ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಯಾಮ್‌ಸ್ಯಾಂಗ್‌ ಗ್ಯಾಲಕ್ಸಿ ಟ್ಯಾಬ್‌ಗಳಿಗೆ ಭಾರಿ ಡಿಸ್ಕೌಂಟ್‌; ಹಬ್ಬದ ಮಾರಾಟ ಜೋರು-technology news amazon great india festival offers for samsung galaxy tab a9 galaxy tab s9 fe pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಯಾಮ್‌ಸ್ಯಾಂಗ್‌ ಗ್ಯಾಲಕ್ಸಿ ಟ್ಯಾಬ್‌ಗಳಿಗೆ ಭಾರಿ ಡಿಸ್ಕೌಂಟ್‌; ಹಬ್ಬದ ಮಾರಾಟ ಜೋರು

ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಯಾಮ್‌ಸ್ಯಾಂಗ್‌ ಗ್ಯಾಲಕ್ಸಿ ಟ್ಯಾಬ್‌ಗಳಿಗೆ ಭಾರಿ ಡಿಸ್ಕೌಂಟ್‌; ಹಬ್ಬದ ಮಾರಾಟ ಜೋರು

ಕೈಗೆಟುಕುವ ದರದಲ್ಲಿ ಟ್ಯಾಬ್‌ ಖರೀದಿಸಲು ಬಯಸುವವರಿಗೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನ ಹಬ್ಬದ ಸೇಲ್‌ನಲ್ಲಿ ಒಳ್ಳೊಳ್ಳೆಯ ಅವಕಾಶಗಳುಂಟು. ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2024ರಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎ9+, ಎಫ್‌ಇ+ಗಳಿಗೆ ಭಾರೀ ದರ ಕಡಿತ ನೀಡಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2024ರಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎ9+, ಎಫ್‌ಇ+ ಕಡಿಮೆ ದರದಲ್ಲಿ ಮಾರಾಟವಾಗುತ್ತಿವೆ.
ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2024ರಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎ9+, ಎಫ್‌ಇ+ ಕಡಿಮೆ ದರದಲ್ಲಿ ಮಾರಾಟವಾಗುತ್ತಿವೆ. (Samsung)

Amazon Great India Festival Sale: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರೈಮ್ ಸದಸ್ಯರಿಗೆ ಇಂದಿನಿಂದ (ಸೆಪ್ಟೆಂಬರ್‌ 26) ಆರಂಭವಾಗಿದೆ. ನಾಳೆಯಿಂದ (ಸೆಪ್ಟೆಂಬರ್‌ 27) ಎಲ್ಲರಿಗೂ ಹಬ್ಬದ ಸೇಲ್‌ ಆಫರ್‌ಗಳು ದೊರಕಲಿವೆ. ಅಮೆಜಾನ್‌ ಸೇಲ್‌ನಲ್ಲಿ ಹಲವು ಪ್ರಾಡಕ್ಟ್‌ಗಳ ದರ ಕಡಿಮೆಯಾಗಿದೆ. ಈ ಲೇಖನದಲ್ಲಿ ಸ್ಯಾಮ್‌ಸಂಗ್‌ ಕಂಪನಿಯ ಟ್ಯಾಬ್‌ ಆಫರ್‌ಗಳನ್ನು ನೋಡೋಣ. ಸ್ಯಾಮ್‌ಸಂಗ್‌ನ ಎರಡು ಜನಪ್ರಿಯ ಟ್ಯಾಬೆಟ್‌ ಕಂಪ್ಯೂಟರ್‌ಗಳು ಅತ್ಯಂತ ಕಡಿಮೆ ದರಕ್ಕ ಲಭ್ಯವಿದೆ. ಈಗ ಅಮೆಜಾನ್‌ ಸೇಲ್‌ನಲ್ಲಿ Galaxy Tab A9+ ದರ 16,999 ರೂಪಾಯಿ ಇದೆ. Galaxy Tab S9 FE+ ಟ್ಯಾಬ್ಲೆಟ್‌ 35,999 ರೂಪಾಯಿಗೆ ಲಭ್ಯವಿದೆ.

ಟ್ಯಾಬ್‌ ದರ ಅಗ್ಗ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎ9+ ನಲ್ಲಿ 8GB ರಾಮ್‌ ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ ಇದೆ. ಇದು ಈ ಹಿಂದೆ 22,999 ರೂಪಾಯಿಗೆ ಮಾರಾಟವಾಗುತ್ತಿತ್ತು. ಈಗ ಇದಕ್ಕೆ ಭಾರೀ ರಿಯಾಯಿತಿ ದರ ಘೋಷಿಸಲಾಗಿದೆ. ಕಡಿಮೆ ದರದ ಗ್ಯಾಲಕ್ಸಿ ಟ್ಯಾಬ್‌ ಖರೀದಿಸುವವರಿಗೆ ಇದು ಸೂಕ್ತವಾಗಿದೆ. 16,999 ರೂಪಾಯಿಗೆ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌9 ಎಫ್‌ಇ+ನಲ್ಲಿ 8GB RAM ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ ಇದೆ. ಈ ಹಿಂದೆ ಇದು ಇದು 55,999 ರೂಪಾಯಿಗೆ ಮಾರಾಟವಾಗುತ್ತಿತ್ತು. ಈಗ 35,999 ರೂಪಾಯಿಗೆ ಲಭ್ಯವಿದೆ.

ಇಷ್ಟು ಮಾತ್ರವಲ್ಲದೆ ವಿವಿಧ ಡಿಸ್ಕೌಂಟ್‌ ಆಫರ್‌ಗಳ ನೆರವಿನಿಂದ ಗ್ರಾಹಕರು ಇನ್ನಷ್ಟು ದರ ಕಡಿಮೆ ಮಾಡಿಕೊಳ್ಳಬಹುದು. ಇದರೊಂದಿಗೆ ಹೆಚ್ಚುವರಿ ಬ್ಯಾಂಕ್‌ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎ9+ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌9 ಎಫ್‌ಇ+ ಫೀಚರ್‌ಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌9 ಎಫ್‌ಇ ಪ್ಲಸ್‌ನಲ್ಲಿ 12.4-ಇಂಚಿನ WQXGA ಡಿಸ್‌ಪ್ಲೇ ಇದೆ. ವಿವರವಾದ ಗುಣಮಟ್ಟದ ದೃಶ್ಯಗಳ ಚಿತ್ರಣಕ್ಕೆ ಇದು ನೆರವಾಗುತ್ತದೆ. ಹಿಂಭಾಗದಲ್ಲಿ 8 ಮೆಗಾಫಿಕ್ಸೆಲ್‌ ಕ್ಯಾಮೆರಾ ಇದೆ. ಮುಂಭಾಗದಲ್ಲಿ 12 ಮೆಗಾಫಿಕ್ಸೆಲ್‌ ಕ್ಯಾಮೆರಾವಿದೆ. ವಿಡಿಯೋ ಕರೆಗಳಿಗೆ, ಫೋಟೋ ತೆಗೆಯಲು ಸೂಕ್ತವಾಗಿದೆ. ಇದು ಎಕ್ಸಿನೊಸ್‌ 1380 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್‌ 12 ಇದರಲ್ಲಿದೆ. ವಿವಿಧ ಆಪ್‌ಗಳು ಇದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. 10090 mAh ಲಿಥಿಯಂ-ಐಯಾನ್ ಬ್ಯಾಟರಿ ಇದ್ದು, ದೀರ್ಘಕಾಲ ಬ್ಯಾಟರಿ ಉಳಿಯುತ್ತದೆ. ಮನರಂಜನೆ, ಗೇಮಿಂಗ್, ಓದುವಿಕೆ ಮತ್ತು ವೃತ್ತಿಪರ ಕಾರ್ಯಗಳಿಗೆ ಸೂಕ್ತವಾಗಿದೆ. ಶಾಲಾ ವಿದ್ಯಾರ್ಥಿಗಳಿಗೂ ಸೂಕ್ತವಾಗಿದೆ.

ಗಾಲಕ್ಸಿ ಟ್ಯಾಬ್‌ ಎ9+ ಟ್ಯಾಬ್‌ 1920 x 1200 WQXGA ರೆಸಲ್ಯೂಷನ್‌ನ 11.0-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್‌ ಡ್ರಾಗನ್‌ SM6375 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ದೈನಂದಿನ ಚಟುವಟಿಕೆಗಳಿಗೆ ಉತ್ತಮ ಕಾರ್ಯಕ್ಷಮತೆ ಒದಗಿಸುತ್ತದೆ. ಆಟೋಫೋಕಸ್‌ ಇರುವ 8 ಮೆಗಾಫಿಕ್ಸೆಲ್‌ನ ಹಿಂಬದಿ ಕ್ಯಾಮೆರಾ ಮತ್ತು 5 ಮೆಗಾಫಿಕ್ಸೆಲ್‌ನ ಮುಂಭಾಗದ ಕ್ಯಾಮೆರಾ ಹೊಂದಿದೆ. ಚಿತ್ರಗಳನ್ನು ತೆಗೆಯಲು ಮತ್ತು ವಿಡಿಯೋ ಕಾಲ್‌ಗೆ ಈ ಕ್ಯಾಮೆರಾ ಸೂಕ್ತವಾಗಿದೆ. ಕ್ವಾಡ್‌ ಸ್ಪೀಕರ್‌ನ ಆಡಿಯೋ ಗುಣಮಟ್ಟ ಉತ್ತಮವಾಗಿದೆ. 7040 mAh ಬ್ಯಾಟರಿ ಹೊಂದಿದೆ.

mysore-dasara_Entry_Point