಡಿ.
4) ಒಂಟಿಯಾಗಿ ಹೋಗಿಬರಬೇಕು ಎಂದಾದರೆ ಅದನ್ನೂ ಮಾಡಿಬಿಡಿ. ಒಮ್ಮೆ ಒಂಟಿಯಾಗಿ ಪ್ರವಾಸ ಹೋಗಿಬನ್ನಿ
5) ಒಮ್ಮೆಯಾದರೂ ಹಡಗಿನಲ್ಲಿ, ವಿಮಾನದಲ್ಲಿ ಪ್ರಯಾಣಿಸಿ
6) ತಿಂಗಳಿಗೆ ಒಂದು ಸಣ್ಣ ಪ್ರವಾಸ, ವರ್ಷಕ್ಕೊಂದು ದೊಡ್ಡ ಪ್ರವಾಸವನ್ನು ಯೋಜಿಸಿ.
7) ಎಲ್ಲದಕ್ಕೂ ಸಂಗಾತಿಯನ್ನೇ ಅವಲಂಬಿಸಬೇಡಿ. ನಿಮ್ಮ ಕೆಲಸ ನೀವು ಮಾಡುವುದನ್ನು ಕಲಿಯಿರಿ
8) ಬೆಟ್ಟ ಹತ್ತುವ ಅಥವಾ ಟ್ರೆಕ್ಕಿಂಗ್ ಮೂಲಕ ಮಾತ್ರ ನೋಡಬಹುದಾದ ಸ್ಥಳಗಳು, ಪವಿತ್ರ ಸ್ಥಳಗಳಿದ್ದರೆ ನೋಡಿ ಬಂದುಬಿಡಿ
9) ಮನೆ ಖರೀದಿಸಿ. ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ನಿಮಗೆ ಮನೆ ಇರಬೇಕು.
10) ನಿಮ್ಮ ಕೆಲಸದಲ್ಲಿ ನಿಮ್ಮ ಅತ್ಯುತ್ತಮ ಪ್ರತಿಭೆಯನ್ನು ತೋರಿಸಿ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಕೌಶಲ್ಯ ವೃದ್ಧಿ ಮಾಡಿಕೊಂಡು ಮೌಲ್ಯ ಹೆಚ್ಚಿಸಿ
11) ಸಂಪೂರ್ಣ ಪ್ರಯತ್ನ ಮಾಡಿ, ಕಷ್ಟಪಟ್ಟರೂ ಇಷ್ಟಪಟ್ಟು ದುಡಿಯಿರಿ
12) ಸಮಾಜಮುಖಿಯಾಗಿ. ವಾರ ಅಥವಾ ತಿಂಗಳಿಗೆ ಒಂದು ದಿನವಾದರೂ ಸರಿ ನಿಮ್ಮ ಸೇವೆ ಒದಗಿಸಿ. ಇದು ನಿಮ್ಮ ಜೀವನದ ದೃಷ್ಟಿಕೋನವನ್ನು ಬದಲಾಯಿಸುತ್ತದೆ.
13) ಮಕ್ಕಳ ಪ್ರೀತಿಯಲ್ಲಿ ಸಂಗಾತಿಯ ಪ್ರೀತಿಯನ್ನು ನಿರ್ಲಕ್ಷಿಸಬೇಡಿ. ನಿಮ್ಮ ಸಂಗಾತಿಗೆ ಮೊದಲ ಆದ್ಯತೆ ನೀಡಿ
14) ನೀವು ನೋಡಲು ಬಯಸುವ ಸ್ಥಳಗಳನ್ನು ನೋಡಿಬಿಡಿ
15) ಜೀವನದಲ್ಲೊಮ್ಮೆ ಖರೀದಿಸಿಬಿಡಬೇಕು ಎಂಬ ಕನಸು ಇಟ್ಟುಕೊಂಡಿದ್ದ ದುಬಾರಿ ವಸ್ತು ಇದ್ದರೆ ಖರೀದಿಸಿಬಿಡಿ. ಅದು ಚಿನ್ನಾಭರಣ, ಬಟ್ಟೆ, ಫೋನ್ ಯಾವುದೇ ಆದರೂ ಮಾಡಿಬಿಡಿ
16) ನಿಮ್ಮ ವೈದ್ಯರ ಸಲಹೆಯಂತೆ ವರ್ಷಕ್ಕೆ ಒಮ್ಮೆಯಾದರೂ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿ.
17) ನಿಮ್ಮ ಆರೋಗ್ಯ ಸಮಸ್ಯೆಗಳು ಮತ್ತು ಪೌಷ್ಟಿಕಾಂಶದ ಕೊರತೆಗಳನ್ನು ನಿರ್ಲಕ್ಷಿಸಬೇಡಿ. ಆರೋಗ್ಯಕರ ಆಹಾರ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
18) ವಾಕಿಂಗ್ ಮತ್ತು ಯೋಗವನ್ನು ನಿಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಿ.
19) ನಿಮ್ಮ ಬಳಿ ಆರೋಗ್ಯ ವಿಮೆ ಮತ್ತು ಜೀವ ವಿಮೆ ಇಲ್ಲದಿದ್ದರೆ ತಕ್ಷಣವೇ ಪಡೆಯಿರಿ.
20) ಸಮಯ ಸಿಕ್ಕಾಗ ಸಂಗಾತಿಗೆ ಸಂಪೂರ್ಣ ವಿಶ್ರಾಂತಿ ನೀಡಿ. ಕುಟುಂಬ ವ್ಯವಹಾರ, ಮನೆಗೆಲಸ, ಅಡುಗೆ, ಶಾಪಿಂಗ್ ಇತ್ಯಾದಿ ನೀವೇ ಮಾಡಿ. ಇದು ಕುಟುಂಬದ ಸೌಹಾರ್ದ ವಾತಾವರಣವನ್ನು ಕಾಪಾಡುತ್ತದೆ.
ವಿಭಾಗ