ಐಫೋನ್‌ನಿಂದ ಕಂಪ್ಯೂಟರ್‌ಗೆ ಫೋಟೋ ವರ್ಗಾಯಿಸುವುದು ಹೇಗೆ; ಯಾವುದೇ ಅಪ್ಲಿಕೇಶನ್‌ ಇಲ್ಲದೆಯೂ ಇದು ಸಾಧ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  ಐಫೋನ್‌ನಿಂದ ಕಂಪ್ಯೂಟರ್‌ಗೆ ಫೋಟೋ ವರ್ಗಾಯಿಸುವುದು ಹೇಗೆ; ಯಾವುದೇ ಅಪ್ಲಿಕೇಶನ್‌ ಇಲ್ಲದೆಯೂ ಇದು ಸಾಧ್ಯ

ಐಫೋನ್‌ನಿಂದ ಕಂಪ್ಯೂಟರ್‌ಗೆ ಫೋಟೋ ವರ್ಗಾಯಿಸುವುದು ಹೇಗೆ; ಯಾವುದೇ ಅಪ್ಲಿಕೇಶನ್‌ ಇಲ್ಲದೆಯೂ ಇದು ಸಾಧ್ಯ

ಐಫೋನ್‌ ಬಳಕೆದಾರರು ತಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು ಲ್ಯಾಪ್‌ಟಾಪ್‌ ಅಥವಾ ಪಿಸಿಗೆ ವರ್ಗಾಯಿಸಬಹುದು. ಯಾವುದೇ ಅಪ್ಲಿಕೇಶನ್‌ ನೆರವಿಲ್ಲದೆಯೂ ಸುಲಭವಾಗಿ ಈ ಕೆಲಸ ಮಾಡಬಹುದು.

ಐಫೋನ್‌ನಿಂದ ಕಂಪ್ಯೂಟರ್‌ಗೆ ಫೋಟೋ ವರ್ಗಾಯಿಸುವ ಸರಳ ವಿಧಾನ
ಐಫೋನ್‌ನಿಂದ ಕಂಪ್ಯೂಟರ್‌ಗೆ ಫೋಟೋ ವರ್ಗಾಯಿಸುವ ಸರಳ ವಿಧಾನ

ನೀವು ಬಳಸುವ ಫೋನ್‌ ಯಾವ ಸಮಯದಲ್ಲಿ ಕೈಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀವೇನಾದರೂ ಐಫೋನ್‌ ಬಳಕೆದಾರರಾಗಿದ್ದರೆ, ನಿಮ್ಮ ಫೋನ್‌ ಸಾಕಷ್ಟು ಸುರಕ್ಷಿತವಾಗಿರುತ್ತದೆ ಎಂಬುದು ನಿಜ. ಆದರೆ, ಕೆಲವೊಮ್ಮೆ ನಿಮ್ಮ ಬೇಜವಾಬ್ದಾರಿಯಿಂದಲೋ ಅಥವಾ ಏನೋ ತಪ್ಪಿನಿಂದ ಫೋನ್‌ ಹಾಳಾಗಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಕಳ್ಳರ ಪಾಲಾಗಬಹುದು. ಇವೆಲ್ಲದರ ಹೊರತಾಗಿ ನಿಮ್ಮ ಫೋನ್‌ನಲ್ಲಿರುವ ಫೋಟೋಗಳು ಇನ್ನೊಂದು ಕಡೆ ಸೇವ್‌ ಆಗಿರಲಿ ಎಂದು ನೀವು ಭಾವಿಸಬಹುದು. ಅದಕ್ಕಾಗಿ ನಿಮ್ಮ ಪರ್ಸನಲ್‌ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಆ ಫೋಟೋಗಳನ್ನು ಸೇವ್‌ ಮಾಡಿಡಲು ನಿರ್ಧರಿಸಬಹುದು. ಐಕ್ಲೌಡ್ ಬ್ಯಾಕ್‌ಅಪ್‌ ಇದ್ದರೂ ಸಹ, ನಿಮ್ಮ ಫೋಟೋಗಳನ್ನು ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹಿಸುವುದು ಸರಿಯಾದ ಕ್ರಮ. ಈ ಪ್ರಕ್ರಿಯೆ ತುಂಬಾ ಸುಲಭವಾಗಿ ಪೂರ್ಣಗೊಳಿಸಬಹುದು.

ಐಫೋನ್‌ನಿಂದ ಕಂಪ್ಯೂಟರ್‌ಗೆ ಫೋಟೋಗಳನ್ನು ವರ್ಗಾಯಿಸುವ ಸುಲಭ ವಿಧಾನ ಇಲ್ಲಿದೆ. ಈ ವಿಧಾನದ ಮೂಲಕ ನೀವು ಯಾವುದೇ ಅಪ್ಲಿಕೇಶನ್‌ಗಳ ನೆರವು ಇಲ್ಲದೆ ಐಫೋನ್‌ನಿಂದ ಪಿಸಿಗೆ ಚಿತ್ರಗಳನ್ನು ವರ್ಗಾಯಿಸಬಹುದು.

  • ಯುಎಸ್‌ಬಿ ಲೈಟ್ನಿಂಗ್ ಕೇಬಲ್ ಬಳಸಿ ನಿಮ್ಮ ಐಫೋನ್ ಅನ್ನು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗೆ ಸಂಪರ್ಕಿಸಿ.
  • ನೀವು iTunes ಇನ್‌ಸ್ಟಾಲ್‌ ಮಾಡದಿದ್ದರೆ, ‘ಟ್ರಸ್ಟ್‌ ದಿಸ್‌ ಕಂಪ್ಯೂಟರ್’ ಬದಲಿಗೆ ‘ಅಲಾವ್‌ ದಿಸ್‌ ಡಿವೈಸ್’ ಪ್ರಾಂಪ್ಟ್ ಸ್ವೀಕರಿಸುತ್ತೀರಿ. ಆಗ ಅಲೌ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಕಂಪ್ಯೂಟರ್‌ನಲ್ಲಿ ಫೈಲ್ ಎಕ್ಸ್‌ಪ್ಲೋರರ್ ತೆರೆಯಿರಿ. ಎಡ ಸೈಡ್‌ಬಾರ್‌ನಲ್ಲಿ ಹೊಸ ಸಾಧನವಾಗಿ ಐಫೋನ್ ಇರುವುದನ್ನು ನೀವು ಗಮನಿಸಬಹುದು.
  • ಸೈಡ್‌ಬಾರ್‌ನಲ್ಲಿರುವ ಐಫೋನ್‌ ಮೇಲೆ ಡಬಲ್ ಕ್ಲಿಕ್ ಮಾಡಿ, ‘DCIM’ ಫೋಲ್ಡರ್‌ ಓಪನ್‌ ಮಾಡಿ.
  • DCIM ಫೋಲ್ಡರ್‌ನಲ್ಲಿ, ನಿಮ್ಮ ಫೋನ್‌ನಲ್ಲಿರುವ ಫೋಟೋಗಳ ಸಂಖ್ಯೆಗೆ ಅನುಗುಣವಾಗಿ ಸಬ್‌ಫೋಲ್ಡರ್‌ಗಳನ್ನು ಕಾಣಬಹುದು. ಚಿತ್ರಗಳ ಪ್ರಾಥಮಿಕ ಫೋಲ್ಡರ್ ಅನ್ನು ಸಾಮಾನ್ಯವಾಗಿ '100APPLE' ಎಂದು ಲೇಬಲ್ ಮಾಡಲಾಗುತ್ತದೆ. ಹೆಚ್ಚುವರಿ ಫೋಲ್ಡರ್‌ಗಳನ್ನು ಅದರಂತೆಯೇ ಅನುಕ್ರಮವಾಗಿ ಪಟ್ಟಿ ಮಾಡಲಾಗುತ್ತದೆ (101, 102 ಹೀಗೆ).
  • ನೀವು ಕಂಪ್ಯೂಟರ್‌ಗೆ ವರ್ಗಾಯಿಸಲು ಬಯಸುವ ಫೋಟೋಗಳನ್ನು ಹುಡುಕಿ ಸಿಸ್ಟಮ್‌ನಲ್ಲಿ ಎಲ್ಲಿ ಬೇಕೋ ಅಲ್ಲಿಗೆ ಅವುಗಳನ್ನು ಡ್ರ್ಯಾಗ್‌ ಮಾಡಿ. ಒಂದು ವೇಳೆ ನೀವು 'ಮೂವ್' ಆಯ್ಕೆ ಮಾಡಿದರೆ, ಐಫೋನ್‌ನಿಂದ ಚಿತ್ರಗಳು ಡಿಲೀಟ್‌ ಆಗುತ್ತವೆ. ಒಂದು ವೇಳೆ ನೀವು ನಿಮ್ಮ ಫೋನ್ ಸ್ಟೋರೇಜ್‌ ಕ್ಲೀನ್ ಮಾಡಬೇಕಿದ್ದರೆ ಮಾತ್ರ 'ಮೂವ್' ಆಯ್ಕೆ ಮಾಡಿ.

ಇದನ್ನೂ ಓದಿ | UPI Wrong Payment: ಮಿಸ್ಸಾಗಿ ಬೇರೆಯವ್ರಿಗೆ ಹಣ ಕಳಿಸಿದ್ರಾ? ಡೋಂಟ್ ವರಿ, ವಾಪಸ್ ಪಡೆಯೋದು ಹೇಗೆ ಅಂತ ಇಲ್ಲಿದೆ ಓದಿ

ಅಪ್ಲಿಕೇಶನ್ ನೆರವಿಂದ ಐಫೋನ್‌ನಿಂದ ಪಿಸಿಗೆ ಫೋಟೋಗಳನ್ನು ವರ್ಗಾಯಿಸುವುದು ಹೇಗೆ?

  • ಯುಎಸ್‌ಬಿ ಕೇಬಲ್ ಬಳಸಿ ನಿಮ್ಮ ಐಫೋನ್‌ ಅನ್ನು ಕಂಪ್ಯೂಟರ್‌ಗೆ ಸಂಪರ್ಕಿಸಿ.
  • ಫೋನ್ ಅನ್‌ಲಾಕ್ ಮಾಡಿ. ಲಾಕ್ ಆಗಿದ್ದರೆ ನಿಮ್ಮ ಕಂಪ್ಯೂಟರ್‌ ಅದನ್ನು ಪತ್ತೆಹಚ್ಚುವುದಿಲ್ಲ.
  • ನಿಮ್ಮ ಐಫೋನ್‌ನಲ್ಲಿ 'ಟ್ರಸ್ಟ್‌ ದಿಸ್ ಕಂಪ್ಯೂಟರ್' ಪ್ರಾಂಪ್ಟ್ ಕಾಣುತ್ತದೆ. ಐಫೋನ್ ಫೋಟೋಗಳಿಗೆ ಪ್ರವೇಶ ನೀಡಲು ಟ್ರಸ್ಟ್ ಮೇಲೆ ಟ್ಯಾಪ್ ಮಾಡಿ.
  • ನಿಮ್ಮ ಪಿಸಿಯಲ್ಲಿ ಸ್ಟಾರ್ಟ್‌ ಬಟನ್ ಕ್ಲಿಕ್ ಮಾಡಿ. ಬಳಿಕ ಫೋಟೋಗಳ ಅಪ್ಲಿಕೇಶನ್ ತೆರೆಯಿರಿ.
  • ಯುಎಸ್‌ಬಿ ಸಾಧನದಿಂದ ಇಂಪೋರ್ಟ್‌ ಆಯ್ಕೆಮಾಡಿ. ಸ್ಕ್ರೀನ್‌ ಮೇಲಿನ ಸೂಚನೆಗಳನ್ನು ಅನುಸರಿಸಿ.
  • ನಿಮ್ಮ ಕಂಪ್ಯೂಟರ್‌ಗೆ ನೀವು ವರ್ಗಾಯಿಸಲು ಬಯಸುವ ಫೋಟೋಗಳನ್ನು ಆಯ್ಕೆಮಾಡಿ. ಫೈಲ್‌ಗಳನ್ನು ಸೇವ್‌ ಮಾಡಿಡಲು ಸೂಕ್ತ ಫೋಲ್ಡರ್ ಗುರುತಿಸಿ ವರ್ಗಾಯಿಸಿ. ಈ ಪ್ರಕ್ರಿಯೆ ಮುಗಿದ ನಂತರ, ಫೈಲ್‌ಗಳು ಯಶಸ್ವಿಯಾಗಿ ನಿಮ್ಮ ಕಂಪ್ಯೂಟರ್‌ಗೆ ಬಂದಿರುತ್ತದೆ.

ಇನ್ನಷ್ಟು ಟೆಕ್‌ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಯೂಟ್ಯೂಬ್‌ನಿಂದ ಹಣ ಗಳಿಸುವುದು ಹೇಗೆ; ಮಾನಿಟೈಸೇಷನ್‌ ಹಂತಗಳೇನು? ನಿಮ್ಮ ಚಾನಲ್‌ ಸಂಪಾದನೆ ಹೆಚ್ಚಿಸಲು ಇಲ್ಲಿವೆ ಅಗತ್ಯ ಸಲಹೆ