Child Health in Rain: ಮಳೆಗಾಲದ ಆರಂಭ: ಪೋಷಕರೇ, ಮಕ್ಕಳ ಆರೋಗ್ಯದ ಕಾಳಜಿ ಇರಲಿ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಿ, ಆರೋಗ್ಯ ಕಾಪಾಡಿ-rain season child health parenting school cold weather health problems immunity boosting food child health in kannada rs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Child Health In Rain: ಮಳೆಗಾಲದ ಆರಂಭ: ಪೋಷಕರೇ, ಮಕ್ಕಳ ಆರೋಗ್ಯದ ಕಾಳಜಿ ಇರಲಿ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಿ, ಆರೋಗ್ಯ ಕಾಪಾಡಿ

Child Health in Rain: ಮಳೆಗಾಲದ ಆರಂಭ: ಪೋಷಕರೇ, ಮಕ್ಕಳ ಆರೋಗ್ಯದ ಕಾಳಜಿ ಇರಲಿ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಿ, ಆರೋಗ್ಯ ಕಾಪಾಡಿ

Parenting: ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ನೋಡಿಕೊಳ್ಳಬೇಕು. ಕರಿದ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಬೇಕು. ಮಳೆಗಾಲದಲ್ಲಿ ಪೋಷಕರು ಮಕ್ಕಳ ಆರೋಗ್ಯ ರಕ್ಷಣೆಗೆ ಇನ್ನೂ ಏನೇನು ಮಾಡಬಹುದು ನೋಡಿ.

ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಕಾಳಜಿ ಇರಲಿ (ಸಾಂದರ್ಭಿಕ ಚಿತ್ರ)
ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಕಾಳಜಿ ಇರಲಿ (ಸಾಂದರ್ಭಿಕ ಚಿತ್ರ)

ಹೆಚ್ಚು ಕಡಿಮೆ ತಿಂಗಳ ನಂತರ ಮಳೆ ಆರಂಭವಾಗಿದೆ. ಈಗಾಗಲೇ ಮಕ್ಕಳು ಬೇಸಿಗೆ ರಜೆ ಮುಗಿಸಿ ಶಾಲೆಗೆ ಹೋಗುತ್ತಿದ್ದಾರೆ. ತರಗತಿಗಳಲ್ಲಿ ಪಾಠವೂ ಆರಂಭವಾಗಿದೆ. ಆದರೆ, ಇದೀಗ ಶುರುವಾಗಿರುವ ಮಳೆ ಮಕ್ಕಳ ಆರೋಗ್ಯವನ್ನು ಕೆಡಿಸುವ ಆತಂಕ ಪೋಷಕರದ್ದು.

ಈಗಿನಿಂದಲೇ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಕಾಳಜಿ ವಹಿಸುವುದು ಅಗತ್ಯ. ಮಕ್ಕಳಿಗೆ ಮಳೆಯಲ್ಲಿ ಆಟವಾಡುವುದು ಎಂದರೆ ತುಂಬಾ ಇಷ್ಟ. ಹಾಗೇ, ಮಳೆಯಲ್ಲಿ ಮಕ್ಕಳು ನೆನೆದು ಬರುತ್ತಾರೆ. ಮನೆಗೆ ಬಂದ ಮಕ್ಕಳ ತಲೆ ಹಾಗೂ ದೇಹವನ್ನು ಒರೆಸಬೇಕು. ಮಕ್ಕಳನ್ನು ತಂಡಿ ಹಾಗೂ ಮಳೆಯಿಂದ ಬೆಚ್ಚಗೆ ಇಡಬೇಕು. ಮಕ್ಕಳಿಗೆ ಕುಡಿಯಲು ಬಿಸಿ ನೀರನ್ನೇ ನೀಡುವುದರಿಂದ ಆರೋಗ್ಯ ಕೆಡದಂತೆ ಎಚ್ಚರವಹಿಸಬಹುದು.

14 ವರ್ಷದೊಳಗಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ, ಮಕ್ಕಳು ಅನಾರೋಗ್ಯಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಕೆಮ್ಮು, ಶೀತ, ನೆಗಡಿ, ಜ್ವರ ಬರುವ ಸಾಧ್ಯತೆಗಳೇ ಹೆಚ್ಚು.

ರೋಗ ನಿರೋಧಕ ಶಕ್ತಿ ಹೆಚ್ಚಿಸಿ

ಮಕ್ಕಳಿಗೆ ವಿಟಮಿನ್‌ ಸಿ ಅಂಶವಿರುವ ಆಹಾರಗಳನ್ನೇ ಹೆಚ್ಚು ನೀಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನಿಂಬೆಹಣ್ಣಿನ ಶರಬತ್ತು, ಬಾಳೆಹಣ್ಣು, ಬಿಟ್ರೂಟ್‌ ಹಾಗೂ ಟೊಮೆಟೊ ಹಣ್ಣನ್ನು ಮಕ್ಕಳಿಗೆ ನೀಡಿ. ಹೆಚ್ಚು ಕೊಬ್ಬಿನಾಂಶವಿರುವ ಜಂಕ್‌ ಫುಡ್‌ಗಳನ್ನು ನೀಡಬೇಡಿ.

ಬೆಚ್ಚಗಿನ ಉಡುಪು

ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೊರಡುತ್ತಾರೆ. ಈ ವೇಳೆ ಮಳೆ ಬೀಳುತ್ತಿರುತ್ತದೆ. ಹೀಗಾಗಿ, ಮಕ್ಕಳಿಗೆ ಸ್ವೆಟರ್‌ ಅಥವಾ ಜಾಕೆಟ್‌ ಗಳನ್ನು ಹಾಕಿ ಕಳುಹಿಸಿ. ಇದರಿಂದ ಮೈ ಶಾಖವಾಗಿರುತ್ತದೆ. ಮೈ ತುಂಬಾ ಉಡುಪುಗಳನ್ನು ಧರಿಸುವುದು ಒಳ್ಳೆಯದು. ಶೀತ ಮೈ ಹೊಂದಿರುವ ಮಕ್ಕಳಿಗೆ ಕಾಲಿಗೆ ಸಾಕ್ಸ್‌ ಹಾಕಿದರೆ ಒಳ್ಳೆಯದು.

ಹೊರಗಿನ ಆಹಾರಕ್ಕೆ ಬ್ರೇಕ್‌ ಹಾಕಿ

ಮಕ್ಕಳಿಗೆ ಹೊರಗಿ ಆಹಾರಗಳನ್ನು ಮಳೆಗಾಲದಲ್ಲಿ ತಿನ್ನಿಸಬೇಡಿ. ಅದರಲ್ಲೂ ಎಣ್ಣೆಯಲ್ಲಿ ಕರಿದ ಗೋಬಿ, ವಡಿ, ಬಜ್ಜಿಗಳನ್ನು ಕೊಡಬೇಡಿ. ಗಂಟಲು ಕಿರಿಕಿರಿ ಉಂಟಾಗಿ ಆರೋಗ್ಯ ಕೆಡುತ್ತದೆ. ಮನೆಯಲ್ಲೇ ಮಕ್ಕಳಿಗೆ ಇಷ್ಟವಾಗುವ ಆಹಾರ ಪದಾರ್ಥಗಳನ್ನು ತಯಾರಿಸಿ ಕೊಡಿ. ಬಿಸಿ ಆಹಾರವನ್ನೇ ಹೆಚ್ಚು ಮಕ್ಕಳಿಗೆ ನೀಡಿ.

ಮನೆಯ ಸುತ್ತ ಸ್ವಚ್ಚವಿರಲಿ

ಮಳೆಗಾಲದಲ್ಲಿ ಮಳೆ ನೀರು ನಿಂತು ಅಲ್ಲಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಸೊಳ್ಳೆಗಳು ಕಚ್ಚಿ ಡೆಂಗಿ, ಮಲೇರಿಯಾ ಜ್ವರಗಳು ಮಕ್ಕಳನ್ನು ಕಾಡಲಿದೆ. ಹೀಗಾಗಿ, ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯೊಳಗೆ ಸೊಳ್ಳೆ ಪರದೆಗಳನ್ನು ಬಳಸುವುದು ಒಳ್ಳೆಯದು.

ಜ್ವರ ನಿರಂತರವಾಗಿದ್ದರೆ ವೈದ್ಯರ ಬಳಿ ಹೋಗಿ

ಮಕ್ಕಳಿಗೆ ಜ್ವರ ಬಂದ ಕೂಡಲೇ ಸಿರಪ್‌ ಹಾಕುವುದು ಪೋಷಕರ ಕೆಲಸ. ಹಾಗೆಯೇ, ನಾಲ್ಕು ದಿನವಾದರೂ ಕಡಿಮೆಯಾಗದಿದ್ದರೆ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಲೇಖನ: ಅಕ್ಷರ ಕಿರಣ್‌

ಇದನ್ನೂ ಓದಿ

Dengue: ಮಳೆಯ ಕಣ್ಣಮುಚ್ಚಾಲೆಯ ನಡುವೆ ಹೆಚ್ಚುತ್ತಿದೆ ಡೆಂಗಿ ಜ್ವರದ ಲಕ್ಷಣ; ಇರಲಿ ಮುನ್ನೆಚ್ಚರಿಕೆ

Dengue Fever Symptoms: ಮುಂಗಾರು ಪ್ರವೇಶವಾಗಿ ಕೆಲ ದಿನಗಳು ಕಳೆದರೂ ಮಳೆ ಆರಂಭವಾಗಿಲ್ಲ. ಮಳೆಯ ಅಭಾವದ ಬೇಸರದ ನಡುವೆ ಡೆಂಗಿ ಜ್ವರ ಹೆಚ್ಚುವ ಭಯವೂ ಕಾಡುತ್ತಿದೆ. ಕೇರಳದಲ್ಲಿ ಡೆಂಗಿ ಜ್ವರದ ಪ್ರಭಾವ ಜೋರಾಗಿದ್ದು, ರಾಜ್ಯದಲ್ಲೂ ಡೆಂಗಿ ಹರಡುವ ಸಾಧ್ಯತೆ ಇದೆ. ಆ ಕಾರಣಕ್ಕೆ ಸಾಕಷ್ಟು ಎಚ್ಚರ ವಹಿಸುವುದು ಅವಶ್ಯ.

ಕೇರಳಕ್ಕೆ ಮುಂಗಾರು ಪ್ರವೇಶವಾಗಿ ಒಂದು ವಾರ ಕಳೆದಿದೆ. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಡೆಂಗಿ ಜ್ವರ ಹೆಚ್ಚುತ್ತಿದೆ. ಈಗಾಗಲೇ ಜೂನ್‌ ತಿಂಗಳಿನಲ್ಲಿ ಕೇರಳದ ಎರ್ನಾಕುಲಂನಲ್ಲಿ ನಾಲ್ಕು ಮಂದಿ ಡೆಂಗಿ ಜ್ವರದಿಂದ ಸಾವನ್ನಪ್ಪಿದ್ದಾರೆ.

mysore-dasara_Entry_Point