Relationship: ಮದುವೆಯಾಗಲು ಯೋಚಿಸಿದ್ದೀರಾ; ಸಂಬಂಧದ ಕೊಂಡಿ ಬೆಸೆಯುವ ಮುನ್ನ ವಿವಾಹಪೂರ್ವ ಸಂಭಾಷಣೆಗೆ ನೀಡಿ ಒತ್ತು
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಮದುವೆಯಾಗಲು ಯೋಚಿಸಿದ್ದೀರಾ; ಸಂಬಂಧದ ಕೊಂಡಿ ಬೆಸೆಯುವ ಮುನ್ನ ವಿವಾಹಪೂರ್ವ ಸಂಭಾಷಣೆಗೆ ನೀಡಿ ಒತ್ತು

Relationship: ಮದುವೆಯಾಗಲು ಯೋಚಿಸಿದ್ದೀರಾ; ಸಂಬಂಧದ ಕೊಂಡಿ ಬೆಸೆಯುವ ಮುನ್ನ ವಿವಾಹಪೂರ್ವ ಸಂಭಾಷಣೆಗೆ ನೀಡಿ ಒತ್ತು

Relationship: ವಿವಾಹ ಪೂರ್ವ ಸಮಾಲೋಚನೆ ಬಹಳ ಮುಖ್ಯ. ನೀವು ಮದುವೆಯಾಗಲು ಮನಸ್ಸು ಮಾಡಿದ್ದರೆ ಮದುವೆಗೂ ಮುನ್ನ ಮದುವೆಯಾಗುವ ವ್ಯಕ್ತಿಯೊಂದಿಗೆ ಸಮಾಲೋಚನೆ ನಡೆಸಿ. ನಿಮ್ಮ ಮನೋಭಾವಕ್ಕೆ ಹೊಂದಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಂಡು ಸಂಬಂಧವನ್ನು ಮುಂದುವರಿಸಿ ಎನ್ನುತ್ತಾರೆ ಆಪ್ತಸಮಾಲೋಚಕರು.

ಸಂಬಂಧದ ಕೊಂಡಿ ಬೆಸೆಯುವ ಮುನ್ನ ವಿವಾಹಪೂರ್ವ ಸಂಭಾಷಣೆಗೆ ನೀಡಿ ಒತ್ತು
ಸಂಬಂಧದ ಕೊಂಡಿ ಬೆಸೆಯುವ ಮುನ್ನ ವಿವಾಹಪೂರ್ವ ಸಂಭಾಷಣೆಗೆ ನೀಡಿ ಒತ್ತು

ಮದುವೆ ವಯಸ್ಸಿಗೆ ಬಂದಾಗ ಮದುವೆಯಾಗಬೇಕು ನಿಜ. ಹಾಗಂತ ಮದುವೆ ಮಕ್ಕಳಾಟವಲ್ಲ. ಒಂದು ಸುಂದರ ದಾಂಪತ್ಯವು ಹಲವು ವಿಷಯಗಳನ್ನು ಒಳಗೊಂಡಿರುತ್ತದೆ. ಯಾವುದೇ ಸಂಬಂಧವಾಗಲಿ ಪ್ರೀತಿ ಎಂಬ ಅಡಿಪಾಯ ಇರಬೇಕು. ಇದರೊಂದಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಇಬ್ಬರ ಮೌಲ್ಯ, ಗುರಿ, ಮಹತ್ವಾಕಾಂಕ್ಷೆ, ಬಯಕೆಗಳನ್ನು ಅರಿಯುವುದು, ಸಾಮಾನ್ಯ ಇಷ್ಟಾನಿಷ್ಟಗಳನ್ನು ತಿಳಿಯುವುದು, ಪರಸ್ಪರ ಗೌರವ, ನಿಷ್ಠೆಯನ್ನು ಕಾಪಾಡಿಕೊಳ್ಳುವುದು ಈ ಎಲ್ಲವೂ ಮದುವೆ ಎಂಬ ಸಂಬಂಧ ಮೂರಕ್ಷರದ ಬಂಧ ಭದ್ರವಾಗಲು ಕಾರಣವಾಗುವ ಅಂಶಗಳು.

ಆ ಕಾರಣಕ್ಕೆ ವಿವಾಹ ಪೂರ್ವ ಸಮಾಲೋಚನೆ ಬಹಳ ಮುಖ್ಯ. ನೀವು ಮದುವೆಯಾಗಲು ಮನಸ್ಸು ಮಾಡಿದ್ದರೆ ಮದುವೆಗೂ ಮುನ್ನ ಮದುವೆಯಾಗುವ ವ್ಯಕ್ತಿಯೊಂದಿಗೆ ಸಮಾಲೋಚನೆ ನಡೆಸಿ. ನಿಮ್ಮ ಮನೋಭಾವಕ್ಕೆ ಹೊಂದಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಂಡು ಸಂಬಂಧವನ್ನು ಮುಂದುವರಿಸಿ ಎನ್ನುತ್ತಾರೆ ಆಪ್ತಸಮಾಲೋಚಕರು.

ಹಾಗಾದರೆ ಮದುವೆಗೂ ಮುನ್ನ ನಿಮ್ಮ ಸಮಾಲೋಚನೆ ಹೇಗಿರಬೇಕು?

ಮೌಲ್ಯಗಳ ಬಗ್ಗೆ ಚರ್ಚಿಸಿ

ನಾವು ಅನುಸರಿಸುವ ಮೌಲ್ಯ ಮತ್ತು ನೀತಿಗಳು ನಮ್ಮ ಗುರುತನ್ನು ವ್ಯಾಖ್ಯಾನಿಸುತ್ತವೆ. ಇವುಗಳನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಹಾಗಾಗಿ ನಾವು ಮದುವೆಯಾಗುವ ವ್ಯಕ್ತಿ ಅದನ್ನು ಒಪ್ಪಿಕೊಳ್ಳುತ್ತಾರಾ, ಗೌರವಿಸುತ್ತಾರಾ ಎಂದು ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾಗಿ ನಮ್ಮ ನೀತಿ ಮೌಲ್ಯಗಳನ್ನು ಚರ್ಚಿಸಬೇಕು.

ಸಂವಹನ

ಪ್ರತಿ ವ್ಯಕ್ತಿಗೂ ಅವರದ್ದೇ ಆದ ಸಂವಹನ ಶೈಲಿ ಇರುತ್ತದೆ. ಆದರೆ ಸಂಗಾತಿಯ ಸಂವಹನದ ರೀತಿಯನ್ನು ನೀವು ಅರಿಯಬೇಕು. ಇದರೊಂದಿಗೆ ಪರಸ್ಪರರ ಪ್ರಯತ್ನಗಳನ್ನು ಶ್ಲಾಘಿಸುವುದು, ಅವರ ಇಂದಿನ ದಿನ ಹೇಗೆ ಕಳೆಯಿತು ಎಂದು ಚರ್ಚಿಸುವುದು, ನಮ್ಮ ಭವಿಷ್ಯ ಕನಸುಗಳನ್ನು ಹಂಚಿಕೊಳ್ಳುವುದು ಇದು ಕೂಡ ಮುಖ್ಯವಾಗುತ್ತದೆ.

ಅನ್ಯೋನ್ಯತೆ

ಇಬ್ಬರ ನಡುವೆ ಅನ್ಯೋನ್ಯತೆಯ ಭಾವ ಹುಟ್ಟುವುದು ಬಹಳ ಮುಖ್ಯವಾಗುತ್ತದೆ. ನಮ್ಮ ಸೌಕರ್ಯಗಳು, ಅನಾನುಕೂಲಗಳನ್ನು ಸಹ ಮದುವೆಯಾಗುವ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಕು.

ಹಣಕಾಸು

ನಾವು ಮದುವೆಗೂ ಮೊದಲು ಮಾತನಾಡಬೇಕಾದ ವಿಷಯಗಳಲ್ಲಿ ಹಣಕಾಸು ಕೂಡ ಒಂದು. ನಮ್ಮ ಖರ್ಚಿನ ರೀತಿ, ಉಳಿತಾಯದ ಯೋಜನೆಗಳು ಈ ಎಲ್ಲದರ ಬಗ್ಗೆಯೂ ಮುಂಚೆಯೇ ಮಾತನಾಡಿ ಇರಬೇಕು.

ಕುಟುಂಬ

ಮದುವೆಯು ಎರಡು ಕುಟುಂಬಗಳನ್ನು ಒಂದು ಮಾಡುತ್ತದೆ. ಆ ಕಾರಣಕ್ಕೆ ಇಬ್ಬರಿಗೂ ಇಬ್ಬರ ಕುಟುಂಬದ ರೀತಿ, ನೀತಿ, ಆಚರಣೆಗಳ ಬಗ್ಗೆ ಅರಿವಿರಬೇಕು.

ನಂಬಿಕೆ

ಆಧಾತ್ಮಿಕ, ಧಾರ್ಮಿಕ ನಂಬಿಕೆಗಳೂ ಮದುವೆಯ ವಿಚಾರದಲ್ಲಿ ಬಹಳ ಮುಖ್ಯ ಎನ್ನಿಸುತ್ತದೆ. ನಾವು ಹೊಂದಿರುವ ನಂಬಿಕೆಗಳು, ನಾವು ಅನುಸರಿಸುವ ಜೀವನ ವಿಧಾನವನ್ನು ತಿಳಿಸುವಂತಿರಬೇಕು.

ಇದನ್ನೂ ಓದಿ 

Relationship: ಪ್ರೀತಿ ಅರಸುವ ಮುನ್ನ ಈ ವಿಷಯಗಳಲ್ಲಿ ಎಡವದಿರಿ; ಪ್ರೇಮ ಸಂಬಂಧವೊಂದೇ ಬದುಕಲ್ಲ

ಜಗತ್ತಿನ ಪ್ರತಿಯೊಂದು ಜೀವಿಯೂ ಸಂಗಾತಿಯನ್ನು ಬಯಸುವುದು ಸಹಜ. ನಮ್ಮನ್ನು ಅತಿಯಾಗಿ ಪ್ರೀತಿಸುವ, ನಮ್ಮ ಮೇಲೆ ಕಾಳಜಿ ತೋರುವ ಜೀವವು ನಮ್ಮೊಂದಿಗೆ ಇರಬೇಕು ಎಂದು ಮನಸ್ಸು ಬಯಸುತ್ತದೆ. ತೀರಾ ಒಂಟಿತನ ಕಾಡಿದಾಗ ಸಂಗಾತಿಯ ಕೊರತೆ ಹೆಚ್ಚು ಕಾಡುವುದು ಸಹಜ. ಆದರೆ ಜೀವನದಲ್ಲಿ ಬಯಸ್ಸಿದ್ದೆಲ್ಲಾ ಸಿಗಲು ಸಾಧ್ಯವಿಲ್ಲ, ಇದು ಪ್ರೀತಿ-ಪ್ರೇಮದ ವಿಷಯಕ್ಕೂ ಅನ್ವಯಿಸುತ್ತದೆ. ಪ್ರೀತಿಯನ್ನು ಹುಡುಕುತ್ತಾ ಹೊರಟ ನಮಗೆ ನಾವು ನಿರೀಕ್ಷಿಸಿದ ಪ್ರೀತಿ ಸಿಗಬೇಕು ಎಂದೇನಿಲ್ಲ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಪ್ರೀತಿ ಹುಡುಕುವ ಗಡಿಬಿಡಿಯಲ್ಲಿ ಪ್ರೀತಿಯ ವಿಚಾರದಲ್ಲಿ ನಾವು ಎಡವಬಹುದು. ತರಿತ್ವವಾಗಿ ಹುಡುಕಿಕೊಂಡ ಸಂಗಾತಿಯು ತಾತ್ಕಾಲಿಕ ಅನ್ಯೂನ್ಯತೆಗೆ ಕಾರಣವಾಗಬಹುದು. ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದುʼ ಎನ್ನುತ್ತಾರೆ ಮನಃಶಾಸ್ತ್ರಜ್ಞ ಎಮಿಲಿ ಎಚ್‌ ಸ್ಯಾಂಡರ್ಸ್‌. ಇವರು ಪ್ರೀತಿಯ ಹುಡುಕಾಟದಲ್ಲಿರುವವರಿಗೆ ಒಂದಿಷ್ಟು ಸಲಹೆಗಳನ್ನು ನೀಡುತ್ತಾರೆ.

Whats_app_banner