Puja Tips: ಪೂಜೆ ವೇಳೆ ಈ 5 ಕೆಲಸಗಳನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ; ಒತ್ತಡ ಕಡಿಮೆ, ಮನಸ್ಸಿಗೆ ನೆಮ್ಮದಿ ಸಿಗುತ್ತೆ-spiritual news if you do these 5 things during puja your life will change puja tips here rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Puja Tips: ಪೂಜೆ ವೇಳೆ ಈ 5 ಕೆಲಸಗಳನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ; ಒತ್ತಡ ಕಡಿಮೆ, ಮನಸ್ಸಿಗೆ ನೆಮ್ಮದಿ ಸಿಗುತ್ತೆ

Puja Tips: ಪೂಜೆ ವೇಳೆ ಈ 5 ಕೆಲಸಗಳನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ; ಒತ್ತಡ ಕಡಿಮೆ, ಮನಸ್ಸಿಗೆ ನೆಮ್ಮದಿ ಸಿಗುತ್ತೆ

Puja Tips: ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು, ಒತ್ತಡ ಮತ್ತು ಆತಂಕವನ್ನು ದೂರ ಮಾಡಲು ಪ್ರತಿದಿನ ಪೂಜೆಯ ಸಮಯದಲ್ಲಿ ಈ 5 ಕೆಲಸಗಳನ್ನು ಮಾಡುವುದು ಉತ್ತಮ. ಇದು ಮನೆಯನ್ನು ಶಾಂತವಾಗಿರಿಸುತ್ತದೆ. ಸಮಸ್ಯೆಗಳು ನಿವಾರಣೆಯಾಗಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ.

Puja Tips: ಪೂಜೆ ವೇಳೆ ಈ 5 ಕೆಲಸಗಳನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ; ಒತ್ತಡ ಕಡಿಮೆ, ಮನಸ್ಸಿಗೆ ನೆಮ್ಮದಿ ಸಿಗುತ್ತೆ
Puja Tips: ಪೂಜೆ ವೇಳೆ ಈ 5 ಕೆಲಸಗಳನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ; ಒತ್ತಡ ಕಡಿಮೆ, ಮನಸ್ಸಿಗೆ ನೆಮ್ಮದಿ ಸಿಗುತ್ತೆ

Puja Tips: ಪ್ರತಿಯೊಬ್ಬರ ಮನೆಗೆ ಒಂದೊಂದು ರೀತಿಯ ಶಕ್ತಿ ಇರುತ್ತದೆ. ಇದು ಮನೆಯ ಸದಸ್ಯರ ಮೇಲೆ ಪರಿಹಾರ ಬೀರುತ್ತದೆ. ಸಕಾರಾತ್ಮಕ ಶಕ್ತಿ ಇದ್ದರೆ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು, ಜೀವನದಲ್ಲಿ ಶಾಂತಿ, ನೆಮ್ಮದಿ, ಕುಟುಂಬದಲ್ಲಿ ಸಂತೋಷ ಇರುತ್ತೆ. ಆದರೆ ನಕಾರಾತ್ಮಕ ಶಕ್ತಿಗಳಿದ್ದರೆ ಕುಟುಂಬದ ಮೇಲೆ ಕೆಟ್ಟ ಕಣ್ಣು ಬೀಳುತ್ತದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಸಮಸ್ಯೆಗಳು, ಅಡೆತಡೆಗಳು ಮತ್ತು ನಷ್ಟಗಳು ಇದ್ದೇ ಇರುತ್ತವೆ. ನಕಾರಾತ್ಮಕ ಶಕ್ತಿ ಹೋಗಿ ಉತ್ತಮ ವಾತಾವರಣ ಇರಬೇಕಾದರೆ ಏನೆಲ್ಲಾ ಮಾಡಬೇಕು, ನಮ್ಮ ಕಣ್ಣಿಗೆ ಕಾಣದ ಕೆಟ್ಟ ಶಕ್ತಿಗಳನ್ನು ಓಡಿಸಲು ಕೆಲವು ಸಣ್ಣ ಸಲಹೆಗಳನ್ನು ಅನುಸರಿಸಬಹುದು. ಲಕ್ಷಾಂತರ ರೂಪಾಯಿ ಹಣ ಖರ್ಚು ಆಗೋದಿಲ್ಲ. ಇವು ಸರಳ ಪರಿಹಾರಗಳು ಅಷ್ಟೇ. ಪ್ರತಿಯೊಬ್ಬರೂ ಮನೆಯಲ್ಲಿ ಪೂಜೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಬಹುದು. ಈ ಸಮಯದಲ್ಲಿ ಪ್ರಮುಖವಾಗಿ 5 ಕೆಲಸಗಳನ್ನು ಮಾಡಿದರೆ ಸಾಕು. ಈ ಕುರಿತ ವಿವರ ಇಲ್ಲಿದೆ.

ದೀಪ ಬೆಳಗಿಸಿ

ಸಕಾರಾತ್ಮಕತೆ ಮತ್ತು ಬೆಳಕಿನಿಂದ ಮಾತ್ರ ಕತ್ತಲೆಯನ್ನು ಜಯಿಸಲು ಸಾಧ್ಯ. ಆದ್ದರಿಂದ ದೈನಂದಿನ ಪೂಜೆಯ ಸಮಯದಲ್ಲಿ ನೀವು ತುಪ್ಪದಿಂದ ದೀಪವನ್ನು ಬೆಳಗಿಸಿ. ಇದು ಶುದ್ಧತೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ಸಣ್ಣ ದೀಪವು ಮನೆಯ ಕತ್ತಲನ್ನು ಬೆಳಗಿಸುತ್ತದೆ. ನಕಾರಾತ್ಮಕ ಶಕ್ತಿಗಳನ್ನು ಹೊರಹಾಕುತ್ತದೆ. ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸುತ್ತಾನೆ.

ಧೂಪ ಹಾಕುವುದು

ಮನೆಯಲ್ಲಿ ಧೂಪದ್ರವ್ಯವನ್ನು ಸುಡುವುದು ನಕಾರಾತ್ಮಕ ಮತ್ತು ನಿಶ್ಚಲ ಶಕ್ತಿಗಳನ್ನು ತೊಡೆದುಹಾಕಲು ಅತ್ಯುತ್ತಮ ಮಾರ್ಗವಾಗಿದೆ. ಧೂಪದ್ರವ್ಯದ ತುಂಡುಗಳು ಕೆಲವು ಹೂವುಗಳು ಪರಿಮಳಗಳಿಂದ ತುಂಬಿರುತ್ತವೆ. ಇದರಿಂದ ಬರುವ ಹೊಗೆ ಇಡೀ ಮನೆಯನ್ನು ತುಂಬಬಹುದು. ಈ ಸುಗಂಧವು ಪ್ರತಿಯೊಂದು ಕೋಣೆಯನ್ನು ಆವರಿಸುತ್ತದೆ. ಮನೆಯಲ್ಲಿ ಶಕ್ತಿಯನ್ನು ರಿಫ್ರೆಶ್ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳು ಮತ್ತು ಭಾವನೆಗಳನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.

ಗಂಟೆ ಬಾರಿಸಿ

ಮನೆಯಲ್ಲಿ ಪೂಜೆ ಮಾಡುವಾಗ ಗಂಟೆ ಬಾರಿಸಬೇಕು. ಜಪ ಮಾಡುವಾಗ ಗಂಟೆ ಬಾರಿಸುವುದು ನಮ್ಮ ಸಂಪ್ರದಾಯದ ಭಾಗವಾಗಿದೆ. ಮನೆಯನ್ನು ಸ್ವಚ್ಛಗೊಳಿಸಲು ಇದು ಉಪಯುಕ್ತವಾಗಿದೆ. ಇದರಿಂದ ಉಂಟಾಗುವ ಧ್ವನಿ ಕಂಪನಗಳು ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತವೆ, ಜಾಗವನ್ನು ಶುದ್ಧೀಕರಿಸುತ್ತವೆ. ಗಂಟೆ ಬಾರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ.

ಶಂಖ ಊದುವುದು

ಕೆಲವರು ಪೂಜೆಯ ಸಮಯದಲ್ಲಿ ಶಂಖವನ್ನು ಊದುತ್ತಾರೆ. ಅದರಿಂದ ಹೊರಹೊಮ್ಮುವ ಶಬ್ದವು ಮಂಗಳಕರ ಮತ್ತು ಶುದ್ಧವಾಗಿದೆ. ಪೂಜೆಯ ಆರಂಭವನ್ನು ಗುರುತಿಸಲು ಬಳಸಲಾಗುತ್ತದೆ. ಶಂಖವನ್ನು ಊದುವ ಶಕ್ತಿಯುತವಾದ ಶಬ್ದವು ಪರಿಸರವನ್ನು ಸ್ವಚ್ಛಗೊಳಿಸುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಗೆ ದೈವಿಕ ಗುಣವನ್ನು ನೀಡುತ್ತದೆ ಎಂದು ನಂಬಲಾಗಿದೆ. ಒತ್ತಡವನ್ನು ದೂರ ಮಾಡುತ್ತದೆ. ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

ಮಂತ್ರ ಪಠಣ

ದೈನಂದಿನ ಪೂಜೆಯ ಸಮಯದಲ್ಲಿ ಕೆಲವು ಮಂತ್ರಗಳನ್ನು ಪಠಿಸಲಾಗುತ್ತದೆ. ಯಾವುದೇ ಶ್ಲೋಕ ಅಥವಾ ಮಂತ್ರವನ್ನು 108 ಬಾರಿ ಜಪಿಸಬಹುದು. ಓಂ ಶಬ್ದದಿಂದ ಪ್ರಾರಂಭವಾಗುವ ಮಂತ್ರಗಳನ್ನು ಪಠಿಸುವುದು ಮನೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಸುತ್ತಮುತ್ತಲಿನ ಪರಿಸರವನ್ನು ಸಕಾರಾತ್ಮಕ ಶಕ್ತಿಗಳಿಂದ ತುಂಬಿಸುತ್ತದೆ. ಮಂತ್ರಗಳನ್ನು ಜೋರಾಗಿ ಅಥವಾ ಮನಸ್ಸಿನಲ್ಲಿ ಏಕಾಗ್ರತೆಯಿಂದ ಜಪಿಸುವುದು ಉತ್ತಮ. ನಿಮಗೆ ಸಾಧ್ಯವಾದರೆ ಪ್ರತಿದಿನ ಗಾಯತ್ರಿ ಮಂತ್ರ, ಮಹಾ ಮೃತ್ಯುಂಜಯ ಮಂತ್ರ, ಓಂ ಅನ್ನು 108 ಬಾರಿ ಪಠಿಸಲು ಪ್ರಯತ್ನಿಸಿ. ನಿಮ್ಮ ಮನಸ್ಸು ಕೂಡ ನಿರಾಳವಾಗುತ್ತದೆ. ಚಿಂತೆ ದೂರವಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point