Skin Care: ನಿಮ್ಮ ಚರ್ಮಕ್ಕೆ ಹೊಂದುವ ಪ್ರಾಡಕ್ಟ್‌ಗಳನ್ನು ಕೊಳ್ಳುವುದು ಹೇಗೆ, ಅದರಲ್ಲಿ ಯಾವೆಲ್ಲಾ ಅಂಶಗಳಿರಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  Skin Care: ನಿಮ್ಮ ಚರ್ಮಕ್ಕೆ ಹೊಂದುವ ಪ್ರಾಡಕ್ಟ್‌ಗಳನ್ನು ಕೊಳ್ಳುವುದು ಹೇಗೆ, ಅದರಲ್ಲಿ ಯಾವೆಲ್ಲಾ ಅಂಶಗಳಿರಬೇಕು

Skin Care: ನಿಮ್ಮ ಚರ್ಮಕ್ಕೆ ಹೊಂದುವ ಪ್ರಾಡಕ್ಟ್‌ಗಳನ್ನು ಕೊಳ್ಳುವುದು ಹೇಗೆ, ಅದರಲ್ಲಿ ಯಾವೆಲ್ಲಾ ಅಂಶಗಳಿರಬೇಕು

Skin Care Tips: ಪ್ರತಿದಿನ ಅಥವಾ ಪಾರ್ಟಿಗಳಿಗೆ ಬಳಸಲು ನೀವು ಯಾವುದೇ ಸ್ಕಿನ್‌ ಕೇರ್‌ ಪ್ರಾಡಕ್ಟ್‌ ಖರೀದಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಾಡಕ್ಟ್‌ಗಳಲ್ಲಿ ಯಾವ ಇಗ್ರೀಡಿಯಂಟ್ಸ್‌ ಇರಬೇಕು ಎಂಬುದರ ಅರಿವಿರಬೇಕು.

ಪ್ರಾಡಕ್ಟ್‌ಗಳನ್ನು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು
ಪ್ರಾಡಕ್ಟ್‌ಗಳನ್ನು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು (PC: Unsplash)

Skin Care Tips: ಒಬ್ಬೊಬ್ಬರಿಗೆ ಒಂದೊಂದು ರೀತಿ ಫಿಟ್ನೆಸ್‌ ಗೋಲ್‌ ಇರುತ್ತದೆ. ಒಬ್ಬರು ತಮ್ಮ ತೂಕ ನಿರ್ವಹಣೆಯತ್ತ ಗಮನ ನೀಡಿದರೆ, ಒಬ್ಬರು ಕೂದಲಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಮತ್ತೊಬ್ಬರು ಮಸಲ್‌ ಬಿಲ್ಡ್‌ ಅಪ್‌ ಹಾಗೇ ಬಹಳಷ್ಟು ಜನರು ತಮ್ಮ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುತ್ತಾರೆ.

ಒಬ್ಬೊಬ್ಬರ ಚರ್ಮ ಒಂದೊಂದು ರೀತಿ ಇರುತ್ತದೆ. ಆದರೆ ಕಂಪನಿಯು ಎಲ್ಲಾ ಚರ್ಮದವರಿಗೆ ಹೊಂದುತ್ತದೆ ಎಂದು ಹೇಳಿಕೊಂಡು ಕೆಲವು ಪ್ರಾಡಕ್ಟ್‌ಗಳನ್ನು ಮಾರುತ್ತಾರೆ. ಹಿಂದುಸ್ತಾನ್‌ ಟೈಮ್ಸ್‌ ಇಂಗ್ಲೀಷ್‌ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಸೌಂದರ್ಯ ತಜ್ಞೆ ಸೀಜಾ ಭಾರಧ್ವಾಜ್‌ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವುದೇ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ ನಾವು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿರುತ್ತದೆ.

ನಿಮ್ಮ ಸ್ಕಿನ್‌ ಟೋನ್‌ ಬಗ್ಗೆ ತಿಳಿಯಿರಿ

ಮೊದಲೇ ಹೇಳಿದಂತೆ ಒಬ್ಬೊಬ್ಬರಿಗೆ ಒಂದೊಂದು ಚರ್ಮ ಇರುತ್ತದೆ. ಚರ್ಮದ ಟೋನ್‌ಗಳನ್ನು ಮೆಲನಿನ್‌ ನಿರ್ಧರಿಸುತ್ತದೆ. ಮೆಲನಿನ್‌ನಲ್ಲಿ ಯುಮೆಲನಿನ್ ಮತ್ತು ಫಿಯೋಮೆಲನಿನ್ ಎಂಬ ಎರಡು ಅಂಶಗಳು ವೈವಿಧ್ಯಮಯ ಚರ್ಮದ ಬಣ್ಣಗಳನ್ನು ರಚಿಸುತ್ತದೆ. ಮೆಲನಿನ್ ನಮ್ಮ ಚರ್ಮವು ಯುವಿ ಕಿರಣಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ, ಸೂರ್ಯನ ನೇರಳಾತೀತ ಕಿರಣಗಳು ಮತ್ತು ಚರ್ಮಕ್ಕೆ ವಯಸ್ಸಾಗುವುದನ್ನು ನಿಧಾನಿಸಲು ಎಲ್ಲಾ ಸ್ಕಿನ್‌ ಟೋನ್‌ಗಳಿಗೂ SPF ಸನ್‌ಸ್ಕ್ರೀನ್‌ ಬೇಕು.

ಚರ್ಮದ ವಿಧ ಗೊತ್ತಿರಬೇಕು

ನಿಮ್ಮ ಚರ್ಮದ ಪ್ರಕಾರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಒಣ, ಎಣ್ಣೆಯುಕ್ತ ಅಥವಾ ಸೂಕ್ಷ್ಮವಾಗಿರುವುದು ಅಥವಾ ಹೆಚ್ಚು ಸೂಕ್ತವಾದ ಚರ್ಮ ಉತ್ಪನ್ನಗಳನ್ನು ಆಯ್ಕೆಮಾಡಲು ಅತ್ಯಗತ್ಯ. ಸೂಕ್ಷ್ಮ ಅಥವಾ ಮೊಡವೆ ಚರ್ಮವನ್ನು ಹೊಂದಿರುವವರು ತ್ವಚೆಯ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಾಗ ಹೆಚ್ಚಿನ ಕಾಳಜಿ ವಹಿಸಬೇಕು.

ಎಲ್ಲವನ್ನೂ ನಂಬೇಡಿ

ಈ ಪ್ರಾಡಕ್ಟ್‌ ನಿಮ್ಮ ಚರ್ಮವನ್ನು ಅಂದಗೊಳಿಸುತ್ತದೆ, ಚರ್ಮದ ಬಣ್ಣವನ್ನು ತಿಳಿಗೊಳಿಸುತ್ತದೆ, ಹೊಳಪು ನೀಡುತ್ತದೆ ಎಂದು ಎಷ್ಟೋ ಜಾಹೀರಾತುಗಳಲ್ಲಿ ನೋಡಿದ್ದೇವೆ. ಮಾಡೆಲ್‌ಗಳು, ಸಿನಿ ತಾರೆಯರು ಹೇಳುವುದನ್ನು ನಂಬದೆ, ಆ ಪ್ರಾಡಕ್ಟ್‌ಗಳನ್ನು ಬಳಸಿದವರಲ್ಲಿ ಕೇಳಿ ತಿಳಿದುಕೊಳ್ಳಿ. ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ.

ಪ್ರಾಡೆಕ್ಟ್‌ಗಳಲ್ಲಿ ಯಾವ ಅಂಶ ಇರಬೇಕು?

ಗ್ಲಿಸರಿನ್: ಗ್ಲಿಸರಿನ್, ಮಾಯಿಶ್ಚರೈಸರ್‌ ಉತ್ಪನ್ನಗಳ ಮೂಲಾಧಾರವಾಗಿದೆ, ಎಣ್ಣೆಯುಕ್ತ ಚರ್ಮಕ್ಕೆ ಅನುಗುಣವಾಗಿ ಉತ್ಪನ್ನಗಳಲ್ಲಿ ಎಲ್ಲರೂ ಬಯಸುವ ಪ್ರಮುಖ ಅಂಶವಾಗಿದೆ. ವಾತಾವರಣದಿಂದ ತೇವಾಂಶವನ್ನು ಸೆಳೆಯುವ ಸಾಮರ್ಥ್ಯ ಗ್ಲಿಸರಿನ್‌ನಲ್ಲಿದೆ.

ಹೈಲುರಾನಿಕ್ ಆಮ್ಲ: ಇದೂ ಕೂಡಾ ಎಲ್ಲಾ ಚರ್ಮದ ಪ್ರಕಾರಗಳಿಗೆ ಬಹಳ ಅಗತ್ಯವಾಗಿದೆ. ಹೈಲುರಾನಿಕ್ ಆಮ್ಲವು ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಸೆರಾಮಿಡ್‌ಗಳು: ಚರ್ಮವನ್ನು ರಕ್ಷಿಸುವ ತೇವಾಂಶವನ್ನು ಹೆಚ್ಚಿಸಲು ಸೆರಾಮಿಡ್‌ಗಳು ಸಹಾಯ ಮಾಡುತ್ತವೆ. ಕಲೆಗಳು ಮತ್ತು ಹೈಪರ್‌ ಪಿಗ್ಮೆಂಟೇಶನ್‌ಗೆ ಕಾರಣವಾಗುವ ಪ್ರಕ್ರಿಯೆಗಳನ್ನು ನಿಲ್ಲಿಸಲು ಇದು ಸಹಾಯ ಮಾಡುತ್ತದೆ. ಚರ್ಮದ ಮೇಲಿನ ಪದರದಲ್ಲಿ, ಸೆರಾಮಿಡ್‌ಗಳು ಚರ್ಮದ ಕೋಶಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ.

ವಿಟಮಿನ್ ಸಿ: ಇದು ವಿಶೇಷವಾಗಿ ಎಲ್-ಆಸ್ಕೋರ್ಬಿಕ್ ಆಮ್ಲದ ರೂಪದಲ್ಲಿ, ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಯುವಿ ಕಿರಣಗಳಿಂದ ಆಗುವ ಹಾನಿ ಮತ್ತು ಕಾಲಜನ್ ಸಂಶ್ಲೇಷಣೆಯ ಪರಿಣಾಮಗಳನ್ನು ಪ್ರತಿರೋಧಿಸುತ್ತದೆ. ಆಸ್ಕೋರ್ಬಿಕ್ ಆಮ್ಲವು ನೀರಿನಲ್ಲಿ ಕರಗುವ ಸಂಯುಕ್ತವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹಳಷ್ಟು ವಿಟಮಿನ್ ಸಿ ಸೀರಮ್‌ಗಳು ಬಾಟಲಿಯನ್ನು ತೆರೆದ ತಕ್ಷಣ ಆಕ್ಸಿಡೀಕರಣಗೊಳ್ಳುತ್ತವೆ. ಆದ್ದರಿಂದ ಬಳಸುತ್ತಿದ್ದಂತೆ ಮುಚ್ಚಳ ಗಟ್ಟಿಯಾಗಿ ಹಾಕಬೇಕು.

ರೆಟಿನಾಲ್: ತ್ವಚೆಯ ಉತ್ಪನ್ನಗಳಲ್ಲಿ ರೆಟಿನಾಲ್ ಅತ್ಯಗತ್ಯ ಏಕೆಂದರೆ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಬಣ್ಣ ತಿಳಿ ಆಗಲು ಸಹಾಯ ಮಾಡುತ್ತದೆ.

Whats_app_banner