Air Coolers: ಏರ್​ ಕೂಲರ್​​ನಲ್ಲಿ ಎಷ್ಟು ವಿಧ? ಬೇಸಿಗೆಯಲ್ಲಿ ಅದರ ಉಪಯೋಗ ಮತ್ತು 10,000 ರೂ. ಒಳಗೆ ಸಿಗುವ ಏರ್​ ಕೂಲರ್​ಗಳ ಲಿಸ್ಟ್ ಇಲ್ಲಿದೆ-summer tips types of air coolers best air coolers under rupees 10000 uses of air coolers technology news mgb ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Air Coolers: ಏರ್​ ಕೂಲರ್​​ನಲ್ಲಿ ಎಷ್ಟು ವಿಧ? ಬೇಸಿಗೆಯಲ್ಲಿ ಅದರ ಉಪಯೋಗ ಮತ್ತು 10,000 ರೂ. ಒಳಗೆ ಸಿಗುವ ಏರ್​ ಕೂಲರ್​ಗಳ ಲಿಸ್ಟ್ ಇಲ್ಲಿದೆ

Air Coolers: ಏರ್​ ಕೂಲರ್​​ನಲ್ಲಿ ಎಷ್ಟು ವಿಧ? ಬೇಸಿಗೆಯಲ್ಲಿ ಅದರ ಉಪಯೋಗ ಮತ್ತು 10,000 ರೂ. ಒಳಗೆ ಸಿಗುವ ಏರ್​ ಕೂಲರ್​ಗಳ ಲಿಸ್ಟ್ ಇಲ್ಲಿದೆ

ಸುಡು ಸುಡು ಬಿಸಿಲು. ಬಿಸಿ ವಾತಾವರಣದಿಂದಾಗಿ ನೆಮ್ಮದಿಯಿಂದ ಇರಲು ಆಗ್ತಾ ಇಲ್ಲ. ನಿಮ್ಮ ಮನೆ, ಕಚೇರಿಗೆ ತಕ್ಕಂತೆ ಯಾವ ಏರ್​ ಕೂಲರ್ ಬಳಸಬೇಕು, ಅದರ ಉಪಯೋಗ ಮತ್ತು 10,000 ರೂ. ಒಳಗೆ ಸಿಗುವ ಏರ್​ ಕೂಲರ್​ಗಳ ಲಿಸ್ಟ್ ಇಲ್ಲಿದೆ ನೋಡಿ.

ಏರ್​ ಕೂಲರ್ (freepik)
ಏರ್​ ಕೂಲರ್ (freepik)

ಈ ವರ್ಷ ಫೆಬ್ರವರಿಯಿಂದಲೇ ಬೇಸಿಗೆ ಆರಂಭವಾಗಿದೆ. ತಾಪಮಾನ ಏರಿಕೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಬರುತ್ತಿದೆ. ತಂಪಾದ ಗಾಳಿ ಕೂಡ ಬೀಸುತ್ತಿಲ್ಲ. ಕಚೇರಿಗಳಲ್ಲಿ, ಅಂಗಡಿಗಳಲ್ಲಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಬೇಕು ಅಂದ್ರೆ ಸೆಖೆ ತಡೆಯೋಕೆ ಆಗೊಲ್ಲ. ಮನೆಯಲ್ಲಿ ನೆಮ್ಮದಿಯಿಂದ ಮಲಗೋಕೂ, ಕುಳಿತುಕೊಳ್ಳೋಕು ಆಗ್ತಿಲ್ಲ. ಅಷ್ಟು ಬಿಸಿ ವಾತಾವರಣ. ಹೀಗಿರುವಾಗ ನಾವಿರುವ ಒಳಾಂಗಣ ತಂಪಾಗಿರಬೇಕು ಅಂದ್ರೆ ಏರ್​ ಕೂಲರ್​ ಉತ್ತಮ ಆಯ್ಕೆ. ಎಲ್ಲರಿಗೂ ಏರ್ ಕಂಡಿಷನರ್​ ಖರೀದಿಸಲು ಸಾಧ್ಯವಾಗಲ್ಲ. ಈ ಬೇಸಿಗೆಯಲ್ಲಿ ಏರ್​ ಕೂಲರ್​ ಕೊಂಡುಕೊಳ್ಳಬೇಕು ಎಂದು ಅಂದುಕೊಂಡವರಿಗೆ ಇಲ್ಲಿದೆ ಒಂದಿಷ್ಟು ಉಪಯುಕ್ತ ಮಾಹಿತಿ.

ಎರ್​ ಕೂಲರ್ ಉಪಯೋಗಗಳು:

1) ಸುಡುವ ಬೇಸಿಗೆಯಲ್ಲಿ ಒಳಾಂಗಣ ತಂಪಾಗಿರುತ್ತದೆ.

2) ಏರ್​ ಕಂಡಿಷನರ್​ಗೆ ಹೋಲಿಸಿದರೆ ಎರ್​ ಕೂಲರ್ ಬಳಸಲು ಕಡಿಮೆ ವಿದ್ಯುತ್​ ಸಾಕು

3) ಏರ್​ ಕಂಡಿಷನರ್​​ಗಿಂತ ಕಡಿಮೆ ಬೆಲೆಯಲ್ಲಿ ಎರ್​ ಕೂಲರ್ ಸಿಗುತ್ತದೆ

4) ಇವು ಪೋರ್ಟಬಲ್​ ಆಗಿರುವುದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯಬಹುದು

5) ಇದು ಕೋಣೆಯನ್ನು ಮಾತ್ರ ತಂಪಾಗಿರಿಸುವುದಿಲ್ಲ ನಮ್ಮ ಚರ್ಮ ಹೆಚ್ಚು ಒಣಗದಂತೆ ಹಾಗೂ ಉಸಿರಾಟದ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ

6) ನೀರು ಮತ್ತು ಗಾಳಿಯನ್ನು ಬಳಸಿ ಏರ್​ ಕೂಲರ್​ ವರ್ಕ್​ ಆಗುವುದರಿಂದ ಇದು ಪರಿಸರ ಸ್ನೇಹಿ ಆಗಿದೆ. ಆದರೆ ಏರ್​ ಕಂಡಿಷನರ್​ಗಳು ಶೀತಕಗಳನ್ನು ಬಳಸುವುದರಿಂದ ಅದು ಪರಿಸರಕ್ಕೆ ಹಾನಿಕಾರಕವಾಗಿದೆ.

ಏರ್​ ಕೂಲರ್​ನ ವಿಧನಗಳು:

1. ಪರ್ಸನಲ್​​ ಕೂಲರ್‌: ನಿಮ್ಮ ಮನೆ ಅಥವಾ ಕಚೇರಿಯಲ್ಲಿ ತಂಪಾದ ವಾತಾವರಣ ಇರಬೇಕೆಂದು ಬಯಸಿದರೆ ಪರ್ಸನಲ್​​ ಕೂಲರ್‌ ಉತ್ತಮ ಆಯ್ಕೆ. ಇದು ಪೋರ್ಟಬಲ್​ ಆಗಿದ್ದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದಾಗಿದೆ. ನಿಮಗೆ ಬೇಕಾದ ಕೋಣೆಯಲ್ಲಿ ಇರಿಸಿಕೊಳ್ಳಬಹುದಾಗಿದೆ.

2. ಟವರ್ ಕೂಲರ್‌: ಅಡುಗೆ ಮನೆಯಲ್ಲಿ ಬಳಸಲು ಟವರ್ ಕೂಲರ್‌ ಸೂಕ್ತ. ಕಿಚನ್​​ನಲ್ಲಿ ಬಿಸಿ ವಾತಾವರಣವನ್ನು ಕೂಲ್​ ಮಾಡಲು ಇದು ಉಪಕಾರಿ. ಬೆಂಕಿಯ ಅಪಾಯಗಳ ಬಗ್ಗೆ ಚಿಂತಿಸದೆ ನೀವು ಅಡುಗೆ ಮಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಕೂಲರ್​ ಆಗಿದೆ.

3. ವಿಂಡೋ ಕೂಲರ್​​: ನೀವು ಮಲಗುವ ಕೋಣೆ ಸಣ್ಣದಾಗಿದ್ದು, ತಂಪು ವಾತಾವರಣ ಬೇಕೆಂದು ನೀವು ಯೋಚಿಸುತ್ತಿದ್ದರೆ ವಿಂಡೋ ಕೂಲರ್ ಬೆಸ್ಟ್ ಆಯ್ಕೆ. ನಿಮ್ಮ ಕೋಣೆಯ ಕಿಟಕಿ ಬಳಿ ಇದನ್ನು ಅಳವಡಿಸಲಾಗುವುದು.

4. ಡೆಸರ್ಟ್ ಕೂಲರ್‌: ದೊಡ್ಡ ಕೊಠಡಿಗಳು, ವಾಣಿಜ್ಯ ಸ್ಥಳಗಳು, ಫ್ಯಾಕ್ಟರಿಯಂತಹ ಸ್ಥಳಗಳಲ್ಲಿ ಬಳಸಲು ಡೆಸರ್ಟ್ ಕೂಲರ್‌ ಸೂಕ್ತವಾಗಿದೆ. ಹೆಚ್ಚು ಹೀಟ್​ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಡೆಸರ್ಟ್ ಕೂಲರ್‌ ಬಳಸಲಾಗುವುದು.

ಭಾರತದಲ್ಲಿ 10 ಸಾವಿರ ರೂಪಾಯಿ ಒಳಗೆ ಸಿಗುವ 10 ಉತ್ತಮ ಏರ್​ ಕೂಲರ್​ಗಳು:

1) ಕ್ರಾಂಪ್ಟನ್ ಓಝೋನ್ ಡಸರ್ಟ್ ಏರ್ ಕೂಲರ್ (Crompton Ozone Desert Air Cooler)

2) ಹಿಫ್ರೆಶ್​ ಏರ್ ಕೂಲರ್ ಫಾರ್​ ಹೋಂ (HIFRESH Air Cooler for Home)

3) ಹ್ಯಾವೆಲ್ಸ್ ಅಲ್ಟಿಮಾ ಡೆಸರ್ಟ್ ಏರ್ ಕೂಲರ್ (Havells Altima Desert Air Cooler)

4) ಸಿಂಫನಿ ಡಯಟ್ 3D 30i ಪೋರ್ಟಬಲ್ ಟವರ್ ಏರ್ ಕೂಲರ್ (Symphony Diet 3D 30i Portable Tower Air Cooler)

5) ಸಿಂಫನಿ ಸುಮೊ 45 ಡೆಸರ್ಟ್ ಏರ್ ಕೂಲರ್ (Symphony Sumo 45 Desert Air Cooler)

6) ಬಜಾಜ್ Px 97 ಟಾರ್ಕ್ ನ್ಯೂ 36L ಪರ್ಸನಲ್ ಏರ್ ಕೂಲರ್ (Bajaj Px 97 Torque New 36L Personal Air Cooler)

7) ಬಜಾಜ್ PMH 25 DLX 24L ಪರ್ಸನಲ್ ಏರ್ ಕೂಲರ್ (Bajaj PMH 25 DLX 24L Personal Air Cooler)

8) ಕ್ರಾಂ ಮಾರ್ವೆಲ್​ ನಿಯೋ40 40L ಪರ್ಸನಲ್ ಡೆಸರ್ಟ್ ಏರ್ ಕೂಲರ್ (Crompton Marvel Neo40 40L Personal Desert Air Cooler)

9) ಬಜಾಜ್​​ ಫ್ರಿಯೋ 23L ಪರ್ಸನಲ್​​ ಏರ್ ಕೂಲರ್ (Bajaj Frio 23 L Personal Air Cooler)

10) ಹ್ಯಾವೆಲ್ಸ್ ಸಿಲಿಯಾ 55 ಲೀಟರ್ ಡೆಸರ್ಟ್ ಏರ್ ಕೂಲರ್ (Havells Celia 55 Litres Desert Air Cooler)